Monday, July 14, 2025

Janaspandhan News

HomeJobKRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img

KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (Konkan Railway Corporation Limited/ KRCL) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪಾಯಿಂಟ್ಸ್ ಮ್ಯಾನ್ ಮತ್ತು ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನೂ ನೀಡುತ್ತದೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

KRCL ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳ ಸಂಖ್ಯೆ : 79
  • ಹುದ್ದೆಯ ಹೆಸರುಗಳು :
    • ಟ್ರ್ಯಾಕ್ ನಿರ್ವಹಣೆ (Track Maintainer) – 35 ಹುದ್ದೆಗಳು.

    • ಪಾಯಿಂಟ್ಸ್ ಮ್ಯಾನ್ (Pointsman) – 44 ಹುದ್ದೆಗಳು.

  • ಉದ್ಯೋಗ ಸ್ಥಳ : ಮಹಾರಾಷ್ಟ್ರ, ಗೋವಾ, ಕರ್ನಾಟಕ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online).
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 13 ರ ದ್ವಾದಶ ರಾಶಿಗಳ ಫಲಾಫಲ.!
ವಯೋಮಿತಿ :
  • ಕನಿಷ್ಟ ವಯಸ್ಸು: 18 ವರ್ಷ (ಅಧಿಸೂಚನೆಯ ಪ್ರಕಾರ).
  • ಗರಿಷ್ಟ ವಯಸ್ಸು: 45 ವರ್ಷ (ಅಧಿಸೂಚನೆಯ ಪ್ರಕಾರ).
ವಯೋಮಿತಿ ಸಡಿಲಿಕೆ :
  • ಮಾಜಿ ಸೈನಿಕ ಅಭ್ಯರ್ಥಿಗಳು : 3 ವರ್ಷ.
  • SC/ST ಅಭ್ಯರ್ಥಿಗಳು : 5 ವರ್ಷ.
  • ಮಾಜಿ ಸೈನಿಕ (SC/ST) ಅಭ್ಯರ್ಥಿಗಳು : 8 ವರ್ಷ.
ಶೈಕ್ಷಣಿಕ ಅರ್ಹತೆ :
  • ಕನಿಷ್ಠ ವಿದ್ಯಾರ್ಹತೆ : 10ನೇ ತರಗತಿ ಪಾಸ್‌ / SSLC (ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ)
ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಆಯ್ಕೆ ವಿಧಾನ :
  • ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ವಿವರಗಳು ಅಧಿಕೃತ KRCL ಅಧಿಸೂಚನೆಯಲ್ಲಿ ಲಭ್ಯವಿವೆ.
ಅರ್ಜಿ ಶುಲ್ಕ :
  • ರೂ.885/- (ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ)
ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ KRCL ನಿಯಮಾನುಸಾರ ರೂ. 18,000/- ಪ್ರತಿ ತಿಂಗಳು ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
  • ಅಧಿಕೃತ ವೆಬ್‌ಸೈಟ್ (KRCL Website) ಅಥವಾ ಲಿಂಕ್‌ (Link) ಗೆ ಭೇಟಿ ನೀಡಿ.
  • ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಆನ್‌ಲೈನ್ ಅರ್ಜಿ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  • ಫೋಟೋ ಹಾಗೂ ಸಹಿಯನ್ನು Upload ಮಾಡಿ.
  • ಅರ್ಜಿ ಸಲ್ಲಿಸಿ ಮತ್ತು ಪ್ರತಿಯನ್ನು ಮುದ್ರಿಸಿ (Print) ಇಟ್ಟುಕೊಳ್ಳಿ.
ಇದನ್ನು ಓದಿ : 7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!
ಪ್ರಮುಖ ದಿನಾಂಕಗಳು :
  • ಅರ್ಜಿಯ ಪ್ರಾರಂಭ ದಿನಾಂಕ : 23 ಜುಲೈ 2025.
  • ಅರ್ಜಿಯ ಕೊನೆಯ ದಿನಾಂಕ : 12 ಆಗಸ್ಟ್ 2025.
ಪ್ರಮುಖ ಲಿಂಕ್‌ಗಳು :

📌 ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.


7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!

Sexual assault

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ತಂದು ಸ್ಥಳೀಯರು ಹೊಡೆದು ಕೊಂದಿರುವ ಭಯಾನಕ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಅರುಣಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿತ ವ್ಯಕ್ತಿ ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸೆಗಿದ್ದ ಎನ್ನಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ಹೊಡೆದು ಕೊಂದಿದ್ದಾರೆ.

ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

ಈ ಘಟನೆ ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ನಡೆದಿದೆ. ಗುಂಪಿನಿಂದ ಹತನಾದ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ರೋಯಿಂಗ್‌ನ ಮೌಂಟ್ ಕಾರ್ಮೆಲ್ ಶಾಲೆಯ 5 ರಿಂದ 7 ವರ್ಷ ವಯಸ್ಸಿನ ಕನಿಷ್ಠ 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದನು.

ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ಮಧ್ಯರಾತ್ರಿಯಲ್ಲಿ ಬಾಲಕಿಯರ ಶಾಲೆಯ ಹಾಸ್ಟೆಲ್‌ಗೆ ನುಗ್ಗಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿಯರು ತಮಗೆ ಹೊಟ್ಟೆನೋವು ಎಂದು ಹೇಳಿದ ಪರಿಣಾಮವಾಗಿ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಿದಾಗ, ವೈದ್ಯರು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
ಪೊಲೀಸ್ ಕಣ್ಣೆದುರೇ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿ ಮೇಲೆ ಹಲ್ಲೆ :

ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿಯನ್ನು ಪೊಲೀಸರು ಬಂಧಿಸಿ ಕಳೆದ ಗುರುವಾರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ವಿಷಯ ತಿಳಿದು ಠಾಣೆಗೆ ಆಗಮಿಸಿದ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ.

ಪೋಷಕರು ಮತ್ತು ಸ್ಥಳೀಯರು ಆರೋಪಿ (Sexual assault) ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಆರೋಪಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಂಬಿಡದೆ ಹಿಂಬಾಲಿಸಿದ ಗುಂಪು ಆತನಿಗೆ ಮತ್ತೇ ಥಳಿಸಿತ್ತು. ಗುಂಪಿನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಲೈಂಗಿಕ ದೌರ್ಜನ್ಯ (Sexual assault) ಎಸಗಿದ್ದ ಅಪ್ರಾಪ್ತ ಮೃತಪಟ್ಟಿದ್ದಾನೆ.

ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಶಾಲೆ ಮುಚ್ಚಿದ ಜಿಲ್ಲಾ ಆಡಳಿತ :

ಬಾಲಕಿಯರ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅಹಿತಕರ ಘಟನೆಯಿಂದಾಗಿ ಜಿಲ್ಲಾ ಅಧಿಕಾರಿಗಳು, ಜುಲೈ 12ರಿಂದ ಅನಿರ್ದಿಷ್ಟಾವಧಿಯವರೆಗೆ ಶಾಲೆಯನ್ನು ಮುಚ್ಚಲಾಗುವುದು ಎಂದು  ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬಾಲಕಿಯರ ಹಾಸ್ಟೆಲ್‌ನಲ್ಲಿರುವ ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಹತ್ತಿರದ ಯಾವುದೇ ಸರ್ಕಾರಿ ಶಾಲೆಗಳು/ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಸೇರಿಸಲು ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments