ಜನಸ್ಪಂದನ ನ್ಯೂಸ್, ನೌಕರಿ : ಭಾರತ ಸರ್ಕಾರದ ಗೃಹ ಸಚಿವಾಲಯವು ಗುಪ್ತಚರ ಬ್ಯೂರೋ (Intelligence Bureau – IB) ನಲ್ಲಿ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್-II/ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 15 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಗಳ ವಿಭಾಗವಾರು ವಿವರಗಳು:
| ವರ್ಗ | ಹುದ್ದೆಗಳ ಸಂಖ್ಯೆ |
|---|---|
| ಸಾಮಾನ್ಯ (UR) | 1,537 |
| ಆರ್ಥಿಕವಾಗಿ ಹಿಂದುಳಿದ (EWS) | 442 |
| ಇತರೆ ಹಿಂದುಳಿದ ವರ್ಗಗಳು (OBC) | 946 |
| ಪರಿಶಿಷ್ಟ ಜಾತಿ (SC) | 566 |
| ಪರಿಶಿಷ್ಟ ಪಂಗಡ (ST) | 226 |
ಈ IB ಅಧಿಸೂಚನೆಯಡಿ ಒಟ್ಟು 3,717 ಹುದ್ದೆಗಳನ್ನು ಭರ್ತಿ ಮಾಡಲಾಗಲಿದೆ.
ಅರ್ಹತಾ ಮಾನದಂಡಗಳು :
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು. ಕಂಪ್ಯೂಟರ್ ಪ್ರಾವೀಣ್ಯತೆ ಕಡ್ಡಾಯವಲ್ಲ, ಆದರೂ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ : Gorilla :ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?
ವಯೋಮಿತಿ :
ಅರ್ಜಿ ಸಲ್ಲಿಸಲು IB ನಿಯಮಾನುಸಾರ ಅಭ್ಯರ್ಥಿಗಳ ವಯಸ್ಸು (ಆಗಸ್ಟ್ 10, 2025 ಕ್ಕೆ),
- ನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು.
- ಗರಿಷ್ಠ ವಯಸ್ಸಿನ ಮಿತಿ : 27 ವರ್ಷಗಳು.
NOTE : IB ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಹುದ್ದೆಯ ಹೆಸರು ಮತ್ತು ಸಂಬಳ ಶ್ರೇಣಿ (7ನೇ ವೇತನ ಆಯೋಗದ ಪ್ರಕಾರ) :
| ಹುದ್ದೆಯ ಹೆಸರು | ವೇತನ ಶ್ರೇಣಿ (ರೂ.ಗಳಲ್ಲಿ) |
|---|---|
| ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ- I/ಕಾರ್ಯನಿರ್ವಾಹಕ (ಗ್ರೂಪ್-A) : | ರೂ.47,600 – ರೂ.1,51,100 (ಮ್ಯಾಟ್ರಿಕ್ಸ್ ಪದವಿ 8) |
| ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ : | ರೂ.44,900 –ರೂ.1,42,400 (ಮ್ಯಾಟ್ರಿಕ್ಸ್ ಪದವಿ 7) |
| ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- I/ಕಾರ್ಯನಿರ್ವಾಹಕ : | ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5) |
| ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- II/ಕಾರ್ಯನಿರ್ವಾಹಕ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
| ಭದ್ರತಾ ಸಹಾಯಕ/ಕಾರ್ಯನಿರ್ವಾಹಕ : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
| ಸಹಾಯಕ ಇಂಟೆಲಿಜೆನ್ಸ್ ಆಫೀಸರ್-I (ಮೊಟಾರ್ ಸಾರಿಗೆ) : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
| ಸಹಾಯಕ ಇಂಟೆಲಿಜೆನ್ಸ್ ಆಫೀಸರ್-II (ಮೊಟಾರ್ ಸಾರಿಗೆ) : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
| ಭದ್ರತಾ ಸಹಾಯಕ (ಮೊಟಾರ್ ಸಾರಿಗೆ) : | ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3) |
| ಹಲ್ಲೆಯ ತಾಂತ್ರಿಕ ಕಮ್ : | ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5) |
| ಎಂಜಿನ್ಮನ್ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
| ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ : | ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4) |
ಅರ್ಜಿ ಶುಲ್ಕ :
| ವರ್ಗ | ಶುಲ್ಕ (ರೂ.) |
|---|---|
| ಸಾಮಾನ್ಯ / OBC / EWS : | ರೂ. 650/- |
| SC / ST / PwD : | ರೂ. 550/- |
- ಆನ್‌ಲೈನ್ ಪಾವತಿಯ ಮೂಲಕ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
- “IB ACIO Recruitment 2025” ಲಿಂಕ್ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರೆ ವಿವರಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ.
- ಛಾಯಾಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಪಾವತಿ ಗೇಟ್‌ವೇ ಮೂಲಕ ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಆಯ್ಕೆ ವಿಧಾನ :
IB ACIO ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ :
- ಲಿಖಿತ ಪರೀಕ್ಷೆ (Objective Type) :
- ಅಂಕ : 100
- ಸಮಯ : 1 ಗಂಟೆ
- ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ.
- ವಿವರಣಾತ್ಮಕ ಪರೀಕ್ಷೆ :
- ಅಂಕ : 50
- ಸಂದರ್ಶನ (Interview) :
- ಅಂಕ : 100
ಇದನ್ನು ಓದಿ : KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಂತಿಮ ಆಯ್ಕೆ :
ಲಿಖಿತ, ವಿವರಣಾತ್ಮಕ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ನಡೆಯುತ್ತದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜುಲೈ 19, 2025.
- ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : ಆಗಸ್ಟ್ 10, 2025
ಪ್ರಮುಖ ಲಿಂಕ್ :
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಮೂಲಕ ಅರ್ಜಿ ಸಲ್ಲಿಸಬಹುದು.
📌 ಹುದ್ದೆಗಳ ಮಹತ್ವ :
IB ACIO ಹುದ್ದೆಗಳು ಭಾರತ ಸರ್ಕಾರದ ಗ್ರೂಪ್ ‘C’ ನಾನ್-ಗೆಜೆಟೆಡ್ ಶ್ರೇಣಿಗೆ ಸೇರಿದ್ದು, ಈ ಅಧಿಕಾರಿಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗುಪ್ತಚರ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ ಹಾಗೂ ಭದ್ರತಾ ತಂತ್ರಗಳನ್ನು ಜಾರಿಗೊಳಿಸುವ ಜವಾಬ್ದಾರಿಯು ಇವರ ಮೇಲಿದೆ.
Gorilla : ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಸಫಾರಿ ಪ್ರವಾಸದ ವೇಳೆ ಮಹಿಳೆಯೊಬ್ಬಳಿಗೆ ಗೊರಿಲ್ಲಾ (Gorilla) ಮಾಡಿರುವ ಸಂಗತಿಯೊಂದು ವಿಚಿತ್ರವಾಗಿದೆ. ಇದು ಗೊರಿಲ್ಲಾ ಮಾಡಿರುವ ಪ್ರೇಮವೋ ಅಥವಾ ಪರಾಮರ್ಶೆಯೋ ಮಾತ್ರ ಗೊತ್ತಿಲ್ಲ.
ಆದರೆ ಗೊರಿಲಾ (Gorilla) ಮಾಡಿದ ಈ ಕ್ರಿಯೇ ನಂತರ ಮುಂದೆ ನಡೆದದ್ದನ್ನು ನೋಡಿದ್ರೆ ನೀವೂ ವ್ಹಾವ್ ಎನ್ನದೇ ಇರಲಾರಿರಿ. ಸದ್ಯ ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರನ್ನ ಸಂತೋಷದಿಂದ ನಗೆಗಡಲಲ್ಲಿ ತೇಲಿಸುತ್ತೆ.
ಇದನ್ನು ಓದಿ : ಕಾಲೇಜಿನಲ್ಲಿ ಶಿಕ್ಷಕನಿಂದ Harassment ಆರೋಪ ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!
@rose\_k01 ಎಂಬ X ಬಳಕೆದಾರರು (ಹಿಂದೆ Twitter) ಹಂಚಿಕೊಂಡ ಈ ವಿಡಿಯೋ ಈಗಾಗಲೇ 14 ಮಿಲಿಯನ್ ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.
ವಿಡಿಯೋದಲ್ಲೇನಿದೆ :
ವಿಡಿಯೋದಲ್ಲಿ ಕೆಲವು ಪ್ರವಾಸಿಗರು ಪರ್ವತ ಪ್ರದೇಶದಲ್ಲಿ ಸಾಕಷ್ಟು ಹತ್ತಿರದಿಂದ *ಕಾಡು ಗೊರಿಲ್ಲಾ (Gorilla) ಗಳನ್ನು* ವೀಕ್ಷಿಸುತ್ತಿರುವುದು ಕಾಣಿಸುತ್ತೆ. ಈ ನಡುವೆ ಒಬ್ಬ ಮಹಿಳಾ ಪ್ರವಾಸಿಗರ ಹತ್ತಿರಕ್ಕೆ ಬಂದ ಗಂಡು ಗೊರಿಲ್ಲಾ ಒಂದು ಆಕೆಯ ಕೂದಲನ್ನು ಹಿಡಿದು ಹಾಗೆಯೇ ಕುಳಿತು ಬಿಡುತ್ತೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಈ ವೇಳೆ ಪ್ರವಾಸಿ ಮಹಿಳೆ ಏನು ಮಾಡದೇ ಸುಮ್ಮನೆ ಇರಬೇಕಾದರೆ, ಈ ಘಟನೆಯನ್ನು ಸ್ವಲ್ಪ ದೂರದಲ್ಲಿದ್ದ ಹೆಣ್ಣು ಗೊರಿಲ್ಲಾ ನೋಡುತಲೇ ನಾಟಕೀಯವಾಗಿ ಉರುಳಿ ಬಂದು ಗಂಡು ಗೊರಿಲ್ಲಾವನ್ನು ದುರುಗುಟ್ಟಿ ನೋಡುತ್ತದೆ.
ಹೀಗೆ ಹೆಣ್ಣು (Gorilla) ಗೊರಿಲ್ಲಾ ತನ್ನ ನೋಡುತ್ತಲೇ, ಇತ್ತ ಗಂಡು (Gorilla) ಗೊರಿಲ್ಲಾ ಮಹಿಳೆಯ ಕೂದಲನ್ನು ಬಿಟ್ಟು ಏನು ನಡೆದೆ ಇಲ್ಲ ಎನ್ನುವಂತೆ ವರ್ತಿಸುತ್ತದೆ. ಆದರೆ ಆ ಹೆಣ್ಣು ಗೊರಿಲ್ಲಾ (Gorilla) ತನ್ನ ಕಣ್ಣಾರೆ ನೋಡಿದ್ದನ್ನು ಮರಿಯುತ್ತದೆಯೇ.? ಖಂಡಿತ ಇಲ್ಲ.
ಹಾಗಾದ್ರೆ ಮುಂದೆನಾಯ್ತು.? As usual ಏನ ಆಗಬೇಕಾಗಿತ್ತೋ ಅದು ಆಗಿಯೇ ಬಿಟ್ಟಿತು. ತಿಳಿಲಿಲ್ವಾ, ಹಾಗಾದ್ರೆ ಈ ವಿಡಿಯೋ ನೋಡಿ.
🎥 ಗಂಡು ಗೊರಿಲ್ಲಾ (Gorilla) ಮಾಡಿದ ಕಿತಾಪತಿಯ ವಿಡಿಯೋ ಇಲ್ಲದೆ :
Male Gorilla grabs Girls Hair, Gets Beaten by his Female Gorilla 🤣 pic.twitter.com/uZG5Fo3gqG
— Rosy (@rose_k01) July 11, 2025
ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು :
- “ಜಾತಿ ಯಾವುದೇ ಆಗಿರಲಿ… ಮಹಿಳೆಯರ ಧೈರ್ಯ ಹೀಗೇ ಇರುತ್ತೆ!” ಎಂದು ಒಬ್ಬರೆಂದರೆ,
- “ಅವಳು ಹೆಣ್ಣು ಗೊರಿಲ್ಲಾ ಅಲ್ಲ… ನೀವೇ!” ಎಂದು ಇನ್ನೊಬ್ಬರು ನಾಟಕೀಯ ಸಂಭಾಷಣೆಯನ್ನೂ ಬರೆದಿದ್ದಾರೆ.







