Wednesday, September 17, 2025

Janaspandhan News

HomeJobKVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img

KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಕೇಂದ್ರೀಯ ವಿದ್ಯಾಲಯ ಸಂಘಟನ್ (Kendriya Vidyalaya Sangathan – KVS) 2025ರ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಿದೆ. ‌

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KVS ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹುದ್ದೆಗಳ ವಿವರಗಳು :
ಬೋಧನಾ ಪೋಸ್ಟ್‌ಗಳು 7,444 ಹುದ್ದೆಗಳು
ಬೋಧಕೇತರ ಹುದ್ದೆಗಳು 1,712 ಹುದ್ದೆಗಳು

Note : ಹುದ್ದೆಗಳ ಸಂಖ್ಯೆ ಸುಮಾರು 9,156 ಆಗಿದ್ದು, ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

  • ಮುಖ್ಯೋಪಾಧ್ಯಾಯರು (Principal) : 322 ಹುದ್ದೆಗಳು.
  • ಸ್ನಾತಕೋತ್ತರ ಶಿಕ್ಷಕರು (PGT) : 1,934.
  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) : 3,619.
  • ಪ್ರಾಥಮಿಕ ಶಿಕ್ಷಕರು (PRT) : 1,891.
  • ಪಿಆರ್‌ಟಿ ಸಂಗೀತ : 75.
  • ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) : 649.
  • ಹಿರಿಯ ಸಚಿವಾಲಯ ಸಹಾಯಕ (SSA) : 501.
  • ಸಹಾಯಕ ವಿಭಾಗ ಅಧಿಕಾರಿ (ASO) : 165.
ಇದನ್ನು ಓದಿ : Minor-girl : ಆಟವಾಡುತ್ತಿದ್ದ ಅಪ್ರಾಪ್ತೆಗೆ ‘ಕಿಸ್’ ಕೊಟ್ಟ ಕಾಮುಕ : ಆಘಾತಕಾರಿ ವಿಡಿಯೋ.!
ವಿದ್ಯಾರ್ಹತೆ :
1. ಬೋಧನಾ ಹುದ್ದೆಗಳಿಗಾಗಿ ಶೈಕ್ಷಣಿಕ ಅರ್ಹತೆ :

🔹 ಪ್ರಾಥಮಿಕ ಶಿಕ್ಷಕರು (PRT):

  • ಕನಿಷ್ಠ 50% ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (12ನೇ ತರಗತಿ) ಪಾಸಾಗಿರಬೇಕು ಮತ್ತು
    ಪ್ರಾಥಮಿಕ ಶಿಕ್ಷಣದಲ್ಲಿ ಕನಿಷ್ಠ 2 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿದ್ದಿರಬೇಕು.
    ಅಥವಾ,
  • 50% ಅಂಕಗಳೊಂದಿಗೆ ಪದವಿ ಪಡೆದಿದ್ದು, ಜೊತೆಗೆ B.Ed ಡಿಗ್ರಿ ಹೊಂದಿರಬೇಕು.

🔹 ತರಬೇತಿ ಪಡೆದ ಪದವೀಧರ ಶಿಕ್ಷಕರು (TGT):

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು
    ಅಗತ್ಯ ವಿಷಯದಲ್ಲಿ ಅಧ್ಯಯನ ಮಾಡಿರಬೇಕು.
  • ಜೊತೆಗೆEd ಪದವಿಯೂ ಹೊಂದಿರಬೇಕು.

🔹 ಸ್ನಾತಕೋತ್ತರ ಶಿಕ್ಷಕರು (PGT):

  • ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು
    ಅಥವಾ,
  • ಎನ್‌ಸಿಇಆರ್‌ಟಿ (NCERT) ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ 2 ವರ್ಷಗಳ ಇಂಟಿಗ್ರೇಟೆಡ್ ಎಮ್.ಎಸ್ಸಿ ಪದವಿ ಪಡೆದಿರಬೇಕು.
ಇದನ್ನು ಓದಿ : ಆರೋಗ್ಯಕ್ಕೆ ವರದಾನವಾಗಿರುವ Dragon fruit : ಇಲ್ಲಿವೆ ಅದ್ಭುತ ಪ್ರಯೋಜನಗಳು.!
2. ಬೋಧಕೇತರ ಹುದ್ದೆಗಳಿಗಾಗಿ ಶೈಕ್ಷಣಿಕ ಅರ್ಹತೆ :

🔹 JSA (ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್):

  • 12ನೇ ತರಗತಿ ಪಾಸಾಗಿರಬೇಕು.
  • ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳು ಅಥವಾ ಹಿಂದಿಯಲ್ಲಿ 30 ಪದಗಳ ಟೈಪಿಂಗ್ ವೇಗ ಅಗತ್ಯವಿದೆ.
  • ಜೊತೆಗೆ ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

🔹 SSA (ಹಿರಿಯ ಸಚಿವಾಲಯ ಸಹಾಯಕ):

  • ಪದವಿ ಹೊಂದಿರಬೇಕು.
  • ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಕನಿಷ್ಠ 3 ವರ್ಷಗಳ LDC (Lower Division Clerk) ಅನುಭವ ಇರಬೇಕು.

🔹 ASO (ಸಹಾಯಕ ವಿಭಾಗ ಅಧಿಕಾರಿ):

  • ಪದವಿ ಪಡೆದಿರಬೇಕು.
  • ಕೇಂದ್ರ/ರಾಜ್ಯ ಸರ್ಕಾರದಲ್ಲಿ ಕನಿಷ್ಠ 3 ವರ್ಷಗಳ UDC (Upper Division Clerk) ಅನುಭವ ಅಗತ್ಯ.
ಇದನ್ನು ಓದಿ : Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಪೋಸ್ಟ್‌ವಾರು ಅರ್ಜಿ ಶುಲ್ಕ :
  • 🔹 ಪ್ರಾಂಶುಪಾಲರು/ಉಪ ಪ್ರಾಂಶುಪಾಲರು : ರೂ1500/-
  • 🔹 ಪಿಜಿಟಿ, ಟಿಜಿಟಿ, ಪಿಆರ್‌ಟಿ, ಗ್ರಂಥಪಾಲಕ (PGT, TGT, PRT, Librarian) : ರೂ.1000/-
KVS ಆಯ್ಕೆ ಪ್ರಕ್ರಿಯೆ :
  • ಲಿಖಿತ ಪರೀಕ್ಷೆ.
  • ಸಂದರ್ಶನ.
KVS ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ವೆಬ್‌ಸೈಟ್‌ (kvsangathan.nic.in) ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
  3. ಆನ್ಲೈನ್ ಅರ್ಜಿ ಲಿಂಕ್‌ ಮೂಲಕ ಫಾರ್ಮ್ ಭರ್ತಿ ಮಾಡಿ.
  4. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  5. ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  6. ಅರ್ಜಿಯನ್ನು ಸಲ್ಲಿಸುವ ಮೊದಲು ಮತ್ತೊಮ್ಮೆ ಪರಿಶೀಲಿಸಿ.
  7. ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಮುದ್ರಿಸಿ ಕಾಯ್ದಿರಿಸಿ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಪ್ರಕಟವಾಗಲಿದೆ
  • ಅರ್ಜಿ ಕೊನೆಯ ದಿನಾಂಕ : ಅಧಿಕೃತವಾಗಿ ಶೀಘ್ರದಲ್ಲೇ ಘೋಷಿಸಲಾಗುತ್ತದೆ
ವೇತನ ಶ್ರೇಣಿ :

ಕೆವಿಎಸ್ (KVS) ಸಂಬಳ 2025 (7ನೇ ವೇತನ ಆಯೋಗ) :

ಪೋಸ್ಟ್ ವೇತನ ಶ್ರೇಣಿ (ತಿಂಗಳಿಗೆ)
ಪ್ರಾಂಶುಪಾಲರು : ರೂ. 78,800 – ರೂ. 2,09,200
ಉಪ ಪ್ರಾಂಶುಪಾಲರು : ರೂ. 56,100 – ರೂ. 1,77,500
ಪಿಜಿಟಿ : ರೂ. 47,600 – ರೂ. 1,51,100
ಟಿಜಿಟಿ : ರೂ. 44,900 – ರೂ. 1,42,400
ಪಿಆರ್‌ಟಿ : ರೂ. 35,400 – ರೂ. 1,12,400
ಗ್ರಂಥಪಾಲಕ : ರೂ. 44,900 – ರೂ. 1,42,400
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.


Soap : ಒಂದೇ ಸೋಪಿನಿಂದ ಮನೆಮಂದಿಯಲ್ಲಾ ಸ್ನಾನ ಮಾಡುತ್ತೀರಾ.? ಹಾಗಾದ್ರೆ ಈ ಸುದ್ದಿ ಓದಿ.!

Soap

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿಗೂ ಸಹ ಕೆಲವು ಮನೆಗಳಲ್ಲಿ ಕುಟುಂಬದ ಎಲ್ಲ ಸದಸ್ಯರು ಒಂದೇ ಸೋಪ್ (Soap) ಅಥವಾ ಟವೆಲ್ ಬಳಸಿ ಸ್ನಾನ ಮಾಡುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಚರ್ಮದ ಪ್ರಕಾರವಾದ ವಿಭಿನ್ನ ನೈರ್ಮಲ್ಯ ಉತ್ಪನ್ನ (Soap) ಗಳನ್ನು ಬಳಸುವುದು ಆರೋಗ್ಯಕರ ಎಂದು ತಜ್ಞರು ಶಿಫಾರಸು ಮಾಡುತ್ತಿದ್ದಾರೆ.

ಸೋಪ್ (Soap) ಬಳಸಲು ಆರೋಗ್ಯ ತಜ್ಞರ ಅಭಿಪ್ರಾಯ ಏನ.?

ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಬಾಡಿ ವಾಶ್ ಬಳಸುವ ಸಂಸ್ಕೃತಿ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿದೆ. ಪ್ರತಿಯೊಬ್ಬರು ಪ್ರತ್ಯೇಕ ಬಾಟಲ್‌ನಲ್ಲಿ ಬಾಡಿ ವಾಶ್ ಬಳಸಿದರೆ, ಸೋಂಕು ಹರಡುವ ಅಪಾಯ ಕಡಿಮೆಯಾಗುತ್ತದೆ. ಇದರಿಂದ ನೈರ್ಮಲ್ಯವೂ ಉಳಿಯುತ್ತದೆ ಮತ್ತು ಹೈಜೀನಿಕ್ ಆಗಿರುತ್ತದೆ.

ಒಬ್ಬರ ಚರ್ಮದ ಸೋಂಕು ಅಥವಾ ಸೂಕ್ಷ್ಮಜೀವಿಗಳು ಒಂದೇ ಸೋಪಿ (Soap) ನ ಮೂಲಕ ಇತರರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸೋಪಿನ ಮೇಲಿರುವ ಒದ್ದೆಯ ನೊರೆ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗಿರುವುದರಿಂದ, ಇದು ಆರೋಗ್ಯಕ್ಕೆ ನೇರ ಅಪಾಯವಾಗಬಹುದು. ಅನೇಕ ಬಾರಿ ಸೋಪನ್ನು ಬಳಸಿದ ನಂತರ ಚೆನ್ನಾಗಿ ತೊಳೆಯದೆ ಹಾಗೆಯೇ ಬಿಟ್ಟರೆ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು.

ಇದನ್ನು ಓದಿ : AIIMS ನೇಮಕಾತಿ : ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸೋಪು (Soap) ದೇಹ ಶುದ್ಧಿಗೆ ಉಪಯೋಗಿಸಿದರೂ, ಅದರ ಅಸಮರ್ಪಕ ಬಳಕೆಯಿಂದ ಯಾವುದೇ ಲಾಭವಾಗದು. ಎಲ್ಲರೂ ಒಂದೇ ಸೋಪನ್ನು ಬಳಸಬೇಕಾದ ಸಂದರ್ಭಗಳಲ್ಲಿ, ಪ್ರತಿಪ್ರಯೋಗದ ಬಳಿಕ ಅದನ್ನು ಚೆನ್ನಾಗಿ ತೊಳೆಯುವುದು ಮತ್ತು ಒಣಗಿಸುವುದು ಅತ್ಯಗತ್ಯ. ಜೊತೆಗೆ, ಸೋಪನ್ನು ನೇರವಾಗಿ ದೇಹಕ್ಕೆ ಹಚ್ಚುವುದಕ್ಕಿಂತ ಕೈಯಲ್ಲಿ ನೊರೆ ಮಾಡಿ ಉಪಯೋಗಿಸುವುದು ಸುರಕ್ಷಿತ.

ಚರ್ಮದ ಸಮಸ್ಯೆಗಳಿದ್ದರೆ, ವೈದ್ಯರ ಸಲಹೆಯೊಂದಿಗೆ ನಿಮ್ಮ ಚರ್ಮಕ್ಕೆ ತಕ್ಕಂತಹ ಸೋಪ (Soap) ನ್ನು ಆಯ್ಕೆ ಮಾಡುವುದು ಉತ್ತಮ. ವೈಯಕ್ತಿಕ ನೈರ್ಮಲ್ಯ ಕಾಪಾಡುವ ಮೂಲಕ ನಾವು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪಾಲುವಹಿಸಬಹುದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments