ಜನಸ್ಪಂದನ ನ್ಯೂಸ್, ಆರೋಗ್ಯ : ನಿಮ್ಮ ಲಿವರ್ ಡ್ಯಾಮೇಜ್ (Liver damage) ಆಗಿದೇಯೇ.? ಹಾಗಾದ್ರೆ ಈ ತರಕಾರಿ 3 ತಿಂಗಳು ತಿನ್ನಿರಿ, ಡ್ಯಾಮೇಜ್ ಆಗಿರುವ ಲಿವರ್ (Liver) ಸರಿಯಾಗುತ್ತೇ.!
ಕೊಬ್ಬಿನ ಪಿತ್ತಜನಕಾಂಗ ಎಂದರೆ ಯಕೃತ್ತಿ (Liver) ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಮಧುಮೇಹ ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗವು ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಫ್ಯಾಟಿ ಲಿವರ್ (Liver) ರೋಗವು ಎರಡು ರೀತಿಯಲ್ಲಿ ಸಂಭವಿಸುತ್ತದೆ. ಮೊದಲನೆಯದಾಗಿ, ಅತಿಯಾದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಇದನ್ನು ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ. ಎರಡನೆಯದಾಗಿ, ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುವ ಫ್ಯಾಟಿ ಲಿವರ್. ಇದನ್ನು ನಾನ್-ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
ಫ್ಯಾಟಿ ಲಿವರ್ (Fatty liver) ರೋಗವನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಲಿವರ್ ಸಿರೋಸಿಸ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಆರಂಭಿಕ ಹಂತದಲ್ಲಿದ್ದ ಫ್ಯಾಟಿ ಲಿವರ್ (Fatty liver)ಕಾಯಿಲೆಯನ್ನು ಯಾವುದೇ ಔಷಧಿಗಳಿಲ್ಲದೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಈ ಬಗ್ಗೆ ಇತ್ತೀಚೆಗೆ, ಪ್ರಸಿದ್ಧ ಆಯುರ್ವೇದ ವೈದ್ಯ ಸಲೀಂ ಜೈದಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪುಟದ ವಿಡಿಯೋದಲ್ಲಿ ಅವರು 3 ಜೀವನಶೈಲಿಯ ಬದಲಾವಣೆಗಳನ್ನು ಆಯುರ್ವೇದ ವೈದ್ಯ ಸಲೀಂ ಜೈದಿ ಉಲ್ಲೇಖಿಸಿದ್ದಾರೆ. ಇದನ್ನು ನಿರಂತರವಾಗಿ ಅನುಸರಿಸಿದರೆ ಫ್ಯಾಟಿ ಲಿವರ್ ಸಮಸ್ಯೆ ಕೇವಲ 3 ತಿಂಗಳಲ್ಲಿ ಗುಣವಾಗುತ್ತದೆ ಎಂದು ಹೇಳಲಾಗಿದೆ.
ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಫ್ಯಾಟಿ ಲಿವರ್ ಗುಣಪಡಿಸಲು ಅನುಸರಿಸಬೇಕಾದ ಅಂಶ :
ಸಂಸ್ಕರಿಸಿದ ಆಹಾರ, ಸಕ್ಕರೆ, ಪಿಷ್ಟಯುಕ್ತ ಆಹಾರಗಳು, ಹುರಿದ ಆಹಾರಗಳಿಂದ ಸಂಪೂರ್ಣವಾಗಿ ದೂರವಿದ್ದರೆ, ನಮ್ಮ ಕೆಟ್ಟು ಹೋದ ಯಕೃತ್ತು (liver) ಮತ್ತೆ ತನ್ನ ಮೊದಲಿನ ಸ್ಥಿತಿಗೆ ಮರಳುತ್ತದೆ.
ಆಹಾರದಲ್ಲಿ ಇರಲೇಬೇಕಾದ ವಸ್ತುಗಳು :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ಕುಂಬಳಕಾಯಿ ಅಥವಾ ಬೀಟ್‌ರೂಟ್ ರಸವನ್ನು ಕುಡಿದರೆ, ನಿಮಗೆ ಕೊಬ್ಬಿನ ಯಕೃತ್ತು (liver) ಕಡಿಮೆಯಾಗುತ್ತದೆ.
ಹಾಗೇಯೇ ಮಧ್ಯಾಹ್ನ ಊಟಕ್ಕೆ ಬೇಳೆ, ಗಂಜಿ ಮತ್ತು ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಬೇಕು. ಇದೆಲ್ಲದರ ಜೊತೆಗೆ, ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಅಂದರೆ ಯಕೃತ್ತಿನ ಮೇಲೆ ಹೊರೆಯಾಗದಂತೆ ಹಗುರವಾದ ಆಹಾರವನ್ನೇ ಸೇವಿಸಬೇಕು.
ದೈಹಿಕ ಚಟುವಟಿಕೆ :
ದೇಹದಿಂದ ವಿಷವನ್ನು ತೆಗೆದುಹಾಕುವ ಅಂಗವಾಗಿ ಈ ಯಕೃತ್ತು (liver) ಕೆಲಸ ಮಾಡುತ್ತದೆ. ಒಂದು ವೇಳೆ ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಿಂದ ವಿಷವನ್ನು ತೆಗೆದುಹಾಕುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಆದ್ದರಿಂದ, ದಿನಕ್ಕೆ ಕನಿಷ್ಠ 30 – 45 ನಿಮಿಷಗಳ ಕಾಲ ವಾಕ್ ಮಾಡಬೇಕು. ಯೋಗವನ್ನು ಕೂಡಾ ಮರೆಯದೇ ಮಾಡಬೇಕು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಯಕೃತ್ತ (liver) ನ್ನು ಸಕ್ರಿಯವಾಗಿಡಲು ಹೊಟ್ಟೆಯ ಮೇಲೆ ಲಘು ಮಸಾಜ್ ಮಾಡಿ, ಇದೆಲ್ಲವೂ ತುಂಬಾ ಸಹಾಯಕವಾಗಿದೆ.
ನೈಸರ್ಗಿಕ ಗಿಡಮೂಲಿಕೆ :
ಯಕೃತ್ತಿನ ಕೊಬ್ಬನ್ನು ಕರಗಿಸುವಲ್ಲಿ ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳ ಔಷಧಿಗಳು ಪರಿಣಾಮಕಾರಿ ಎಂದು (ಪ್ರಯೋಜನಕಾರಿ) ಪರಿಗಣಿಸಲಾಗಿದೆ. ರಾತ್ರಿ ಮಲಗುವ ಮುನ್ನ ತ್ರಿಫಲ ಪುಡಿಯನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ, ನೆಲ್ಲಿಕಾಯಿ ಚಹಾ ಕುಡಿಯಿರಿ. ತ್ರಿಫಲ ಪುಡಿ ಮತ್ತು ನೆಲ್ಲಿಕಾಯಿ ಗಿಡಮೂಲಿಕೆಗಳು ಯಕೃತ್ತಿ (liver) ನ ಉರಿಯೂತ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತವೆ.
ಒಟ್ಟಿನಲ್ಲಿ ಹೇಳುವುದೇನೆಂದರೇ, ಈ ಫ್ಯಾಟಿ ಲಿವರ್ ಗುಣಪಡಿಸಲಾಗದ ಕಾಯಿಲೆಯಲ್ಲ. ಸರಿಯಾದ ಸಮಯದಲ್ಲಿ ಗಮನಹರಿಸಿ ಔಷಧಿಗಳ ಬದಲಿಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿದರೆ ಕಂಡಿತ ಈ ರೋಗದಿಂದ ಮುಕ್ತಿ ಪಡೆಯಬಹುದು.
ಈ ಮೇಲೆ ನೀಡಲಾದ ಜೀವನಶೈಲಿಯನ್ನು ವರ್ಷಾನುಗಟ್ಟಲೇ ಮಾಡಬೇಕೆಂದಿಲ್ಲ, ಕೇವಲ 3 ತಿಂಗಳ ಕಾಲ ಮಾಡಿದರೆ ಸಾಕು ಈ ಸಮಸ್ಯೆಯನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು.
Disclaimer : This article is based on reports and information available on the internet. Janaspandhan News is not affiliated with it and is not responsible for it.
ಯುವಕನಿಗೆ ಕಚ್ಚಿದ 5 ನಿಮಿಷದಲ್ಲಿಯೇ ನೆಗೆದುಬಿದ್ದ ವಿಷಕಾರಿ Sneck.!
ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನಿಗೆ ಕಚ್ಚಿದ ಕೇವಲ ಐದೇ ಐದು ನಿಮಿಷದಲ್ಲಿ ಭಾರಿ ವಿಷಕಾರಿ ಹಾವೊಂದು (Sneck) ತಾನೇ ನೆಗೆದುಬಿದ್ದಿ (ಸತ್ತಿರುವ) ರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ವಿಷಪೂರಿತ ಹಾವೊಂದು ಯುವಕನನ್ನು ಕಚ್ಚಿದ 5 ನಿಮಿಷಗಳಲ್ಲಿ ಸಾವನ್ನಪ್ಪಿದ ಅಪರೂಪದಲ್ಲಿ ಅಪರೂಪದ ಮತ್ತು ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಖುದ್ಸೋಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಸದ್ಯ ಯುವಕ ಅಪಾಯದಿಂದ ಪಾರಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗೆ ಭಾರಿ ವಿಷಕಾರಿ ಹಾವಿನ (Poisonous snake) ಕಡಿತದಿಂದ ಪಾರಾದ ಅದೃಷ್ಟವಂತ ಯುವಕನನ್ನು ಬಾಲಘಾಟ್‌ನ ಖುದ್ಸೋಡಿ ಗ್ರಾಮದ 25 ವರ್ಷದ ಸಚಿನ್ ನಾಗಪುರೆ ಎಂದು ಗುರುತಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ : ರಾತ್ರಿ ಈ 6 ಲಕ್ಷಣಗಳು ಕಂಡು ಬರುತ್ತಿವೆಯೇ.? Kidney ಫೇಲ್ಯೂರ್ ಆಗುವ ಮುನ್ಸೂಚನೆ.!
ಮಾಹಿತಿಯ ಪ್ರಕಾರ, 25 ವರ್ಷದ ಯುವಕ ಸಚಿನ್ ನಾಗಪುರೆ, ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ತಮ್ಮ ಜಮೀನಿಗೆ ಹೋಗಿದ್ದರು. ಆ ವೇಳೆ ಸಚಿನ್ ಆಕಸ್ಮಿಕವಾಗಿ ಹಾವಿನ (Sneck) ಮೇಲೆ ಕಾಲಿಟ್ಟರು.
ಹಾವಿನ ಮೇಲೆ ಕಾಲಿಟ್ಟ ಪರಿಣಾಮವಾಗಿ ವಿಷಕಾರಿ ಹಾವು ತುಂಬಾ ಸಿಟ್ಟಿನಿಂದ ಅವರನ್ನು ಕಚ್ಚಿದೆ. ಆದಾಗ್ಯೂ, ಯುವಕನಿಗೆ ಕಚ್ಚಿದ ಹಾವು (Sneck) 5-6 ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ನೋವಿನಿಂದ ಸಾವನ್ನಪ್ಪಿತು.
ತುಂಬಾ ವಿಷಕಾರಿ ಹಾವು (Sneck) :
ವಿಷಕಾರಿ ಹಾವು ತಕ್ಷಣ ಯುವಕ ತನ್ನ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದರು. ಈ ಹಿನ್ನಲೆಯಲ್ಲಿ ಕೂಡಲೇ ಕುಟುಂಬ ಸದಸ್ಯರು ಸ್ಥಳಕ್ಕಾಗಮಿಸಿದ ಅವರು ಹಾವು (Sneck) ಮತ್ತು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ.!
ಇಲ್ಲಿ ಯುವಕನಿಗೆ ಕಚ್ಚಿದ ಹಾವು ಸಾಮಾನ್ಯ ಹಾವಲ್ಲ, ಅದು ಡೊಂಗರ್ಬೆಲಿಯಾ (Dongarbelia) ಹಾವು ಎಂದು ಕುಟುಂಬ ಸದಸ್ಯರು ಹೇಳಿದರು. ಇದು ಅತ್ಯಂತ ವಿಷಕಾರಿಯಾದ ಹಾವೆಂದು (Sneck) ತಿಳಿದು ಬರುತ್ತಿದೆ.
ತಜ್ಞರ ಪ್ರಕಾರ, ಮನುಷ್ಯನನ್ನು ಕಚ್ಚಿದ ನಂತರ ಹಾವು ಸಾಯುವುದು ಅತ್ಯಂತ ಅಪರೂಪ. ಈ ಅಸಾಮಾನ್ಯ ಸಂದರ್ಭದಲ್ಲಿ, ಒಂದೆರಡು ಸಂಭವನೀಯ ಕಾರಣಗಳಿರಬಹುದು ಎಂದಿದ್ದಾರೆ.
ಕಳೆದ 7–8 ವರ್ಷಗಳಿಂದ ಸಚಿನ್, ಚಿಡ್ಚಿಡಿಯಾ, ಪಿಸುಂಡಿ, ಪಲ್ಸಾ, ಜಾಮೂನ್, ಮಾವು, ಟೌರ್, ಆಜನ್, ಕಾರಂಜಿ ಮತ್ತು ಬೇವು ಸೇರಿದಂತೆ ವಿವಿಧ ಮರಗಳ ಕೊಂಬೆಗಳನ್ನು ಬಳಸಿ ಹಲ್ಲುಜ್ಜುತ್ತಿದ್ದನು ಎಂದು ಮಾಹಿತಿ ಸಿಗುತ್ತದೆ.
ಇದನ್ನು ಓದಿ : Kirti : ಬಿಲ್ಡರ್ ಮೇಲೆ ಹನಿಟ್ರ್ಯಾಪ್ : ಹಣಕ್ಕೆ ಬೇಡಿಕೆಯಿಟ್ಟಿದ್ದ `ಹನಿ’ ರಾಣಿ ಅಂದರ.!
ಹೀಗಾಗಿ ಈ ಗಿಡಮೂಲಿಕೆ ಮರಗಳ ಸಂಯೋಜನೆಯು ಅವನ ರಕ್ತವನ್ನು ಹಾವಿಗೆ ವಿಷಕಾರಿಯನ್ನಾಗಿ ಮಾಡಿ ಅದರ ಸಾವಿಗೆ ಕಾರಣವಾಗಬಹುದು ಎಂದು ಅವರು ನಂಬುತ್ತಾರೆ.
ಅರಣ್ಯ ಇಲಾಖೆಯ ರೇಂಜರ್ ಧರ್ಮೇಂದ್ರ ಬಿಸೆನ್ ಇದನ್ನು ‘ಅಪರೂಪದ ಅಪರೂಪದ’ ಪ್ರಕರಣ ಎಂದು ಕರೆಯುತ್ತಾರೆ. ಅವರು ಈ ಘಟನೆಯ ಬಗ್ಗೆ ಹೀಗೆ ವಿವರಿಸುತ್ತಾರೆ. “ಒಬ್ಬ ವ್ಯಕ್ತಿಯನ್ನು ಕಚ್ಚಿದ ತಕ್ಷಣ ಹಾವು ಸಾಯುವ ಸಾಧ್ಯತೆಯೆಂದರೆ, ಕಚ್ಚಿದ ನಂತರ ಹಾವಿನ ವಿಷದ ಚೀಲವು ತೀವ್ರವಾಗಿ ತಿರುಚಿ ಅದು ಛಿದ್ರವಾದರೆ ಹಠಾತ್ ಹಾವಿನ (Sneck) ಸಾವಿಗೆ ಕಾರಣವಾಗಬಹುದು” ಎಂದಿದ್ದಾರೆ.
ಇಲ್ಲಿ ಏನೇ ಇರಲಿ ಯುವಕನ ಅದೃಷ್ಟ ಚನ್ನಾಗಿದ್ದು, ಹಾವಿನ ದುರಾದೃಷ್ಟದಿಂದ ಯುವಕನಿಗೆ ಕಚ್ಚಿದ ಹಾವು 5-6 ನಿಮಿಷದಲ್ಲಿ ಸಾವಿಗೀಡಾಗಿದೆ ಅಷ್ಟೇ.