Wednesday, October 29, 2025

Janaspandhan News

HomeInternational News“ಚಲಿಸುತ್ತಿದ್ದ ವಾಹನದ ಮೇಲಿಂದ ರಸ್ತೆಗೆ ಜಿಗಿದ Lion ; ವಿಡಿಯೋ ವೈರಲ್.!”
spot_img
spot_img
spot_img

“ಚಲಿಸುತ್ತಿದ್ದ ವಾಹನದ ಮೇಲಿಂದ ರಸ್ತೆಗೆ ಜಿಗಿದ Lion ; ವಿಡಿಯೋ ವೈರಲ್.!”

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ದಕ್ಷಿಣ ಆಫ್ರಿಕಾದ ವಾಯುವ್ಯ ಭಾಗದಲ್ಲಿ ನಡೆದ ಅಚ್ಚರಿಯ ಘಟನೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಚಲಿಸುತ್ತಿದ್ದ ವಾಹನದ ಮೇಲಿಂದ ಸಿಂಹ (Lion) ವೊಂದು ಏಕಾಏಕಿ ರಸ್ತೆಗೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ.

ಈ ದೃಶ್ಯಗಳು ಅನೇಕ ವನ್ಯಜೀವಿ ಪ್ರೇಮಿಗಳು ಮತ್ತು ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ಗಮನ ಸೆಳೆದಿವೆ.

“ಒಂದೇ ಒಂದು Kiss ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭಕರ ಗೊತ್ತೇ?”

ವರದಿಗಳ ಪ್ರಕಾರ, ಈ ಘಟನೆ ಸೌಥ ಆಫ್ರೀಕಾ (South Africa) ದ ಫ್ರೀ ಸ್ಟೇಟ್ ಪ್ರದೇಶದಿಂದ ರಾಮೋತ್ಶೆರೆ ಮೊಯಿಲೋವಾ ಜಿಲ್ಲೆಗೆ ಸಾಗಿಸಲಾಗುತ್ತಿದ್ದ ಗಂಡು ಸಿಂಹಕ್ಕೆ ಸಂಬಂಧಿಸಿದೆ. ಬೇಟೆ ಫಾರ್ಮ್‌ಗೆ ಸಾಗಿಸುತ್ತಿದ್ದ ವೇಳೆ ಚಲಿಸುತ್ತಿದ್ದ ವ್ಯಾನ್‌ನ ಮೇಲಿರುವ ಸಿಂಹ ಏಕಾಏಕಿ ರಸ್ತೆ ಮೇಲೆ ಹಾರಿ ಬಿದ್ದಿದೆ.

ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತು.

ದಿನವೂ ಮಾಡಿ ಈ 7 ಕೆಲಸ ; Heart ಸಂಬಂಧಿ ಸಮಸ್ಯೆಗಳಿಗೆ ಗುಡ್‌ಬೈ ಹೇಳಿ.!

ಸ್ಥಳೀಯ ಪ್ರಾಣಿ ವೈದ್ಯ ಡಾ. ಆಂಟನ್ ನೆಲ್ ನೇತೃತ್ವದ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಸಿಂಹವನ್ನು ಸುರಕ್ಷಿತವಾಗಿ ಹಿಡಿಯಲು ಯಶಸ್ವಿಯಾಯಿತು. ಪ್ರಾಥಮಿಕ ಪರೀಕ್ಷೆಯಲ್ಲಿ ಸಿಂಹಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಬಳಿಕ, ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಪ್ರಾಣಿಗಳ ಸ್ಥಳಾಂತರದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಅಗತ್ಯವನ್ನು ಒತ್ತಿಹೇಳಿವೆ.

Pond : ಪ್ರೇಯಸಿ ಜೊತೆ ಜಗಳ, ಕೆರೆಗೆ ಹಾರಿದ ಪ್ರಿಯಕರ ; ವಿಡಿಯೋ ವೈರಲ್.!

ದಕ್ಷಿಣ ಆಫ್ರಿಕಾದ Four Paws ಸಂಸ್ಥೆಯ ನಿರ್ದೇಶಕಿ ಫಿಯೋನಾ ಮೈಲ್ಸ್, “ಈ ಘಟನೆ ವನ್ಯಜೀವಿಗಳ ವಾಣಿಜ್ಯ ಸಾಗಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸರ್ಕಾರವು ತ್ವರಿತ ತನಿಖೆ ಆರಂಭಿಸಿರುವುದು ಶ್ಲಾಘನೀಯ,” ಎಂದು ಹೇಳಿದ್ದಾರೆ.

ಅವರು ಮುಂದುವರಿದು, “ಸಿಂಹಗಳಂತಹ ಪರಭಕ್ಷಕ ಪ್ರಾಣಿಗಳನ್ನು ಸ್ಥಳಾಂತರಿಸುವಾಗ ಸುರಕ್ಷತೆ, ಕಾನೂನು ಮತ್ತು ಕಲ್ಯಾಣ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂತಹ ಘಟನೆಗಳು ಪ್ರಾಣಿಗಳ ಜೀವ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು,” ಎಂದು ಹೇಳಿದ್ದಾರೆ.

20 ಜನರನ್ನು ಬಲಿ ಪಡೆದ ಕರ್ನೂಲ್ Bus ದುರಂತಕ್ಕೆ ಪಾನಮತ್ತ ಬೈಕ್ ಸವಾರನೇ ಕಾರಣ.?

ಘಟನೆಯ ನಂತರ ಸ್ಥಳೀಯರು ಮತ್ತು ಅಧಿಕಾರಿಗಳು ಪ್ರಾಣಿ ವೈದ್ಯರನ್ನು ಸಂಪರ್ಕಿಸಿದ್ದರು. ಸುಮಾರು ಸಂಜೆ 3 ಗಂಟೆ ವೇಳೆಗೆ ಸಿಂಹವು ರಸ್ತೆ ಪಕ್ಕದ ಹುಲ್ಲಿನೊಳಗೆ ಮಲಗಿರುವುದು ಪತ್ತೆಯಾಯಿತು. ನಿದ್ರಾಜನಕ ಇಂಜೆಕ್ಷನ್‌ ನೀಡಿದ ಬಳಿಕ ಅದನ್ನು ಸುರಕ್ಷಿತವಾಗಿ ಹಿಡಿದು, ಮತ್ತೆ ಸ್ಥಳಾಂತರಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ದೃಶ್ಯವು ಕಾಡುಪ್ರಾಣಿಗಳ ಸುರಕ್ಷಿತ ಸಾಗಣೆ ಕುರಿತ ಚರ್ಚೆಗೆ ಹೊಸ ದಾರಿಯು ತೆರೆದಿದೆ.

ವಿಡಿಯೋ :


20 ಜನರನ್ನು ಬಲಿ ಪಡೆದ ಕರ್ನೂಲ್ Bus ದುರಂತಕ್ಕೆ ಪಾನಮತ್ತ ಬೈಕ್ ಸವಾರನೇ ಕಾರಣ.?

Bus

ಜನಸ್ಪಂದನ ನ್ಯೂಸ್‌, ಕರ್ನೂಲ್ (ಆಂಧ್ರಪ್ರದೇಶ) : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಿನ್ನೆ ಬೆಳಗಿನ ಜಾವ ಸಂಭವಿಸಿದ ಭೀಕರ ಬಸ್ (Bus) ದುರಂತದಲ್ಲಿ ಕನಿಷ್ಠ 20 ಮಂದಿ ದುರ್ಮರಣ ಹೊಂದಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಐಷಾರಾಮಿ ಖಾಸಗಿ ಬಸ್ ಬೆಂಕಿಗೆ ಆಹುತಿಯಾದ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಕಾರಣವಾದದ್ದು ಪಾನಮತ್ತನಾಗಿದ್ದ ಬೈಕ್ ಸವಾರನ ಅಜಾಗರೂಕ ಚಾಲನೆ ಎನ್ನಲಾಗಿದೆ.

ಹೋಟೆಲ್ ಮೇಲೆ Police ದಾಳಿ‌ : ವಿದೇಶಿ ಯುವತಿ ಸೇರಿ ಮೂವರು ರಕ್ಷಣೆ ; 9 ಜನರ ಬಂಧನ.!
ಅಪಘಾತಕ್ಕೂ ಮುನ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ :

ವರದಿಗಳ ಪ್ರಕಾರ, ದುರಂತಕ್ಕೆ ಕಾರಣವಾದ ಬೈಕ್ ಸವಾರ ಅಪಘಾತಕ್ಕೂ ಕೆಲವು ಕ್ಷಣಗಳ ಮೊದಲು ಹತ್ತಿರದ ಪೆಟ್ರೋಲ್ ಬಂಕ್‌ನಲ್ಲಿ ಸೆರೆಯಾದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿಡಿಯೋದಲ್ಲಿ ಆತ ಬೆಳಗಿನ ಜಾವ ಸುಮಾರು 2:30ರ ವೇಳೆಗೆ ಹಿಂಬದಿ ಸವಾರನೊಂದಿಗೆ ಪೆಟ್ರೋಲ್ ಪಂಪ್‌ಗೆ ಬರುವ ದೃಶ್ಯ ಕಂಡುಬರುತ್ತದೆ.

ಪಂಪ್‌ನಲ್ಲಿ ಯಾವುದೇ ಸಿಬ್ಬಂದಿ ಕಾಣದ ಕಾರಣದಿಂದ ಆತ ಅಸಹನೆಯಿಂದ ಕಿರುಚಾಡುತ್ತಿದ್ದಾನೆ. ನಂತರ, ಬೈಕ್‌ಗೆ ಇಂಧನ ಸಿಗದ ಕಾರಣ ಕೋಪದಿಂದ ಬೈಕ್ ತಿರುಗಿಸಿ ಅಜಾಗರೂಕತೆಯಿಂದ ಹೊರಟಿದ್ದಾನೆ.

ಸಿಸಿಟಿವಿ ದೃಶ್ಯಗಳಲ್ಲಿ ಬೈಕ್ ಸವಾರನ ಚಲನೆ ಅಸಮತೋಲನದಲ್ಲಿದ್ದು, ಪಾನಮತ್ತನಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಈ ಘಟನೆಯ ಕೆಲವೇ ಕ್ಷಣಗಳ ನಂತರ, ರಾಷ್ಟ್ರೀಯ ಹೆದ್ದಾರಿ ಮೇಲೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.

“ಒಂದೇ ಒಂದು Kiss ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭಕರ ಗೊತ್ತೇ?”
ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾದ ಬಸ್ :

ಸುಮಾರು ಬೆಳಗಿನ 3 ಗಂಟೆ ವೇಳೆಗೆ ಉಲ್ಲಿಂದಕೊಂಡೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ನಲ್ಲಿ ಸುಮಾರು 46 ಪ್ರಯಾಣಿಕರು ಇದ್ದರು. ಬೈಕ್‌ ಡಿಕ್ಕಿ ಹೊಡೆದ ತಕ್ಷಣ ಬಸ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿ ಬೆಂಕಿ ಆವರಿಸಿತು.

ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಯಿತು. ನಿದ್ರಿಸುತ್ತಿದ್ದ ಪ್ರಯಾಣಿಕರಲ್ಲಿ 19 ಮಂದಿ ಸ್ಥಳದಲ್ಲೇ ಸುಟ್ಟು ಮೃತಪಟ್ಟರೆ, ಕೆಲವರು ಬಸ್ಸಿನ ಕಿಟಕಿಗಳನ್ನು ಒಡೆದು ತಾವೇ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡರು.

ದಿನವೂ ಮಾಡಿ ಈ 7 ಕೆಲಸ ; Heart ಸಂಬಂಧಿ ಸಮಸ್ಯೆಗಳಿಗೆ ಗುಡ್‌ಬೈ ಹೇಳಿ.!
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ :

ಘಟನೆ ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾರಂಭಿಸಿದರು. ಬೆಂಕಿ ನಂದಿಸಿದ ಬಳಿಕ ಸ್ಥಳದಲ್ಲಿ ಸಂಪೂರ್ಣ ಸುಟ್ಟುಹೋದ ಬಸ್‌ನ ಅವಶೇಷಗಳು ಮಾತ್ರ ಉಳಿದಿದ್ದವು.

ಕರ್ನೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್, “ಅಪಘಾತ ಸಂಭವಿಸಿದ ತಕ್ಷಣ ಬಸ್ಸಿನ ಎರಡನೇ ಚಾಲಕ ಪ್ರಯಾಣಿಕರನ್ನು ರಕ್ಷಿಸಲು ಶ್ರಮಿಸಿದ್ದಾನೆ. ಆದರೆ ಅಪಘಾತಕ್ಕೆ ಕಾರಣವಾದ ಮುಖ್ಯ ಚಾಲಕ ಭಯದಿಂದ ಸ್ಥಳದಿಂದ ಪರಾರಿಯಾಗಿದ್ದ. ಆತನನ್ನು ಈಗ ಬಂಧಿಸಲಾಗಿದೆ,” ಎಂದರು.

ಅವರು ಮುಂದಾಗಿ, ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಬೆಂಕಿಗೆ ಆಹುತಿಯಾದ ಬಸ್‌ನಿಂದ ಸಾಕ್ಷ್ಯ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದರು. ಶವಗಳನ್ನು ಗುರುತಿಸಲು ಡಿಎನ್‌ಎ ಮಾದರಿಗಳು ಸಹ ತೆಗೆದುಕೊಳ್ಳಲಾಗುತ್ತಿದ್ದು, ಸ್ಥಳದಲ್ಲೇ ತಾತ್ಕಾಲಿಕ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ.

Pond : ಪ್ರೇಯಸಿ ಜೊತೆ ಜಗಳ, ಕೆರೆಗೆ ಹಾರಿದ ಪ್ರಿಯಕರ ; ವಿಡಿಯೋ ವೈರಲ್.!
ದುರಂತದಿಂದ ರಾಷ್ಟ್ರ ಶೋಕಾವಸ್ಥೆಯಲ್ಲಿ :

ಈ ದುರ್ಘಟನೆಯಿಂದ ಮೃತಪಟ್ಟವರ ಕುಟುಂಬಗಳು ಕಣ್ಣೀರು ಮರೆತಿವೆ. ಆಂಧ್ರಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡುವ ನಿರೀಕ್ಷೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ “ಕರ್ನೂಲ್ ಬಸ್ ಟ್ರ್ಯಾಜಿಡಿ” (Kurnool Bus Tragedy) ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್ ಆಗುತ್ತಿದೆ.

ತಜ್ಞರು ಪಾನಮತ್ತ ಚಾಲನೆ ಹಾಗೂ ರಾತ್ರಿ ವೇಳೆ ವೇಗದ ಓಟವು ಅನೇಕ ಜೀವಗಳ ಬಲಿಯಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದು, ವಾಹನ ಚಾಲಕರು ನಿಯಮ ಪಾಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments