Monday, October 27, 2025

Janaspandhan News

HomeHealth & FitnessItching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
spot_img
spot_img
spot_img

Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಳೆಗಾಲದಲ್ಲಿ ಕೆಲವರಿಗೆ ಖಾಸಗಿ ಭಾಗದಲ್ಲಿ ತುರಿಕೆ (Itching) ಮತ್ತು ಉರಿಯಂತಹ ಲಕ್ಷಣಗಳು ಕಂಡುಬರುತ್ತವೆ. ಈ ಸಮಸ್ಯೆ ಸಾಮಾನ್ಯವಾಗಿ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತಿದ್ದು, ಮತ್ತೇ ಕೆಲವೊಮ್ಮೆ ಬ್ಯಾಕ್ಟೀರಿಯಾ, ಶಿಲೀಂಧ್ರ (ಫಂಗಸ್) ಅಥವಾ ಎಸ್ಜಿಮಾ ಇಂತಹ ಚರ್ಮದ ಸಮಸ್ಯೆಗಳ ಪರಿಣಾಮವಾಗಿರಬಹುದು.

ಈ ರೀತಿಯ ತುರಿಕೆ (Itching) ಸಮಸ್ಯೆಗಳನ್ನು ನಿರ್ಲಕ್ಷಿಸದೇ, ಸರಿಯಾದ ಮುನ್ನೆಚ್ಚರಿಕೆ ಮತ್ತು ಮನೆಮದ್ದುಗಳೊಂದಿಗೆ ನಿಯಂತ್ರಣಕ್ಕೆ ತರಬಹುದು. ಇಲ್ಲಿ ಮುಖ್ಯ ಕಾರಣಗಳು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ:

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 01 ರ ದ್ವಾದಶ ರಾಶಿಗಳ ಫಲಾಫಲ.!
ಗುಪ್ತಾಂಗ ತುರಿಕೆ (Itching) ಗೆ ಪ್ರಮುಖ ಕಾರಣಗಳು :

1. ರೇಜರ್ ಬಳಕೆ (Razor Burn) :
ಗುಪ್ತಾಂಗದ ಭಾಗದಲ್ಲಿ ಕೂದಲನ್ನು ತೆಗೆದುಹಾಕಲು ರೇಜರ್‌ ಬಳಸಿ ಸ್ವಚ್ಛತೆ ಕಾಯ್ದುಕೊಳ್ಳುವಾಗ, ಕೆಲವೊಮ್ಮೆ ಚರ್ಮದಲ್ಲಿ ಸಣ್ಣ ಗೀರುಗಳು ಉಂಟಾಗಿ ತುರಿಕೆ (Itching) ಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಚರ್ಮ ಕೆಂಪಾಗುವುದು ಸಾಮಾನ್ಯ.

2. ಕಾಂಟ್ಯಾಕ್ಟ್ ಡರ್ಮಟೈಟಿಸ್ :
ಹೊಸ ಶೌಚೋಪಕರಣಗಳು ಅಥವಾ ಸ್ಕಿನ್‌ಕೆರ್ ಉತ್ಪನ್ನಗಳನ್ನು ಬಳಸಿದಾಗ ಕೆಲವೊಮ್ಮೆ ಚರ್ಮ ಅಲರ್ಜಿಗೆ ಒಳಗಾಗಬಹುದು. ಹೊಸ ಲೋಷನ್, ಸಾಬೂನು ಅಥವಾ ಕ್ಲೀನ್ಸರ್‌ಗಳ ಬಳಕೆಯಿಂದ ತುರಿಕೆ, ಕೆಂಪು ದದ್ದುಗಳು ಕಂಡುಬರುವ ಸಾಧ್ಯತೆ ಇದೆ.

3. ಯೀಸ್ಟ್ ಸೋಂಕು (Yeast Infection) :
ಯೀಸ್ಟ್ ತೇವಾಂಶದ ತಾಣಗಳಲ್ಲಿ ಬೆಳೆಯುತ್ತದೆ. ಬಿಗಿಯಾದ ಒಳಉಡುಪು ಧರಿಸುವುದು, ಶೌಚಾಲಯದ ನಂತರ ಸರಿಯಾಗಿ ಒರಸಿಕೊಳ್ಳದೆ ಇರುವುದು ಅಥವಾ ತೇವವಿರುವ ಬಟ್ಟೆ ಧರಿಸುವುದು ಯೀಸ್ಟ್ ಸೋಂಕಿಗೆ ದಾರಿ ಮಾಡಿಕೊಡುತ್ತದೆ.

4. ಎಕ್ಸಿಮಾ (Eczema) :
ಚರ್ಮದಲ್ಲಿ ಉಲ್ಬಣಗೊಂಡ ಕೆಂಪು ದದ್ದುಗಳು, ನೀರು ಹೊರಸೂಸುವ ಪುರುಷಕಿಗಳು ಮತ್ತು ಕಜ್ಜಿದಾಗ ಉರಿ ಉಂಟುಮಾಡುವ ಲಕ್ಷಣಗಳೊಂದಿಗೆ ಎಕ್ಸಿಮಾ ಕಾಣಿಸಿಕೊಳ್ಳಬಹುದು. ಇದು ಮೊಣಕಾಲು, ಮೊಣಕೈ ಮಾತ್ರವಲ್ಲದೇ ಗುಪ್ತಾಂಗದ ಭಾಗದಲ್ಲೂ ಕಂಡುಬಿಡಬಹುದು.

ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!
ತುರಿಕೆಗೆ ಸಾಮಾನ್ಯ ರೋಗಲಕ್ಷಣಗಳು :
  • ನಿರಂತರವಾಗಿ ತುರಿಸಿಕೊಳ್ಳಬೇಕೆಂಬ ಭಾವನೆ.
  • ಚರ್ಮ ಕೆಂಪಾಗುವುದು ಮತ್ತು ಊತ.
  • ಮೊಡವೆಗಳು ಅಥವಾ ಪುಟಗಳು.
  • ಚರ್ಮದ ಒಣತನ.
  • ತುರಿಕೆ ಬಳಿಕ ನೋವು ಅಥವಾ ಸುಡು ಅನಿಸಿಕೆ.
ತುರಿಕೆ ನಿವಾರಣೆಗೆ ಸಹಾಯಕ ಮನೆಮದ್ದುಗಳು :

1. ಅಲೋವೆರಾ ಜೆಲ್ :
ಅಲೋವೆರಾ ತುರಿಕೆ (Itching) ನಿವಾರಣೆಗೆ ಬಹಳ ಉತ್ತಮವಾಗಿ ಕೆಲಸ ಮಾಡುತ್ತದೆ. ಇದನ್ನು ನೇರವಾಗಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು.

2. ತೆಂಗಿನೆಣ್ಣೆ :
ಶುದ್ಧ ತೆಂಗಿನೆಣ್ಣೆಯು ಚರ್ಮಕ್ಕೆ ತೇವಾಂಶ ಒದಗಿಸುವುದು ಮಾತ್ರವಲ್ಲದೇ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ತುರಿಕೆ (Itching) ಇರುವ ಸ್ಥಳಕ್ಕೆ ಹಚ್ಚಿ, 20 ನಿಮಿಷದ ನಂತರ ತೊಳೆಯುವುದು ಉತ್ತಮ.

ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!

3. ಗ್ರೀಕ್ ಮೊಸರು :
ಯೀಸ್ಟ್ ಸೋಂಕು ಕಡಿಮೆ ಮಾಡಲು ಸಹಾಯಕವಾದ ಗ್ರೀಕ್ ಮೊಸರು, ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ತುರಿಕೆ ಇರುವ ಭಾಗಕ್ಕೆ ಹಚ್ಚಬಹುದು.

4. ಅಡಿಗೆ ಸೋಡಾ (ಬೇಕಿಂಗ್ ಸೋಡಾ) :
ಶಿಲೀಂಧ್ರನಾಶಕ ಗುಣಗಳಿರುವ ಅಡಿಗೆ ಸೋಡಾವನ್ನು ಸ್ನಾನದ ನೀರಿಗೆ ಸೇರಿಸುವುದು ಅಥವಾ ಪೇಸ್ಟ್ ತಯಾರಿಸಿ ಬಳಕೆಯಲ್ಲಿಡುವುದು ಸಹಕಾರಿಯಾಗುತ್ತದೆ.

5. ಐಸ್ ಪ್ಯಾಕ್ :
ತುರಿಕೆ ತೀವ್ರವಾಗಿರುವ ಸಂದರ್ಭಗಳಲ್ಲಿ, ಬಟ್ಟೆಯಲ್ಲಿ ಸುತ್ತಿದ ಐಸ್ ಪ್ಯಾಕ್ ಅನ್ನು ಕೆಲವು ನಿಮಿಷಗಳ ಕಾಲ ತುರಿಕೆ (Itching) ಭಾಗದಲ್ಲಿ ಇಡಬಹುದು.

ಸಂಪಾದಕೀಯ :

ಗುಪ್ತಾಂಗದ ತುರಿಕೆ (Itching) ಆರಂಭದಲ್ಲೇ ಈ ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ದಿನ ಕಳೆದಂತೆ ತುರಿಕೆ ತೀವ್ರವಾಗುವುದಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ರೀತಿಯ ತೀವ್ರ ಅಸ್ವಸ್ಥತೆಯನ್ನು ನಿರ್ಲಕ್ಷ್ಯ ಮಾಡುವುದರಿಂದ ಹೆಚ್ಚಿನ ಸಮಸ್ಯೆಗಳ ಎದುರಾಗಬಹುದು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!

Luteri Dulhan

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಮಹಿಳೆ (Luteri Dulhan) ಯೋರ್ವಳ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬನ ನಂತರ ಮತ್ತೋಬ್ಬ ಹೀಗೆ ಎಂಟು ಪುರುಷರೊಂದಿಗೆ ಸಾಲು ಸಾಲು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬಂಧಿಸಿರುವ ಆರೋಪಿ ಮಹಿಳೆಯನ್ನು ಸಮೀರಾ ಫಾತಿಮಾ ಎಂದು ಗುರುತಿಸಲಾಗಿದೆ. ಪೊಲೀಸರು ಮಾಹಿತಿಯಂತೆ, ಈಕೆ ತನ್ನ ಮುಂದಿನ “ಶಿಕಾರ” ಯೊಂದಿಗೆ ಚಹಾ ಕುಡಿಯುವ ವೇಳೆಯಲ್ಲಿ ಆಕೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ.

ಇದನ್ನು ಓದಿ : Bus : ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿ.!
ಆರೋಪಿತೆ ಓರ್ವ ಶಿಕ್ಷಕಿ :

ಪೊಲೀಸ್ ತನಿಖೆಯಲ್ಲಿ ಪತ್ತೆಯಾದ ಮಾಹಿತಿಯ ಪ್ರಕಾರ, ಸಮೀರಾ ಫಾತಿಮಾ ವೃತ್ತಿಯಿಂದ ಶಿಕ್ಷಕಿ ಆಗಿದ್ದರೂ, ಕಳೆದ 15 ವರ್ಷಗಳಲ್ಲಿ ಹಲವು ಪುರುಷರನ್ನು ಮದುವೆಯಾಗಿ ಹಣ ವಂಚನೆ ಮಾಡುವ ಗ್ಯಾಂಗ್‌ನೊಂದಿಗೆ ಸೇರಿ ಈ ಕೃತ್ಯಗಳಲ್ಲಿ ತೊಡಗಿದ್ದಾಳೆ ಎನ್ನಲಾಗಿದೆ.

ಈಕೆ ಮುಖ್ಯವಾಗಿ ಮುಸ್ಲಿಂ ಸಮುದಾಯದ ಶ್ರೀಮಂತ ಮತ್ತು ವಿವಾಹಿತ ಪುರುಷರನ್ನೇ ಈ ಮಹಿಳೆ (Luteri Dulhan) ಟಾರ್ಗೆಟ್ ಮಾಡುತ್ತಿದ್ದಳು. ಪ್ರೀತಿಯ ಹೆಸರಿನಲ್ಲಿ ನಿಕಟತೆ ಸಂಬಂಧ ಸಾಧಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ವಿಧಾನವನ್ನು ಈಕೆ ಅಳವಡಿಸಿಕೊಂಡಿದ್ದಾಳೆ.

50 ಲಕ್ಷಕ್ಕೂ ಹೆಚ್ಚು ಹಣ ವಂಚನೆ :

ಈ Luteri Dulhan ಸಮೀರಾ ವಿರುದ್ಧ 2023ರ ಮಾರ್ಚ್‌ನಲ್ಲಿ ಗುಲಾಂ ಎಂಬ ವ್ಯಕ್ತಿ ಪೊಲೀಸ್ ದೂರು ನೀಡಿದ್ದು, ಈಕೆ 2010ರಿಂದ ಈವರೆಗೆ ಸುಮಾರು 8 ಪುರುಷರೊಂದಿಗೆ ಮದುವೆಯಾಗಿದ್ದು, ಒಟ್ಟು ರೂ.50 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!

ಅಲ್ಲದೆ, ಈ ಮಹಿಳೆ (Luteri Dulhan) ಕೆಲವರಿಂದ ಬ್ಯಾಂಕ್‌ ಮೂಲಕ, ಕೆಲವರಿಂದ ನಗದು ರೂಪದಲ್ಲಿ ಹಣವನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ. ಪೊಲೀಸ್ ತನಿಖೆಯ ವೇಳೆ ಇಲ್ಲಿಯವರೆಗೆ ರೂ.10 ಲಕ್ಷದವರೆಗೆ ದೃಢ ಸಾಬೀತುಗಳು ಸಿಕ್ಕಿವೆ.

ವಂಚನೆಗಾಗಿ ‘ಸಹಾನುಭೂತಿ ನಾಟಕ’ :

ಪೊಲೀಸರ ಪ್ರಕಾರ, ಈಕೆ (Luteri Dulhan) ತನ್ನನ್ನು ತಾನು “ವಿಚ್ಛೇದಿತ” ಅಸಹಾಯಕಿ ಎಂದು ಪರಿಚಯಿಸಿ, “ನಾನು ಎರಡನೇ ಹೆಂಡತಿಯಾಗಿ ಇರಲು ಸಿದ್ಧ” ಎಂದು ಹೇಳಿ ಪುರುಷರ ಸಹಾನುಭೂತಿಯನ್ನು ಸೆಳೆದುಕೊಂಡಿದ್ದಾಳೆ. ಮದುವೆ ಆದ ಒಂದೆರಡು ವಾರಗಳಲ್ಲೇ ಜಗಳ ಆರಂಭಿಸಿ ನಂತರ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ನೀಡಿ, ಸೇಟಲ್ಮೆಂಟ್ ಮೂಲಕ ದೊಡ್ಡ ಮೊತ್ತದ ಹಣ ವಸೂಲಿ ಮಾಡುತ್ತಿದ್ದಳು.

9ನೇ ಶಿಕಾರಿ ವೇಳೆ ಚಹಾ ಅಂಗಡಿಯಿಂದ ಬಂಧನ :

ಪೊಲೀಸ್ ಇಲಾಖೆ ಸಮೀರಾ (Luteri Dulhan) ಪತ್ತೆ ಹಚ್ಚಲು ಹಲವು ತಿಂಗಳುಗಳಿಂದ ಶ್ರಮಿಸುತ್ತಿತ್ತು. ಕೊನೆಗೆ ನಾಗಪುರದ ಸಿವಿಲ್ ಲೈನ್ಸ್ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ತನ್ನ ಮುಂದಿನ ಟಾರ್ಗೆಟ್‌ನೊಂದಿಗೆ ಭೇಟಿಯಾಗಿ ಚಹಾ ಕುಡಿಯುತ್ತಿದ್ದಾಗ ಪೊಲೀಸರು ಈಕೆಯನ್ನು ಬಂಧಿಸಿದರು.

ಈ ಪ್ರಕರಣ ಬೆಳಕಿಗೆ ಬಂದ ನಂತರ, ಇನ್ನೂ ಹಲವಾರು ಪುರುಷರು ತವು ಮೋಸ ಹೋದ ಬಗ್ಗೆ ಹಂಚಿಕೊಳ್ಳಲು ಮುಂದಾಗುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈಕೆ (Luteri Dulhan) ಇನ್ನಷ್ಟು ಜನರನ್ನು ಶಿಕಾರ ಮಾಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಪ್ರಸ್ತುತ ಈಕೆ ವಿರುದ್ಧ ಹೆಚ್ಚಿನ ಪ್ರಕರಣಗಳ ತನಿಖೆ ಮುಂದುವರೆದಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments