Wednesday, September 17, 2025

Janaspandhan News

HomeHealth & Fitnessಸೆಪ್ಟೆಂಬರ್ 1 ರಿಂದ ಈ Health Insurance ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್...
spot_img
spot_img
spot_img

ಸೆಪ್ಟೆಂಬರ್ 1 ರಿಂದ ಈ Health Insurance ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೆಪ್ಟೆಂಬರ್ 1 ರಿಂದ ಈ ಆರೋಗ್ಯ ವಿಮಾ (Health Insurance) ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ ಎಂದು ಮುಖ ಆರೋಗ್ಯ ವಿಮಾ ಕಂಪನಿಗಳು ತಿಳಿಸಿವೆ. ಬನ್ನಿ. ಅದರ ಬಗ್ಗೆ ತಿಳಿಯೋಣ.!

ಹೌದು, ಪ್ರಮುಖ ಆರೋಗ್ಯ ವಿಮಾ ಕಂಪನಿಗಳಾದ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಹೊಸ ಸೂಚನೆ ಜಾರಿಯಾಗಲಿದೆ.

36 ಜನರಿದ್ದ ಇಲಕಲ್‌ ಮಂಗಳೂರ KSRTC ಬಸ್‌ ಅಪಘಾತ.!

ಆರೋಗ್ಯ ವಿಮಾ (Health Insurance) ಸೇವಾದಾರರ ಸಂಸ್ಥೆ (Association of Healthcare Providers of India – AHPI) ತನ್ನ ನೆಟ್‌ವರ್ಕ್‌ನಲ್ಲಿರುವ ದೇಶದ 20,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸೆಪ್ಟೆಂಬರ್ 1ರಿಂದ ಕ್ಯಾಶ್‌ಲೆಸ್ ಸೌಲಭ್ಯ ನಿಲ್ಲಿಸಲು ನಿರ್ಧರಿಸಿದೆ.

Health Insurance 1

ಇದರ ಪರಿಣಾಮ ಏನು?

➡️ ಈ ಬದಲಾವಣೆಯಿಂದ ಬಜಾಜ್ ಅಲಯನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಪಾಲಿಸೀ ಹೊಂದಿರುವವರಿಗೆ ಕ್ಯಾಶ್‌ಲೆಸ್ ಚಿಕಿತ್ಸೆ ಸಿಗುವುದಿಲ್ಲ.

➡️ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದಲ್ಲಿ ಮೊದಲು ಸ್ವಂತವಾಗಿ ಹಣ ಪಾವತಿಸಿ, ನಂತರ ವಿಮಾ ಕ್ಲೇಮ್ ಸಲ್ಲಿಸಬೇಕಾಗುತ್ತದೆ.

Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ಯಾವ ಆಸ್ಪತ್ರೆಗಳು ಒಳಗೊಂಡಿವೆ?

AHPI ನೆಟ್‌ವರ್ಕ್‌ನಡಿ ದೇಶದ ಅನೇಕ ಪ್ರಮುಖ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

  • ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
  • ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆ.
  • ಹಲವಾರು ಖಾಸಗಿ ಹಾಗೂ ಸ್ಥಳೀಯ ಆಸ್ಪತ್ರೆಗಳು.

ಇವೆಲ್ಲವೂ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತವೆ.

Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
ದಕ್ಷಿಣ ಭಾರತಕ್ಕೂ ಅನ್ವಯವಾಗುತ್ತದೆಯೇ?

ಪ್ರಸ್ತುತ ಮಾಹಿತಿ ಪ್ರಕಾರ, ಈ ನಿಯಮವು ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಯಾಗುತ್ತದೆ. ದಕ್ಷಿಣ ಭಾರತದ ಆಸ್ಪತ್ರೆಗಳ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.

ವಿದೇಶಗಳಲ್ಲಿ ಭಾರತೀಯರಿಗೆ ಆರೋಗ್ಯ ವಿಮೆ (Health Insurance) ಯ ಮಹತ್ವ :

ಯುಕೆ, ಅಮೆರಿಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅನೇಕ ಭಾರತೀಯರು ಸ್ಥಳೀಯ ಆರೋಗ್ಯ ಸೇವೆಯಿಂದ ಅಸಮಾಧಾನಗೊಂಡಿದ್ದಾರೆ.

ಹೆಚ್ಚಿನ ವೆಚ್ಚ, ಚಿಕಿತ್ಸೆಗಾಗಿ ಉದ್ದವಾದ ನಿರೀಕ್ಷೆ ಹಾಗೂ ಅಪಾಯಿಂಟ್‌ಮೆಂಟ್ ಸಮಸ್ಯೆಯಿಂದ ಬಳಲುವ ಕಾರಣ, ಅನೇಕರು ಭಾರತದಲ್ಲಿ ಚಿಕಿತ್ಸೆ ಪಡೆಯುವುದನ್ನೇ ಆಯ್ಕೆಮಾಡುತ್ತಾರೆ. ಇದರ ಜೊತೆಗೆ, ಎನ್‌ಆರ್‌ಐ ಸಮುದಾಯದಲ್ಲಿ ಭಾರತದಲ್ಲೇ ಆರೋಗ್ಯ ವಿಮೆ ಖರೀದಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.


ಹೃದಯಾಘಾತದಿಂದ ದೂರ ಇರಲು ತಪ್ಪದೇ ಸೇವಿಸಲೇಬೇಕಾದ Vitamin ಇದು.!

Vitamin

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದ್ರೋಗ ತಡೆಯಲು ಸಹಾಯಕವಾಗುವ ವಿಟಮಿನ್ (Vitamin) ಬಗ್ಗೆ ನಿಮಗೆ ಗೊತ್ತೇ.? ಬನ್ನಿ ಇಂದು ನಾವೂ ಹೃದಯಕ್ಕೆ ರಕ್ಷಕವಾಗಿರುವ ಆ ವಿಟಮಿನ್ ಬಗ್ಗೆ ತಿಳಿಯೋಣ.!

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ಕಿರಿಯ ವಯಸ್ಸಿನವರಿಗೂ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ತಜ್ಞರ ಪ್ರಕಾರ, ಇದಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಪರಿಸರದ ಪರಿಣಾಮ. ಇತ್ತೀಚಿನ ಜರ್ನಲ್ ಆಫ್ ಸರ್ಕ್ಯುಲೇಷನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ ಕೆ (Vitamin – K) ಹೆಚ್ಚಾಗಿ ಸೇವಿಸುವವರು ಹೃದ್ರೋಗದ ಅಪಾಯದಿಂದ ದೂರ ಇರುತ್ತಾರೆ.

Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?
ಹೃದಯಕ್ಕೆ ವಿಟಮಿನ್ ಕೆ (Vitamin – K) ನೀಡುವ ಲಾಭಗಳು :
  • ರಕ್ತನಾಳಗಳ ಆರೋಗ್ಯ : ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಅಪಧಮನಿಗಳ ಗಟ್ಟಿಯಾಗುವುದನ್ನು ತಡೆಯುತ್ತದೆ.
  • ರಕ್ತದೊತ್ತಡ ನಿಯಂತ್ರಣ : ರಕ್ತನಾಳಗಳಲ್ಲಿ ಖನಿಜ ಸಂಗ್ರಹ ತಡೆಯುವ ಮೂಲಕ ಹೈ ಬ್ಲಡ್ ಪ್ರೆಷರ್ ಅಪಾಯ ಕಡಿಮೆ ಮಾಡುತ್ತದೆ.
  • ರಕ್ತ ಪರಿಚಲನೆ ಸುಧಾರಣೆ : ರಕ್ತ ಪ್ರವಾಹವನ್ನು ಸುಗಮಗೊಳಿಸಿ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
  • ಹೃದಯಾಘಾತದ ಅಪಾಯ ತಗ್ಗು : ವಯಸ್ಸಾದಂತೆ ಹೆಚ್ಚಾಗುವ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ವಿಟಮಿನ್ ಕೆ (Vitamin – K) ದೊರೆಯುವ ಪ್ರಮುಖ ಆಹಾರಗಳು:
  • ಹಸಿರು ತರಕಾರಿಗಳು : ಪಾಲಕ್, ಗೊಂಗುರ, ಮೆಂತ್ಯ.
  • ಹುದುಗಿಸಿದ ಆಹಾರಗಳು : ಮೊಸರು, ಉಪ್ಪಿನಕಾಯಿ.
  • ಮಾಂಸ : ಮೀನು, ಮಾಂಸ, ಮೊಟ್ಟೆಗಳು.
  • ಡೈರಿ ಉತ್ಪನ್ನಗಳು : ಹಾಲು, ಚೀಸ್.
Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ದಿನನಿತ್ಯದ ಅವಶ್ಯಕತೆ :

ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ವಯಸ್ಕರಿಗೆ ದಿನಕ್ಕೆ 70 ರಿಂದ 90 ಮೈಕ್ರೋಗ್ರಾಂ ವಿಟಮಿನ್ ಕೆ ಅಗತ್ಯವಿದೆ. ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲದೆ ಮೂಳೆಗಳನ್ನು ಬಲಪಡಿಸಲು ಸಹ ಸಹಾಯಕ.

ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಕೆ ಇರುವ ಪದಾರ್ಥಗಳನ್ನು ಸೇರಿಸುವುದು ಆರೋಗ್ಯಕ್ಕೆ ಲಾಭಕಾರಿ.

👉 ಈ ಲೇಖನ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಯಾವುದೇ ರೀತಿಯ ಆಹಾರ ಅಥವಾ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.


- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments