Tuesday, September 17, 2024
spot_img
spot_img
spot_img
spot_img
spot_img
spot_img
spot_img

Astrology : ಮಾರ್ಚ್ 4ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಭವಿಷ್ಯ : 2024 ಮಾರ್ಚ್ 4ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ (Rasi) ಫಲಾಫಲ ಹೇಗಿದೆ ನೋಡಿ.!

ಮೇಷ ರಾಶಿ :
ನಿಮಗೆ ತೊಂದರೆ ಕೊಟ್ಟವರನ್ನು ಕ್ಷಮಿಸಿಬಿಡಿ, ಪೂರ್ವಜರು ಉಪಯೋಗಿಸುವ ಹಳೆಯ ವಸ್ತುವನ್ನು ನೋಡಿ ನೆನಪು ಬರಲಿದೆ, ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿ ಪಡಿಸುತ್ತಿರುವವರು ದೂರ ಸರಿಯಲಿದ್ದಾರೆ, ಜಂಟಿ ಯೋಜನೆ ಹೂಡಿಕೆ ಮಾಡಬೇಡಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನ ಲಾಭ ಬರಲಿದೆ, ಆದರೆ ನಿಮ್ಮ ಕೈಯಲ್ಲಿ ಹಣ ಉಳಿಯುವುದಿಲ್ಲ, ಸಂಗಾತಿಯೊಂದಿಗೆ ಹೆಚ್ಚು ಮನರಂಜನೆಯ ಕಾಲ ಕಳೆಯುತ್ತಿರಿ, ನಿಮಗೆ ತೊಂದರೆ ಕೊಟ್ಟವರನ್ನು ಕ್ಷಮಿಸಿಬಿಡಿ.

ವೃಷಭ ರಾಶಿ :
ವ್ಯಾಪಾರ-ವ್ಯವಹಾರಗಳಲ್ಲಿ ಸದ್ಯಕ್ಕೆ ಬಂಡವಾಳ ಹಾಕುವುದು ಬೇಡ, ಕೆಲಸದಲ್ಲಿ ಧನಾಗಮನವಿದೆ, ದಾಯಾದಿಗಳಿಂದ ಆಗಾಗ ವಾದ-ವಿವಾದಗಳು ಸೃಷ್ಟಿ, ನಿಮ್ಮ ನೆಮ್ಮದಿ ಕೆಡಿಸಲಿದೆ, ಕಾರ್ಯಕ್ಷೇತ್ರಗಳಲ್ಲಿ ಆಗಾಗ ಹಿತ ಶತ್ರುಗಳ ಕಾಟ, ಶುಭಮಂಗಲ ಕಾರ್ಯಗಳಿಗೆ ಯೋಗ್ಯ ವರ ಕಂಕಣ ಬಲ ಕೂಡಿ ಬರಲಿದೆ. ಭೂ ಖರೀದಿ, ವಾಹನ ಖರೀದಿ,ಗೃಹ ನಿರ್ಮಾಣ, ಇದು ಸಕಾಲ ,ವಿಚ್ಛೇದನ ಅಥವಾ ವಿಧವಾ ಮಹಿಳೆಯ ಅಥವಾ ಪುರುಷರಿಗೆ ಮರು ಮದುವೆ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಒತ್ತಡವಿದ್ದರೂ ಮುನ್ನಡೆಯಿರಿ.

Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!

ಮಿಥುನ ರಾಶಿ :
ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆದಾರರ ಆರ್ಥಿಕ ಚೇತರಿಕೆ ಯಿಂದ ಖುಷಿ, ಹೈನುಗಾರಿಕೆಯ ಸಹಾಯದಿಂದ ಸಾಲದ ಸಮಸ್ಯೆ ನಿವಾರಣೆಯಾಗಲಿದೆ. ಉದ್ಯೋಗಿಗಳು ಹೆಚ್ಚಿನ ವೇತನ ಪಡೆಯಲಿದ್ದೀರಿ, ಆರೋಗ್ಯದಲ್ಲಿ ಸುಧಾರಣೆ, ಹೋಟೆಲ್ ಉದ್ಯಮ ದಾರಿಗೆ ಆರ್ಥಿಕ ಚೇತರಿಕೆ, ಕೆಲವೊಂದು ರಾಜಕಾರಣಿಗಳು ಕಷ್ಟದಲ್ಲಿ ಸಿಲುಕುವ ಸಾಧ್ಯತೆ, ಮದುವೆ ಮುಹೂರ್ತ ಫಿಕ್ಸ್ ಮಾಡುವಿರಿ, ಕೆಲವರಿಗೆ ನಂಬಿಕೆದ್ರೋಹ ಸಾಧ್ಯತೆ, ಸಹೋದರಿಯರು ಆಸ್ತಿ ಬೇಡಿಕೆ ಸಲ್ಲಿಸಲಿದ್ದಾರೆ, ಪ್ರಾಣಿಗಳಿಂದ ತೊಂದರೆ ಸಂಭವಿಸುವುದು.

ಕರ್ಕ ರಾಶಿ :
ಇಂದು ನೀವು ಪ್ರಯತ್ನಿಸಿದ ಕಾರ್ಯಗಳು ಯಶಸ್ವಿ, ಉದ್ಯೋಗ ಬದಲಾಯಿಸುವ ಸಾಧ್ಯತೆ, ಆಸ್ತಿ ಖರೀದಿಗೆ ಧನ ಸಹಾಯ ಸಿಗಲಿದೆ, ವಿದೇಶ ಪ್ರವಾಸದ ಅಡಚಣೆ ನಿವಾರಣೆಯಾಗಲಿದೆ, ಸುವರ್ಣ ಖರೀದಿ ಸಾಧ್ಯತೆ, ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವಿರಿ, ಸಂತಾನದ ಸಿಹಿ ಸುದ್ದಿ, ಆರೋಗ್ಯದಲ್ಲಿ ಚೇತರಿಕೆ, ಸಂಗಾತಿಗೆ ಉಡುಗೊರೆ ನೀಡುವಿರಿ, ಬಾಡಿಗೆದಾರರು ಮನೆ ಬದಲಾಯಿಸುವರು‌.

ಸಿಂಹ ರಾಶಿ :
ವೃತ್ತಿಕ್ಷೇತ್ರದಲ್ಲಿ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ, ಪ್ರೇಮಿಗಳಲ್ಲಿ ಮದುವೆ ನಿರಾಶೆ ಮೂಡಬಹುದು, ಮುಖದಲ್ಲಿ ಮುಖಸ್ತುತಿ ಕಾಣಬಹುದು, ನಿಮ್ಮ ಆಸ್ತಿಯ ಬಗ್ಗೆ ಜಾಗೃತಿ ಇರಲಿ, ಸರಕಾರಿ ಉದ್ಯೋಗಕ್ಕಾಗಿ ಕಠಿಣ ಸವಾಲನ್ನು ಎದುರಿಸಬೇಕಾಗುವುದು, ಸಂಗಾತಿಯ ಸಹಕಾರದಿಂದ ಶಿಕ್ಷಣದಲ್ಲಿ ಉನ್ನತ ಪದವಿ ಪಡೆದುಕೊಳ್ಳುವಿರಿ. ನಿಮ್ಮ ಸಂಗಾತಿಯ ಸಹಕಾರದಿಂದ ನಿಮ್ಮ ಶೈಲಿ ಬದಲಾಗಲಿದೆ, ನಿಮಗೆ ಅದೃಷ್ಟ ಕೈಹಿಡಿಯಲಿದೆ.

ಕನ್ಯಾ ರಾಶಿ :
ಖಾಸಗಿ ಶಾಲೆಯ ಮಹಿಳಾ ಶಿಕ್ಷಕಿಯರಿಗೆ ಉದ್ಯೋಗದಲ್ಲಿ ಖಾಯಂ ಆಗುವ ಆಡಳಿತ ವರ್ಗದಿಂದ ಹಸಿರು ನಿಶಾನೆ. ಅತಿಥಿ ಉಪನ್ಯಾಸಕರು ಆಡಳಿತವರ್ಗದ ಜೊತೆ ಸಹಕರಿಸುವುದು ಉತ್ತಮ. ಹೊಸ ಗೃಹ ಉಪಯೋಗಿಕರಣಗಳು ಖರೀದಿಸುವಿರಿ. ಬೆಲೆಬಾಳುವ ವಜ್ರ ವೈಡೂರ್ಯ ಬಂಗಾರ ಆಭರಣಗಳು ಖರೀದಿಸುವಿರಿ. ಹೊಸ ವಾಹನ ಖರೀದಿಸುವಿರಿ. ನಿವೇಶನ ಖರೀದಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮ ಪ್ರಾರಂಭಿಸಿದರೆ ಒಳಿತು.

ಕಾಂಗ್ರೆಸ್ ಮೊದಲ ಪಟ್ಟಿ ಮಾರ್ಚ್​ 10ರೊಳಗೆ ಬಿಡುಗಡೆ.? ರಾಜ್ಯ ‘ಕೈ’ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಂತಿದೆ.!

ತುಲಾ ರಾಶಿ :
ಹಣ ಗಳಿಸಲು ಅನೇಕ ಕ್ಷೇತ್ರದ ಮಾರ್ಗಗಳ ಹುಡುಕಾಟ ಮಾಡುವಿರಿ, ಮಾತಾಪಿತೃದೊಂದಿಗೆ ಭಿನ್ನಾಭಿಪ್ರಾಯ, ಕುಟುಂಬದ ವಾತಾವರಣದಲ್ಲಿ ಅಶಾಂತಿ, ಪ್ರೇಮಿಗಳ ಜೀವನಶೈಲಿ ಸಮನ್ವಯಗೊಳಿಸಲು ಪ್ರಯತ್ನ ಯಶಸ್ವಿ, ಪ್ರೇಮಿಗಳಿಬ್ಬರಲ್ಲಿದ್ದ ವಿವಾದ ಮಾತುಕತೆಯಿಂದ ಕೊನೆಗೊಳ್ಳುತ್ತದೆ. ಹಣ ಗಳಿಸಲು ಅನೇಕ ಕ್ಷೇತ್ರದ ಮಾರ್ಗಗಳ ಹುಡುಕಾಟ ಮಾಡುವಿರಿ, ಮಾತಾಪಿತೃದೊಂದಿಗೆ ಭಿನ್ನಾಭಿಪ್ರಾಯ, ಕುಟುಂಬದ ವಾತಾವರಣದಲ್ಲಿ ಅಶಾಂತಿ ಮೂಡುವುದು.

ವೃಶ್ಚಿಕ ರಾಶಿ :
ಅವಶ್ಯಕತೆ ಅನುಗುಣವಾಗಿ ಹೊರಗಡೆ ತಿರುಗಾಟ ಮಾಡಿ,ಶೀತಬಾಧೆ ನಿಮ್ಮನ್ನು ಬಾಧಿಸಬಹುದು ಜಾಗ್ರತೆವಹಿಸಿ, ಸಾಮಾಜಿಕ ಅಂತರ ಕಾಪಾಡುವುದು ಒಳಿತು, ಮಕ್ಕಳ ಆರೋಗ್ಯಕ್ಕಾಗಿ ಖರ್ಚು ಹೆಚ್ಚಾಗಬಹುದು.ನಿಮ್ಮ ದುಡಿಮೆ ಆದಾಯ ಸರಿ ಪ್ರಮಾಣದಲ್ಲಿ ಇದೆ. ಸಮತೋಲನ ಸಾಧಿಸಿರಿ. ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ. ರಸಗೊಬ್ಬರ ಮಾರಾಟಗಾರರಿಗೆ ಬೇಡಿಕೆ ಬರುತ್ತದೆ. ಸಂಗಾತಿಗೆ ಅವರ ಹಿರಿಯರಿಂದ ಮದುವೆಯ ಭಾಗ್ಯ ಸಿಗಬಹುದು.

ಧನಸ್ಸು ರಾಶಿ :
ತುಂಬಾ ಕಠಿಣ ಶ್ರಮ ಪಡುತ್ತಿದ್ದೀರಿ ಕೆಲವು ಎತ್ತ ಕಾರ್ಯದಲ್ಲಿ ಭಂಗ, ಮಕ್ಕಳಿಗೆ ಅಗ್ನಿಯಿಂದ ಭೀತಿ, ಕೋರ್ಟ್ ಕೇಸ್ ನಲ್ಲಿ ಅಡಿಚನೆ ಸಂಭವ, ಮಿತಿ ಇರದ ವಾಹನ ಸವಾರರಿಗೆ ಅಪಘಾತ ಸಂಭವ, ಸಹಾಯ ಮಾಡುವಂತಹ ಮಿತ್ರರು ಕೊನೆಯ ಗಳಿಗೆಯಲ್ಲಿ ನಿರಾಸೆ, ನಿಮ್ಮ ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿ, ನವದಂಪತಿ ಕುಟುಂಬದಲ್ಲಿ ಕಲಹ, ವಿದೇಶ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗಕ್ಕಾಗಿ ಅಧಿಕ ತಿರುಗಾಟ, ಆದಾಯ ಕಡಿಮೆ ಋಣಬಾಧೆ ಜಾಸ್ತಿ, ನೆರೆಹೊರೆಯವರ ಮತ್ತು ಶತ್ರುಗಳಿಂದ ಬಾಧೆ.

ಮಕರ ರಾಶಿ :
ಸಾಲದಿಂದ ಮುಕ್ತಿ ಹೊಂದುವ ದಿನಗಳು ಹತ್ತಿರವಾಗಿವೆ, ಆಸ್ತಿ ಮಾರಾಟ ಬಯಸಿದವರಿಗೆ ಒಳ್ಳೆಯ ಬೆಲೆ ಸಿಗಲಿದೆ, ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ಜಮೀನು ಖರೀದಿ ಸಾಧ್ಯತೆ. ಕೆಲವೊಮ್ಮೆ ಸಹೋದರ ವರ್ಗದಿಂದ ಅನಗತ್ಯವಾಗಿ ವಾದ-ವಿವಾದ ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರ ಪ್ರಾರಂಭ ಮಾಡುವಿರಿ. ಹೋಟೆಲ್ ಉದ್ಯಮದಾರರು ಗುಣಮಟ್ಟದ ಆಹಾರ ಪದ್ಧತಿ ಅಳವಡಿಸಿಕೊಂಡರೆ ಉತ್ತಮ.

ಕುಂಭ ರಾಶಿ :
ಮೂಲವ್ಯಾಧಿ, ಅಲ್ಸರ್, ವಾಯು, ಪಿತ್ತಜನಕಾಂಗದ ಸಮಸ್ಯೆಗಳು ಉಂಟಾಗಬಹುದು, ಕೃಷಿಕರಿಗೆ ಆದಾಯ ಹೆಚ್ಚಾಗುತ್ತದೆ, ಮೇಲ್ವಿಚಾರಕರಿಂದ ಸೌಹಾರ್ದತೆ ಬೆಳವಣಿಗೆ, ಮಕ್ಕಳಿಂದ ನಿಮ್ಮ ಆಕಾಂಕ್ಷೆಗಳು ಈಡೇರಿಸುವ ಸಮಯ ಬಂದಿದೆ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಸಕರಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಉದ್ಯೋಗದಲ್ಲಿ ಪ್ರಮೋಷನ್ ಸಾಧ್ಯತೆ, ಬಯಸಿದ ಸ್ಥಳಕ್ಕೆ ವರ್ಗಾವಣೆ ವಿಳಂಬ, ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮ, ಸಂಗಾತಿಗಳ ಮನಸ್ಥಿತಿ ಚಂಚಲ, ಜನಪ್ರತಿನಿಧಿಗಳಿಗೆ ಸಾಮಾಜಿಕ ಗೌರವದಲ್ಲಿ ಹೆಚ್ಚಳ ಸಾಧ್ಯತೆ.

Health : ಬೇಸಿಗೆ ಕಾಲದಲ್ಲಿ ಈ ಆಹಾರ ಪದಾರ್ಥಗಳಿಂದ ದೂರವಿರಿ.!

ಮೀನ ರಾಶಿ :
ವ್ಯಾಪಾರಸ್ಥರಿಗೆ ಲಾಭ, ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ, ಸ್ತ್ರೀ/ಪುರುಷ ಸಂಗದಿಂದ ದೂರ ಇರಿ, ಸಂತಾನಫಲ ನಿರೀಕ್ಷಣೆ ಸಿಹಿಸುದ್ದಿ ಸಿಗಲಿದೆ, ಭಿನ್ನಾಭಿಪ್ರಾಯ ಮೂಡಿರುವ ದಂಪತಿ ವರ್ಗದವರಿಗೆ ಕೂಡುವ ಭಾಗ್ಯ ಸಿಗಲಿದೆ, ಆಸ್ತಿ ಖರೀದಿ ವಿಚಾರದಲ್ಲಿ ಲೋಪದೋಷ ಸಂಭವ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹೊಸ ಕೆಲಸ ಸಿಗುವ ಭಾಗ್ಯ. ಮದುವೆ ವಿಚಾರದಲ್ಲಿ ಅಡತಡೆಗಳು ಕಂಡುಬಂದರೂ ಕಂಕಣಬಲ ಪ್ರಾಪ್ತಿ ಇದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಹೆಚ್ಚಿನ ಜವಾಬ್ದಾರಿ ಸಿಗಲಿದೆ, ಮನೆಗೆ ಹೊಸ ಸದಸ್ಯರ ಆಗಮನ, ಸಭೆಯಲ್ಲಿ ಪಾಲ್ಗೊಳ್ಳುವಿರಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img