ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ಮನೆ ಅಂಗಳ (garden) ದಲ್ಲಿ ಬೆಳೆಯುವ ಈ ಪುಟ್ಟ ಹೂವು ಕೇವಲ ಒಂದು ಹೂವಲ್ಲ, ಅದರಲ್ಲಡಗಿದೆ ಆರೋಗ್ಯದ ಖಜಾನೆ. ಸಾಮಾನ್ಯವಾಗಿ ಈ ಹೂವನ್ನು ನಿತ್ಯ ಪುಷ್ಪ (Madagascar periwinkle) ಅಥವಾ ಸದಾ ಪುಷ್ಪ ಅಥವಾ ಸದಾ ಮಲ್ಲಗೆ ಎಂದು ಕರೆಯುತ್ತಾರೆ.
ಮನೆಯ ಅಂಗಳ (garden) ದಲ್ಲಿ ಸುಂದರವಾಗಿ ಅರಳುವ ಪುಟ್ಟ ಹೂವಿನ ಗಿಡವಾದ ನಿತ್ಯ ಪುಷ್ಪ (Madagascar periwinkle) ಅಥವಾ ಸದಾ ಪುಷ್ಪ ಅಥವಾ ಸದಾ ಮಲ್ಲಗೆ, ತನ್ನ ವಿಶಿಷ್ಟ ಆರೋಗ್ಯ ಲಾಭಗಳಿಂದ ಗಮನ ಸೆಳೆಯುತ್ತಿದೆ. ದೇವರ ಪೂಜೆಯಲ್ಲಿ ಬಳಸಲಾಗುವ ಈ ಹೂವಿಗೆ ಆಯುರ್ವೇದದಲ್ಲಿ ಕೂಡ ಪ್ರಾಮುಖ್ಯತೆ ಇದೆ.
ತಿಳಿ ಗುಲಾಬಿ ಹಾಗೂ ಬಿಳಿ ಬಣ್ಣದಲ್ಲಿ ಅರಳುವ ಈ (Madagascar periwinkle) ಹೂವು, ಆರೋಗ್ಯ ವೃದ್ಧಿಗೆ ಸಹಾಯಕವಾಗಿರುವ ಮೂಲಿಕೆಗಳಲ್ಲಿ ಒಂದಾಗಿದೆ. ಭಾರತೀಯ ಹವಾಮಾನಕ್ಕೆ ತಕ್ಕಂತೆ ಸುಲಭವಾಗಿ garden ದಲ್ಲಿ ಬೆಳೆಯುವ ಈ ಸಸ್ಯಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ, ಇದರಿಂದಾಗಿ ಮನೆಗಳಲ್ಲಿ ಬಹುಪಾಲು ಜನರು ಇದನ್ನು ಬೆಳೆಸುತ್ತಿದ್ದಾರೆ.
1. ಮಧುಮೇಹ ನಿಯಂತ್ರಣದಲ್ಲಿ ನಿತ್ಯ ಪುಷ್ಪ (Madagascar periwinkle) ದ ಪಾತ್ರ :
ಆಯುರ್ವೇದ ಚಿಕಿತ್ಸೆಯ ಪ್ರಕಾರ, ನಿತ್ಯ ಪುಷ್ಪದ ಹೂವಿನ ಎಸಳಿನಿಂದ ತಯಾರಾದ ಟೀ ಅಥವಾ ಹೂವಿನ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ. ನಿತ್ಯ ಸೇವನೆಯಿಂದ ಮಧುಮೇಹದ ಲಕ್ಷಣಗಳು ತಗ್ಗುತ್ತವೆ ಎಂಬ ನಂಬಿಕೆ ಇದ್ದು, ಇದನ್ನು ನೈಸರ್ಗಿಕ ಮದ್ದು ಎಂದು ಪರಿಗಣಿಸಲಾಗುತ್ತದೆ.
2. ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಪರಿಣಾಮಕಾರಿಯಾಗಬಹುದೆ?
ನಿತ್ಯ ಪುಷ್ಪ (Madagascar periwinkle) ದ ಬೇರುಗಳಲ್ಲಿ ಪತ್ತೆಯಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ತಡೆಯೊಡ್ಡುತ್ತವೆ ಎಂಬ ಅಧ್ಯಯನಗಳು ಬೆಳಕಿಗೆ ಬಂದಿವೆ. ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅವಶ್ಯಕತೆಯಿದ್ದರೂ, ಹಲವರು ಮುಂಚೆ ತಡೆಯ ಕ್ರಮವಾಗಿ ಇದರ ಬಳಕೆಗೆ ಮುಂದಾಗುತ್ತಿದ್ದಾರೆ.
3. ಮಾನಸಿಕ ಆರೋಗ್ಯದಲ್ಲಿ ಸಹಕಾರ :
ಅತಿಯಾದ ಒತ್ತಡ, ಖಿನ್ನತೆ ಮತ್ತು ಆತಂಕದ ಸಮಸ್ಯೆಗಳಿಗೆ ನಿತ್ಯ ಪುಷ್ಪ (Madagascar periwinkle) ದ ಹೂವಿನಿಂದ ತಯಾರಿಸಿದ ಟೀ ಪಾನ ಮಾಡುವುದರಿಂದ ಮಾನಸಿಕ ಶಾಂತಿ ಲಭಿಸುವ ಅನುಭವ ಹಲವರದ್ದು. ಹೂವಿನ ರಸ ಅಥವಾ ಎಲೆಗಳ ಪಾನೀಯ, ಮನಸ್ಸನ್ನು ಶಾಂತಗೊಳಿಸಲು ಸಹಾಯಕವಾಗಬಹುದು.
4. ರಕ್ತದೊತ್ತಡ ನಿಯಂತ್ರಣ :
ಆಧುನಿಕ ಜೀವನಶೈಲಿಯಿಂದ ಉಂಟಾಗುವ ಹೈಬಿಪಿ ಸಮಸ್ಯೆಗೆ ನಿತ್ಯ ಪುಷ್ಪದ ಎಲೆಗಳ ಪುಡಿಯನ್ನು ದಿನನಿತ್ಯ ಚಿಟಿಕೆಮಟ್ಟಿಗೆ ಸೇವನೆ ಮಾಡಿದರೆ, ಬಿಪಿ ನಿಯಂತ್ರಣಕ್ಕೆ ಬರುತ್ತದೆ ಎಂಬುದಾಗಿ ಆಯುರ್ವೇದ ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಆರೋಗ್ಯದ ಮೇಲೆ ಹಿತಕರ ಪರಿಣಾಮ ಬೀರುತ್ತದೆ.
5. ಋತುಚಕ್ರ ಸಮಸ್ಯೆಗಳಿಗೆ ಪರಿಹಾರ :
ನಿತ್ಯ ಪುಷ್ಪ (Madagascar periwinkle) ದ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದನ್ನು ಸೇವಿಸಿದರೆ ಸ್ತ್ರೀಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಋತುಚಕ್ರ ಅಸಮತೋಲನಗಳಿಗೆ ಸಹಾಯವಾಗುತ್ತದೆ. ಹಾರ್ಮೋನಲ್ ಬದಲಾವಣೆಗಳಿಗೆ ಸಹಜ ಪರಿಹಾರ ಒದಗಿಸುತ್ತದೆ.
6. ಚರ್ಮದ ಆರೋಗ್ಯಕ್ಕೆ ಸಹಕಾರಿ :
ಬಿಸಿಲಿನಿಂದ ಉಂಟಾಗುವ ಸ್ಕಿನ್ ಟ್ಯಾನಿಂಗ್, ಕಪ್ಪು ಕಲೆಗಳು, ಮೊಡವೆ ಮುಂತಾದ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ನಿತ್ಯ ಪುಷ್ಪದ ಎಲೆಗಳ ಪುಡಿ ಉಪಯುಕ್ತವಾಗಿದೆ. ಒಣಗಿಸಿದ ಎಲೆಗಳಿಂದ ತಯಾರಾದ ಮುಖಪ್ಯಾಕ್ ಚರ್ಮದ ಕಾಂತಿಯು ಹೆಚ್ಚಿಸಬಹುದು.
ಸಾರಾಂಶ :
ನಿತ್ಯ ಪುಷ್ಪವು ಕೇವಲ ಅಲಂಕಾರಿಕ ಹೂವಲ್ಲ. ಇದು ಮಧುಮೇಹ, ರಕ್ತದೊತ್ತಡ, ಮಾನಸಿಕ ಒತ್ತಡ, ಕ್ಯಾನ್ಸರ್ ಮತ್ತು ಚರ್ಮದ ಸಮಸ್ಯೆಗಳಿಗೆ ಸಹಜ ಪರಿಹಾರ ನೀಡುವ ಆರೋಗ್ಯಕರ ಗಿಡವಾಗಿದೆ. ಮನೆಯ ಅಂಗಳದಲ್ಲಿ ಬೆಳೆಸಬಹುದಾದ ಈ ಸಸ್ಯದ ಮೂಲಕ ದೈನಂದಿನ ಜೀವನದಲ್ಲಿ ಉತ್ತಮ ಆರೋಗ್ಯದತ್ತ ಹೆಜ್ಜೆ ಇಡಬಹುದು.
Note : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.
License : ಲೈಸೆನ್ಸ್ ಕೇಳಿದ ಟ್ರಾಫಿಕ್ ಪೊಲೀಸರ ಮೇಲೆ ಅಪ್ಪ-ಮಗನಿಂದ ಹಲ್ಲೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಲೈಸೆನ್ಸ್ (License) ಕೇಳಿದ ಟ್ರಾಫಿಕ್ ಪೊಲೀಸರ ಮೇಲೆ ಅಪ್ಪ-ಮಗ ಸೇರಿ ಹಾಡಹಗಲೇ ಹಲ್ಲೆ ಮಾಡಿದ್ದಾರೆಂದು ಹೇಳಲಾದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ಮಹಾರಾಷ್ಟ್ರದ ನಲ್ಲಸೋಪಾರಾದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದ ಘಟನೆ ಬಹುತೇಕ ಜನರ ಗಮನಕ್ಕೆ ಬಂದಿದೆ. ಟ್ರಾಫಿಕ್ ಪೊಲೀಸರು ನಗಿಂದಾಸ್ ಪದಾದ ಸಿತಾರಾ ಬೇಕರಿ ಬಳಿ ಡ್ರೈವಿಂಗ್ ಲೈಸನ್ಸ್ (License) ತಪಾಸಣೆಯ ವೇಳೆ ವಾಹನ ಒಂದನ್ನು ಇಬ್ಬರು ಪೊಲೀಸ್ ಸಿಬ್ಬಂದಿಗಳು ತಡೆದ್ದಿದ್ದಾರೆ.
ಈ ವೇಳೆ ಟ್ರಾಪಿಕ್ ಪೊಲೀಸ್ ಲೈಸೆನ್ಸ್ (License) ತೋರಿಸುವಂತೆ ಕೇಳಿದ್ದಾರೆ. ಸವಾರರು ಲೈಸನ್ಸ್ (License) ತೋರಿಸುವ ಬದಲಾಗಿ ಸ್ಥಳೀಯ ಅಪ್ಪ-ಮಗ ಸೇರಿ ಟ್ರಾಪಿಕ್ ಪೊಲೀಸ್‌ರನ್ನು ಅಸಭ್ಯವಾಗಿ ಮಾತನಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಈ ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ.
ಪೊಲೀಸರು ಹೇಳುವುದೇನು.?
ಡ್ರೈವಿಂಗ್ ಲೈಸೆನ್ಸ್ (License) ಇಲ್ಲದ ಕಾರಣ ಯುವಕನನ್ನು ಪೋಲೀಸ್ ಸಿಬ್ಬಂದಿಗಳಾದ ಹನುಮಂತ ಸಾಂಗಲೆ ಮತ್ತು ಶೇಷನಾರಾಯಣ ಆಠರೆ ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದ್ದಾನೆ ಮತ್ತು ಯುವಕ ತನ್ನ ತಂದೆಯನ್ನು ಸ್ಥಳಕ್ಕೆ ಕರೆಸಿದ್ದಾನೆ.
ಯುವಕನ ತಂದೆ ಆಗಮಿಸಿದ ನಂತರ, ಅಪ್ಪ-ಮಗ ಇಬ್ಬರೂ ಸೇರಿ ಪೋಲೀಸರುಗಳೊಂದಿಗೆ ಕೇವಲ ಲೈಸನ್ಸ್ (License) ಗಾಗಿ ಈ ರೀತಿ ವಾದಕ್ಕೆ ಇಳಿದ್ದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದಂತೆಯೇ ಅವರಿಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದ್ದಾರೆ.
ಇದನ್ನು ಓದಿ : Teacher : ವಿದ್ಯಾರ್ಥಿನಿ ಜೊತೆ ಸ್ಟಾಫ್ ರೂಂನಲ್ಲಿ ಅಸಭ್ಯ ವರ್ತನೆ : ಶಿಕ್ಷಕನ ವಿರುದ್ಧ ಆಕ್ರೋಶ.!
ಹೀಗೆ ಹಲ್ಲೆ ಮಾಡಿದ ಆರೋಪಿತ ಯುವಕನನ್ನು ಪಾರ್ಥ ನಾರ್ಕರ್ (ಮಗ) ಮತ್ತು ಮಂಗೇಶ ನಾರ್ಕರ್ (ತಂದೆ) ಎಂದು ಗುರುತಿಸಲಾಗಿದ್ದು, ಇಬ್ಬರೂ ಕೂಡ ನಲ್ಲಸೋಪಾರಾ ನಿವಾಸಿಗಳು ಎಂದು ತಿಳಿದುಬಂದಿದೆ.
ವಿಡಿಯೋ ಸಾಬೀತುಗಳು ಮತ್ತು ಸಾರ್ವಜನಿಕ ಪ್ರತಿಕ್ರಿಯೆ :
ಮಾಹಿತಿಯ ಪ್ರಕಾರ, ಈ ಘಟನೆ ಹಾಡಹಗಲೇ ಸಾರ್ವಜನಿಕರ ಮುಂದೆಯೇ ನಡೆದಿದ್ದು, ಇದರಿಂದ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಸಾರ್ವಜನಿಕ ಸೇವಕರ ಗೌರವ ಕಾಪಾಡಬೇಕು ಎಂಬ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪೊಲೀಸ್ ತನಿಖೆ ಮತ್ತು ಕಾನೂನು ಕ್ರಮ :
- ತುಳಿಂಜ್ ಪೊಲೀಸ್ ಠಾಣೆ ಈಗಾಗಲೇ ಈ ಕುರಿತು ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.
- ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಮತ್ತು ಕರ್ತವ್ಯದ ಅಡಚಣೆ ಮಾಡುವ ಹಕ್ಕುಬದ್ಧ ಕಲಂಗಳು ಅನ್ವಯವಾಗುವ ಸಾಧ್ಯತೆ ಇದೆ.
- ಮೊಬೈಲ್ ಕ್ಲಿಪ್‌ಗಳನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ.