Friday, October 18, 2024
spot_img
spot_img
spot_img
spot_img
spot_img
spot_img
spot_img

ಮಾಲೀಕನಿಗಾಗಿ ಆಸ್ಪತ್ರೆಯಲ್ಲೇ ಉಳಿದ ನಾಯಿ ; ಹೃದಯಸ್ಪರ್ಶಿ ವಿಡಿಯೋ Virul.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮೂಕಪ್ರಾಣಿಗಳ (Animals) ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಎಕೆಂದರೆ ಅವುಗಳಲ್ಲಿರುವ ವಿಶ್ವಾಸ, ಪ್ರೀತಿ, ನಂಬಿಕೆ, ನೀಷ್ಠೆ ಮನುಷ್ಯನಲ್ಲಂತು ಇರಲು ಸಾಧ್ಯವೇ ಇಲ್ಲ ಬಿಡಿ.

ನಿನ್ನೆ ತಾನೇ ಇಂತಹದೇ ಮೂಕಪ್ರಾಣಿಯಾದ ಆನೆಯೊಂದರ ಹೃದಯಸ್ಪರ್ಶಿ ವಿಡಿಯೋ ನೋಡಿದ್ದೇವೆ. ಅದರಲ್ಲಿ ಆನೆ (elephant) ತನ್ನ ಮಾಲೀಕನನ್ನು ನೋಡಲು ಆಸ್ಪತ್ರೆಗೆ ಹೇಗೆ ಓಡೋಡಿ ಬಂದಿತ್ತೆಂದು ಮತ್ತು ಆಸ್ಪತ್ರೆಗೆ ಬಂದಂತಹ ಗಜರಾಜ ಮಾಲೀಕನ ಕೈಯನ್ನು ತನ್ನ ಸೊಂಡಿಲಿನಿಂದ ಹಿಡಿದು ಸಾಂತ್ವನಿದನ್ನು ನಾವೂ ಮರೆಯಲು ಸಾಧ್ಯವೇ ಇಲ್ಲ ಬಿಡಿ.

PUC ಆದವರು KEA ಮ್ಯಾನೇಜರ್ ಗ್ರೇಡ್-III ಮೇಲ್ವಿಚಾರಕೇತರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ.!

ಇಂದು ಅಂತಹದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಇಲ್ಲಿ ಪ್ರಾಣಿ ಮಾತ್ರ ಬೇರೆ. ಇದು ಸಹ ತನ್ನ ಮಾಲೀಕ (Owner) ಆಸ್ಪತ್ರೆಯಲ್ಲಿದ್ದಾಗ ಅದು ಹೇಗೆ ಆತನ ಜೊತೆ ವರ್ತಿಸಿತು ಎನ್ನುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇಂದು ನಾವಿಲ್ಲಿ ಹೇಳಲು ಹೊರಟಿರುವುದು ನಿಯತಿಗೆ ಇನ್ನೊಂದು ಹೆಸರೇ ಆಗಿರುವ ನಾಯಿ (ಶ್ವಾನ) ಯ ಬಗ್ಗೆ.

ಇಲ್ಲೊಂದು ನಾಯಿ ತನ್ನ ಮಾಲೀಕನು ಅನಾರೋಗ್ಯಕ್ಕೀಡಾದಾಗ ಪ್ರತಿಕ್ಷಣವೂ ಆತನ ಜೊತೆಯಲ್ಲಿಯೇ ಇದ್ದಿರುವ  ವಿಡಿಯೋ ಈ ಸುದ್ದಿ ಸಾಮಾಜಿಕ ಜಾಲತಾಣ (social media)  ಲ್ಲಿ ಸದ್ದು ಮಾಡುತ್ತಿದೆ. ಆಸ್ಪತ್ರೆಯಲ್ಲಿ ನಾಯಿ ತನ್ನ ಮಾಲೀಕನ ಜೊತೆಯೇ ಇರುವ ಈ ವಿಡಿಯೋ ಎಲ್ಲರ ಮನಗೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದಿದೆ.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಈ ವಿಡಿಯೋ ನೋಡಿದ ಕೂಡಲೇ ತಕ್ಷಣ ಕನ್ನಡ ಸಿನಿಮಾ ಚಾರ್ಲಿ 777 ಚಿತ್ರದಲ್ಲಿನ ಸನ್ನಿವೇಶಗಳು ನೆನಪಾಗುತ್ತದೆ. ಆಸ್ಪತ್ರೆಯಲ್ಲೂ ಮಾಲೀಕನ ಜೊತೆಯಿದ್ದ ಶ್ವಾನ

ನಾಯಿ ಮಾಲೀಕ ಅನಾರೋಗ್ಯಕ್ಕೀಡಾಗಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಆತ ಗುಣವಾಗಲು  ಶಸ್ತ್ರಚಿಕಿತ್ಸೆಗೆ ಒಳಪಡುತ್ತಾನೆ. ಮಾಲೀಕ ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದ ಸಂಪೂರ್ಣ ಚಿಕಿತ್ಸೆ (Treatment) ಪಡೆದು ಮನೆಗೆ ತೆರಳುವ ತನಕ ಆತನ ಮುದ್ದು ಶ್ವಾನ ಪ್ರತಿಕ್ಷಣವೂ ಜೊತೆಯಾಗಿಯೇ ಇರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಆಸ್ಪತ್ರೆಯಲ್ಲಿ ಆತನ ಬೆಡ್ ಮೇಲೆ ಮಲಗುವುದು, ಆತನ ಜೊತೆ ನಡೆದಾಡುವುದು ಸೇರಿದಂತೆ ಪ್ರತಿ ಕ್ಷಣ ಾತನ ಜೊತೆಯಲ್ಲಿಯೇ ಇರುತೆ ಈ ಪ್ರೀತಿಯ ನಾಯಿ. ಅಷ್ಟೆ ಅಲ್ಲಾ, ಶಸ್ತ್ರಚಿಕಿತ್ಸೆಗೆ (Operation) ಹೋದಾಗ ಜೊತೆಯಾಗಿಯೇ ಹಿಂದೆ ಹೋಗಿರುವುದು, ಜೊತೆಯಲ್ಲಿ ಮಲಗಿರುವುದು, ಇಬ್ಬರ ಮುದ್ದಾಟ, ಚಿಕಿತ್ಸೆ ಮುಗಿದ ನಂತರ ಕೊನೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಗುವಾಗಲೂ ಜೊತೆಯಾಗಿ ಹೋಗುವ ಪ್ರತಿ ದೃಶ್ಯವೂ ವಿಡಿಯೋದಲ್ಲಿದ್ದು, ನಾಯಿ-ಮಾಲೀಕನ ಅನುಬಂಧವು ನೋಡುಗರ ಮನ ಗೆದ್ದಿದೆ.

ನಾಯಕನ ಮಾತು ಕೇಳಿ ಪ್ರಾಣ ಉಳಿಸಿಕೊಂಡ ಆಟಗಾರ ; ಭಯಾನಕ Video ನೋಡಿ.!

ಈ ಪೋಸ್ಟ್‌ನ್ನು  Buitengebieden ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ದಿ. 6ರ ಬೆಳಗ್ಗೆ 4-13ಕ್ಕೆ ಈ ವಿಡಿಯೋ ಪೋಸ್ಟ್ ಮಾಗಿದ್ದು, 8.3 M ವೀಕ್ಷಣೆಯನ್ನು ಕಂಡಿದೆ. 18.8 Repost ಮಾಡಿದ್ದು, 232 K ಲೈಕ್ಸ್ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img