Monday, October 27, 2025

Janaspandhan News

HomeHealth & FitnessMedicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ...
spot_img
spot_img
spot_img

Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಾತ್ರೆ (Medicine) ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ, ಮಾಡಿದರೆ ಜೀವಕ್ಕೆ ಅಪಾಯ.! ಹಾಗಾದ್ರೆ ಯಾವ ಆ ತಪ್ಪುಗಳು ಅಂತ ತಿಳಿಯೋಣ ಬನ್ನಿ.!

ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಾಗುತ್ತಿದ್ದಂತೆಯೇ ನಾವು ಸಾಮಾನ್ಯವಾಗಿ ಮಾತ್ರೆಗಳನ್ನು ಸೇವಿಸುತ್ತೇವೆ. ಆದರೆ, ಔಷಧಿಗಳನ್ನು ತೆಗೆದುಕೊಂಡ ಬಳಿಕ ಅನೇಕರು ತಿಳಿಯದೇ ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇವು ದೇಹದ ಗುಣಮುಖ ಪ್ರಕ್ರಿಯೆಯನ್ನು ನಿಧಾನಗೊಳಿಸುವುದಷ್ಟೇ ಅಲ್ಲದೆ, ಮತ್ತಷ್ಟು ತೊಂದರೆಗಳಿಗೆ ಕಾರಣವಾಗುತ್ತವೆ.

ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!
ಮಾತ್ರೆ (Medicine) ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ :
1. ಮದ್ಯಪಾನ :

ಔಷಧಿ (Medicine) ಸೇವಿಸಿದ ತಕ್ಷಣ ಮದ್ಯಪಾನ ಮಾಡುವುದು ಅಪಾಯಕಾರಿಯಾಗಿದೆ. ನೋವು ನಿವಾರಕ, ಪ್ರತಿಜೀವಕ ಅಥವಾ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಮಾತ್ರೆಗಳೊಂದಿಗೆ ಮದ್ಯಪಾನ ಮಾಡಿದರೆ ಲಿವರ್‌ ಮೇಲೆ ಹೆಚ್ಚಿನ ಒತ್ತಡ ಬರುವುದರಿಂದ ಯಕೃತ್ತಿನ ಹಾನಿ, ರಕ್ತದೊತ್ತಡದ ಕುಸಿತ, ದೌರ್ಬಲ್ಯ, ಉಸಿರಾಟದ ತೊಂದರೆ ಉಂಟಾಗಬಹುದು.

2. ಚಹಾ, ಕಾಫಿ ಹಾಗೂ ತಂಪು ಪಾನೀಯಗಳು :

ಮಾತ್ರೆಗಳ (Medicine) ನಂತರ ಚಹಾ, ಕಾಫಿ ಅಥವಾ ತಂಪು ಪಾನೀಯ ಸೇವನೆ ದೇಹದಲ್ಲಿ ಕೆಫೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ತ್ವರಿತ ಹೃದಯಬಡಿತ, ನಿದ್ರಾಹೀನತೆ ಮತ್ತು ಒತ್ತಡದ ಸಮಸ್ಯೆಗಳಿಗೆ ಕಾರಣವಾಗಬಹುದು.

Astrology : ಹೇಗಿದೆ ಗೊತ್ತಾ.? ಅಗಷ್ಟ 14 ರ ದ್ವಾದಶ ರಾಶಿಗಳ ಫಲಾಫಲ.!
3. ಮಸಾಲೆಯುಕ್ತ ಆಹಾರ :

ಔಷಧಿ ಸೇವಿಸಿದ ನಂತರ ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಬಹುದು. ಇದರಿಂದ ಆಮ್ಲೀಯತೆ, ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ವಾಂತಿಯಂತಹ ಸಮಸ್ಯೆಗಳು ಉಂಟಾಗಬಹುದು.

4. ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವನೆ :

ಕೆಲವು ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ವಾಂತಿ, ಹೊಟ್ಟೆನೋವು, ಅಸ್ವಸ್ಥತೆ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವೈದ್ಯರ ಸೂಚನೆ ಅನುಸರಿಸುವುದು ಅತ್ಯಂತ ಮುಖ್ಯ.

5. ವಾಹನ ಚಲಾಯಿಸುವುದು :

ನಿದ್ರೆ ಮಾತ್ರೆಗಳು (Medicine) ಅಥವಾ ಖಿನ್ನತೆ ನಿವಾರಕ ಮಾತ್ರೆಗಳ ನಂತರ ವಾಹನ ಚಲಾಯಿಸುವುದು ಅಪಾಯಕಾರಿ. ಇದು ಮೂರ್ಛೆ ಅಥವಾ ಅಪಘಾತಕ್ಕೆ ಕಾರಣವಾಗಬಹುದು.

Police : ವಾಹನ ತಪಾಸಣೆ ವೇಳೆ ಮಹಿಳೆಯೊಂದಿಗೆ ಪೊಲೀಸರ ಅನುಚಿತ ವರ್ತನೆ ; ವಿಡಿಯೋ ವೈರಲ್.!
6. ತಕ್ಷಣ ವ್ಯಾಯಾಮ :

ಮಾತ್ರೆಗಳ (Medicine) ನಂತರ ತಕ್ಷಣ ವ್ಯಾಯಾಮ ಮಾಡುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗಬಹುದು. ತಲೆನೋವು, ವಾಂತಿ, ನಿರ್ಜಲೀಕರಣ ಮತ್ತು ಅರೆನಿದ್ರೆಯಂತಹ ಸಮಸ್ಯೆಗಳು ಎದುರಾಗಬಹುದು.

ಸಂಪಾದಕೀಯ :

ಔಷಧಿ ಸೇವಿಸಿದ ನಂತರ ಈ ಎಚ್ಚರಿಕೆಗಳನ್ನು ಪಾಲಿಸುವುದರಿಂದ ದೇಹ ಶೀಘ್ರ ಗುಣಮುಖವಾಗಲು ಸಹಾಯವಾಗುತ್ತದೆ ಮತ್ತು ಅನಗತ್ಯ ಆರೋಗ್ಯ ತೊಂದರೆಗಳನ್ನು ತಪ್ಪಿಸಬಹುದು.

After taking the birth control pill, avoid making the following mistakes: missing pills, not taking them at the same time each day, not using backup contraception after missing pills or taking certain medications, and not using condoms to protect against STDs.


ಬೆಳಿಗ್ಗೆ 1 ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಿಗುವ ಅದ್ಭುತ ಪ್ರಯೋಜನಗಳು.!

ABC Juice

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಎಷ್ಟೊಂದು ಅದ್ಭುತ ಪ್ರಯೋಜನಗಳು ಸಿಗುತ್ತವೇ ಗೊತ್ತಾ.?. ಬನ್ನಿ ಆ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಂದ ABC ಜ್ಯೂಸ್ (Apple, Beetroot, Carrot) ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೇಬು, ಬೀಟ್‌ರೂಟ್ ಮತ್ತು ಕ್ಯಾರೆಟ್ ಮಿಶ್ರಣದಿಂದ ತಯಾರಾಗುವ ಈ ಪಾನೀಯವು ರುಚಿಕರವಾಗಿರುವುದರ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ.

ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಆರೋಗ್ಯ ಲಾಭಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಯಾವ್ಯಾವ ಪ್ರಯೋಜಗಳು ಸಿಗುತ್ತವೆ ಅಂತ ತಿಳಿಯೋಣ.

ರೋಗನಿರೋಧಕ ಶಕ್ತಿ :

ಸೇಬು ಮತ್ತು ಬೀಟ್‌ರೂಟ್‌ನಲ್ಲಿರುವ ವಿಟಮಿನ್ C ಹಾಗೂ ಕ್ಯಾರೆಟ್‌ನಲ್ಲಿನ ಬೇಟಾ-ಕ್ಯಾರೋಟಿನ್ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

SI ಸಾವಿನ ಪ್ರಕರಣಕ್ಕೆ ಹೊಸ ತಿರುವು ; ಮಹಿಳಾ ಇನ್ಸ್‌ಪೆಕ್ಟರ್ ಬಂಧನ.!
ಜೀರ್ಣಕ್ರಿಯೆ ಸುಧಾರಣೆ :

ABC ಜ್ಯೂಸ್‌ನಲ್ಲಿ ಇರುವ ಹೆಚ್ಚಿನ ಫೈಬರ್ ಜೀರ್ಣಾಂಗದ ಚಟುವಟಿಕೆಯನ್ನು ಉತ್ತೇಜಿಸಿ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ. ನಿಯಮಿತ ಸೇವನೆ ಕರುಳಿನ ಚಲನೆ ಸುಗಮಗೊಳಿಸುತ್ತದೆ.

ಚರ್ಮದ ಆರೋಗ್ಯಕ್ಕೆ ಲಾಭಕಾರಿ :

ವಿಟಮಿನ್ A ಮತ್ತು C ಜೊತೆಗೆ ಆಂಟಿ-ಆಕ್ಸಿಡೆಂಟ್‌ಗಳು ಚರ್ಮಕ್ಕೆ ಹೊಳಪು ನೀಡುತ್ತವೆ, ವಯಸ್ಸಿನ ಲಕ್ಷಣಗಳನ್ನು ತಗ್ಗಿಸುತ್ತವೆ ಹಾಗೂ ಮೊಡವೆ-ಸುಕ್ಕುಗಳನ್ನು ಕಡಿಮೆ ಮಾಡುತ್ತವೆ.

Wild boarಗಳ ಹಿಂಡಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ್ತಿಗೆ ಗಂಭೀರ ಗಾಯ : ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
ದೇಹದ ನಿರ್ವಿಷೀಕರಣ :

ABC ಜ್ಯೂಸ್ ಯಕೃತ್ತಿನ ಕಾರ್ಯವನ್ನು ಬೆಂಬಲಿಸಿ ಜೀರ್ಣಾಂಗ ವ್ಯವಸ್ಥೆಯಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕರಿಸುತ್ತದೆ. ಇದರಿಂದ ದೇಹ ಶುದ್ಧವಾಗಿರಲು ಸಹಾಯವಾಗುತ್ತದೆ.

ತೂಕ ನಿಯಂತ್ರಣ :

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವುದರಿಂದ ಹೊಟ್ಟೆ ತುಂಬಿದ ಭಾವನೆ ದೀರ್ಘಕಾಲ ಉಳಿಯುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆಮಾಡಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

Astrology : ಹೇಗಿದೆ ಗೊತ್ತಾ.? ಅಗಷ್ಟ 13 ರ ದ್ವಾದಶ ರಾಶಿಗಳ ಫಲಾಫಲ.!

ಆರೋಗ್ಯ ತಜ್ಞರ ಸಲಹೆ ಪ್ರಕಾರ, ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹದ ಸಮಗ್ರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು.

ABC juice : ABC juice is a simple yet effective way to infuse nutrients into your diet. Although it is not new to the market, it has recently gained popularity, mainly because it may help fight cancer.

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments