Saturday, July 13, 2024
spot_img
spot_img
spot_img
spot_img
spot_img
spot_img

ಗಂಡದಿರರೇ ಮನೆಗೆ ಬರುವ ಅತಿಥಿಗಳ ಜೊತೆ ಮಲಗಲು ತಮ್ಮ ಪತ್ನಿಯರನ್ನು ಕಳುಹಿಸುತ್ತಾರಂತೆ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಇಲ್ಲಿಯ ಗಂಡದಿರರೇ ಮನೆಗೆ ಭೇಟಿ ನೀಡುವ ಅತಿಥಿಗಳ ಜೊತೆ ಮಲಗಲು ತಮ್ಮ ಪತ್ನಿಯರನ್ನು ಕಳುಹಿಸುತ್ತಾರಂತೆ ಹಾಗು ಅತಿಥಿಗಳ ಜೊತೆ ಪತ್ನಿಯನ್ನು ಬಿಟ್ಟು ಗಂಡಂದಿರು ಹೊರಗಡೆ ಮಲಗುತ್ತಾರೆ. ಇನ್ನು ಇಲ್ಲಿಯ ಪುರುಷರು ಎನಿಲ್ಲಾ ಅಂದ್ರು ಕನಿಷ್ಠ ಇಬ್ಬರು ಪತ್ನಿಯರನ್ನು (ಬಹುಪತ್ನಿತ್ವ) ಹೊಂದಿರುತ್ತಾರೆ. ಇಂತ ಆಚರಣೆ ಇರುವುದು ಮಾತ್ರ ಭಾರತದಲ್ಲಾ ಬದಲಿಗೆ ನಮೀಬಿಯಾದಲ್ಲಿ.

ಹೌದು, ಆಫ್ರೀಕಾ ಖಂಡದ ನಮೀಬಿಯಾದ ಹಿಂಬಾ ಬುಡಕಟ್ಟು ಸಮುದಾಯದ ಜನರು ಇಂದಿಗೂ ನಗರ ಪ್ರದೇಶಗಳಿಂದ ದೂರವಿದ್ದು, ತಮ್ಮದೇ ಆದ ಶೈಲಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಹಿಂಬಾ ಬುಡಕಟ್ಟಿನ ಜನತೆಯ ಜೀವನಶೈಲಿ, ಉಡುಪು, ಸಂಪ್ರದಾಯ, ಆಚರಣೆಗಳು ಜನರನ್ನು ಸೆಳಯುತ್ತವೆ.

ಇದನ್ನು ಓದಿ : ಉದ್ಯೋಗದ ಆಮಿಷ : 200ಕ್ಕೂ ಹೆಚ್ಚು ಯುವತಿಯರ ಮೇಲೆ ಹಲ್ಲೆ, ಅತ್ಯಾಚಾರ.!

ಹಿಂಬಾ ಸಮುದಾಯದ ಜನರು ಅಲೆಮಾರಿಗಳಾಗಿರುವ ಕಾರಣ ಒಂದು ಸೀಮಿತ ಪ್ರದೇಶದಲ್ಲಿ ಸಿಗಲ್ಲ. ಯಾರೇ ಬಂದರೂ ಆತ್ಮೀಯವಾಗಿ ಮಾತನಾಡಿಸುತ್ತಾರಂತ ಹಿಂಬಾ ಸಮುದಾಯ ಜನತೆ. ಈ  ಹಿಂಬಾ ಸಮುದಾಯದ ಮಹಿಳೆಯರು  ಸ್ನಾನವೇ ಮಾಡಲ್ಲ, ಇವರು ತಮ್ಮ ಮದುವೆಯ ದಿನದಂದು ಮಾತ್ರ ಸ್ನಾನ ಮಾಡುತ್ತಾರೆ. ಏಕೆಂದರೆ ಸ್ನಾನ ಮಾಡುವುದಕ್ಕೆ ಕಟ್ಟುನಿಟ್ಟಾದ ನಿರ್ಬಂಧಗಳಿವೆ.  ಆದರೂ ಉತ್ತಮ ಪರಿಮಳವನ್ನ ಹೊಂದಿರುತ್ತಾರೆ. 

ಹಿಂಬಾ ಬುಡಕಟ್ಟು ಮಹಿಳೆಯರು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಕೆಂಪು ಪುಡಿ ಬಳಕೆ ಮಾಡಿಕೊಳ್ಳುತ್ತಾರೆ. ತಾವೇ ತಯಾರಿಸಿದ ಆಭರಣಗಳಿಂದ ತಮ್ಮನ್ನು ತಾವು ಅಲಂಕರಿಸಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲ ಕೂದಲು ವಿನ್ಯಾಸಗೊಳಿಸಿಕೊಳ್ಳಲು ಮಣ್ಣು ಬಳಕೆ ಮಾಡುತ್ತಾರೆ. ಮಹಿಳೆಯರು ಮನೆಯ ಕೆಲಸ ಕಾರ್ಯಗಳಿಗಷ್ಟೇ ಸೀಮಿತವಾಗಿ ಈಗಲೂ ಜೀವಿಸುತ್ತಿದ್ದಾರೆ. ಅವರು ಹಸುಗಳಿಗೆ ಹಾಲುಣಿಸುವುದು, ಮಕ್ಕಳನ್ನು ನೋಡಿಕೊಳ್ಳುವುದು ಮೊದಲಾದ ಕೆಲಸಗಳಿಗೆ ಸೀಮಿತವಾಗಿದ್ದಾರೆ.

ಇದನ್ನು ಓದಿ : NFL : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ಬುಡಕಟ್ಟಿನ ಜನರು ರೋಗಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊಗೆ ಸ್ನಾನ ಮಾಡುತ್ತಾರೆ. ಮಹಿಳೆಯರು ತಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿಶೇಷ ಅಭ್ಯಾಸಗಳನ್ನು ಅನುಸರಿಸುತ್ತಾರೆ. ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸಿ, ಅದರಿಂದ ಬರುವ ಹೊಗೆಯನ್ನು ಬಳಸಿ ಅವರು ತಮ್ಮನ್ನು ತಾವು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ವಾಸನೆ ಇರುವುದಿಲ್ಲ.

ಇದಲ್ಲದೆ, ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ವಿಶೇಷ ಲೋಷನ್ ಅನ್ನು ಸಹ ಅವರು ಬಳಸುತ್ತಾರೆ. ವಿಶೇಚವೆಂದರೆ ಈ ಲೋಷನ್‌ಅನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸುತ್ತಾರೆ ಎನ್ನಲಾಗುತ್ತದೆ.

(ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.‌ ಜನಸ್ಪಂದನ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)

spot_img
spot_img
- Advertisment -spot_img