ಶುಕ್ರವಾರ, ಜನವರಿ 2, 2026

Janaspandhan News

HomeInternational NewsAir Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್‌ ಸಾವು.!
spot_img
spot_img
spot_img

Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್‌ ಸಾವು.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪೋಲೆಂಡ್‌ನ ಸೆಂಟ್ರಲ್ ಭಾಗವಾದ ರಾಡಾಮ್‌ನಲ್ಲಿ ಏರ್‌ಶೋ (Air Show) ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ಪೈಲಟ್ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ಪತನಗೊಳ್ಳುವ ಕೊನೆಯ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆಯ ವಿವರ :

ಜಾಗತಿಕ ಸಮಯ ಸಂಜೆ 17.30ಕ್ಕೆ (ಭಾರತೀಯ ಸಮಯ ರಾತ್ರಿ 11 ಗಂಟೆ ಸುಮಾರಿಗೆ) ನಡೆದ ಈ ಅಪಘಾತದಲ್ಲಿ, ಫೈಟರ್ ಜೆಟ್ ಬ್ಯಾರೆಲ್ ರೋಲ್ ಏರೋಬ್ಯಾಟಿಕ್ ಸಾಹಸ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿತು. ರನ್‌ವೇಯಲ್ಲಿ ಸ್ಕಿಡ್ ಆಗಿ ಬಿದ್ದ ನಂತರ ವಿಮಾನ ಬೆಂಕಿಗಾಹುತಿಯಾಗಿ ಸ್ಫೋಟಗೊಂಡ ದೃಶ್ಯವೂ ವಿಡಿಯೋದಲ್ಲಿ ಕಾಣಿಸಿದೆ.

ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!

ಈ ವಿಮಾನವು ಪೋಜ್ನಾನ್ ಬಳಿಯ 31ನೇ ಟ್ಯಾಕ್ಟಿಕಲ್ ಏರ್‌ಬೇಸ್‌ಗೆ ಸೇರಿದ್ದು, ಅಪಘಾತದಲ್ಲಿ ಯಾವುದೇ ಪ್ರೇಕ್ಷಕರು ಗಾಯಗೊಂಡಿಲ್ಲ ಎಂದು ಪೋಲೆಂಡ್ ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ಏರ್‌ಶೋ (Air Show) ದ ಘಟನೆಯನ್ನು ದೃಢಪಡಿಸಿದೆ.

ಸರ್ಕಾರದ ಪ್ರತಿಕ್ರಿಯೆ :

ಪೋಲೆಂಡ್‌ನ ಉಪ ಪ್ರಧಾನ ಮಂತ್ರಿ ವ್ಲಾಡಿಸ್ಲಾ ಕೊಸಿನಿಯಾಕ್ ಕಮಿಸ್ಜ್ ಈ ಘಟನೆಗೆ ಪ್ರತಿಕ್ರಿಯಿಸಿ, ವಾಯುಪಡೆಯಿಗೆ ದೊಡ್ಡ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ತಮ್ಮ ದೇಶಕ್ಕೆ ಸಮರ್ಪಣೆ ಮತ್ತು ಧೈರ್ಯದಿಂದ ಸೇವೆ ಸಲ್ಲಿಸುತ್ತಿದ್ದ ಪೈಲಟ್ ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬ ಮತ್ತು ಆಪ್ತರಿಗೆ ನನ್ನ ಆಳವಾದ ಸಂತಾಪ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Belagavi ಸಮೀಪ ಬಸ್ ಪಲ್ಟಿ : ಇಬ್ಬರ ದುರ್ಮರಣ, 9 ಮಂದಿಗೆ ಗಾಯ.!
ಪರಿಣಾಮ :

ಘಟನೆ ಹಿನ್ನೆಲೆಯಲ್ಲಿ ಈ ವಾರಾಂತ್ಯದಲ್ಲಿ ನಡೆಯಬೇಕಿದ್ದ “ಏರ್‌ಶೋ (Air Show) ರಾಡಮ್ 2025” ಕಾರ್ಯಕ್ರಮವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.

ಏರ್‌ಶೋ (Air Show) ಅಭ್ಯಾಸದ ವಿಡಿಯೋ :

https://twitter.com/i/status/1961178368105484796


harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?

harassing

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಯುವತಿಯರನ್ನು ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ಯುವಕರ ಗತಿ ಏನಾಯಿತು ಅಂತ ನೋಡಲೇ ಬೇಕಾದ ವಿಡಿಯೋ ಒಂದನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಾ.

ಹರಿಯಾಣದ ಪಾಣಿಪತ್ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ತೊಡೆತಟ್ಟುವ ಘಟನೆ ನಡೆದಿದ್ದು, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!

ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಬಂದ ಇಬ್ಬರು ಹಿಂದಿನಿಂದ ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದರು. ಬಳಿಕ ಅವರು ವೇಗವಾಗಿ ಪರಾರಿಯಾದರೂ, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

https://twitter.com/i/status/1960190360849699201

ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ವಿಡಿಯೋ ಹರಿದಾಡಿದ ಕೆಲವೇ ಗಂಟೆಗಳಲ್ಲಿ ಪಾಣಿಪತ್ ಪೊಲೀಸರು ತ್ವರಿತ ಕ್ರಮ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದರು.

ಪೊಲೀಸರ ಕ್ರಮ :

ಬಂಧನದ ನಂತರ, ಆರೋಪಿಗಳಿಗೆ ಶಿಕ್ಷೆ ನೀಡಲಾಗಿದ್ದು, ಅವರನ್ನು ಕುಂಟುತ್ತಾ ನಡೆಯುತ್ತಿರುವ ದೃಶ್ಯಾವಳಿಯನ್ನು ಪಾಣಿಪತ್ ಪೊಲೀಸರು ತಮ್ಮ ಅಧಿಕೃತ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ಎಸ್ಪಿ ಪ್ರತಿಕ್ರಿಯೆ :

ಪಾಣಿಪತ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಭೂಪೇಂದ್ರ ಸಿಂಗ್ (IPS) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ಯುವತಿಯರನ್ನು ಹಿಂದಿನಿಂದ ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಮಹಿಳೆಯರ ಸುರಕ್ಷತೆ ನಮ್ಮ ಪ್ರಾಥಮಿಕ ಗುರಿ,” ಎಂದು ತಿಳಿಸಿದ್ದಾರೆ.

https://twitter.com/i/status/1960003702552424925

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments