ಜನಸ್ಪಂದನ ನ್ಯೂಸ್, ನೌಕರಿ : ನೀವೂ SSLC (10ನೇ ತರಗತಿ) ಪಾಸಾಗಿ ನೌಕರಿ ಹುಡುಕುತ್ತಿದ್ದೀರಾ.? ಹಾಗಾದ್ರೆ ಇಲ್ಲದೆ ನೋಡಿ ಒಂದು ಸುವರ್ಣಾವಕಾಶ.! ಗೃಹ ಸಚಿವಾಲಯದ ಅಂಗ ಸಂಸ್ಥೆಯಾಗಿರುವ ಗುಪ್ತಚರ ಇಲಾಖೆ / ಇಂಟೆಲಿಜೆನ್ಸ್ ಬ್ಯೂರೋ (IB) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗೆ ಕಿರು ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಮೂಲಕ ಒಟ್ಟು 4987 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
IB ಹುದ್ದೆಗಳ ಕುರಿತು ಮಾಹಿತಿ :
- ಹುದ್ದೆ ಹೆಸರು : ಭದ್ರತಾ ಸಹಾಯಕ / ಕಾರ್ಯನಿರ್ವಾಹಕ.
- ಒಟ್ಟು ಹುದ್ದೆಗಳು : 4,987.
ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!
IB ವೇತನ :
- ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 21,700/- ರಿಂದ ರೂ. 69,100/- ರವರೆಗೆ (ಲೆವೆಲ್ 3, 7ನೇ ವೇತನ ಆಯೋಗದ ಪ್ರಕಾರ) ಪ್ರತಿ ತಿಂಗಳು ವೇತನ ನೀಡಲಾಗುವುದು.
ಅರ್ಹತಾ ಮಾನದಂಡಗಳು :
IB ಶೈಕ್ಷಣಿಕ ಅರ್ಹತೆ :
- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು.
IB ವಯೋಮಿತಿ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 27 ವರ್ಷ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
- SC/ST : 5 ವರ್ಷ ಸಡಿಲಿಕೆ.
- OBC : 3 ವರ್ಷ ಸಡಿಲಿಕೆ.
- ದಿವ್ಯಾಂಗ : 10 ವರ್ಷ ಸಡಿಲಿಕೆ.
ಅರ್ಜಿ ಶುಲ್ಕ :
ವರ್ಗ | ಶುಲ್ಕ (ರೂ) |
---|---|
ಸಾಮಾನ್ಯ / OBC | ರೂ.650/- |
SC / ST | ರೂ.550/- |
Note : ಆನ್‌ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ ncs.gov.in ಗೆ ಲಾಗಿನ್ ಆಗಿ.
- “IB Security Assistant Recruitment 2025” ಲಿಂಕ್ ಕ್ಲಿಕ್ ಮಾಡಿ.
- ನೋಂದಣಿ ಮಾಡಿ ಮತ್ತು ಅರ್ಜಿ ಭರ್ತಿ ಮಾಡಿ.
- ದಾಖಲೆಗಳು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ.
- ಅಂತಿಮವಾಗಿ ಸಬ್‌ಮಿಟ್ ಮಾಡಿ ಮತ್ತು ಪ್ರಿಂಟ್‌ಔಟ್ ಇಡಿಕೊಳ್ಳಿ.
ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”
ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಟೈಯರ್ 1 ಮತ್ತು ಟೈಯರ್ 2 ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮದ ವಿವರವನ್ನು ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ತಿಳಿಸಲಾಗುವುದು.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಆರಂಭ : ಜುಲೈ 26, 2025.
- ಅಂತಿಮ ದಿನಾಂಕ : ಆಗಸ್ಟ್ 17, 2025.
ಪ್ರಮುಖ ಲಿಂಕ್ :
ಅಧಿಕೃತ ವೆಬ್‌ಸೈಟ್ : mha.gov.in ಅಥವಾ ncs.gov.in
Disclaimer : The above given information is available On online, candidates should check it properly before applying. This is for information only.
ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಲಘು ವಿಮಾನ (Plane) ಯೊಂದು ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿದ್ದ ಸಂಚರಿಸುತ್ತಿದ್ದ 2 ಕಾರುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಇಬ್ಬರ ದುರ್ಮರಣ ಸಂಭವಿದ ಘಟನೆಯೊಂದು ನಡೆದಿದೆ.
ಹೌದು, ಮಧ್ಯ ಇಟಲಿಯಲ್ಲಿ ಜನನಿಬಿಡ ಹೈವೇ ಮೇಲೆಯೇ ಸಂಭವಿಸಿದ ಲಘು ವಿಮಾನ (Plane) ದುರಂತವು ಮತ್ತೊಮ್ಮೆ ವಿಮಾನಯಾನ ಸುರಕ್ಷತೆ ಕುರಿತು ಆತಂಕವನ್ನು ಮೂಡಿಸಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ (Plane) ವು ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯತ್ತ ಸಾಗಿ ಬಂದು ಪತನಗೊಂಡಿದೆ.
ವಿಮಾನ ಅಪಘಾತದ ವೇಳೆ ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಈ ದುರಂತದಲ್ಲಿ ಸುಟ್ಟು ಕರಗಲಾಗಿದ್ದು, ಸ್ಥಳದಲ್ಲಿ ಭಾರೀ ಬಿಕ್ಕಟ್ಟು ಉಂಟಾಯಿತು. ಸದ್ಯ ಅದರ ವಿಮಾನ (Plane) ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಈ ದುರಂತದಲ್ಲಿ ಗಾಯಗೊಂಡಿದ್ದ ಕಾರು ಚಾಲಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರುಗಳಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತದ ಪರಿಣಾಮ ವಿಮಾನ (Plane) ದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.
ಅಪಘಾತಕ್ಕೀಡಾದ ವಿಮಾನ (Plane) ದ ವಿಡಿಯೋ :
#BREAKING: Small Plane Crashes Onto Highway Near Brescia, 2 Dead in Fiery Wreck.
Witnesses described the plane spiraling out of control before it suddenly dropped into traffic and erupted into flames.
The pilot and one passenger both elderly were trapped in the wreckage and… pic.twitter.com/iEyJjXBa4L
— upuknews (@upuknews1) July 23, 2025
ಸಾರ್ವಜನಿಕರ ಆತಂಕ :
ಈ ಮಾದರಿಯ ಘಟನೆಗಳು ಪುನಃಪುನಃ ನಡೆಯುತ್ತಿರುವುದರಿಂದ, ಖಾಸಗಿ ವಿಮಾನ (Plane) ಸಂಸ್ಥೆಗಳ ತಾಂತ್ರಿಕ ಪರಿಶೀಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. “ವಿಮಾನ (Plane)ಗಳ ಶ್ರೇಣಿತ ಪರಿಶೀಲನೆ ಮತ್ತು ಸುರಕ್ಷಾ ಪ್ರಮಾಣೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂಥ ದುರ್ಘಟನೆಗಳು ಮುಂದೆಯೂ ಸಂಭವಿಸಬಹುದೆಂಬ ಭೀತಿಯಿದೆ” ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.