ಜನಸ್ಪಂದನ ನ್ಯೂಸ್, ಡೆಸ್ಕ್ : ಜನರನ್ನು ರಕ್ಷಸಬೇಕಾದ ಪೊಲೀಸರೇ ದಾರಿ ತಪ್ಪುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.
ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಕುಡಿದ ಮತ್ತಿನಲ್ಲಿ ರೈಫಲ್ ಹಿಡಿದುಕೊಂಡು ರಸ್ತೆಯಲ್ಲಿ ಒದ್ದಾಡುತ್ತ ರಸ್ತೆಯಲ್ಲಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : ಸಚಿವ ಪ್ರಿಯಂಕ ಖರ್ಗೆ ಕೋಟೆಯಲ್ಲಿ ಬಿವೈವಿ ಅಬ್ಬರ.!
ಇದನ್ನು ಗಮನಿಸಿದ ಸ್ಥಳೀಯರು ಮತ್ತು ವಾಹನ ಸವಾರರು ಕಾನ್‌ಸ್ಟೆಬಲ್‌ನನ್ನು ಮೇಲಕ್ಕೆತ್ತಿ ಪಕ್ಕದಲ್ಲಿ ಕೂರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದದ್ದು ಎಂದು ತಿಳಿದುಬಂದಿದೆ. ಪೂರ್ಣ ವಿವರಗಳನ್ನು ನೋಡುವುದಾದರೆ.
ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮದ್ಯದ ಅಮಲಿನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾರೆ. ರೈಫಲ್ ಹಿಡಿದುಕೊಂಡಿದ್ದ ಪೊಲೀಸರನ್ನು ನೋಡಿದ ಜನರು ಜೀವ ಭಯದಲ್ಲಿದ್ದರು. ಘಟನೆಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಸರ್ವಿಸ್ ರೈಫಲ್ ಹಿಡಿದುಕೊಂಡು ಮದ್ಯದ ಅಮಲಿನಲ್ಲಿ ಜನನಿಬಿಡ ರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ.. ಅವನಿಗೆ ಎದ್ದೇಳಲು ಸಹ ಕಷ್ಟವಾಗುತ್ತಿತ್ತು. ಆಗ ತಕ್ಷಣ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆತನಿಂದ ರೈಫಲ್ ತೆಗೆದುಕೊಂಡು ರಸ್ತೆಯ ಪಕ್ಕಕ್ಕೆ ಕರೆದೊಯ್ದರು.. ವಿಡಿಯೋ ಮಾತ್ರ ಟ್ರೆಂಡ್ ಆಗಿದೆ.
ನೋಡಿ ವಿಡಿಯೋ :
♦बिजनौर शराब के नशे में सड़क पर लड़खड़ाता दिखा वर्दी में सिपाही।
♦पैरों में चप्पल और हाथों रायफल जिस्म पर वर्दी पहने लड़खता दिखा सिपाही।
♦मौके पर मौजूद ट्रैफिक सिपाही नशेड़ी सिपाही को उठाता आया नजर।
♦नशेड़ी सिपाही की वीडियो वायरल।
♦थाना बिजनौर कोतवाली शहर के जजी… pic.twitter.com/DqQ8vmoeC7
— Knews (@Knewsindia) April 18, 2025