ಜನಸ್ಪಂದನ ನ್ಯೂಸ್, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi in Belagavi district) ನಗರದ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕನೋರ್ವ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ (Sexual harassment) ನೀಡುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಅತಿಥಿ ಉಪನ್ಯಾಸಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು (ದಿ. 24) ನಡೆದಿದೆ.
ಖಾಸಗಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕನ ವಿರುದ್ಧ (Against the guest lecturer) ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಇನ್ನೂ ಇತನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.
ಇದನ್ನು ಓದಿ : ಬೆಳಗಾವಿ : ವೇಶ್ಯಾವಾಟಿಕೆ ನಡೆಸುತ್ತಿದ್ದ Spa and Beauty parlour ಮೇಲೆ ಪೊಲೀಸರ ದಾಳಿ.!
ಈ ಮಾತು ಕೇಳಿ ವಿದ್ಯಾರ್ಥಿನಿಯ ಪೋಷಕರು ಅಕ್ಕಪಕ್ಕದ ಮನೆಯವರನ್ನು ಕಾಲೇಜಿಗೆ ಕರೆದುಕೊಂಡು ಬಂದು ಉಪನ್ಯಾಸಕನಿಗೆ ಕಪಾಳಮೋಕ್ಷ (slap in the face) ಮಾಡಿ ಥಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಉಪನ್ಯಾಸಕನ ಮೊಬೈಲ್ (Mobile) ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.
ಈ ವೇಳೆ ಆತನ ಮೊಬೈಲ್‌ನಲ್ಲಿ ಯುವತಿಯರ ಅಶ್ಲೀಲ ಫೋಟೋಗಳು (Pornographic photos) ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : 3ನೇ ಮಹಡಿಯಿಂದ ಹಾರಿದ PU ಮೊದಲನೇ ವರ್ಷದ ವಿದ್ಯಾರ್ಥಿ : ದೃಶ್ಯ CCTV ಯಲ್ಲಿ ಸೆರೆ.!
ಹಿಂದಿನ ಸುದ್ದಿ : ವಿಚ್ಛೇದನದ ಕೇಸ್ ನಲ್ಲಿ ಪುರುಷರು ಸಹ ಸಂತ್ರಸ್ತರು : ಹೈಕೋರ್ಟ್.
ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚೆಗೆ ವೈವಾಹಿಕ ವಿವಾದಗಳ ಪ್ರಕರಣಗಳಲ್ಲಿ (A case of matrimonial disputes) ಮಹಿಳೆಯರು ಹೆಚ್ಚಾಗಿ ಬಲಿಪಶುಗಳಾಗಿದ್ದರೂ, ಅಂತಹ ಪ್ರಕರಣಗಳಲ್ಲಿ ಪುರುಷರು ಸಹ ಸಂತ್ರಸ್ತರು. ಹೀಗಾಗಿ ಲಿಂಗ ಸಮಾನತೆಯ ಸಮಾಜ ಈಗಿನ ಅಗತ್ಯವಾಗಿದೆ (A gender egalitarian society is the need of the hour) ಎಂದು ಕರ್ನಾಟಕ High court ಅಭಿಪ್ರಾಯಪಟ್ಟಿದೆ.ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಮಹಿಳೆಯೊಬ್ಬರು ತಮ್ಮ Divorce ಕುರಿತು ತಾವು ಹಾಜರಾಗಬೇಕಿರುವ ಕೋರ್ಟ್ ತಮ್ಮ ಮನೆಯಿಂದ 130 ಕಿಲೋಮೀಟರ್ ದೂರದಲ್ಲಿದೆ.ಹೀಗಾಗಿ ಪ್ರತಿ ಸಲವೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತಿದೆ ಎಂದು ವರ್ಗಾವಣೆ ಅರ್ಜಿಯನ್ನು (Transfer application) ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ (Dismissed).
ಇದನ್ನು ಓದಿ : Finance ಸಿಬ್ಬಂದಿಯಿಂದ ಅಮಾನವೀಯ ಕೃತ್ಯ ; ಬಾಣಂತಿ ಇದ್ದ ಮನೆ ಸೀಜ್.!
ಮಹಿಳೆ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಈ ಪ್ರಕರಣದಲ್ಲಿ ಪ್ರತಿವಾದಿ ಆಕೆಯ ಪತಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದರೆ, ಪತಿಗೆ ಇನ್ನಷ್ಟು ತೊಂದರೆಯಾಗುತ್ತೆ ಎಂದು ವಾದಿಸಿದ್ದು, ಇದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.ಮಹಿಳೆಗೆ ಪುರುಷನಂತೆಯೇ ಸಮಾನ ಹಕ್ಕುಗಳಿವೆ. ವಾಸ್ತವವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರು ಪ್ರಾಥಮಿಕ ಬಲಿಪಶುಗಳು.
ಆದರೆ ಪುರುಷರು ಸ್ತ್ರೀಯರ ಕ್ರೌರ್ಯದಿಂದ ಪ್ರಭಾವಿತರಾಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.ಆದ್ದರಿಂದ, ಲಿಂಗ ಸಮಾನ ಸಮಾಜದ ಅವಶ್ಯಕತೆ ಇದೆ. ಆ ರೀತಿಯ ಸಮಾಜ ಲಿಂಗ ಅಥವಾ ಲಿಂಗದ ಆಧಾರದ ಮೇಲೆ ಕರ್ತವ್ಯಗಳನ್ನು ಬೇರ್ಪಡಿಸುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೈಕೋರ್ಟ್ ತಿಳಿಸಿದೆ.