Friday, October 18, 2024
spot_img
spot_img
spot_img
spot_img
spot_img
spot_img
spot_img

Health : ಉಪ್ಪು ಕಡಿಮೆ ತಿನ್ನುವುದರಿಂದ ಏನಾಗಬಹುದು ಗೊತ್ತೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ವೈದ್ಯರು ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ‌ (serious illness) ಬಳಲುತ್ತಿರುವವರಿಗೆ ಮಾತ್ರ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.

ಆದರೆ ಅತಿಯಾದ ಉಪ್ಪು ಯಾರಿಗಾದರೂ ಗಂಭೀರವಾದ ಹಾನಿಯನ್ನುಂಟು ಮಾಡಬಹುದು. ಹಾಗಂತ ಕಡಿಮೆ ಉಪ್ಪನ್ನು ತಿನ್ನುವುದರಿಂದಲೂ ಸಹ ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು.

ಇದನ್ನು ಓದಿ : Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

* ಕಡಿಮೆ ಉಪ್ಪನ್ನು ತಿನ್ನುವ ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೆನಿನ್, ಕೊಲೆಸ್ಟ್ರಾಲ್ (cholesterol) ಮತ್ತು ಟ್ರೈಗ್ಲಿಸರೈಡ್ ಹೊಂದಿರುತ್ತಾರೆ.

ಆರೋಗ್ಯವಂತ ವ್ಯಕ್ತಿಗಳಲ್ಲಿ ಕಡಿಮೆ ಸೋಡಿಯಂ ಆಹಾರವು ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಶೇ. 4.6 ಮತ್ತು ಟ್ರೈಗ್ಲಿಸರೈಡ್‌ಗಳನ್ನು ಶೇ. 5.9 ರಷ್ಟು ಹೆಚ್ಚಿಸಿದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ (national library of mediation) ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.

* ಹೃದಯ ಮತ್ತು ರಕ್ತಕ್ಕೆ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ (heart weak) ಉಂಟಾಗುತ್ತದೆ. ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಇದರ ಅರ್ಥವಲ್ಲ. ಆದರೆ ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ.

ರಾಡ್ ಎಸ್. ಟೇಲರ್ ಮತ್ತು ಸಹೋದ್ಯೋಗಿಗಳ ಸಂಶೋಧನೆಯು (research), ಹೃದಯ ವೈಫಲ್ಯ ಹೊಂದಿರುವ ಜನರು ಕಡಿಮೆ ಸೋಡಿಯಂ ಸೇವನೆಯಿಂದ ಸಾಯುವ ಅಪಾಯವನ್ನು ಸೂಚಿಸುತ್ತದೆ.

* ಕಡಿಮೆ ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಜ. ಅದಾಗ್ಯೂ, ಅಧಿಕ ರಕ್ತದೊತ್ತಡಕ್ಕೆ ಉಪ್ಪು ಮಾತ್ರ ಕಾರಣವಲ್ಲ. ಅಧ್ಯಯನದ ಪ್ರಕಾರ, ದಿನಕ್ಕೆ 2,000 ಮಿಗ್ರಾಂ ಗಿಂತ ಕಡಿಮೆ ಸೋಡಿಯಂ ತೆಗೆದುಕೊಳ್ಳುವುದರಿಂದ ಹೃದಯಾಘಾತ (heart attack) ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗದಿಂದ ಸಾಯುವ ಅಪಾಯ ಹೆಚ್ಚಾಗುತ್ತದೆ.

* ಕಡಿಮೆ ಉಪ್ಪನ್ನು ತಿನ್ನುವುದರಿಂದ ಹೈಪೋನಾಟ್ರೀಮಿಯಾದ ಅಪಾಯ ಹೆಚ್ಚಾಗುತ್ತದೆ. ಈ ಹೈಪೋನಾಟ್ರೀಮಿಯಾ ಎನ್ನುವುದು ರಕ್ತದಲ್ಲಿ ಕಡಿಮೆ ಮಟ್ಟದ ಸೋಡಿಯಂನಿಂದ ಉಂಟಾಗುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ನಿರ್ಜಲೀಕರಣದಿಂದ ಉಂಟಾಗುವ ಲಕ್ಷಣಗಳನ್ನು ಹೋಲುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಮೆದುಳಿನ ಊತ (Brain swelling) ಇರಬಹುದು.

* ಉಪ್ಪನ್ನು ಸೇವಿಸದಿದ್ದರೆ ದೇಹದಲ್ಲಿ ಎಲೆಕ್ಟ್ರೋಲೈಟ್ (electrolyte) ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಯಾವುದೇ ರೀತಿಯ ನರ ಸಂವಹನವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ದೇಹದಲ್ಲಿ ವಾಕರಿಕೆ, ತಲೆಸುತ್ತು, ನಿರ್ಜಲೀಕರಣದಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಉಪ್ಪನ್ನು ಬಿಡುವ ಬಗ್ಗೆ ಎಂದಿಗೂ ಯೋಚಿಸಬಾರದು

* ದಿನವಿಡೀ ಉಪ್ಪನ್ನು ತಿನ್ನದಿರುವುದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಜೀವಕೋಶಗಳು ಹಾರ್ಮೋನ್ ಇನ್ಸುಲಿನ್ ಸಿಗ್ನಲ್​ಗೆ ಪ್ರತಿಕ್ರಿಯಿಸದಿದ್ದಾಗ, ಇನ್ಸುಲಿನ್ (Insulin) ಪ್ರತಿರೋಧ ಉಂಟಾಗುತ್ತದೆ.

* ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವವರು ಕಡಿಮೆ ಸೋಡಿಯಂ ಡಯಟ್​ನಿಂದ ಸಾಯುವ ಅಪಾಯವಿದೆ (danger) ಎಂದು ಸಂಶೋಧನೆಗಳು ತಿಳಿಸಿವೆ.

ಇದನ್ನು ಓದಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ; ನಾಳೆಯೇ (ದಿ.25) ಕೊನೆಯ ದಿನ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img