Thursday, September 19, 2024
spot_img
spot_img
spot_img
spot_img
spot_img
spot_img
spot_img

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ಇಬ್ಬರು ಪೊಲೀಸರು Suspend.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೀದರ್ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್. ಚನ್ನಬಸವಣ್ಣ ಅವರು, ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ (constable Post’s) ನಡೆದ ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ‌.

ಸಸ್ಪೆಂಡ್ (suspended) ಆದವರು ಜನವಾಡ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಫಿಕ್, ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಐವಾನ್ ಎಂದು ತಿಳಿದು ಬಂದಿದೆ.

ಇದನ್ನು ಓದಿ : 4ನೇ ಬಾರಿಯ ಪರೀಕ್ಷಾರ್ಥಿಗೆ ಶುಭಾಶಯ ಕೋರಿ ಪ್ಲೆಕ್ಸ್ : ಕನ್ನಡ ಪರೀಕ್ಷೆಯಲ್ಲಿ ಜಯಶಾಲಿಯಾಗಿ ಬಾ.!

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಬರ್ತಿಗೆ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಪಾಸಾದವರಿಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ದೇಹದಾರ್ಢ್ಯ ಪರೀಕ್ಷೆ ನಡೆದಿತ್ತು. 1,600 ಮೀಟರ್ ಓಟವನ್ನು 6 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, 1,200 ಮೀಟರ್ ಮಾತ್ರ ಪೂರ್ಣಗೊಳಿಸಿದ್ದು, 4 ಸುತ್ತು ಪೂರ್ಣಗೊಳಿಸಿದ್ದೇನೆಂದು ಐವಾನ್ 5 ಸುಳ್ಳು ಮಾಹಿತಿ (fake information) ನೀಡಿದ್ದರು.

ಓಟದ ಸಮಯ ನೋಡಲು ಶಫೀಕ್ ಅವರನ್ನು ನಿಯೋಜಿಸಿದ್ದು, ಅವರು ಕೂಡ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದನ್ನು ಓದಿ : Good work : ಕೀಟನಾಶಕ ಕುಡಿದ ಯುವಕನನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ ಕಾನ್ಸ್‌ಟೇಬಲ್.!

ಈ ಕುರಿತಾಗಿ ಡಿವೈಎಸ್ಪಿ ಸಲ್ಲಿಸಿದ ವರದಿ, ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಇಬ್ಬರೂ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img