ಜನಸ್ಪಂದನ ನ್ಯೂಸ್, ಆರೋಗ್ಯ : ಮೆಂತ್ಯ (fenugreek) ಕೇವಲ ಅಡುಗೆಯಲ್ಲಿ ಸುವಾಸನೆ ನೀಡುವ ಮಸಾಲೆ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಮೆಂತ್ಯದಲ್ಲಿ ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಂ, ವಿಟಮಿನ್-ಡಿ ಮತ್ತು ಸಿ ಮುಂತಾದ ಪೋಷಕಾಂಶಗಳು ತುಂಬಿ ತುಳುಕುತ್ತವೆ. ಈ ಅಂಶಗಳು ದೇಹವನ್ನು ಹಲವಾರು ಕಾಯಿಲೆಗಳಿಂದ ದೂರವಿಡಲು ಸಹಕಾರಿಯಾಗುತ್ತವೆ.
Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!
ಮೆಂತ್ಯ (fenugreek) ದ ಕೆಲವು ಸಂಯುಕ್ತಗಳು ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುತ್ತವೆ, ಇದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಾಧ್ಯವಾಗುತ್ತದೆ. ಕರಗುವ ಫೈಬರ್ ರಕ್ತದಲ್ಲಿ ಸಕ್ಕರೆಯ ಹಠಾತ್ತನೆ ಏರಿಕೆಯನ್ನು ತಡೆಯುತ್ತದೆ.
ಹೀಗಾಗಿ, ಪ್ರತಿದಿನ ಎರಡು ವಾರಗಳ ಕಾಲ ಮೆಂತ್ಯ ನೀರನ್ನು ಸೇವಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದನ್ನು ತಿಳಿಯೋಣ.
Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
1. ತೂಕ ನಿಯಂತ್ರಣ :
ಮೆಂತ್ಯ (fenugreek) ನೀರು ಜೀರ್ಣಾಂಗಕ್ಕೆ ಒಳ್ಳೆಯದು. ಹೆಚ್ಚಿನ ಫೈಬರ್ ಹೊಟ್ಟೆ ಬೇಗನೆ ತುಂಬಿದ ಅನುಭವ ನೀಡುತ್ತದೆ, ಹಸಿವು ಕಡಿಮೆಯಾಗುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಜೊತೆಗೆ ಮಲಬದ್ಧತೆ, ಆಮ್ಲೀಯತೆ ಹಾಗೂ ಹೊಟ್ಟೆ ನೋವು ನಿವಾರಣೆಯಲ್ಲಿಯೂ ಸಹಕಾರಿ.
2. ಹೃದಯದ ಆರೋಗ್ಯ :
ಮೆಂತ್ಯ (fenugreek) ನೀರಿನ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
Astrology : ಹೇಗಿದೆ ಗೊತ್ತಾ.? ಅಗಷ್ಟ 24 ರ ದ್ವಾದಶ ರಾಶಿಗಳ ಫಲಾಫಲ.!
3. ಹೊಳೆಯುವ ಚರ್ಮ ಮತ್ತು ಕೂದಲು :
ಮೆಂತ್ಯ (fenugreek) ನೀರಿನಲ್ಲಿ ಇರುವ ಆಂಟಿ-ಆಕ್ಸಿಡೆಂಟ್ಸ್ ಚರ್ಮದ ಟೋನ್ ಸುಧಾರಿಸುತ್ತವೆ, ಮೊಡವೆ ಮತ್ತು ಕಲೆ ಕಡಿಮೆ ಮಾಡುತ್ತವೆ. ನೈಸರ್ಗಿಕ ಹೊಳಪನ್ನು ನೀಡುವ ಜೊತೆಗೆ ಕೂದಲಿನ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ, ತಲೆಹೊಟ್ಟು ನಿಯಂತ್ರಿಸುತ್ತದೆ.
4. ರೋಗನಿರೋಧಕ ಶಕ್ತಿ :
ಮೆಂತ್ಯ (fenugreek) ನೀರಿನಲ್ಲಿರುವ ಫೈಟೊಈಸ್ಟ್ರೊಜೆನ್‌ಗಳು ಹಾರ್ಮೋನ್‌ಗಳ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ. ಫ್ಲೇವನಾಯ್ಡ್ ಹಾಗೂ ಪಾಲಿಫಿನಾಲ್‌ಗಳಂತಹ ಆಂಟಿ-ಆಕ್ಸಿಡೆಂಟ್ಸ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳಿಂದ ರಕ್ಷಣೆ ನೀಡುತ್ತವೆ.
Disclaimer : This article is based on reports and information available on the internet. Janaspandhan News is not affiliated with it and is not responsible for it.
——— ———- ———– ———– ————- ———-
KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!
ಜನಸ್ಪಂದನ ನ್ಯೂಸ್, ನೌಕರಿ : ಬೆಂಗಳೂರು ಮೂಲದ ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF) 2025ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ KSCCF ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSCCF ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Tests : 40 ವರ್ಷದ ನಂತರ ಪುರುಷರು ಮಾಡಿಸಿಕೊಳ್ಳಲೇ ಬೇಕಾದ ಪ್ರಮುಖ ಆರೋಗ್ಯ ತಪಾಸಣೆಗಳಿವು.!
ನೇಮಕಾತಿ ವಿವರಗಳು :
- ಇಲಾಖೆ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF).
- ಒಟ್ಟು ಹುದ್ದೆಗಳು : 34.
- ಹುದ್ದೆಗಳ ಹೆಸರು : ಮಾರಾಟ ಸಹಾಯಕ ಮತ್ತು ಇತರೆ ಹುದ್ದೆಗಳು.
- ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ.
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್.
ವೇತನ ಶ್ರೇಣಿ :
- ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.12,500 ರಿಂದ ರೂ.29,600/- ವರೆಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ.
ವಯೋಮಿತಿ :
- ಕನಿಷ್ಠ ವಯಸ್ಸು : 18 ವರ್ಷ.
- ಗರಿಷ್ಠ ವಯಸ್ಸು : 35 ವರ್ಷ.
KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 15000+ ಹುದ್ದೆಗಳ ನೇಮಕಾತಿ.!
ಅರ್ಜಿ ಶುಲ್ಕ :
- SC/ST/ಪ್ರವರ್ಗ-I/PWD ಅಭ್ಯರ್ಥಿಗಳು : ರೂ.500/-
- ಇತರೆ ಎಲ್ಲಾ ಅಭ್ಯರ್ಥಿಗಳು : ರೂ.1000/-
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC / 10ನೇ ತರಗತಿ, ಫಾರ್ಮಸಿಯಲ್ಲಿ ಡಿಪ್ಲೊಮಾ ಅಥವಾ ಪದವಿ ಪೂರೈಸಿರಬೇಕು.
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ KSCCF ಅಧಿಕೃತ ಅಧಿಸೂಚನೆಯ ಪ್ರಕಾರ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ KSCCF ವೆಬ್‌ಸೈಟ್‌ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಹಾಗೂ ಎಚ್ಚರಿಕೆಯಿಂದ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅವಶ್ಯವಿದ್ದರೆ ಮಾತ್ರ).
- ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ (Printout) ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ : 16 ಆಗಸ್ಟ್ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025.
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಪ್ರಮುಖ ಲಿಂಕ್‌ಗಳು :
- ಅಧಿಸೂಚನೆ (PDF) : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿಗಾಗಿ ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ KSCCF ವೆಬ್‌ಸೈಟ್ : virtualofficeerp.com
👉 Disclaimer : The above given information is available On online, candidates should check it properly before applying. This is for information only.