ಜನಸ್ಪಂದನ ನ್ಯೂಸ್, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.
“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”
ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.
ಮುಖ್ಯ ಲಕ್ಷಣಗಳು :
- ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
- ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
- ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
- ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
- ನಡೆಯುವಾಗ ಕಾಲುಗಳಲ್ಲಿ ನೋವು.
- ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
- ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
- ಅಧಿಕ ರಕ್ತದೊತ್ತಡ.
- ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
- ಧೂಮಪಾನ.
- ಮಧುಮೇಹ.
- ಕುಟುಂಬದ ಇತಿಹಾಸ.
- ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
- ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
- ಧೂಮಪಾನ ತ್ಯಜಿಸುವುದು.
- ತೂಕ ನಿಯಂತ್ರಣದಲ್ಲಿ ಇಡುವುದು.
- ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
- ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.
👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಜನಸ್ಪಂದನ ನ್ಯೂಸ್, ವಿಶೇಷ : ಮಾನವನ ಆಯಸ್ಸು ಎಷ್ಟರವರೆಗೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಕಾಲಿಕ ಸಾವು ಅಥವಾ ಅಪಘಾತದಂತಹ ಅನಾಹುತಗಳ ಸಂದರ್ಭದಲ್ಲಿ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ವಿಮೆ (Insurance) ಯ ಅಗತ್ಯತೆ ಹೆಚ್ಚಾಗಿದೆ. ಆದರೆ ಬಹುತೇಕ ವಿಮಾ ಪಾಲಿಸಿಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಲಭ್ಯವಿರುವ ಒಂದು ಆಕರ್ಷಕ ಯೋಜನೆ ವರ್ಷಕ್ಕೆ ಕೇವಲ ರೂ.520 ಪಾವತಿಸಿದರೆ ರೂ.10 ಲಕ್ಷದವರೆಗೆ ವಿಮಾ (Insurance) ರಕ್ಷಣೆ ಒದಗಿಸುತ್ತದೆ.
ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : Police ಕಾನ್ಸ್‌ಟೇಬಲ್ ಅರೆಸ್ಟ್.!
🔹 ರೂ.520 ಪಾವತಿಸಿದರೆ ಸಿಗುವ ಸೌಲಭ್ಯಗಳು :
- ಅಪಘಾತದಿಂದ ಸಾವನ್ನಪ್ಪಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷ ಪರಿಹಾರ.
- ಇಬ್ಬರು ಮಕ್ಕಳಿಗೆ ತಲಾ ರೂ.1 ಲಕ್ಷದವರೆಗೆ ಶಿಕ್ಷಣ ಸಹಾಯಧನ.
- ಆಸ್ಪತ್ರೆ ಪ್ರವೇಶಕ್ಕೆ ದಿನಕ್ಕೆ ರೂ.1,000 (ಗರಿಷ್ಠ 10 ದಿನಗಳವರೆಗೆ).
- ಕುಟುಂಬ ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕೆ ರೂ.25,000.
- ಅಂತ್ಯಕ್ರಿಯೆಗೆ ರೂ.5,000 ನೆರವು.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ರೂ.755 ಪಾವತಿಸಿದರೆ ಸಿಗುವ ಹೆಚ್ಚುವರಿ ಪ್ರಯೋಜನಗಳು :
- ರೂ.15 ಲಕ್ಷದವರೆಗೆ ವಿಮಾ ಸುರಕ್ಷತೆ.
- ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಪರಿಹಾರ.
- ವೈದ್ಯಕೀಯ ವೆಚ್ಚಗಳಿಗೆ ರೂ.1 ಲಕ್ಷದವರೆಗೆ ಕವರ್.
- ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ ರೂ.1 ಲಕ್ಷ ಸಹಾಯ.
🔹 ಯಾವ ಅಪಘಾತಗಳಿಗೆ ಕವರ್ (Insurance cover) ಸಿಗುತ್ತದೆ?
ರಸ್ತೆ ಅಪಘಾತ ಮಾತ್ರವಲ್ಲದೆ, ರೈಲು ಅಥವಾ ಬಸ್ ಪ್ರಯಾಣದ ವೇಳೆ, ಎಲೆಕ್ಟ್ರಿಕ್ ಶಾಕ್, ಹಾವು ಕಡಿತ ಸೇರಿದಂತೆ ಹಲವಾರು ಅಪಘಾತಗಳಿಗೆ ಈ ವಿಮೆ (Insurance) ಅನ್ವಯಿಸುತ್ತದೆ.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ಯಾರು ಪಾಲಿಸಿಗೆ ಅರ್ಹರು?
- ವಯಸ್ಸು 18 ರಿಂದ 65 ವರ್ಷದೊಳಗಿನವರು.
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಹೊಂದಿರಬೇಕು.
- ಖಾತೆ ತೆರೆಯಲು ಕೇವಲ ರೂ.100 ಸಾಕು.
ಈ ಯೋಜನೆ ಪಡೆಯಲು ಸಮೀಪದ ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಪ್ರತಿವರ್ಷ ಪಾವತಿ ನೇರವಾಗಿ ಬ್ಯಾಂಕ್ ಖಾತೆಯಿಂದ ಕಟ್ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.
ಹಗಲು ರಾತ್ರಿ Phone ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ದೇಹಕ್ಕೆ ಅಪಾಯ ಕಾದಿದೆ.!
👉 ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ (Insurance) ಕವರ್ ನೀಡುವ ಅಂಚೆ ಇಲಾಖೆಯ ವಿಶೇಷ ಯೋಜನೆ. ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ಇಂತಹ ಯೋಜನೆಗಳ ಪ್ರಯೋಜನ ಪಡೆಯುವುದು ಒಳಿತು.