Sunday, July 20, 2025

Janaspandhan News

HomeHealth & FitnessBloating : ನಿತ್ಯವೂ ಗ್ಯಾಸ್ಟ್ರಿಕ್ ಕಾಡುತ್ತಿದೆಯಾ? ನೀವು ಸೇವಿಸುತ್ತಿರುವ ಈ ಆಹಾರಗಳೇ ಕಾರಣವಾಗಬಹುದು!
spot_img
spot_img

Bloating : ನಿತ್ಯವೂ ಗ್ಯಾಸ್ಟ್ರಿಕ್ ಕಾಡುತ್ತಿದೆಯಾ? ನೀವು ಸೇವಿಸುತ್ತಿರುವ ಈ ಆಹಾರಗಳೇ ಕಾರಣವಾಗಬಹುದು!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಇದೀಗ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳೆಂದರೆ ಹೊಟ್ಟೆ ಉಬ್ಬರಿಕೆ (Bloating), ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ. ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಕಾರಣವಾದರೂ ಏನು.?

ಈ ಸಮಸ್ಯೆಗೆ ಮೂಲ ಕಾರಣ ನಾವೆ ಸೇವಿಸುತ್ತಿರುವ ಆಹಾರ ಪದ್ಧತಿ ಮತ್ತು ಜೀವನ ಶೈಲಿ. ಕೆಲವೊಮ್ಮೆ ಆರೋಗ್ಯಕರವೆಂದು ನಂಬಿ ಸೇವಿಸುವ ಕೆಲವೊಂದು ಆಹಾರಗಳೂ ಕೂಡಾ ಈ Bloating ಸಮಸ್ಯೆಗೆ ಕಾರಣವಾಗಬಹುದು ಎಂಬುದು ಅಚ್ಚರಿಯ ಸಂಗತಿಯೇ ಸರಿ.

ಮನೆಯಲ್ಲಿ ತಾಯಿಯ ಕೈಯಿಂದ ತಯಾರಾಗುವ ಬಿಸಿಬಿಸಿ ಅನ್ನ, ಸಾರು, ಪಲ್ಯ ಸೇವಿಸಿ ಮಲಗಿದರೆ ನಿದ್ರೆ ಚೆನ್ನಾಗಿರುತ್ತದೆ. ಆದರೆ ಹೊರಗಡೆ, ವಿಶೇಷವಾಗಿ ಹೋಟೆಲ್ ಅಥವಾ ರಸ್ತೆ ಬದಿ ಆಹಾರ ಸೇವಿಸಿದರೆ, ಕೆಲವೇ ನಿಮಿಷಗಳಲ್ಲಿ ಹೊಟ್ಟೆ Bloating ತೊಂದರೆ ಶುರುವಾಗಬಹುದು.

ಇದನ್ನು ಓದಿ : ಮಾಲ್‌ನಲ್ಲಿ Fire disaster : ಮಹಿಳೆಯರು, ಮಕ್ಕಳು ಸೇರಿ 50ಕ್ಕೂ ಹೆಚ್ಚು ಮಂದಿ ಸಾವು.!

ಜೊತೆಗೆ ನಮ್ಮ ಮನೆಯಲ್ಲಿ ತಯಾರಿಸುವ ಆಹಾರದ ಗುಣಮಟ್ಟ, ಅದರಲ್ಲಿರುವ ಕೃತಕ ಪದಾರ್ಥಗಳು, ಎಣ್ಣೆಯ ಮರುಬಳಕೆ ಇವೆಲ್ಲವೂ ನಮ್ಮ ಜೀರ್ಣಕ್ರಿಯೆಗೇ ಸಮಸ್ಯೆ ಉಂಟುಮಾಡಬಹುದು.

ಈ ಆಹಾರ ಪದಾರ್ಥಗಳೆ ನಮ್ಮ ಹೊಟ್ಟೆ ಉಬ್ಬರಕ್ಕೆ (Bloating) ಕಾರಣವಾಗಬಹುದು :
1. ಹಣ್ಣುಗಳು ಮತ್ತು ತರಕಾರಿಗಳು :

ಹಣ್ಣು, ತರಕಾರಿಗಳ ಪೋಷಕಾಂಶ ತುಂಬಿರುವುದು ನಿಸ್ಸಂಶಯ. ಆದರೆ, ಕೆಲವೊಂದು ಹಣ್ಣುಗಳು ಮತ್ತು ತರಕಾರಿಗಳ ಸೇವನೆಯ ಬಳಿಕ ಕೆಲವರಿಗೆ ಹೊಟ್ಟೆ ಉಬ್ಬರ (Bloating) ವಾಗುವುದು ಕಾಣಿಸಿಕೊಳ್ಳಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ:

  • ಅತಿಯಾದ ಫೈಬರ್ : ಹೆಚ್ಚು ಫೈಬರ್ ಹೊಂದಿರುವ ಹಣ್ಣುಗಳು ಜೀರ್ಣಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

  • ಸಂಕೀರ್ಣ ಕಾರ್ಬೋಹೈಡ್ರೇಟುಗಳು : ಇವು ಜೀರ್ಣಾಗ್ನಿಗೆ ಲಭ್ಯವಿಲ್ಲದ ಕಾರಣ, ಬಾಕ್ಟೀರಿಯಾಗಳಿಂದ ಹದಗೆಡುತ್ತವೆ. ಪರಿಣಾಮವಾಗಿ ಅನಿಲ ಉಂಟಾಗಿ ಹೊಟ್ಟೆ ಉಬ್ಬರ (Bloating) ಆಗುತ್ತದೆ.

ಇದನ್ನು ಓದಿ : Car – bike collision : ಒಂದೇ ಕುಟುಂಬದ 3 ಮಂದಿ ಸೇರಿ 7 ಜನರ ದುರ್ಮರಣ.!
2. FODMAP ಆಹಾರಗಳು :

SIBO ಅಥವಾ IBS (ಇರಿಟಬಲ್ ಬೌವಲ್ ಸಿಂಡ್ರೋಮ್) ಸಮಸ್ಯೆ ಇರುವವರು ಈ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉಬ್ಬರ ಮತ್ತಷ್ಟು ಹೆಚ್ಚಾಗಬಹುದು:

  • ಹೂಕೋಸು, ಎಲೆಕೋಸು, ಬ್ರೊಕೊಲಿ : ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಜಾಸ್ತಿ ಇದ್ದುದ್ದರಿಂದ ಇದು ಜೀರ್ಣವಾಗದ ಕಾರಣ ಅನಿಲ ಉಂಟಾಗುತ್ತದೆ.

  • ಬೀನ್ಸ್ ಮತ್ತು ದ್ವಿದಳ ಧಾನ್ಯಗಳು : ಇವು FODMAP ಫುಡ್‌ಗಳಾಗಿ ಪರಿಗಣಿಸಲ್ಪಡುತ್ತವೆ.

3. ಈರುಳ್ಳಿ ಮತ್ತು ಬೆಳ್ಳುಳ್ಳಿ :

ಇವುಗಳಲ್ಲಿ ‘ಫ್ರಕ್ಟಾನ್ಸ್’ ಎಂಬ ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶವಿದೆ. ಇದು ಕೆಲವರಿಗೆ ಸಂಪೂರ್ಣವಾಗಿ ಜೀರ್ಣವಾಗದೇ ಅನಿಲ ಉಂಟುಮಾಡಬಹುದು.

4. ಹಣ್ಣುಗಳಲ್ಲಿ ಫೈಬರ್ ಹಾಗೂ ಸೋರ್ಬಿಟಾಲ್ :
  • ಸೇಬು, ಪಿಯರ್ಸ್ : ಪೆಕ್ಟಿನ್ ಎಂಬ ಫೈಬರ್ ಅಂಶ ಇರುವ ಕಾರಣ ಜೀರ್ಣಕ್ರಿಯೆಗೆ ತೊಂದರೆ.

  • ಪೀಚ್, ಚೆರ್ರಿ, ಪ್ಲಮ್ : ಇವುಗಳಲ್ಲಿ ಸೋರ್ಬಿಟಾಲ್ ಅಂಶ ಹೆಚ್ಚು, ಇದು ಹೊಟ್ಟೆ ಉಬ್ಬರ (Bloating) ಕ್ಕೆ ಕಾರಣವಾಗಬಹುದು.

ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ತಜ್ಞರ ಸಲಹೆ ಏನು :
  • ನಿಮ್ಮ ದೇಹಕ್ಕೆ ಯಾವ ಆಹಾರವು ಸರಿಯಾಗುತ್ತದೆ, ಯಾವುದರಿಂದ ತೊಂದರೆ ಆಗುತ್ತದೆಯೋ ಅನ್ನೋದನ್ನು ಗಮನಿಸಿ ಡೈಟ್‌ ಪ್ಲಾನ್ ರೂಪಿಸಿಕೊಳ್ಳುವುದು ಉತ್ತಮ.

  • ಹೊರಗಡೆ ಊಟ ಮಾಡುವ ಬದಲು ಮನೆಯಲ್ಲಿ ತಯಾರಾದ ತಾಜಾ ಆಹಾರ ಸೇವಿಸುವುದು ಉತ್ತಮ.

  • ಹೆಚ್ಚು ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಇರುವ ಆಹಾರ ಸೇವನೆಯ ನಂತರ ದೇಹದ ಪ್ರತಿಕ್ರಿಯೆ ಗಮನಿಸಿ, ಅವುಗಳನ್ನು ನಿಯಂತ್ರಿತವಾಗಿ ಸೇವಿಸಬೇಕು.

Note :  ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.


Home remedies : “ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮನೆಮದ್ದುಗಳಿವು.!”

Home remedies

ಜನಸ್ಪಂದನ ನ್ಯೂಸ್‌, ಆರೋಗ್ಯ : ಕೊಲೆಸ್ಟ್ರಾಲ್ (Cholesterol) ಮಟ್ಟ ಹೆಚ್ಚಾದರೆ ತುಂಬಾ ಅಪಾಯಕಾರಿ, ಈ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿವೆ ಕೆಲ ಮನೆಮದ್ದು (Home remedies) ಗಳು.

ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ (Cholesterol) ಅಂದರೆ ಕೆಟ್ಟ ಕೊಬ್ಬಿನ ಪ್ರಮಾಣ ಜಾಸ್ತಿಯಾದರೆ ದೇಹಕ್ಕೆ ತುಂಬಾ ಅಪಾಯಕಾರಿ. ಕೆಲವು ಸಂದರ್ಭಗಳಲ್ಲಿ ಈ ಸಮಸ್ಯೆಗೆ ಔಷಧೋಪಚಾರ ಅನಿವಾರ್ಯವಾದರೂ, ಸರಳ ಮತ್ತು ಆರೋಗ್ಯಕರ ಜೀವನಶೈಲಿ ಬದಲಾವಣೆಯ (Home remedies) ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದಾಗಿದೆ.

ಇದನ್ನು ಓದಿ : Private video threat : ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳೆಯ ಪತಿ ಬಂಧನ.!

ನಿಮ್ಮ ಬ್ಲಡ್ ಟೆಸ್ಟ್‌ನಲ್ಲಿ ಕೊಲೆಸ್ಟ್ರಾಲ್ (Cholesterol) ಮಟ್ಟ ಹೆಚ್ಚಾಗಿರುವುದು ಕಂಡುಬಂದರೆ ಆತಂಕಪಡುವ ಅಗತ್ಯವಿಲ್ಲ. ಆದರೆ, ಒಂದು ವೇಳೆ ಸಕಾಲದಲ್ಲಿ ಗಮನಹರಿಸದೇ ಬಿಟ್ಟರೆ ಇದು ಹೃದಯಾಘಾತ ಅಥವಾ ಸ್ಟ್ರೋಕ್‌ಗೆ ದಾರಿ ಮಾಡಿಕೊಡಬಹುದು. ಈಗ ಮನೆಮದ್ದು (Home remedies) ಗಳ ಬಗ್ಗೆ ತಿಳಿಯೋಣ.

ಈ ಆಹಾರ ಪದ್ಧತಿಗಳು (Home remedies) ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತವೆ :
  • ಹೆಚ್ಚು ಕೊಬ್ಬು ಇರುವ ಆಹಾರಗಳಿಂದ ದೂರಿರಿ : ರೆಡ್ ಮೀಟ್, ಸಂಪೂರ್ಣ ಹಾಲು, ಚೀಸ್, ಮೊಸರು, ತೆಂಗಿನ ಎಣ್ಣೆ, ಪಾಮ್ ಆಯಿಲ್ ಇವುಗಳಲ್ಲಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಹೆಚ್ಚು ಇರುತ್ತದೆ. ಇವುಗಳ ಸೇವನೆಯನ್ನು ನಿಯಂತ್ರಿಸಿ.
  • ಬೇಕರಿ ತಿನಿಸುಗಳನ್ನು ತಗ್ಗಿಸಿ : ಕೇಕ್, ಫ್ರೆಂಚ್ ಫ್ರೈಸ್, ಬಿಸ್ಕತ್ತುಗಳಲ್ಲಿ ಟ್ರಾನ್ಸ್ ಕೊಬ್ಬುಗಳು ಇರುತ್ತವೆ. ನಿಯಂತ್ರಿತ ಸೇವನೆಯೇ ಆರೋಗ್ಯಕ್ಕೆ ಲಾಭದಾಯಕ.
  • ಸೊಲ್ಯುಬಲ್ ಫೈಬರ್ ಆಹಾರ ಸೇವನೆ : ಓಟ್ಸ್, ಬೀನ್ಸ್, ಬೇಳೆ, ಸೇಬು, ಕ್ಯಾರೆಟ್, ಸಿಹಿಗೆಣಸು, ಅವಕಾಡೋ, ಬೀಜಗಳು ಇತ್ಯಾದಿಗಳನ್ನು ದಿನಚರಿಯಲ್ಲಿ ಸೇರಿಸಿ. ಇವು ದೇಹದಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆಯುತ್ತವೆ.
ಇದನ್ನು ಓದಿ : Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!
ವ್ಯಾಯಾಮದ ಮಾಡಿ :

ಪ್ರತಿ ವಾರ ಕನಿಷ್ಠ 150 ನಿಮಿಷಗಳ ಏರೋಬಿಕ್ ವ್ಯಾಯಾಮ ಮಾಡುವ ಗುರಿ ಇಟ್ಟುಕೊಳ್ಳಿ. ಬಿರುಸು ನಡಿಗೆ, ಈಜು, ಸೈಕ್ಲಿಂಗ್, ಜಾಗಿಂಗ್‌ನಂತಹ ವ್ಯಾಯಾಮಗಳು ಕೆಟ್ಟ ಕೊಬ್ಬು ಕರಗಿಸಿ ತೂಕವನ್ನು ಸಹ ತಗ್ಗಿಸುತ್ತವೆ.

ಆಲ್ಕೋಹಾಲ್ ಸೇವನೆ ತಪ್ಪಿಸಿ :

2024ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದವರಿಗೆ ಹೃದಯರೋಗದ ಅಪಾಯ ಶೇಕಡಾ 23ರಷ್ಟು ಇಳಿದಿದೆ. ಆದ್ದರಿಂದ, ಮದ್ಯಪಾನವನ್ನ ಸಂಪೂರ್ಣವಾಗಿ ತ್ಯಜಿಸುವುದು ಆರೋಗ್ಯಕರ ಆಯ್ಕೆಯಾಗಿದೆ.

ಬೆಳ್ಳುಳ್ಳಿ ಸೇವನೆ :

ಬೆಳ್ಳುಳ್ಳಿಯಲ್ಲಿ ಇರುವ ನೈಸರ್ಗಿಕ ಸಂಯುಕ್ತಗಳು LDL ಕೊಲೆಸ್ಟ್ರಾಲ್‌ (Cholesterol) ನ್ನು ಕಡಿಮೆ ಮಾಡಲು ನೆರವಾಗುತ್ತವೆ. ದಿನಕ್ಕೆ ಒಂದು ಅಥವಾ ಎರಡು ಬೆಳ್ಳುಳ್ಳಿ ಹವನಗಳನ್ನು ಆಹಾರದಲ್ಲಿ ಬಳಸುವುದು ಉತ್ತಮ.

ಹೀಗೆ ಕೆಲ ಸರಳ ಪದ್ದತಿ (Home remedies) ಯಿಂದ ನಮ್ಮ ದೇಹದಲ್ಲಿ ಹೆಚ್ಚಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 17 ರ ದ್ವಾದಶ ರಾಶಿಗಳ ಫಲಾಫಲ.!
ಸಂಪಾದಕೀಯ :

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಯಾವಾಗಲೂ ಮಾತ್ರೆಗಳ ಅವಲಂಬನೆಯ ಅಗತ್ಯವಿಲ್ಲ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ನಶಾ ಪದಾರ್ಥಗಳಿಂದ ದೂರವಿರುವುದು ಮತ್ತು ನೈಸರ್ಗಿಕ ಮನೆಮದ್ದುಗಳ (Home remedies) ಸಹಾಯದಿಂದ ದೀರ್ಘಕಾಲಿಕ ಫಲಿತಾಂಶಗಳನ್ನು ಪಡೆಯಬಹುದು.

ಆರೋಗ್ಯದಲ್ಲಿ ತೊಂದರೆ ಹೆಚ್ಚು ಆಗುತ್ತಿರುವುದು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಅಗತ್ಯ.

Note :  ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments