ಜನಸ್ಪಂದನ ನ್ಯೂಸ್, ಡೆಸ್ಕ್ : ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡುರಸ್ತೆಯಲ್ಲೇ ಗಟ್ಕಾ (ಸಿಖ್ ಸಮರಕಲೆ) ಪ್ರದರ್ಶಿಸುತ್ತಿದ್ದ ವ್ಯಕ್ತಿ ಮೇಲೆ ಪೊಲೀಸ (Police) ರು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಬಾಡಿಕ್ಯಾಮ್‌ನಲ್ಲಿ ಸಂಪೂರ್ಣ ಘಟನೆಯ ದೃಶ್ಯಾವಳಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ (Police) ರ ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು 36 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಲಾಸ್ ಏಂಜಲೀಸ್‌ನ ಕ್ರಿಪ್ಟೊ ಡಾಟ್ ಕಾಮ್ ಅರೇನಾ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Vegetable ಮಾರ್ತಿರೋ ಯುವಕನ ಸ್ಟೈಲ್’ಗೆ ಹೆಣ್ಮಕ್ಕಳು ಹೆದರೋದು ಗ್ಯಾರಂಟಿ.!
ಗುರುಪ್ರೀತ್ ಸಿಂಗ್ ನಡುರಸ್ತೆಯಲ್ಲಿ ಖಡ್ಗವನ್ನು (ಭಾರತೀಯ ಸಮರಕಲೆಯಲ್ಲಿ ಬಳಸುವ ಕತ್ತಿ) ಝಳಪಿಸುತ್ತಿದ್ದನು. ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಆತ ನಿಲ್ಲಿಸದೆ, ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ (Police) ರ ಹೇಳಿಕೆ :
ಲಾಸ್ ಏಂಜಲೀಸ್ ಪೊಲೀಸ (Police) ಇಲಾಖೆಗೆ ಸ್ಥಳೀಯರಿಂದ ಹಲವಾರು ಕರೆಗಳು ಬಂದ ಹಿನ್ನೆಲೆಯಲ್ಲಿ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. ವರದಿಯ ಪ್ರಕಾರ, ಸಿಂಗ್ ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲಿ ಬಿಟ್ಟು, ನಂತರ ತನ್ನನ್ನು ತಾನೇ ಗಾಯಗೊಳಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರು ಆತ ಶರಣಾಗುವಂತೆ ಅನೇಕ ಬಾರಿ ಸೂಚಿಸಿದರೂ, ಆತ ನಿರಾಕರಿಸಿದ್ದನು.
Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
ಅವನ ಮೇಲೆ ನಿಯಂತ್ರಣ ಸಾಧಿಸಲು ಹೋದ ಪೊಲೀಸ (Police) ರ ಕಡೆ ಬಾಟಲ್ ಎಸೆದು, ಬ್ಲೇಡ್ ಹಿಡಿದು ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಳಿಕ ಅವನ ಬಳಿಯಿಂದ ಎರಡು ಅಡಿ ಉದ್ದದ ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.
ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ :
ಗುಂಡೇಟಿನಿಂದ ಗಾಯಗೊಂಡ ಸಿಂಗ್‌ನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯಾವುದೇ ಪೊಲೀಸರು ಅಥವಾ ನಾಗರಿಕರು ಗಾಯಗೊಂಡಿಲ್ಲ.
Belagavi ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಪೊಲೀಸ್ ಪೇದೆಗೆ ಚಾಕು ಇರಿದ ಆರೋಪಿ ಮೇಲೆ ಫೈರಿಂಗ್
ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಪೊಲೀಸ (Police) ರು ಸಂಬಂಧಿತ ದೃಶ್ಯಾವಳಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.
ವಿಡಿಯೋ :
Los Angeles police shot dead Gurpreet Singh, 35, after he stopped his car in the middle of an intersection and allegedly swung a machete at people.
Now compare this with India. Here, mobs can assault police, humiliate them into folding hands, circulate those images as “victory,”… pic.twitter.com/N2Hsyuif9V
— THE SKIN DOCTOR (@theskindoctor13) August 29, 2025
Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ದೇಶದಲ್ಲಿ ಬಹುತೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಕೆಲವರಿಗೆ ಬಲವಾದ ಚಹಾ ಇಷ್ಟವಿದ್ದರೆ, ಇನ್ನು ಕೆಲವರು ಶುಂಠಿ ಚಹಾ, ಮಸಾಲೆ ಚಹಾ ಅಥವಾ ಏಲಕ್ಕಿ (Cardamom) ಚಹಾವನ್ನು ಆಯ್ಕೆ ಮಾಡುತ್ತಾರೆ.
ವಿಶೇಷವಾಗಿ ಏಲಕ್ಕಿ (Cardamom) ಚಹಾ ತನ್ನ ಸುವಾಸನೆ ಮತ್ತು ರುಚಿಯಿಂದ ಜನಪ್ರಿಯವಾಗಿದ್ದು, ಹಲವರು ಇದನ್ನು ಆರೋಗ್ಯಕ್ಕೆ ಸಹ ಉತ್ತಮವೆಂದು ಪರಿಗಣಿಸುತ್ತಾರೆ. ಆದರೆ, ಪ್ರತಿಯೊಬ್ಬರ ದೇಹದ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲ ಆರೋಗ್ಯ ಸಮಸ್ಯೆಗಳಿದ್ದವರಿಗೆ ಏಲಕ್ಕಿ (Cardamom) ಚಹಾ ಅಪಾಯಕಾರಿಯಾಗಬಹುದು.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್ ಸಾವು.!
ಹಾಗಾದ್ರೆ ಯಾರು ಈ ಏಲಕ್ಕಿ (Cardamom) ಚಹಾ ಕುಡಿಯಬಾರದು.?
ಪಿತ್ತಕೋಶದ ಸಮಸ್ಯೆ :
ಪಿತ್ತಗಲ್ಲು (Gallstone) ಸಮಸ್ಯೆ ಇರುವವರು ಏಲಕ್ಕಿ ಚಹಾವನ್ನು ತಪ್ಪಿಸಿಕೊಳ್ಳುವುದು ಉತ್ತಮ. ಏಲಕ್ಕಿ ಪಿತ್ತಕೋಶವನ್ನು ಕೆರಳಿಸುವುದರಿಂದ ನೋವು ಮತ್ತು ಅಸಹನೆ ಹೆಚ್ಚುವ ಸಾಧ್ಯತೆ ಇದೆ.
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು :
ಏಲಕ್ಕಿಯ ಅಧಿಕ ಸೇವನೆ ಗರ್ಭಿಣಿಯರಿಗೆ ಹಾನಿಕಾರಕವಾಗಬಹುದು. ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ಅದೇ ರೀತಿ, ಹಾಲುಣಿಸುವ ತಾಯಂದಿರೂ ಹೆಚ್ಚಾಗಿ ಏಲಕ್ಕಿ ಸೇವಿಸುವುದನ್ನು ತಪ್ಪಿಸಿಕೊಳ್ಳುವುದು ಉತ್ತಮ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
ಮಧುಮೇಹ ಸಮಸ್ಯೆಗಳು :
ಸಂಶೋಧನೆಯ ಪ್ರಕಾರ, ಏಲಕ್ಕಿ (Cardamom) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಮಧುಮೇಹಿಗಳಿಗೆ ಇದು ಸಹಾಯಕವಾಗಬಹುದು. ಆದರೆ, ಸಕ್ಕರೆ ನಿಯಂತ್ರಿಸಲು ಈಗಾಗಲೇ ಔಷಧಿ ಸೇವಿಸುತ್ತಿರುವವರು ಹೆಚ್ಚು ಏಲಕ್ಕಿ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅತಿಯಾಗಿ ಕುಸಿಯುವ (Hypoglycemia) ಅಪಾಯವಿದೆ.
ಆದ್ದರಿಂದ, ಏಲಕ್ಕಿ ಚಹಾ ಎಲ್ಲರಿಗೂ ಒಳ್ಳೆಯದಾದರೂ, ಕೆಲವರಿಗೆ ಇದು ಅಪಾಯಕಾರಿಯಾಗಬಹುದು. ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಮಾತ್ರ ಇದರ ಸೇವನೆ ಮಾಡುವುದು ಒಳಿತು.