Friday, October 18, 2024
spot_img
spot_img
spot_img
spot_img
spot_img
spot_img
spot_img

Health : ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷ ವಾಕಿಂಗ್ ಮಾಡಬೇಕು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಅನೇಕರು ಬೆಳಿಗ್ಗೆ ಎದ್ದ ತಕ್ಷಣ ವಾಕಿಂಗ್ ಮಾಡಿ ಬರುತ್ತಾರೆ. ಹೀಗೆ ಬೆಳಿಗ್ಗೆ ನಡೆಯುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ.

ಪ್ರತಿಯೊಬ್ಬರೂ ಫಿಟ್ ಮತ್ತು ಫೈನ್ ಆಗಿರಲು ಬೆಳಗಿನ ಜಾವ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ. 2 ರಿಂದ 3 ಕಿಲೋಮೀಟರ್‌ಗಳ ಬೆಳಗಿನ ನಡಿಗೆಯು ದೇಹವನ್ನು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಿಸುತ್ತದೆ.

ಇದನ್ನು ಓದಿ : ಇನ್ಮುಂದೆ ಅಪ್ರಾಪ್ತರು e-scooter ಓಡಿಸಬಹುದು : ಕೇಂದ್ರ ಸರ್ಕಾರದ ನಿರ್ಧಾರ ; condition apply.!

ಒಬ್ಬ ಮನುಷ್ಯ ದಿನಾ 8 ಕಿಲೋಮೀಟರ್ ನಡೆಯಬೇಕಂತೆ. ಅಂದರೆ 8 ಕಿಲೋಮೀಟರ್ ಆದ್ಮೇಲೆ ಮನೆಗೆ ಬರಬೇಕು ಅಂತ ಅಲ್ಲ. ಬೆಳಿಗ್ಗೆ ಎದ್ದಾಗಿನಿಂದ, ರಾತ್ರಿ ಮಲಗೋವರೆಗೂ ಒಟ್ಟು 8 ಕಿಲೋಮೀಟರ್ ನಡಿಗೆ ಇರೋ ಹಾಗೆ ನೋಡ್ಕೊಳ್ಬೇಕು. ಮನೆಯಲ್ಲಿ ಅತ್ತ, ಇತ್ತ ತಿರುಗಾಡೋದು ಕೂಡ ಇದರ ಲೆಕ್ಕದಲ್ಲಿ ಬರುತ್ತೆ. ದಿನಾ ಕನಿಷ್ಠ ಪಕ್ಷ 8 ಕಿಲೋಮೀಟರ್ ನಡೆದರೆ. ಆ ಮನುಷ್ಯ ಜಾಸ್ತಿ ಆರೋಗ್ಯವಾಗಿ ಇರ್ತಾರಂತೆ.

* 60 ವರ್ಷದೊಳಗೆ – 8000 ರಿಂದ 10 ಸಾವಿರ
* 60 ವರ್ಷ ಮೇಲ್ಪಟ್ಟವರು – 6000 ರಿಂದ 8000

ಇದನ್ನು ಓದಿ : Health : ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು ; ಅದ್ಭುತ ಔಷಧ ಕಂಡುಹಿಡಿದ ಸಂಶೋಧಕರು.!

ಅದೇ ರೀತಿ 6 ರಿಂದ 17 ವರ್ಷದೊಳಗಿನವರು ದಿನಕ್ಕೆ 60 ನಿಮಿಷಗಳ ಕಾಲ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ಒಂದು ವೇಳೆ ನೀವು ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಆಟಗಳನ್ನು ಆಡಬಹುದು. ಅದೇ ರೀತಿ 18 ರಿಂದ 50 ವರ್ಷದೊಳಗಿನವರು ದಿನಕ್ಕೆ 12 ಸಾವಿರ ಹೆಜ್ಜೆ ಹಾಕಬೇಕು.

ಪ್ರತಿದಿನ ಬೆಳಿಗ್ಗೆ ಅಥವಾ ಸಾಯಂಕಾಲ ನಾಲ್ಕರಿಂದ ಐದು ಕಿಲೋಮೀಟರ್ ವರೆಗೆ ಚುರುಕಾಗಿ ನಡಿಗೆ ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಅದೇ ರೀತಿ ವೃದ್ಧರಿಗೆ ಮೇಲೆ ಹೇಳಿದಂತೆ ಹೆಜ್ಜೆಗಳು ಅರ್ಥ ಆಗಲಿಲ್ಲ ಅಥವಾ ತಿಳಿಯದು ಅಂದರೆ ನೀವು ಪ್ರತಿದಿನ ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೆ ಮಾತ್ರ ನಡೆದರೆ ಸಾಕು.

ಇದನ್ನು ಓದಿ : ಅಕ್ರಮ ಮರಳುಗಾರರ ಪರ ಮಾತನಾಡಿದ ಶಾಸಕರಿಗೆ ಖಡಕ್ ಉತ್ತರ ಕೊಟ್ಟ ಲೇಡಿ ಆಫೀಸರ್.!

ಒಂದೇ ಬಾರಿ ಮಾಡದೆ ಕ್ರಮೇಣ ನಡೆಯುವ ದೂರವನ್ನು ಹೆಚ್ಚಿಸುತ್ತಾ ನಾವು ಪ್ರತಿದಿನ ನಡಿಗೆ ವ್ಯಾಯಾಮ ಮಾಡಿದರೆ ನಮ್ಮ ಶರೀರ ಮಾತ್ರವಲ್ಲದೆ ಮನಸ್ಸು ಕೂಡ ಆರೋಗ್ಯವಾಗಿರುತ್ತದೆ

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img