Saturday, January 18, 2025
HomeHealth and FitnessHealth : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
spot_img

Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಕೆಲವು ಆಹಾರ ಪ್ರದಾರ್ಥಗಳನ್ನು ಉತ್ತಮ ಆರೋಗ್ಯಕ್ಕಾಗಿ ವರ್ಷವಿಡೀ ಸೇವಿಸಬಹುದು. ಅದರಲ್ಲೂ ಚಳಿಗಾಲದಲ್ಲಿ (Winter) ಮಾರ್ಕೆಟ್ ಗಳಲ್ಲಿ ಕೆಲವು ತರಕಾರಿಗಳು ಹೇರಳವಾಗಿ ಲಭ್ಯವಿರುತ್ತವೆ. ಅಂತಹ ಕೆಲವು ವಸ್ತುಗಳಲ್ಲಿ ಹಸಿ ಕಡಲೆಯೂ (Green chickpeas) ಸಹ ಒಂದಾಗಿದೆ.

ಹಸಿರು ಕಡಲೆಕಾಯಿಯಲ್ಲಿ ಸಸ್ಯ ಆಧಾರಿತ ಪ್ರೋಟೀನ್ (Plant -based protein) ಇದೆ. ರಂಜಕ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕ್ಯಾಲೋರಿಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು, ಫೈಬರ್, ಕಬ್ಬಿಣ, ಫೋಲೇಟ್, ಸೆಲೆನಿಯಮ್, ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತವೆ.

ಇದನ್ನು ಓದಿ : ಕರ್ತವ್ಯದ ವೇಳೆ ದುರ್ನಡತೆ ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ Suspend.!

ಪ್ರಯೋಜನಗಳು :

ಹಸಿರು ಕಡಲೆಯು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಮೂಲವಾಗಿದ್ದು, ಲಘು ಆಹಾರವಾಗಿ (Light food) ಸೇವಿಸುವುದರಿಂದ ಶಕ್ತಿಯ ಕುಸಿತವನ್ನು (Energy collapse) ತಡೆದು, ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಬಹುದು.

ಇದು ಆರೋಗ್ಯಕರ ಕರುಳಿನ ಸೂಕ್ಷ್ಮ ಜೀವಿಯನ್ನು ಕಾಪಾಡಿಕೊಳ್ಳಲು (To maintain gut microbiota) ಸಹಾಯ ಮಾಡುತ್ತದೆ.

ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?

ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಿಂದ ಸಮೃದ್ಧವಾಗಿರುವ ಹಸಿರು ಕಡಲೆಯು, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸಲು (To control blood pressure) ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕ. ಯಾಕೆಂದರೆ ಹಸಿರು ಕಡಲೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಹಸಿರು ಕಡಲೆಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು (High fiber content), ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಮಲಬದ್ಧತೆಯನ್ನು ತಡೆಯುತ್ತದೆ.

ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ನಾರಿನ ಉತ್ತಮ ಮೂಲವೆಂದರೆ (Good source of fiber) ಅದು ಹಸಿರು ಕಡಲೆ.

ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!

ಇದು ತೂಕ ನಿರ್ವಹಣೆಗೆ ಉತ್ತಮ ಆಯ್ಕೆಯಾಗಿದ್ದು, ಹೊಟ್ಟೆ ತುಂಬಿದ ಭಾವನೆಗಳನ್ನು ಉತ್ತೇಜಿಸಲು ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಲು (To reduce overeating) ಸಹಾಯ ಮಾಡುತ್ತದೆ.

ಮಧುಮೇಹ ಹೊಂದಿರುವ ವ್ಯಕ್ತಿಗಳು ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಬಯಸುವವರಿಗೆ ಇದು ಪ್ರಯೋಜನಕಾರಿ.

ಇದನ್ನು ಓದಿ : Video : ಡಿಸಿಪಿ ಕಚೇರಿ ಮುಂದೆ ಗರ್ಲ್​ಫ್ರೆಂಡ್ ಬರ್ತ್​ಡೇ ಆಚರಿಸಿ ಸವಾಲೆಸೆದ ಗ್ಯಾಂಗ್​ಸ್ಟರ್.!

ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ (Helps in muscle growth and repair) ಹಸಿರು ಕಡಲೆಯಲ್ಲಿರುವ ಪ್ರೋಟೀನ್ ಅಂಶ.

ಹಿಂದಿನ ಸುದ್ದಿ : ಲಿವ್‌ ಇನ್‌ ರಿಲೇಶನ್‌ ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ; ಫ್ರಿಡ್ಜ್​ನೊಳಗಿಟ್ಟ ಕಟುಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ವ್ಯಕ್ತಿಯೋರ್ವ ಲಿವ್- ಇನ್ ಸಂಬಂಧದಲ್ಲಿದ್ದ (live in relationship) ಗೆಳತಿಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿರುವ ಆಘಾತಕಾರಿ (shocking) ಘಟನೆ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!

ಉಜ್ಜಯಿನಿ ನಿವಾಸಿ ಸಂಜಯ್ ಪಾಟಿದಾರ್ ಎಂಬಾತ ಪಿಂಕಿ ಪ್ರಜಾಪತಿ ಎಂಬ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 8 ತಿಂಗಳ ಕಾಲ ಫ್ರಿಡ್ಜ್ ನಲ್ಲಿಟ್ಟಿದ್ದ ಎಂದು ವರದಿಯಾಗಿದೆ.

ಆರೋಪಿಯ ಬಾಡಿಗೆ ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಸೀರೆಯುಟ್ಟು, ಆಭರಣ ಧರಿಸಿದ್ದ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಕೈಗಳನ್ನು ಕತ್ತಿಗೆ ಕಟ್ಟಿಹಾಕಲಾಗಿದೆ (The hands are tied to the sword). ಈ ಬಗ್ಗೆ ಪೊಲೀಸರು ಜೂನ್ ನಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ರೊಮ್ಯಾಂಟಿಕ್‌ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!

ಕಳೆದ ಐದು ವರ್ಷಗಳಿಂದ ಪಿಂಕಿ ಪ್ರಜಾಪತಿ ಜೊತೆ ಸಂಜಯ್ ಪಾಟಿದಾರ್ ಲಿವ್- ಇನ್ ಸಂಬಂಧದಲ್ಲಿದ್ದಳು. ಈ ನಡುವೆ ತನ್ನನ್ನು ವಿವಾಹವಾಗುವಂತೆ ಮಹಿಳೆ ಒತ್ತಾಯಿಸಿದ್ದು (forced), ಇದರಿಂದಾಗಿ ಪಾಟಿದಾರ್ ತನ್ನ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಈ ಕುರಿತು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಅವರು ತಿಳಿಸಿದ್ದು, ಮನೆಯಿಂದ ದುರ್ವಾಸನೆ (stench) ಬರುವುದನ್ನು ಅರಿತ ನೆರೆಹೊರೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ. ಈ ವಿಚಾರವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಕರ್ನಾಟಕಕ್ಕೂ ಕಾಲಿಟ್ಟ `HMPV’ : ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಸೋಂಕು ದೃಢ.!

ಇನ್ನು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಮಾಹಿತಿಯನ್ನು ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ತನಗೆ ವಿವಾಹವಾಗಿದ್ದು, ಪಿಂಕಿ ತನ್ನನ್ನು ಮದುವೆಯಾಗು ಎಂದು ಪೀಡಿಸಿದ್ದಕ್ಕೆ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿದ್ದೇನೆ. ಬಳಿಕ ದೇಹವನ್ನು ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ.

ಸದ್ಯ ಸಂಜಯ್‌ ಪಾಟಿದಾರ್‌ ಅನ್ನು ಅರೆಸ್ಟ್ ಮಾಡಿರುವ ಪೊಲೀಸರು ಈತನಿಗೆ ಸಹಾಯ ಮಾಡಿದ ಸ್ನೇಹಿತರ ಪತ್ತೆ ಕಾರ್ಯ ನಡೆಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!