ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ಚಲಿಸುವ ಬೈಕ್‌ನಲ್ಲಿ ತನ್ನ ಯುವತಿಯೊಂದಿಗೆ (With a young woman on a moving bike) ರೊಮ್ಯಾನ್ಸ್ ಮಾಡುವ ವಿಡಿಯೋ ವೈರಲ್ ಬಳಿಕ ಕಾನ್ಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ಚಲಿಸುತ್ತಿರುವ ಬೈಕ್‌ನಲ್ಲಿಯೇ ಪ್ರಿಯಕರ ಹಾಗೂ ಪ್ರಿಯತಮೆ ಮುದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನು ಓದಿ : Live in ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ಫ್ರಿಡ್ಜ್ನೊಳಗಿಟ್ಟ ಗೆಳೆಯ.!
ಚಲಿಸುತ್ತಿರುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕಾನ್ಪುರ ಪೊಲೀಸರು (Kanpur Police) ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದಾರೆ.
ಕಾನ್ಪುರದ ಗಂಗಾ ಬ್ಯಾರೇಜ್ ಪ್ರದೇಶದ ಸಮೀಪ ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಈ ಪ್ರದೇಶ ನವಂಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕಾನ್ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?
ವಿಡಿಯೋವನ್ನು ಶೇರ್ ಮಾಡಿದ ಎಕ್ಸ್ ಬಳಕೆದಾರರಿಗೆ, ‘ಸರ್, ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಸಂಬಂಧಪಟ್ಟವರಿಗೆ ತಿಳಿಸಲಾಗಿದೆ’ ಎಂದು ಕಾನ್ಪುರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಈ ವ್ಯಕ್ತಿ ಕಾನ್ಪುರದ ಆವಾಸ್ ವಿಕಾಸ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಈತ ಕನಿಷ್ಠ 10 ಬಾರಿ ದಂಡ ಕಟ್ಟಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವ್ಯಕ್ತಿಯು ತನ್ನ ಸಂಗಾತಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದಾನೆ. ಆತ ಹೆಲ್ಮೆಟ್ ಧರಿಸದೇ (Without wearing a helmet) ಬೈಕ್ ಅನ್ನು ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಇಲ್ಲಿದೆ :
#कानपुर चलती बाइक पर रोमांस करते कपल का वीडियो वायरल..
गंगा बैराज के पास का बताया जा रहा है वायरल वीडियो। #kanpur #viralvideo #sirfsuch #news pic.twitter.com/xi5zdCkde5
— ठाkur Ankit Singh (@liveankitknp) January 10, 2025
ಹಿಂದಿನ ಸುದ್ದಿ : ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ; ಫ್ರಿಡ್ಜ್ನೊಳಗಿಟ್ಟ ಕಟುಕ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ವ್ಯಕ್ತಿಯೋರ್ವ ಲಿವ್- ಇನ್ ಸಂಬಂಧದಲ್ಲಿದ್ದ (live in relationship) ಗೆಳತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿರುವ ಆಘಾತಕಾರಿ (shocking) ಘಟನೆ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!
ಉಜ್ಜಯಿನಿ ನಿವಾಸಿ ಸಂಜಯ್ ಪಾಟಿದಾರ್ ಎಂಬಾತ ಪಿಂಕಿ ಪ್ರಜಾಪತಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿದ್ದ ಎಂದು ವರದಿಯಾಗಿದೆ.
ಆರೋಪಿಯ ಬಾಡಿಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಸೀರೆಯುಟ್ಟು, ಆಭರಣ ಧರಿಸಿದ್ದ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಕೈಗಳನ್ನು ಕತ್ತಿಗೆ ಕಟ್ಟಿಹಾಕಲಾಗಿದೆ (The hands are tied to the sword). ಈ ಬಗ್ಗೆ ಪೊಲೀಸರು ಜೂನ್ ನಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ಕಳೆದ ಐದು ವರ್ಷಗಳಿಂದ ಪಿಂಕಿ ಪ್ರಜಾಪತಿ ಜೊತೆ ಸಂಜಯ್ ಪಾಟಿದಾರ್ ಲಿವ್- ಇನ್ ಸಂಬಂಧದಲ್ಲಿದ್ದಳು. ಈ ನಡುವೆ ತನ್ನನ್ನು ವಿವಾಹವಾಗುವಂತೆ ಮಹಿಳೆ ಒತ್ತಾಯಿಸಿದ್ದು (forced), ಇದರಿಂದಾಗಿ ಪಾಟಿದಾರ್ ತನ್ನ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.
ಈ ಕುರಿತು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಅವರು ತಿಳಿಸಿದ್ದು, ಮನೆಯಿಂದ ದುರ್ವಾಸನೆ (stench) ಬರುವುದನ್ನು ಅರಿತ ನೆರೆಹೊರೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಈ ವಿಚಾರವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ : ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ಇನ್ನು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿಯನ್ನು ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ತನಗೆ ವಿವಾಹವಾಗಿದ್ದು, ಪಿಂಕಿ ತನ್ನನ್ನು ಮದುವೆಯಾಗು ಎಂದು ಪೀಡಿಸಿದ್ದಕ್ಕೆ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ. ಬಳಿಕ ದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ.
ಸದ್ಯ ಸಂಜಯ್ ಪಾಟಿದಾರ್ ಅನ್ನು ಅರೆಸ್ಟ್ ಮಾಡಿರುವ ಪೊಲೀಸರು ಈತನಿಗೆ ಸಹಾಯ ಮಾಡಿದ ಸ್ನೇಹಿತರ ಪತ್ತೆ ಕಾರ್ಯ ನಡೆಸಿದ್ದಾರೆ.