ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಯಲಹಂಕ (Yalahanka) ತಾಲೂಕಿನ ಹೆಸರುಘಟ್ಟ ಹೋಬಳಿಯ ಶಿವಕೋಟಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಹೆಸರುಘಟ್ಟ ಹೋಬಳಿಯ ಶಿವಕೋಟಿ ಗ್ರಾಮ ಪಂಚಾಯಿತಿಯ (Gram Panchayat) ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಎಂಬುವವರು ಲೋಕಾಯುಕ್ತ ಅಧಿಕಾರಿಗಳ (Lokayukta Officer’s) ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ವ್ಯಕ್ತಿಯೊಬ್ಬರ ಬಳಿ 13 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದು (Demanded bribe), ಆ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಕೋಟೆ ಗ್ರಾಮ ಪಂಚಾಯಿತಿ (Shivkote Gram Panchayat) ವ್ಯಾಪ್ತಿಯಲ್ಲಿ ವ್ಯಕ್ತಿಯು ತಂದೆಯ ಹೆಸರಿನಲ್ಲಿ ಖಾಲಿ ನಿವೇಶನವಿದ್ದು, ನಿವೇಶನಕ್ಕೆ ಈ- ಖಾತಾ ಮತ್ತು ಮ್ಯೂಟೇಷನ್ ವರ್ಗಾವಣೆ (E- Account and Mutation Transfer) ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು.
ಈ ಕೆಲಸವನ್ನು ಮಾಡಿಕೊಡಲು ಬಿಲ್ ಕಲೆಕ್ಟರ್ (bill collector) ಪ್ರದೀಪ್ ರವರು 13 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನು ಓದಿ : KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಅಂತೆಯೇ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಬಿಲ್ ಕಲೆಕ್ಟರ್ ಪ್ರದೀಪ್ ರವರನ್ನು ಅರೆಸ್ಟ್ ಮಾಡಿ (Arrested with money) ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕರಾದ ಪವನ್ ನೆಟ್ಟೂರು ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರವರಾದ ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆ ನಡೆಸಿದರು.
ಹಿಂದಿನ ಸುದ್ದಿ : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ASI.!
ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆಯ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ASI ಒಬ್ಬರಾದ ಲಂಚ (bribe) ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಈರಣ್ಣ (ASI Iranna) ಎಂಬುವವರು ಲೋಕಾಯುಕ್ತ ಬಲೆಗೆ (lokayukta trap) ಬಿದ್ದಿದ್ದಾರೆ.
ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾವಣಗೆರೆ ನಗರದ ಮಣಿಕಂಠಾಚಾರ್ಯ ಎಂಬುವರ ವಿರುದ್ಧ ಗಲಾಟೆಯ ವಿಚಾರವಾಗಿ (for the uproar) ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್.!
ಚಾರ್ಜ್‌ಶೀಟ್‌ನಲ್ಲಿದ್ದ ಮಣಿಕಂಠಾಚಾರ್ಯ ಅವರ ತಾಯಿ ಭಾಗಮ್ಮ ಮತ್ತು ಪತ್ನಿ ಅರ್ಚನಾರ ಹೆಸರುಗಳನ್ನು ಕೈ ಬಿಡಲು (drop the names in the charge sheet) ಈರಣ್ಣ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು (He demanded a bribe of 1 lakh rupees) ಎನ್ನಲಾಗಿದೆ.
ಈ ಕುರಿತು ಮಣಿಕಂಠಾಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸ್ ಠಾಣೆಯಲ್ಲಿಯೇ (At the police station itself) ಮಣಿಕಂಠಾಚಾರ್ಯ ಅವರಿಂದ ASI ಈರಣ್ಣ 50 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ (Has been taken into custody) ಎಂದು ತಿಳಿದು ಬಂದಿದೆ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಜಿಲ್ಲಾ ಲೋಕಾಯುಕ್ತ ಅಧೀಕ್ಷಕ (District Lokayukta Superintendent) ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಈ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಸದ್ಯ ಎಎಸ್‌ಐ ಈರಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದು (Investigate), ತನಿಖೆ ಮುಂದುವರೆದಿದೆ (investigation continues) ಎಂದು ತಿಳಿದು ಬಂದಿದೆ.