ಜನಸ್ಪಂದನ ನ್ಯೂಸ್, ಆರೋಗ್ಯ : ನೀವೆವಾದರೂ ಕೆಟ್ಟ ಕೊಲೆಸ್ಟ್ರಾಲ್ (LDL) ಸಮಸ್ಯೆಯಿಂದ ಬಳಲುತ್ತಿದ್ದಿರಾ.? ಹಾಗಾದ್ರೆ ಇಲ್ಲಿವೆ ನೋಡಿ 4 ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ಮಾರ್ಗಗಳು.!
ಆರೋಗ್ಯಕರ ಹೃದಯಕ್ಕಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲದಲ್ಲಿಡುವುದು ಬಹುಮುಖ್ಯ. ಲಕ್ಷಾಂತರ ಜನರು “ಕೆಟ್ಟ ಕೊಲೆಸ್ಟ್ರಾಲ್” ಎಂದು ಕರೆಯಲಾಗುವ LDL (Low-Density Lipoprotein) ಪ್ರಮಾಣ ಹೆಚ್ಚಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!
ಇದು ಪಾರ್ಶ್ವವಾಯು ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಒಳ್ಳೆಯ ಸಂಗತಿಯೆಂದರೆ, ಜೀವನಶೈಲಿಯಲ್ಲಿ ಕೆಲ ಸರಳ ಬದಲಾವಣೆಗಳನ್ನು ಮಾಡುವುದು ಈ LDL ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದಕ್ಕೆ ನೆರವಾಗುತ್ತದೆ. ಜೊತೆಗೆ HDL (High-Density Lipoprotein) ಅಂದರೆ ‘ಒಳ್ಳೆಯ ಕೊಲೆಸ್ಟ್ರಾಲ್’ ಪ್ರಮಾಣವನ್ನು ಹೆಚ್ಚಿಸಬಹುದು.
ಇದೀಗ ನೋಡೋಣ ವೈಜ್ಞಾನಿಕವಾಗಿ ಸಾಬೀತಾಗಿರುವ ನಾಲ್ಕು ಪ್ರಮುಖ ಉಪಾಯಗಳು :
1. ಕೊಬ್ಬಿನ ಆಹಾರವನ್ನು ನಿಯಂತ್ರಿಸಿ :
ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರ ಸಂಬಂಧವಿದೆ. LDL ಮಟ್ಟವನ್ನು ನಿಯಂತ್ರಣಕ್ಕೆ ತರುವ ಮೊದಲ ಹೆಜ್ಜೆ ಎಂದರೆ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳನ್ನು ಮಿತಿಗೊಳಿಸುವುದು.
ಕೆಂಪು ಮಾಂಸ, ಸಾಸೇಜು, ತುಪ್ಪ, ಬೆಣ್ಣೆ, ಕ್ರೀಮ್ ಹಾಗೂ ಪೂರ್ಣ ಕೊಬ್ಬಿನ ಚೀಸ್‌ಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೂರವಿರಿ. ಇವು LDL ಮಟ್ಟ ಹೆಚ್ಚಿಸಲು ಕಾರಣವಾಗಬಹುದು.
ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!
ಇವುಗಳ ಬದಲು, ಒಮೇಗಾ-3 ಯುಕ್ತ ಮೀನುಗಳು, ಆಲಿವ್ ಎಣ್ಣೆ, ಆವಕಾಡೊ, ಬೀನ್ಸ್, ಕಾಳುಬೀಜ ಮತ್ತು ಕಂದು ಅಕ್ಕಿ, ಧಾನ್ಯಗಳ ಪಾವರ್‌ನಿಂದ ಕೂಡಿದ ಆಹಾರಗಳನ್ನು ಆಯ್ಕೆಮಾಡುವುದು ಉತ್ತಮ.
2. ನಿಯಮಿತ ವ್ಯಾಯಾಮ :
ಹೃದಯವನ್ನು ಆರೋಗ್ಯಕರವಾಗಿಡಲು ನಿಯಮಿತ ದೈಹಿಕ ಚಟುವಟಿಕೆ ಅತ್ಯಾಗತ್ಯ. ವ್ಯಾಯಾಮವು LDL ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಲ್ಲಿ ಸಹಾಯಮಾಡುತ್ತದೆ ಮತ್ತು HDL ಪ್ರಮಾಣವನ್ನು ಹೆಚ್ಚಿಸುತ್ತದೆ. ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಗುರಿಯಾಗಿಟ್ಟುಕೊಳ್ಳಿ.
ಇದನ್ನು ಓದಿ : BSNL ಹೊಸ ಪ್ರಿಪೇಯ್ಡ್ ಪ್ಲ್ಯಾನ್ : 897 ರೂ.ಗೆ 180 ದಿನಗಳ ಮಾನ್ಯತೆ.!
ನಡಿಗೆ, ಸೈಕ್ಲಿಂಗ್, ಈಜು ಮುಂತಾದ ಚಟುವಟಿಕೆಗಳು ತುಂಬಾ ಪರಿಣಾಮಕಾರಿಯಾಗಿವೆ. ನಿಮ್ಮಿಗೆ ಇಷ್ಟವಾಗುವ ವ್ಯಾಯಾಮವನ್ನು ಆಯ್ಕೆ ಮಾಡಿ ಮತ್ತು ಅದನ್ನು ನಿರಂತರವಾಗಿ ಪಾಲಿಸಿ.
3. ಧೂಮಪಾನ ತ್ಯಜಿಸಿ :
ಧೂಮಪಾನವು ದೀರ್ಘಕಾಲದ ಅನೇಕ ಗಂಭೀರ ಕಾಯಿಲೆಗಳ ಮಹಾತಾಯಿ, ಅದು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಇದು HDL ಪ್ರಮಾಣವನ್ನು ಕಡಿಮೆಗೊಳಿಸುತ್ತವೆ ಹಾಗೂ ಆಕ್ಸಿಡೇಶನ್ ಮೂಲಕ LDL ಅನ್ನು ಹೆಚ್ಚು ಹಾನಿಕಾರಕವಾಗಿಸುತ್ತದೆ. ಧೂಮಪಾನವಿಲ್ಲದ ಜೀವನದತ್ತ ಮೊರೆಯಿಡಿ. ಆರಂಭದಲ್ಲಿ ಕಷ್ಟವಾಗಬಹುದು, ಆದರೆ ಅದು ನಿಮ್ಮ ದೀರ್ಘಕಾಲದ ಆರೋಗ್ಯಕ್ಕಾಗಿ ಅತ್ಯಗತ್ಯ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
4. ಮದ್ಯಪಾನವನ್ನು ನಿಯಂತ್ರಿಸಿ :
ಮದ್ಯ ಸೇವನೆ ನಿಮ್ಮ ದೇಹದ ಮೇಲೆ ನಾನಾ ರೀತಿಯಲ್ಲಿ ಹಾನಿಕಾರಕ ಪರಿಣಾಮ ಬೀರಬಹುದು. ಇದು ಟ್ರೈಗ್ಲಿಸರೈಡ್ ಹಾಗೂ LDL ಪ್ರಮಾಣವನ್ನು ಹೆಚ್ಚಿಸುವ ಮೂಲಕ ಹೃದಯದ ಮೇಲೆ ಒತ್ತಡ ತರಬಹುದು. ಮದ್ಯ ಸೇವನೆಯನ್ನು ಮಿತಿಗೊಳಿಸಿ ಅಥವಾ ನಿಧಾನವಾಗಿ ಸಂಪೂರ್ಣವಾಗಿ ನಿಲ್ಲಿಸುವ ಗುರಿಯತ್ತ ಮುಂದಾಗುವುದು ಉತ್ತಮ.
ಸಂಪಾದಕೀಯ :
ಜೀವನಶೈಲಿಯ ಈ ಸರಳ ಬದಲಾವಣೆಗಳು ನಿಮಗೆ ದೀರ್ಘಕಾಲದ ಆರೋಗ್ಯದತ್ತ ಹೆಜ್ಜೆಯಿಡಲು ನೆರವಾಗುತ್ತವೆ. ಕೊಲೆಸ್ಟ್ರಾಲ್ ನಿಯಂತ್ರಣವು ಕೇವಲ ಔಷಧಿಗಳೇ ಅಲ್ಲದೆ, ನಿತ್ಯದ ಬೆಳಗಿನ ಪದಾರ್ಥಗಳಿಂದಲೇ ಪ್ರಾರಂಭವಾಗುತ್ತದೆ. ಯಾವುದೇ ಸಹಾಯ ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಅನುಕೂಲ.
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.
Schoolನ 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : 10ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಾಲೆ (School) ಯ 4 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರಣ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಗುಜರಾತ್‌ನ ಅಹಮದಾಬಾದ್ ನವರಂಗಪುರ ಪ್ರದೇಶದಲ್ಲಿ ನಡೆದ ಈ ದುರ್ಘಟನೆಯು ಆತಂಕ ಸೃಷ್ಟಿಸಿದೆ. ಸ್ಥಳೀಯ ಸೋಮ್ ಲಲಿತ್ ಶಾಲೆ (School) ಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇರವಾಗಿ ಶಾಲೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನು ಓದಿ : Belagavi : “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಮಾತಿಗೆ ವ್ಯಕ್ತಿ ಆತ್ಮಹತ್ಯೆ.!
Schoolನ 4ನೇ ಮಹಡಿಯಿಂದ ಹಾರಿದ ಪರಿಣಾಮವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿನಿ ಶಾಲೆ (School) ಯಲ್ಲಿ ಮಧ್ಯಾಹ್ನದ ಲಂಚ್ ಬ್ರೇಕ್ ಸಮಯದಲ್ಲಿ ಆವರಣದಲ್ಲಿ ಸುತ್ತಾಡುತ್ತಿದ್ದಾಳೆ. ತುಂಬಾ ಸಾಮಾನ್ಯವಾಗಿ ಶಾಲೆಯ 4ನೇ ಅಂತಸ್ತಿನಲ್ಲಿ ನಡೆದುಕೊಂಡು ಬಂದಿದ್ದ ಈ ವಿದ್ಯಾರ್ಥಿನಿ ಕೈಯಲ್ಲಿ ಕೀಚೈನ್ ತಿರುಗಿಸುತ್ತಾ ಬಾಲ್ಕನಿ ಬಳಿ ಬಂದು ನೋಡ ನೋಡುತ್ತಲೇ ಕಬ್ಬಿಣದ ತಡೆಗೋಡೆ ಮೇಲೇರಿ ಕೆಳಗೆ ಹಾರಿದ್ದಾಳೆ.
ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!
ವಿದ್ಯಾರ್ಥಿನಿ ಇದ್ದಕ್ಕಿದಂತೆ ಕೆಳಕ್ಕೆ ಜಿಗಿದಿರುವ ದೃಶ್ಯವು ಶಾಲೆ (School) ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಆಕೆಯ ಸ್ನೇಹಿತೆಯರು ತಡೆಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಜಿಗಿತದ ನಂತರ ತಕ್ಷಣವೇ ಶಾಲೆ (School) ಯೊಳಗೆ ವಿದ್ಯಾರ್ಥಿಗಳ ಕೂಗಾಟ ಜೋರಾದ ಪರಿಣಾಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ನಿಧಿ ಆಸ್ಪತ್ರೆಗೂ, ಬಳಿಕ ತಲ್ತೇಜ್‌ನ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದುರ್ದೈವಶಾತ್ ಚಿಕಿತ್ಸೆಯ ನಡುವೆ ವಿದ್ಯಾರ್ಥಿನಿ ಉಸಿರು ನಿಲ್ಲಿಸಿದ್ದಾಳೆ.
ತೀವ್ರ ಆಘಾತಗೊಂಡ ಕುಟುಂಬ : ಮುಂದುವರೆದ ತನಿಖೆ :
ಘಟನೆಯಿಂದ ಪಾಲಕರು ತೀವ್ರ ಆಘಾತಗೊಳಗಾಗಿದ್ದು, ಸದ್ಯಕ್ಕೆ ವಿದ್ಯರ್ಥಿನಿ ಯಾಕೆ ಹೀಗೆ ಮಾಡಿಕೊಂಡಳು ಎಂಬ ವಿಷಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ದುಷ್ಕೃತ್ಯದ ಅಂಶಗಳು ಕಂಡುಬಂದಿಲ್ಲ, ಆದರೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಶಾಲಾ ಆಡಳಿತದ ಪ್ರಕಾರ, ವಿದ್ಯಾರ್ಥಿನಿ ಕಳೆದ ಐದು ವರ್ಷಗಳಿಂದ ಈ ಶಾಲೆಯಲ್ಲಿ ಓದುತ್ತಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಒಂದು ತಿಂಗಳ ರಜೆಯ ನಂತರ, 10 ದಿನಗಳ ಹಿಂದೆಯೇ ಮತ್ತೆ ಶಾಲೆ (School) ಗೆ ಹಾಜರಾಗಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವರಂಗಪುರ ಪೊಲೀಸರು ಮೆಡಿಕೋ-ಲೀಗಲ್ ಕೇಸ್ ದಾಖಲಾಗಿದ್ದು, ಶಿಕ್ಷಕರು, ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿಗಳ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಣೆಗೂ ಒಳಪಡಿಸಲಾಗಿದೆ.
ವಿಡಿಯೋ :
गुजरात के अहमदाबाद में खौफनाक घटना, स्कूल में 10वीं की छात्रा ने चौथी मंजिल से छलांग लगाकर दी जान !!
स्कूल ब्रेक के दौरान हुई इस घटना की जांच की जा रही है कि छात्रा ने यह आत्मघाती कदम क्यों उठाया?
बुरी तरह से जख्मी छात्रा को बचाने की काेशिश की गई लेकिन डॉक्टर असफल रहे !!शहर के… pic.twitter.com/xjStkBtT6P
— MANOJ SHARMA LUCKNOW UP🇮🇳🇮🇳🇮🇳 (@ManojSh28986262) July 25, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.