ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆಯಲ್ಲಿ ಹುಡುಗಿಯರಿಬ್ಬರು ರೀಲ್ಸ್ (Reels) ಮಾಡಲು ಮುಂದಾಗುತ್ತಿದಂತೆಯೇ ಆಕಸ್ಮಿಕವಾಗಿ ನಾಯಿಗಳ ಗುಂಪೊಂದು ಆಗಮಿಸಿದ್ದು, ಮುಂದೆನಾಯ್ತು ಅಂತ ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಬಾಲಕರಿಂದ ಹಿಡಿದು ವಯಸ್ಕರವರೆಗೆ ರೀಲ್ಸ್ ಹುಚ್ಚು ಹಿಡಿದು ಬಿಟ್ಟಿದೆ. ಈ ರೀಲ್ಸ್ ಕೆಲವರು time pass ಗಾಗಿ ಮಾಡುತ್ತಾರೆ. ಇನ್ನು ಕೆಲವರು ಕಾಮಿಡಿಗಾಗಿ ಮಾಡುತ್ತಾರೆ.
ಇದನ್ನು ಓದಿ : Relationship : ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳ ಹಿಂದೆ ಬಿದ್ದವ ಏನಾದ ಗೊತ್ತಾ.?
ಇನ್ನು ಕೆಲವರು ಅದರಲ್ಲೂ ಯುವಕ ಯುವತಿಯರಿಗೆ ಈ ರೀಲ್ಸ್ ಹುಚ್ಚು ಎಷ್ಟರಮಟ್ಟಿಗೆ ಹಿಡಿದೆ ಅಂದ್ರೆ, ಕೆಲಸಲ ಎಂಥೆಂತಾ ಅಪಾಯಕಾರಿ (dangerous) ರೀಲ್ಸ್ ಮಾಡಲು ಮುಂದಾಗುತ್ತಾರೆ.
ಇಂಥಾ ರೀಲ್ಸ್ ಮಾಡುವಾಗ ಎಷ್ಟೋ ಜನ ತಮ್ಮ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ (reels) ಮಾಡಿದ್ದರೆ, ಇನ್ನು ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಇದನ್ನು ಓದಿ : ರಿಪೇರಿ ಮಾಡಾವಾಗ ಸ್ಪೋಟಗೊಂಡ AC ಕಂಪ್ರೆಸರ್ ; ಹಾರಿ ಬಿದ್ದ ವ್ಯಕ್ತಿ.!
ಇದೀಗ ಇದೇ ರೀಲ್ಸ್ ವಿಚಾರವಾಗಿ ವಿಡಿಯೊ ಒಂದು ಸಾಮಾಜಿಕ ಜಾಲತಾಣ (social media) ದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಬಹಳ ತಮಾಷೆಯಾಗಿ ಕಾಣುತ್ತಿದೆ.
ವಾಸ್ತವವಾಗಿ ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ರೀಲ್ಸ್ ಮಾಡುವುದನ್ನು ನೋಡಬಹುದಾಗಿದೆ.
ಇದನ್ನು ಓದಿ : SSLC ಪಾಸಾದವರಿಂದ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಏನಿದೆ ಈ ವೈರಲ್ ವಿಡಿಯೋದಲ್ಲಿ.?
ಇಬ್ಬರು ಹುಡುಗಿಯರು ರೀಲ್ಸ್ ಮಾಡಲೆಂದು ರಸ್ತೆಯಲ್ಲಿ ಮೊಬೈಲ್ ಕ್ಯಾಮರಾ On ಮಾಡಿಟ್ಟು ರೀಲ್ಸ್ ಮಾಡಲು ಮುಂದಾಗುತ್ತಾರೆ. ಈ ಹುಡುಗಿಯರು ರೀಲ್ಸ್ ಮಾಡಲು ಶುರು ಮಾಡಿದ್ದೇ ತಡ ಪಕ್ಕದಲ್ಲಿದ್ದ ನಾಯಿ ಬೊಗಳಲು ಪ್ರಾರಂಭಿಸಿ ಅವರ ಬಳಿ ಬರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ರೀಲ್ಸ್ ಮಾಡುವ ಹುಡುಗಿಯರ ಹತ್ತಿರ ಎರಡು ನಾಯಿಗಳು ಓಡುತ್ತಾ ಬರುತ್ತಿದಂತೆಯೇ ರೀಲ್ಸ್ ಮಾಡುತ್ತಿದ್ದ ಹುಡುಗಿಯರು ಗಾಬರಿಯಾಗಿ ರೀಲ್ಸ್ ಮಾಡಲು ಇಟ್ಟಿದ್ದ ಮೊಬೈಲ್ (mobile) ಸ್ಥಳದಲ್ಲಿ ಬಿಟ್ಟು ಓಡಿಹೋಗುವುದನ್ನು ನೀವು ದೃಶ್ಯದಲ್ಲಿ ಕಾಣಬಹುದು.
ಇದನ್ನು ಓದಿ : ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!
ಮಾರ್ಚ್ 12 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ “Ghar ke Kalesh” ಎಂಬ “X” ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 16 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ 1 ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, 11.1 K ಲೈಕ್ಸ್ ಪಡೆದುಕೊಂಡಿದೆ.
ವಿಡಿಯೋ ನೋಡಿದ ಅನೇಕರು ವಿಧ ವಿಧ ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ :
Dogs Chased away Girls who were making Reels on Middle of the Road: pic.twitter.com/cKSSK93Hmm
— Ghar Ke Kalesh (@gharkekalesh) March 12, 2025
ಹಿಂದಿನ ಸುದ್ದಿ : ರಿಪೇರಿ ಮಾಡುವಾಗ ಸ್ಪೋಟಗೊಂಡ AC ಕಂಪ್ರೆಸರ್ ; ಹಾರಿ ಬಿದ್ದ ವ್ಯಕ್ತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆ ಬದಿಯಲ್ಲಿಟ್ಟು ರಿಪೇರಿಗೆ ಬಂದಿದ್ದ AC ಯನ್ನು ರಿಪೇರಿ ಮಾಡುವಾಗ ಒಮ್ಮಿಂದಲೇ ಇದ್ದಕ್ಕಿದ್ದಂತೆ AC ಕಂಪ್ರೆಸರ್ ಸ್ಫೋಟಗೊಂಡಿರುವ ಘಟನೆ ನಡೆದಿದೆ.
AC ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ರಿಪೇರಿ ಕೆಲಸ ಮಾಡುತ್ತಿದ್ದ ನೌಕರ ತೀವ್ರವಾಗಿ ಗಾಯಗೊಂಡ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಲವ್, Se*, ದೋಖಾಗೆ ಒಂದೇ ಕುಟುಂಬದ ಇಬ್ಬರ ಸಾ*.!
AC ಕಂಪ್ರೆಸರ್ ಸ್ಫೋಟಗೊಂಡ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಘಟನೆ ದೆಹಲಿಯ ಕೃಷ್ಣಾ ನಗರದ ಎಸಿ ರಿಪೇರಿ ಅಂಗಡಿಯ ಮುಂಭಾಗದಲ್ಲಿ ನಡೆದಿದೆ.
AC ಕಂಪ್ರೆಸರ್ ಸ್ಫೋಟದಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಮೋಹನ್ ಲಾಲ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಕಂಪ್ರೆಸರ್ ಸ್ಫೋಟದ ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : ಮಹಿಳಾ PSI ಮೇಲೆ ಹಲ್ಲೆ ; ಹಲ್ಲೆಯ ವಿಡಿಯೋ ವೈರಲ್.!
AC ಯನ್ನು ರಸ್ತೆ ಬದಿಯಲ್ಲಿಟ್ಟು ರಿಪೇರಿ ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹೀಗೆ AC ರಿಪೇರಿ ಮಾಡುತ್ತಿರುವ ನೌಕರನ ಪಕ್ಕದಲ್ಲಿ ಹೆಲ್ಮೆಟ್ ಹಿಡಿದು ಬೈಕ್ ಸವಾರನೋರ್ವ ರಿಪೇರಿ ಮಾಡುವ ಕೆಲಸವನ್ನು ನೋಡುತ್ತಾ ಕುಳಿತ್ತಿರುವದು ಸಹ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಯಾವಾಗ AC ಕಂಪ್ರೆಸರ್ ಸ್ಫೋಟವಾಯಿತೋ ಆಗ ಬೈಕ್ ಸವಾರ ಸ್ಫೋಟದಿಂದ ಬೆಚ್ಚಿಬಿದ್ದು ಎದ್ನೋ ಬಿದ್ನೋ ಅಂತ ಓಡಿ ಹೋಗುತ್ತಾನೆ.
ಇದನ್ನು ಓದಿ : ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!
AC ಕಂಪ್ರೆಸರ್ ಸ್ಪೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ನೌಕರ ನೆಲಕ್ಕೆ ಬಿದ್ದು, ನರಳುವ ದೃಶ್ಯ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋವು ತಡೆಯದ ನೌಕರ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಸ್ಪೋಟದ ವಿಡಿಯೋ ಇಲ್ಲಿದೆ :
देखिए दर्दनाक CCTV…. AC का कंप्रेशन फटने से एक शख्स की हुई मौत
कृष्णा नगर इलाके में AC की एक दुकान में काम करने वाले मनोहर लाल की AC का कंप्रेशर फटने से मौत हो गई,Ac का काम करते हुए घटना हुई pic.twitter.com/UfFaFezuHC
— Lavely Bakshi (@lavelybakshi) March 13, 2025
ಹಿಂದಿನ ಸುದ್ದಿ