Sunday, December 8, 2024
HomeInternationalHealth : ಈ ಚಳಿಗಾಲದಲ್ಲೂ ಅತಿಯಾಗಿ ಬೆವರುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.
spot_img

Health : ಈ ಚಳಿಗಾಲದಲ್ಲೂ ಅತಿಯಾಗಿ ಬೆವರುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲಸ ಮಾಡಿದಾಗ ಇಲ್ಲವೆ ದೈಹಿಕ ಚಟುವಟಿಕೆ (Physical activity) ನಡೆಸಿದಾಗ ಮೈಯಲ್ಲಿ ಬೆವರು ಬರುತ್ತದೆ. ಸಾಮಾನ್ಯವಾಗಿ ಬೆವರುವುದು ಆರೋಗ್ಯಕರ ದೇಹದ ಸಂಕೇತವಾಗಿದೆ.

ಕೆಲವೊಬ್ಬರು ಯಾವುದೇ ಕೆಲಸ ಮಾಡದೇ ಇದ್ದರೂ ಸಹ ಅವರು ಅತಿಯಾಗಿ ಬೆವರುತ್ತಾರೆ. ಇನ್ನೂ ಕೆಲವರು ಸ್ವಲ್ಪ ದೂರ ನಡೆದರೂ ಬೆವರು (sweat) ಸುರಿಸುತ್ತಾರೆ. ಆದರೆ ಕೆಲವರು ಬೆವರುವುದೇ ಇಲ್ಲ.

ಅತಿಯಾಗಿ ಬೆವರುವುದರಿಂದ ಮೈಯಲ್ಲಿ ವಾಸನೆ, ತುರಿಕೆ ರೂಪದಲ್ಲಿ ಕಿರಿಕಿರಿ ಎನಿಸಬಹುದು. ಜಸ್ಟ್ ಬೆವರು ಬರ್ತಿದೆಯಲ್ಲಾ ಅಂತ ಅದನ್ನು ನಿರ್ಲಕ್ಷಿಸಬಾರದು. ಕಾರಣ ಇದು ಒಂದು ವೈದ್ಯಕೀಯ ಸಮಸ್ಯೆ (medical problem) ಅಥವಾ ಇನ್ಯಾವುದೋ ಕಾಯಿಲೆಯ ಲಕ್ಷಣವಿರಬಹುದು.

ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!

ದೇಹವು ಸಹಜವಾಗಿ ಬೆವರದಿದ್ದರೆ, ಈ ವಿಪರೀತ ಬೆವರುವಿಕೆಯನ್ನು ಹೈಪರ್ ಹೈಡ್ರೋಸಿಸ್ (Hyperhidrosis) ಎಂದು ಕರೆಯುತ್ತಾರೆ. ಹೈಪರ್ ಹೈಡ್ರೋಸಿಸ್ ಬೆವರು ಗ್ರಂಥಿಗಳ ಅತಿಯಾದ ಚಟುವಟಿಕೆಯಿಂದ ಕಂಡುಬರುತ್ತದೆ.

ಸಾಮಾನ್ಯವಾಗಿ ಪಾದ, ಮುಖ, ಅಂಗೈ ಹಾಗೂ ಕಂಕುಳಲ್ಲಿ ಹೈಪರ್ ಹೈಡ್ರೋಸಿಸ್ ಅತ್ಯಧಿಕ ಬೆವರನ್ನು ಹೊರ ಸೂಸುತ್ತದೆ. ಇದು ನಾವು ವಿಶ್ರಾಂತಿ ಪಡೆದಾಗ ಅಥವಾ ಮಲಗಿದ್ದ ವೇಳೆ ಕಮ್ಮಿ ಆಗುತ್ತದೆ.

ದೇಹದ ನಿಗದಿತ ಭಾಗದಲ್ಲಿ ಮಾತ್ರ ಹೆಚ್ಚು ಬೆವರು ಬರುವುದನ್ನು ವೈದ್ಯಕೀಯ ಭಾಷೆಯಲ್ಲಿ ಪ್ರೈಮರಿ ಫೋಕಲ್ ಹೈಪರ್ ಹೈಡ್ರೋಸಿಸ್ ಎಂದು ಕರೆಯುತ್ತಾರೆ. ಇದು ಕಂಕಳಲ್ಲಿ ಹೆಚ್ಚಾಗಿ ಕಂಡು ಬರುವುದು. ಯಾವುದೇ ಔಷಧಗಳ ಅಡ್ಡ ಪರಿಣಾಮದಿಂದ (side effects) ಅಥವಾ ವೈದ್ಯಕೀಯ ಸ್ಥಿತಿಯಿಂದ ಉಂಟಾಗುವುದಿಲ್ಲ.

ನೀವು ಊಟ ಮಾಡುವ ವೇಳೆ, ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ, ರಾತ್ರಿ ಮಲಗಿದಾಗ ತೀರ ಬೆವರುತ್ತಿದ್ದರೆ ಅದು ಬೇರೆ ಕಾಯಿಲೆಗಳ ಲಕ್ಷಣವಾಗಿರುವ ಸಾಧ್ಯತೆ ಇದೆ. ತಜ್ಞರು ಕೂಡ ಥೈರಾಯಿಡ್, ಹೃದಯ ತೊಂದರೆ, ಮಧುಮೇಹ ಇದ್ದಾಗ ಇದೇ ರೀತಿಯ ಬೆವರಿನ ಲಕ್ಷಣಗಳು ಕಾಣಿಸುತ್ತವೆ ಎಂದು ಅಭಿಪ್ರಾಯ ಪಡುತ್ತಾರೆ.

ಇದನ್ನು ಓದಿ : ತುಳಸಿ ವಿವಾಹ 2024 : ಆಚರಣೆ, ದಿನಾಂಕ, ಸಮಯ, ತುಳಸಿ ವಿವಾಹದ ಹಿಂದಿನ ಕಥೆ.!

ಹೈಡ್ರೋಸಿಸ್‌ನ ತೀವ್ರತೆಗೆ ಅನುಗುಣವಾಗಿ ಬೋಟಾಕ್ಸ್ ಇಂಜೆಕ್ಷನ್ (Botox injection), ಮಾತ್ರೆ, ಮತ್ತಿತರ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲದಿದ್ದರೆ ಹೆಚ್ಚು ಬೆವರು ಉತ್ಪಾದನೆ ಉಂಟು ಮಾಡುವ ನರವನ್ನು ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ತೆಗೆದು ಹಾಕುವುದು ಇನ್ನೊಂದು ವಿಧಾನವಾಗಿದೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

 

ಹಿಂದಿನ ಸುದ್ದಿ ಓದಿ : Astrology : ನವೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜನಸ್ಪಂದನ ನ್ಯೂಸ್, ಜ್ಯೋತಿಷ್ಯ : 2024 ನವೆಂಬರ್ 14ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲ ಉಂಟಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ವಿವಾದದ ಸೂಚನೆಗಳಿವೆ. ಆರೋಗ್ಯ ಸಮಸ್ಯೆಗಳಿಂದ ಕೆಲವು ತೊಂದರೆಗಳು ಉಂಟಾಗುತ್ತದೆ. ಮಕ್ಕಳ ಶೈಕ್ಷಣಿಕ ಫಲಿತಾಂಶಗಳು ನಿರಾಶಾದಾಯಕವಾಗಿರುತ್ತವೆ. ದೇವರ ದಯೆಯಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣದ ಸೂಚನೆಗಳಿವೆ.

*ವೃಷಭ ರಾಶಿ*
ಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗಿಗಳಿಗೆ ಅಧಿಕಾರಿಗಳೊಂದಿಗೆ ಹೊಸ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ವಾತಾವರಣ ನಿರಾಶಾದಾಯಕವಾಗಿರುತ್ತದೆ.

ಇದನ್ನು ಓದಿ : http://ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

*ಮಿಥುನ ರಾಶಿ*
ಸಮಾಜದಲ್ಲಿ ಪ್ರಮುಖರ ಪರಿಚಯ ಹೆಚ್ಚಾಗುತ್ತವೆ. ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆರ್ಥಿಕ ಅನುಕೂಲತೆ ಉಂಟಾಗುತ್ತದೆ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ.

*ಕಟಕ ರಾಶಿ*
ಬಾಲ್ಯ ಮಿತ್ರರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಮೌಲ್ಯಯುತವಾದ ವಸ್ತು ಲಾಭವನ್ನು ಪಡೆಯುತ್ತೀರಿ. ಕೈಗೊಂಡ ಕೆಲಸದಲ್ಲಿ ಕಾರ್ಯ ಸಿದ್ಧಿ ಉಂಟಾಗುತ್ತದೆ. ಪ್ರಮುಖ ವ್ಯಕ್ತಿಗಳೊಂದಿಗಿನ ಪರಿಚಯಗಳು ಲಾಭದಾಯಕವಾಗಿರುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ಹೆಚ್ಚು ಉತ್ಸಾಹದಾಯಕವಾಗಿ ಸಾಗುತ್ತವೆ.

*ಸಿಂಹ ರಾಶಿ*
ಪ್ರಮುಖ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ವೃತ್ತಿಪರ ವ್ಯಾಪಾರಗಳಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ಆಪ್ತರೊಂದಿಗೆ ವಿವಾದಗಳು ಉಂಟಾಗುತ್ತವೆ. ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಕಿರಿಕಿರಿಯುಂಟಾಗುತ್ತದೆ. ಆರೋಗ್ಯ ವಿಷಯದಲ್ಲಿ ಜಾಗ್ರತೆ ಅಗತ್ಯ.

*ಕನ್ಯಾ ರಾಶಿ*
ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಮನೆಯ ಹೊರಗಿನ ಕೆಲಸದ ಒತ್ತಡದಿಂದ ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.

ಇದನ್ನು ಓದಿ : http://Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

*ತುಲಾ ರಾಶಿ*
ಬಂಧು ಮಿತ್ರರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ. ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಾರೆ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಹೊಸ ವಾಹನ ಖರೀಸುತ್ತೀರಿ. ಸ್ಥಿರಾಸ್ತಿ ವಿವಾದಗಳ ಪರಿಹಾರದತ್ತ ಸಾಗುತ್ತವೆ. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತೀರಿ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.

*ವೃಶ್ಚಿಕ ರಾಶಿ*
ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ.

*ಧನುಸ್ಸು ರಾಶಿ.*
ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಕುಟುಂಬದ ಹಿರಿಯರ ಬೆಂಬಲ ಹೆಚ್ಚಾಗುತ್ತದೆ. ಬಂಧು ಮಿತ್ರರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಿ. ಹೊಸ ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಹೊಸ ಸಾಲದ ಪ್ರಯತ್ನಗಳನ್ನು ಮಾಡಲಾಗುತ್ತದೆ.

*ಮಕರ ರಾಶಿ.*
ಮಹತ್ವದ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ವೃತ್ತಿಪರ ವ್ಯಾಪಾರದಲ್ಲಿ ಶ್ರಮ ಹೆಚ್ಚಾಗುತ್ತದೆ. ಮನೆಯ ಹೊರಗೆ ಒತ್ತಡದಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ.

ಇದನ್ನು ಓದಿ : http://ಹೆಣ್ಣು ಹುಡುಕಿ ಕೊಡದ ಮ್ಯಾಟ್ರಿಮೋನಿ ಪೋರ್ಟಲ್​ಗೆ ದಂಡ ವಿಧಿಸಿದ court; ಎಷ್ಟು ಗೊತ್ತಾ.?

*ಕುಂಭ ರಾಶಿ.*
ದೂರದ ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ನೀವು ಹೊಸ ವಸ್ತು ಮತ್ತು ವಸ್ತ್ರ ಲಾಭಗಳನ್ನು ಪಡೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಸಂಬಳ ಮತ್ತು ಭತ್ಯೆಗಳ ವಿಷಯದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

*ಮೀನ ರಾಶಿ.*
ಬಾಲ್ಯದ ಗೆಳೆಯರೊಂದಿಗೆ ಮನೆಯಲ್ಲಿ ಭೋಜನ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಅಧಿಕಾರಿಗಳಿಂದ ಮನ್ನಣೆ ಸಿಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಉಂಟಾಗುತ್ತದೆ. ವ್ಯಾಪಾರಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತವೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಹೊಸ ಉತ್ಸಾಹದಿಂದ ಮುನ್ನಡೆಯುತ್ತೀರಿ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments