Friday, July 11, 2025

Janaspandhan News

HomeInternational NewsHumaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!
spot_img
spot_img

Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಪಾರ್ಟ್‌ಮೆಂಟ್‌ವೊಂದರಲ್ಲಿ ನಟಿ ಹುಮೈರಾ (Humaira) ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಘಟನೆಯಿಂದ ಪಾಕಿಸ್ತಾನಿ ಮನರಂಜನಾ ಕ್ಷೇತ್ರದಿಂದ ಭಾರೀ ಆಘಾತಕಾರಿ ಸುದ್ದಿ ಹೊರ ಬಂದಿದೆ. 32 ವರ್ಷದ ನಟಿ ಹುಮೈರಾ ಅಸ್ಗರ್ ಅಲಿ (Humaira Asghar Ali) ಅವರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕರಾಚಿಯ ಇತ್ತೆಹಾದ್ ಕಮರ್ಷಿಯಲ್ ಪ್ರದೇಶದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅವರು ಮರಣ ಹೊಂದಿರುವುದಾಗಿ ಜುಲೈ 8ರಂದು ಪೊಲೀಸರು ದೃಢಪಡಿಸಿದ್ದಾರೆ.

Actress Humaira Asghar Ali
Actress Humaira Asghar Ali
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!

ಹುಮೈರಾ (Humaira) ಅವರ ಸಾವು ಎರಡು ವಾರಗಳ ಹಿಂದೆ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ, ಏಕೆಂದರೆ ಮರಣದ ಮಾಹಿತಿ ಸುತ್ತಮುತ್ತಲವರಿಗೂ ತಡವಾಗಿ ತಿಳಿಯಿತು. ನಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂಬುದು ಪೊಲೀಸರು ನೀಡಿರುವ ಮಾಹಿತಿ.

ಹುಮೈರಾ (Humaira) ಅಸ್ಗರ್ ಅಲಿ ಅವರು ARY ಡಿಜಿಟಲ್‌ನ ರಿಯಾಲಿಟಿ ಶೋ ‘ತಮಾಷಾ ಘರ್’ ಮತ್ತು 2015 ರ ಚಲನಚಿತ್ರ ‘ಜಲೈಬಿ’ ಮೂಲಕ ಪ್ರಖ್ಯಾತರಾಗಿದ್ದರು. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ 7 ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳು ಇದ್ದರು ಮತ್ತು ಅವರು ನಟಿ, ಶಿಲ್ಪಿ, ರಂಗಭೂಮಿ ಕಲಾವಿದೆ ಹಾಗೂ ಫಿಟ್ನೆಸ್ ಉತ್ಸಾಹಿಯಾಗಿದ್ದರು.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?

ಪೊಲೀಸರು ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಶವವನ್ನು ಪತ್ತೆಹಚ್ಚಿದ್ದು, ಮರಣೋತ್ತರ ಪರೀಕ್ಷೆಗಾಗಿ  ಹುಮೈರಾ (Humaira) ಅವರ ಶವವನ್ನು ಜಿನ್ನಾ ಮೆಡಿಕಲ್ ಸೆಂಟರ್‌ಗೆ ಕಳಿಸಲಾಗಿದೆ. ವೈದ್ಯರ ಪ್ರಕಾರ, ಶವವು ಕೊಳೆಯುವ ಅಂತಿಮ ಹಂತದಲ್ಲಿತ್ತು. ಆದ್ದರಿಂದ ಸಾವಿನ ನಿಖರ ಕಾರಣ ತಿಳಿದುಬರಲು ಇನ್ನೂ ಕೆಲವು ದಿನಗಳು ಹಿಡಿಯಬಹುದು.

ಸಾವು ಸಹಜವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಟಿಯ ಮೊಬೈಲ್ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ. ತನಿಖೆ ಮುಂದುವರಿದಿದೆ, ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : ಸಿಗರೇಟ್ ಸೇದುತ್ತ ವಿದ್ಯಾರ್ಥಿನಿಯಿಂದ massage ಮಾಡಿಸಿಕೊಂಡ ಟಿಎಂಸಿ ನಾಯಕ.!

ಈ ದುರ್ಘಟನೆ ಪಾಕಿಸ್ತಾನಿ ಚಿತ್ರರಂಗದಲ್ಲಿ ಶೋಕದ ಛಾಯೆ ಮೂಡಿಸಿದ್ದು, ಆಕಸ್ಮಿಕ ಸಾವಿನ ಸುತ್ತಲಿನ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ತನಿಖೆಯ ನಂತರವೇ ಮಾತ್ರ ಸತ್ಯ ಬೆಳಕಿಗೆ ಬರಲಿದೆ.

ವಯಕ್ತಿಕ ಕಾರಣ : Councilor ಪತ್ನಿಯನ್ನೇ ಕೊಚ್ಚಿ ಕೊಂದ ಪತಿ.!

Councilor

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಓರ್ವರನ್ನು ಅವರ ಪತಿಯೇ ಕೊಚ್ಚಿ ಕೊಂದಿರುವ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಅವಡಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಪತಿಯಿಂದ ಹತ್ಯೆಗೊಳಗಾದ ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಗೋಮತಿ ಎಂದು ಗುರುತಿಸಲಾಗಿದ್ದು, ಕೌನ್ಸಿಲರ್ (Councilor) ಗೋಮತಿ ಹತ್ಯೆಯ ಆರೋಪಿತ ಪತಿ ಸ್ಟೀಫನ್ ರಾಜ್ ಎಂದು ತಿಳಿದು ಬಂದಿದೆ. ಸ್ಟೀಫನ್ ರಾಜ್ ಚೆನ್ನೈ ಬಳಿಯ ತಿರುನಿರುವೂರು ಪ್ರದೇಶದವರಾಗಿದ್ದು, ಅವರು ವಿಸಿಕೆ ತಿರುನಿರುವೂರು ನಗರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಹತ್ಯೆಯದ ಅವರ ಪತ್ನಿ ಗೋಮತಿ ವಿಸಿಕೆ ಕೌನ್ಸಿಲರ್ (Councilor) ಮತ್ತು ತಿರುನಿರುವೂರು ಪುರಸಭೆಯ ತೆರಿಗೆ ವಿಧಿಸುವ ಅಧ್ಯಕ್ಷರಾಗಿದ್ದಾರೆ. ಸ್ಟೀಫನ್ ರಾಜ್ ಮತ್ತು ಗೋಮತಿ 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರೆಂದು ಮತ್ತು ಈಗ ಅವರಿಗೆ 4 ಗಂಡು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!

ಕೌನ್ಸಿಲರ್ (Councilor) ಗೋಮತಿ ಹಾಗೂ ಅವರ ಪತಿ ಸ್ಟೀಫನ್ ರಾಜ್ ನಡುವೆ ವಯಕ್ತಿಕ ಕಾರಣದಿಂದ ಜಗಳ ಪ್ರಾರಂಭವಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ಗಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ಕೌನ್ಸಿಲರ್ ಗೋಮತಿ ಮೇಲೆ ಅವರ ಪತಿ ಚಾಕುವಿನಿಂದ ಸರಣಿ ಹಲ್ಲೆ ನಡೆಸಿದ್ದಾರೆ.

ರಸ್ತೆ ಮಧ್ಯದಲ್ಲಿ ನಡೆದ ದಾಳಿಯಲ್ಲಿ ಕೌನ್ಸಿಲರ್ (Councilor) ಗೋಮತಿ ಅವರ ತಲೆ, ಮುಖ ಮತ್ತು ಕುತ್ತಿಗೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೀವ್ರ ಗಾಯಗಳಾಗಿದ್ದು, ಗೋಮತಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ನಂತರ ಸ್ಟೀಫನ್ ರಾಜ್ ಹತ್ತಿರದ ತಿರುನಿನ್ರವೂರ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಘಟನಾ ಸ್ಥಳಕ್ಕೆ ಹೋದ ಪೊಲೀಸರು Councilor ಗೋಮತಿ ಅವರ ಶವವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು. ಈ ಮಧ್ಯೆ, ಸ್ಟೀಫನ್ ಅವರನ್ನು ಬಂಧಿಸಿದ ಪೊಲೀಸರು ಕೊಲೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್)‌

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments