Saturday, July 27, 2024
spot_img
spot_img
spot_img
spot_img
spot_img
spot_img

Vultures : ಇಲ್ಲಿ ಮೃತ ದೇಹವನ್ನು ತುಂಡು ತುಂಡಾಗಿಸಿ ರಣಹದ್ದುಗಳಿಗೆ ನೀಡ್ತಾರೆ ; ಏಕೆ ಗೋತ್ತೇ.?

spot_img

ಜನಸ್ಪಂದನ ನ್ಯೂಸ್‌, ವಿಶೇಷ : ಜಗತ್ತಿನಾಧ್ಯಂತ ಅನೇಕ ಧರ್ಮಗಳಿರುವುದು ಮತ್ತು ಅವರ ಸಂಪ್ರದಾಯಗಳು ಸಹ ಬೇರೆಯದೇ ಆಗಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ.  ಹಾಗೆಯೇ ಮನುಷ್ಯನ ಮರಣಾನಂತರ ಆತನ ಅಂತ್ಯಕ್ರಿಯೆ (funeral) ಸಹ ಅವರವರ ಧರ್ಮದಲ್ಲಿರುವಂತೆ ಬೇರೆ ಬೇರೆಯಾಗಿರುತ್ತದೆ.

ಅಂದರೆ, ಹಿಂದೂ (Hindu) ಧರ್ಮದಲ್ಲಿ ವ್ಯಕ್ತಿಯು ಮರಣ ಹೊಂದಿದ ನಂತರ ಆತನ ಮೃತ ದೇಹವನ್ನು ಬೆಂಕಿಯಲ್ಲಿ ಸುಡಲಾಗುತ್ತದೆ ಇಲ್ಲಾ ನೆಲದಲ್ಲಿ ಹೂಳಲಾಗುತ್ತದೆ. ಹಾಗೆಯೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮದಲ್ಲಿ ಮೃತ ದೇಹವನ್ನು ಹೂಳುತ್ತಾರೆ.

ಈ ಧರ್ಮಗಳನ್ನು ಹೊರತುಪಡಿಸಿ, ಇನ್ನೂ ಅನೇಕ ಧರ್ಮಗಳಿವೆ. ಅವುಗಳಲ್ಲಿ ಕೆಲವೊಂದು ಪಂಗಡಗಳು ಅಂತ್ಯ ಸಂಸ್ಕಾರದ ಬಳಿಕ ಬೂದಿಯನ್ನು ತಂದು ಸೂಪ್‌ (Soup) ಮಾಡಿ ಮನೆಯ ಸದಸ್ಯರೆಲ್ಲಾ ಕುಡಿಯುವ ರೂಢಿಯನ್ನು ಹೊಂದಿದ್ದಾರೆ.

ಬೌದ್ಧ ಧರ್ಮದಲ್ಲಿ ಅಂತ್ಯ ಸಂಸ್ಕಾರ :

ಟಿಬೆಟ್‌ನಲ್ಲಿ ವಾಸವಾಗಿರುವ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಅಂತ್ಯ ಸಂಸ್ಕಾರದ ವಿಧಿ – ವಿಧಾನಗಳು ತುಂಬಾನೇ ಭಿನ್ನವಾಗಿರುತ್ತದೆ. ಇಂತಹ ಸಂಪ್ರದಾಯದಲ್ಲಿ, ಬೌದ್ಧಧರ್ಮ (Buddhism) ದ ಸಂತರು, ಋಷಿಗಳು ಮತ್ತು ಸಾಮಾನ್ಯ ಜನರ ಅಂತ್ಯಕ್ರಿಯೆಯ ಪ್ರಕ್ರಿಯೆಯು ವಿಭಿನ್ನವಾಗಿದೆ. ಬೌದ್ಧಧರ್ಮದಲ್ಲಿ ಮರಣದ ನಂತರ ದೇಹವನ್ನು ಹೂಳುವುದಿಲ್ಲ ಅಥವಾ ಸುಡುವುದಿಲ್ಲ. ಬದಲಾಗಿ ತುಂಡು ತುಂಡಾಗಿ ಕತ್ತರಿಸುತ್ತಾರೆ.

ಹೌದು, ಬೌದ್ಧ ಧರ್ಮದ ಜನರು ಅಂತಿಮ ವಿಧಿಗಳನ್ನು ಆಕಾಶದಲ್ಲೇ ಪೂರ್ಣಗೊಳಿಸುತ್ತಾರೆ. ಅಂದರೆ ಬೌದ್ಧ ಧರ್ಮದಲ್ಲಿ ವ್ಯಕ್ತಿಯ ಮರಣದ ನಂತರ ಆತನ ಮೃತ ದೇಹವನ್ನು ಅತ್ಯಂತ ಎತ್ತರದ (ಶಿಖರಕ್ಕೆ) ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ಟಿಬೆಟ್‌ನಲ್ಲಿ (Tibet) ಬೌದ್ಧಧರ್ಮದ ಅನುಯಾಯಿಗಳ ಕೊನೆಯ ವಿಧಿಗಳನ್ನು ನಿರ್ವಹಿಸಲು ಪ್ರತ್ಯೇಕ ಸ್ಥಳವನ್ನೇ ನೀಡಲಾಗಿದೆ. ದೇಹವು ಸ್ಥಳವನ್ನು ತಲುಪುವ ಮುಂಚೆಯೇ ಬೌದ್ಧ ಸನ್ಯಾಸಿಗಳು ಅಥವಾ ಲಾಮಾಗಳು ಅಂತ್ಯಕ್ರಿಯೆಯ ಸ್ಥಳವನ್ನು ತಲುಪುತ್ತಾರೆ.

ಅಲ್ಲಿ ಮೃತ ದೇಹವನ್ನು ಸ್ಥಳೀಯ ಸಂಪ್ರದಾಯಗಳ ಪ್ರಕಾರ ಪೂಜಿಸಲಾಗುತ್ತಿದ್ದು, ನಂತರ ವಿಶೇಷ ವ್ಯಕ್ತಿಯೋರ್ವ ಮೃತ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸುತ್ತಾನೆ. ಈ ವಿಶೇಷ ವ್ಯಕ್ತಿಯನ್ನು ಬೌದ್ಧ ಧರ್ಮದ ಅನುಯಾಯಿಗಳು ರೋಗ್ಯಪಾಸ್ (sick leave) ಎಂದು ಕರೆಯುತ್ತಾರೆ.

ರಣಹದ್ದುಗಳಿಗೆ ಮೃತದೇಹವೇ ಆಹಾರ :

ರೋಗ್ಯಪಾಸ್ ಕತ್ತರಿಸಿದ ಮೃತದೇಹದ ಸಣ್ಣ ತುಂಡುಗಳನ್ನು ಬಾರ್ಲಿ ಹಿಟ್ಟಿನ ದ್ರಾವಣದಲ್ಲಿ ಮುಳುಗಿಸುತ್ತಾನೆ. ನಂತರ ಬಾರ್ಲಿ ಹಿಟ್ಟಿನ ದ್ರಾವಣದಲ್ಲಿ ಸುತ್ತಿದ ಈ ಮೃತದೇಹದ ತುಂಡುಗಳನ್ನು ಟಿಬೆಟ್‌ನ ಪರ್ವತ ಶಿಖರಗಳಲ್ಲಿ ಕಂಡುಬರುವ ರಣಹದ್ದುಗಳಿಗೆ ಮತ್ತು ಹದ್ದುಗಳಿಗೆ ಆಹಾರವಾಗಿ ಹಾಕಲಾಗುತ್ತದೆ.

ರಣಹದ್ದುಗಳು ಮತ್ತು ಹದ್ದುಗಳು ತುಂಡುಗಳಿಂದ ಮಾಂಸವನ್ನು ತಿಂದು ಮೂಳೆಗಳನ್ನು ಹಾಗೇ ಬಿಟ್ಟಿರುತ್ತವೆ. ಬಳಿಕ ಈ ಮೂಳೆಗಳನ್ನು ಪುಡಿ ಮಾಡಿ ಮತ್ತೆ ಬಾರ್ಲಿ ಹಿಟ್ಟಿನ ದ್ರಾವಣದಲ್ಲಿ ಅದ್ದಿ ಪಕ್ಷಿಗಳಿಗೆ ಆಹಾರವಾಗಿ ಇಡಲಾಗುತ್ತದೆ.

ಬೌದ್ಧ ಧರ್ಮದ ಮೇಲಿನ ನಂಬಿಕೆಯಿಂದಾಗಿ ಈ ವಿಚಿತ್ರ ಅಂತ್ಯಕ್ರಿಯೆಯ ಸಂಪ್ರದಾಯವನ್ನು ಇಂದಿಗೂ ನಡೆಸಲಾಗುತ್ತಿದೆ. ವಾಸ್ತವವಾಗಿ, ಬೌದ್ಧಧರ್ಮದಲ್ಲಿ, ದೇಹವನ್ನು ಸಾವಿನ ನಂತರ ಖಾಲಿ ಪಾತ್ರೆ ಎಂದು ಪರಿಗಣಿಸಲಾಗುತ್ತದೆ. ಮೃತ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಮರಣ ಹೊಂದಿದ ದೇಹವು ಪುಣ್ಯವನ್ನು ಪಡೆದುಕೊಳ್ಳುತ್ತದೆ ಎಂಬುದು ನಂಬಿಕೆಯಾಗಿದೆ. ಬೌದ್ಧರ ಈ ಅಂತ್ಯ ಸಂಸ್ಕಾರದ ಪ್ರಕ್ರಿಯೆಯನ್ನು ಸ್ವ – ತ್ಯಾಗ ಎಂದು ಕರೆಯಲಾಗುತ್ತದೆ. (ಎಜೇನ್ಸಿಸ್)

spot_img
spot_img
- Advertisment -spot_img