Wednesday, September 17, 2025

Janaspandhan News

HomeJobISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!
spot_img
spot_img
spot_img

ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ ಲಿಕ್ವಿಡ್ ಪ್ರಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಖಾಲಿ ಹುದ್ದೆಗಳ ವಿವರ :
  • ವಿಭಾಗ : ISRO – LPSC.
  • ಒಟ್ಟು ಹುದ್ದೆಗಳ ಸಂಖ್ಯೆ : 23.
  • ಉದ್ಯೋಗ ಸ್ಥಳ : ಬೆಂಗಳೂರು ಮತ್ತು ತಿರುವನಂತಪುರಂ.
  • ಅಪ್ಲಿಕೇಶನ್ ವಿಧಾನ : ಆನ್‌ಲೈನ್.
ಹುದ್ದೆಗಳ ಹೆಸರುಗಳು :
    • ತಾಂತ್ರಿಕ ಸಹಾಯಕ.
    • ತಂತ್ರಜ್ಞ.
    • ಚಾಲಕ.
ವೇತನ ಶ್ರೇಣಿ :
  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕಾನೂನುಬದ್ಧ ವೇತನ ಸೌಲಭ್ಯವಿದ್ದು, ಸಂಬಳ ಶ್ರೇಣಿ ರೂ.19,900/- ರಿಂದ ರೂ.1,42,400/- ರ ವರೆಗೆ ಇರುತ್ತದೆ.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ವಯೋಮಿತಿ (Age Limit) :
  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ
  • ಸರ್ಕಾರದ ನಿಯಮಾನುಸಾರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸಬಹುದು.
ಶೈಕ್ಷಣಿಕ ಅರ್ಹತೆ :

ಅಧಿಕೃತ ISRO (LPSC) ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಐಟಿಐ, ಡಿಪ್ಲೊಮಾ ಅಥವಾ ಬಿ.ಎಸ್ಸಿ ವಿದ್ಯಾರ್ಹತೆ ಪಡೆದಿರಬೇಕು.

ಅರ್ಜಿ ಶುಲ್ಕ (Application Fee) :
  • ಮಹಿಳಾ, SC/ST, PwBD ಹಾಗೂ ಮಾಜಿ ಸೈನಿಕರು : ಯಾವುದೇ ಶುಲ್ಕವಿಲ್ಲ.
  • ಇತರೆ ಅಭ್ಯರ್ಥಿಗಳು : ರೂ.750/-
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ ISRO (LPSC) ವೆಬ್‌ಸೈಟ್‌ಗೆ ಭೇಟಿ ನೀಡಿ : lpsc.gov.in.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿಕೊಳ್ಳಿ.
  3. ಆನ್‌ಲೈನ್ ಅರ್ಜಿ ಲಿಂಕ್‌ನಲ್ಲಿ ಹೋಗಿ.
  4. ಅಗತ್ಯ ಮಾಹಿತಿಗಳನ್ನು ನಮೂದಿಸಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಶುಲ್ಕ ಪಾವತಿ (ಅನ್ವಯಿಸುತ್ತಿದ್ದರೆ) ಮಾಡಿ.
  6. ಅರ್ಜಿಯನ್ನು ಪರಿಶೀಲಿಸಿ ಹಾಗೂ ಸಲ್ಲಿಸಿ.
  7. ಫಾರ್ಮ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಇದನ್ನು ಓದಿ : ಪತಿ ಇಲ್ಲದ ವೇಳೆ ಅತ್ತೆ ಮೇಲೆ ಅಮಾನುಷ ಹಲ್ಲೆ ನಡೆಸಿದ ಸೊಸೆ : CCTV ದೃಶ್ಯ ವೈರಲ್.!
ಮುಖ್ಯ ದಿನಾಂಕಗಳು :
  • ಅರ್ಜಿಯ ಪ್ರಾರಂಭ ದಿನಾಂಕ : 12 ಆಗಸ್ಟ್ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26 ಆಗಸ್ಟ್ 2025.
ಮಹತ್ವದ ಲಿಂಕ್‌ಗಳು :

Note : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ISRO (LPSC) ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಅತ್ಯಗತ್ಯ. ಇದರಲ್ಲಿ ಅರ್ಹತೆ, ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ ಹಾಗೂ ಇತರೆ ನಿಯಮಗಳು ಸ್ಪಷ್ಟವಾಗಿ ನೀಡಲಾಗಿದೆ.

Disclaimer : The above given information is available On online, candidates should check it properly before applying. This is for information only.


Leg cramp : ರಾತ್ರಿ ವೇಳೆಯಲ್ಲಿ ಕಾಲು ಸೆಳೆತವೇ.? ಇಲ್ಲಿದೆ ನುರಿತ ನರವೈದ್ಯ ಮಾಹಿತಿ.!

Leg cramp

ಜನಸ್ಪಂದನ ನ್ಯೂಸ್‌, ಆರೋಗ್ಯ : ರಾತ್ರಿ ಮಲಗುವಾಗ ಕಾಲು ಸೆಳೆತ (Leg cramp) ಮತ್ತು ಸ್ನಾಯು ಬಿಗಿತ ಅನುಭವಿಸುವುದು ಹಲವರಿಗೆ ಸಾಮಾನ್ಯ ಅನುಭವ. ಇದು ತೊಡೆ ಮತ್ತು ಕಾಲುಗಳ ಕೆಳ ಭಾಗದ ಸ್ನಾಯುಗಳಲ್ಲಿ ಹೆಚ್ಚು ಕಂಡುಬರುವ ನೋವಾಗಿದ್ದು, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಶೇ.40ರಷ್ಟು ಮಂದಿಗೆ ಈ ರೀತಿಯ ಅಸ್ವಸ್ಥತೆ ತೀವ್ರವಾಗಿ ಅನುಭವವಾಗುತ್ತದೆ.

ಈ ಕುರಿತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಕನ್ಸಲ್ಟೆಂಟ್ ಡಾ. ರೋಹಿತ್ ಪೈ ಮಾಹಿತಿ ನೀಡಿದ್ದು, ಸ್ನಾಯು ಸೆಳೆತ ಅಥವಾ ಕ್ರ್ಯಾಂಪ್ ಅನ್ನು ಲಘುವಾಗಿ ಕಾಣಬಾರದು ಎಂದು ಎಚ್ಚರಿಸಿದ್ದಾರೆ.

ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
ಸ್ನಾಯು ಸೆಳೆತ/ಕಾಲು ಸೆಳೆತ (Leg cramp) ಕ್ಕೆ ಕಾರಣಗಳು :
  • ದೈನಂದಿನ ಹೆಚ್ಚು ನಡೆಯುವುದು ಅಥವಾ ಓಡುವುದು.
  • ಔಷಧಿಗಳಾದ ಬಿಟಾ ಎಗೊನಿಸ್ಟ್ಸ್ ಬಳಕೆಯಾದ ಆಸ್ತಮಾ ಅಥವಾ ಡ್ಯುರೆಟಿಕ್ಸ್ ಚಿಕಿತ್ಸೆಯ ಭಾಗವಾಗಿ.
  • ನಿದ್ರಾಹೀನತೆ.
  • ದೇಹದಲ್ಲಿ ನೀರಿನ ಅಸಮತೋಲನ.
  • ಹೈಪೊಥೈರಾಯ್ಡಿಸಮ್ ಅಥವಾ ಹೈಪೊಕೆಲ್ಸೇಮಿಯಾ.
  • ಸ್ಲಿಪ್ಡ್ ಡಿಸ್ಕ್ ಸಮಸ್ಯೆ.
  • ಗರ್ಭಾವಸ್ಥೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!

ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಅಥವಾ ಪ್ರತಿದಿನ ಕಾಲು ಸೆಳೆತ (Leg cramp) ದ ಈ ಸಮಸ್ಯೆ ಕಾಡುತ್ತಿದರೆ, ಸರಿಯಾದ ಚಿಕಿತ್ಸೆ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಯಾವಾಗ ವೈದ್ಯರ ಸಲಹೆ ಅಗತ್ಯ?

ಸಾಮಾನ್ಯವಾಗಿ ಈ ಕಾಲು ಸೆಳೆತ (Leg cramp) ಸಮಸ್ಯೆ ಗಂಭೀರವಾಗಿಲ್ಲ. ಆದರೆ, ರಾತ್ರಿಯ ಕಾಲಿನಲ್ಲಿ ಇರುವ ಕಾಲು ನೋವು, ಮೊಟಾರ್ ನ್ಯೂರೋನ್ ರೋಗಗಳು ಅಥವಾ ಪೆರಿಫೆರಲ್ ನ್ಯೂರೋಪಥಿಯ ಮೊದಲ ಸೂಚನೆಯಾಗಿರುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆ, ನಿದ್ರಾ ಸಂಬಂಧಿತ ಪಿಎಲ್‌ಎಮ್‌ಎಸ್ ಸಮಸ್ಯೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಬಹುದು. ಹೀಗಾಗಿ ನಿಖರವಾದ ನಿರ್ಧಾರಕ್ಕಾಗಿ ವೈದ್ಯರ ಸಲಹೆ ಅಗತ್ಯ.

ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಪರಿಶೋಧನೆಗಳು ಮತ್ತು ಪರೀಕ್ಷೆಗಳು :
  • ನಿದ್ರೆಯ ಗುಣಮಟ್ಟ ವಿಶ್ಲೇಷಣೆ.
  • ಕ್ಯಾಲ್ಷಿಯಮ್ ಮತ್ತು ಮ್ಯಾಗ್ನೇಶಿಯಮ್ ಮಟ್ಟ ಪರೀಕ್ಷೆ.
  • ಥೈರಾಯ್ಡ್ ಹಾರ್ಮೋನ್ ತಪಾಸಣೆ.
ಕಾಲು ಸೆಳೆತ (Leg cramp) ದ ಚಿಕಿತ್ಸೆಯು ಹೇಗೆ ಇರಬಹುದು?
  • ನಿದ್ರೆಗೂ ಮುನ್ನ ತೂಕ ಹಾಕದ ಸ್ಟ್ರೆಚಿಂಗ್ ವ್ಯಾಯಾಮಗಳು.
  • ಆಲ್ಕೋಹಾಲ್ ಮತ್ತು ಕೆಫೆನ್ ಸೇವನೆ ತಗ್ಗಿಸುವುದು.
  • ಕೆಲವೊಂದು ಔಷಧಗಳು : ವಿಟಮಿನ್ E, ಗಬಾಪೆಂಟಿನ್, ಕಾರ್ಬಾಮಜೆಪೈನ್, ಹಾಗೂ ಕಠಿಣ ಸಂದರ್ಭಗಳಲ್ಲಿ ಲಿಯೋಫೆನ್.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!

ಕಾಲು ಸೆಳೆತ (Leg cramp) ದ ಚಿಕಿತ್ಸೆಯ ಆಯ್ಕೆ ರೋಗಿಯ ನರವೈಜ್ಞಾನಿಕ ಸ್ಥಿತಿಗತಿಯನ್ನು ಅವಲಂಬಿಸಿರುತ್ತದೆ. ಬದಲಾಗದ ಕಾಯಿಲೆ ಅಥವಾ ನಿರಂತರ ಕಾಲು ಸೆಳೆತದಿಂದ ಬಳಲುತ್ತಿರುವವರು ಕಳಪೆ ನಿದ್ರೆಯಿಂದ ಬಳಲಬಹುದು. ಆದ್ದರಿಂದ, ಈ ಸಮಸ್ಯೆ ನಿರಂತರವಾಗಿದ್ದರೆ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಬಹುಮುಖ್ಯ.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments