Friday, October 18, 2024
spot_img
spot_img
spot_img
spot_img
spot_img
spot_img
spot_img

ರಾಜಕೀಯ ಪಕ್ಷಕ್ಕೂ ಮಾನ ಇದೆ ಎಂದ High-court ; ಏನಿದು ಕೇಸ್.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ‘ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ, ಅಷ್ಟೇ ರಾಜಕೀಯ ಪಕ್ಷಗಳಿಗೂ ಮುಖ್ಯ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.

ಹೈಕೋರ್ಟ್ (high court), ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದನ್ನು ರದ್ದುಪಡಿಸಲು ಸ್ಪಷ್ಟವಾಗಿ ನಿರಾಕರಿಸಿದ್ದು, ಈ ಮೂಲಕ ವ್ಯಕ್ತಿಗೆ ಮಾನ ಎಷ್ಟು ಮುಖ್ಯವೋ ರಾಜಕೀಯ ಪಕ್ಷಗಳಿಗೂ ಅಷ್ಟೇ ಮುಖ್ಯ ಎಂಬ ಮಹತ್ವದ ತೀರ್ಪು (judgment) ಪ್ರಕಟಿಸಿದೆ.

ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಕ್ರಿಮಿನಲ್ (criminal) ಅರ್ಜಿಯನ್ನು ವಜಾಗೊಳಿಸಿದ್ದಾರೆ.

Astrology : ಫೆ. 25ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಇದುವರೆಗೂ ದೇಶದ ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನೀಡದೇ ಇರುವಂತಹ ಈ ತೀರ್ಪಿನಿಂದಾಗಿ, ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳನ್ನೂ (political party) ‘ವ್ಯಕ್ತಿ’ ಎಂದು ವ್ಯಾಖ್ಯಾನಿಸುವ ಮೂಲಕ ಮಾನನಷ್ಟ ಕಾನೂನಿಗೆ ಹೊಸ ಭಾಷ್ಯ ಬರೆಯಲಾಗಿದೆ ಎನ್ನಬಹುದು.

ಶಾಸನೀಯ ವ್ಯಕ್ತಿ ಎಂದು ರಾಜಕೀಯ ಪಕ್ಷವನ್ನು ಪರಿಗಣಿಸಲು ಆಗುವುದಿಲ್ಲ. ಯಾಕೆಂದರೆ, ಅದು ವ್ಯಕ್ತಿ ಅಲ್ಲ. ಹೀಗಾಗಿ, ರಾಜಕೀಯ ಪಕ್ಷದ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲಾಗುವುದಿಲ್ಲ. ಸ್ವಾಭಾವಿಕವಾದ (Natural) ಜೀವಂತ ವ್ಯಕ್ತಿಗೆ ಉದ್ದೇಶ, ದುರುದ್ದೇಶದ ಭಾವನೆಗಳಿರುತ್ತವೆ. ಕೃತ್ರಿಮ ವ್ಯಕ್ತಿಗಳಿಗೆ ಅದು ಇರುವುದಿಲ್ಲ ಎಂಬ ಬಿಜೆಪಿಯ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.

Health : ಬಿಸಿ ಅನ್ನ ಅಥವಾ ತಣ್ಣನೆಯ ಅನ್ನ – ಆರೋಗ್ಯಕ್ಕೆ ಯಾವುದು ಉತ್ತಮ ಗೊತ್ತಾ.?

ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 499 ಮತ್ತು 500ರಲ್ಲಿ ‘ಯಾರೇ ಇರಲಿ’ ಎಂಬ ಪದವು ಸೂಚ್ಯವಾಗಿ ಸಂಘವನ್ನೂ ವ್ಯಕ್ತಿ ಎಂದೇ ವಿಶಾಲ ಅರ್ಥದಲ್ಲಿ ಒಳಗೆಳೆದುಕೊಂಡು ಗಮನಿಸುತ್ತದೆ.

ಅಂತೆಯೇ, ಸಾಮಾನ್ಯ ವ್ಯಾಖ್ಯಾನ ಅಧಿನಿಯಮ-1897ರ ಅಡಿಯಲ್ಲೂ ರಾಜಕೀಯ ಪಕ್ಷಗಳನ್ನು ಕಾನೂನು ವ್ಯಕ್ತಿ ಎಂದೇ ಅರ್ಥೈಸಲಾಗುತ್ತದೆ. ಇಂತಹ ಕಾನೂನು ವ್ಯಕ್ತಿ ಎಂಬ ಪದದ ವ್ಯಾಪ್ತಿಗೆ ಸರ್ಕಾರಗಳು, ಕಂಪನಿಗಳು, ದೈವತಗಳು, ಕಾರ್ಮಿಕ ಸಂಘಗಳು ಸೇರ್ಪಡೆಯಾಗುತ್ತವೆ’ ಎಂದು ನ್ಯಾಯಪೀಠ ವಿವರಿಸಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img