Monday, December 23, 2024
HomeState Newsಮಾರಕಾಸ್ತ್ರಗಳಿಂದ ಕೊಚ್ಚಿ Rowdy Sheeter ಬರ್ಬರ ಹತ್ಯೆ.!
spot_img

ಮಾರಕಾಸ್ತ್ರಗಳಿಂದ ಕೊಚ್ಚಿ Rowdy Sheeter ಬರ್ಬರ ಹತ್ಯೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಹಾಸನ : ಹಾಸನ ಜಿಲ್ಲೆಯ ಚನ್ನಪಟ್ಟಣ (Channapattan) ನಗರದಲ್ಲಿ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

ರಖಿತಾ ಅಲಿಯಾಸ್ ಗುಂಡ ಕೊಲೆಯಾದ ರೌಡಿ ಶೀಟರ್ (rowdy sheeter) ಎಂದು ತಿಳಿದು ಬಂದಿದೆ.

ತಡರಾತ್ರಿ ಆಟೋದಲ್ಲಿ ಗೆಳೆಯರೊಂದಿಗೆ ಸೇರಿಕೊಂಡು ಮದ್ಯ ಸೇವಿಸುತ್ತಿದ್ದ. ಈ ವೇಳೆ ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!

ಇವರ ಜಗಳ ವಿಕೋಪಕ್ಕೆ ತಿರುಗಿ ಗೆಳೆಯರೇ ರೌಡಿ ಶೀಟರ್ ನನ್ನು ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಹಳೆ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ (postmortem) ರವಾನಿಸಿದರು.

 

ಹಿಂದಿನ ಸುದ್ದಿ ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು ಸ್ಟೋಕ್ ಆಗಿರಬಹುದು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಯುವ ಪೀಳಿಗೆಯವರಿಗೆ ಹೃದಯಾಘಾತ (heart attack), ಪಾರ್ಶ್ವವಾಯು, ಕ್ಯಾನ್ಸರ್‌ನಂತಹ ಸಮಸ್ಯೆಗಳು ಕಾಡಿಸುತ್ತೀವೆ.

ಅದರಲ್ಲಿಯೂ ಪಾರ್ಶ್ವವಾಯು (stroke) ಹಿಂದೆ ಹಿರಿಯರಿಗೆ ಕಾಡುವ ಕಾಯಿಲೆ ಎಂಬ ನಂಬಿಕೆ ಇತ್ತು. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸ್ಟ್ರೋಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಕೂಡ ಆತಂಕ ಹೆಚ್ಚಲು ಕಾರಣವಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳಿರಬಹುದು.

ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

ಸಾಮಾನ್ಯವಾಗಿ ನಮ್ಮ ಮೆದುಳಿಗೆ ರಕ್ತ ಸಂಚಾರದಲ್ಲಿ (blood circulation to brain) ಏರುಪೇರಾದಾಗ ಸ್ಟ್ರೋಕ್ ಸಮಸ್ಯೆ ಬರುತ್ತದೆ. ಮೆದುಳಿಗೆ ರಕ್ತ ಸಂಚಾರ ಏರುಪೇರು ಉಂಟಾಗಲು ಹಲವು ಕಾರಣಗಳಿವೆ ಎಂಬುದು ಕೂಡ ಸಾಬೀತಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗಿರುವುದು, ಮೆದುಳಿಗೆ ರಕ್ತ ಸಂಚಾರಕ್ಕೆ ಕಾರಣವಾದ ರಕ್ತನಾಳವು ಅಶಕ್ತ ಆಗಿರುವುದು. ಹೀಗೆ ಇವು ಪ್ರಮುಖ ಕಾರಣಗಳಾಗಿವೆ.

ಆದರೆ ಪಾರ್ಶ್ವವಾಯು ಬರುವ ಮುಂಚೆ ನಮ್ಮ ದೇಹವು ಹಲವು ರೀತಿಯ ಸೂಚನೆಗಳನ್ನು ನೀಡುತ್ತದೆ. ಅದರಲ್ಲಿಯೂ ರಾತ್ರಿ ಮಲಗಿದ ವೇಳೆ ಈ ರೀತಿಯ ಸೂಚನೆಗಳನ್ನು ನಿಮ್ಮ ದೇಹ ನೀಡುತ್ತಿದೆ ಎಂದಾದರೆ ಖಂಡಿತವಾಗಿಯೂ ನೀವು ಅದನ್ನು ನಿರ್ಲಕ್ಷಿಸಬಾರದು (neglected).

ಹೆಚ್ಚಿನ ಜನರು ರಾತ್ರಿ ಮಲಗಿದ್ದಾಗಲೇ ಸ್ಟ್ರೋಕ್‌ಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ರಾತ್ರಿ 10 ಗಂಟೆಯ ಬಳಿಕ ದೇಹದಲ್ಲಿ ಯಾವ ಬದಲಾವಣೆಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತವೆ ಅಂತ ಮುಂದೆ ಓದಿ.

ಇದನ್ನು ಓದಿ : ಲೋಕಾಯುಕ್ತ ದಾಳಿ ವೇಳೆ 9 ಲಕ್ಷ ಹಣವನ್ನು ಗಂಟು ಕಟ್ಟಿ ಹೊರಗೆಸೆದ Officer.!

* ರಾತ್ರಿ ವೇಳೆ ಏಕಾಏಕಿ (suddenly) ತಲೆನೋವು (headache) ಕಾಣಿಸಿಕೊಳ್ಳುವುದು. ಸ್ಟ್ರೋಕ್‌ಗೆ ಕಾರಣವಾಗುವ ತಲೆನೋವು ಸ್ವಲ್ಪ ಭಿನ್ನವಾಗಿರುತ್ತದೆ. ತಲೆ ಸಿಡಿಯುವಂತೆ ನೋವು ಉಂಟಾಗುವುದು, ಗಾಢ ನಿದ್ರೆಯಲ್ಲೂ ತಲೆ ನೋವು ಉಲ್ಬಣಗೊಳ್ಳುವುದು, ಒಮ್ಮೊಮ್ಮೆ ತಲೆನೋವಿನಿಂದ ನರಳುವ (suffering) ಪರಿಸ್ಥಿತಿ ಬರುವುದು.

* ರಾತ್ರಿ ವೇಳೆ ಮಲಗಿದ ಬಳಿಕ ಎಚ್ಚರವಾದಾಗ ಮಾತನಾಡಲು ನೀವು ಕಷ್ಟಪಡುತ್ತಿದ್ದರೆ ಅಥವಾ ಮಾತನಾಡುವಾಗ ತೊದಲುತ್ತಿದ್ದರೆ ಇದು ಕೂಡ ಸ್ಟ್ರೋಕ್‌ನ ಸೂಚನೆಯಾಗಿದೆ. ಅಂತಹ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

* ದೇಹದ ಒಂದು ಭಾಗದಲ್ಲಿ ಹಠಾತ್ ಆಗಿ ಮರುಗಟ್ಟುವಂತೆ (recap) ಆಗುವುದು ಅಥವಾ ದೌರ್ಬಲ್ಯ ಉಂಟಾಗಬಹುದು.

ಇದನ್ನು ಓದಿ : Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

* ಪಾರ್ಶ್ವವಾಯುವಿನ ಮುನ್ಸೂಚನೆಗಳಲ್ಲಿ ಹಠಾತ್ ತಲೆ ತಿರುಗುವಿಕೆ (vertigo) ಒಂದು. ಬಹಳಷ್ಟು ಜನರಲ್ಲಿ ಬೇರೆ ಬೇರೆ ಕಾರಣಕ್ಕೆ ಕಾಣಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

* ರಾತ್ರಿ ಮಲಗಿದ ಸಮಯದಲ್ಲಿ ದೃಷ್ಟಿ ಸಮಸ್ಯೆ ಎದುರಾಗುವುದು ಕೂಡ ಪಾರ್ಶ್ವವಾಯುವಿನ ಸೂಚನೆಯಾಗಿದೆ. ದೃಷ್ಟಿ ಮಸುಕಾಗುವಂತೆ (Blurred vision) ಆಗುವುದು, ಒಂದು ವಸ್ತು ಎರಡು ಮೂರು ರೀತಿ ಕಾಣಿಸುವುದು.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು ಮತ್ತು ವರದಿಗಳಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ (Janaspandhan News), ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments