ಜನಸ್ಪಂದನ ನ್ಯೂಸ್, ಕಾರವಾರ : ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಅಕ್ರಮ ಮರಳು ಸಾಗಾಟ ಮಾಡುವವರಿಗೆ ದಂಡ ಹಾಕಿದ ಅಧಿಕಾರಿಗೆ ಕ್ಲಾಸ್ ತೆಗದುಕೊಂಡಿದ್ದು, ಈ ವೇಳೆ ತುಂಬಿದ ಸಭೆಯಲ್ಲಿ ಮಹಿಳಾ ಅಧಿಕಾರಿ ಡಿಡಿ ಆಶಾ ಖಡಕ್ ತಿರುಗೇಟು ಕೊಟ್ಟಿರುವ ಘಟನೆ ಕಾರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದಿದೆ.
ಮಹಿಳಾ ಅಧಿಕಾರಿ ನಿಯಮದ ಪ್ರಕಾರ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನು ಓದಿ : ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ ತಾತಪ್ಪ; Video ನೋಡಿದ್ರೆ ಬೆರಗಾಗ್ತೀರಾ.!
ಅಕ್ರಮ ಮರಳು ಸಾಗಾಟ ಮಾಡಿದವರಿಗೆ ದಂಡ ವಿಧಿಸಿ ಹಿನ್ನಲೆ ಶಾಸಕ ಭೀಮಣ್ಣ ನಾಯ್ಕ್ ಮತ್ತು ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಆಶಾ ನಡುವೆ ಮಾತಿನ ಚಕಮಕಿ ನಡೆದಿದೆ.
ಯಾಕೆ ಪದೇ ಪದೇ ಅಮಾಯಕರ ಮೇಲೆ ಕೇಸ್ ಹಾಕಿ ಮನೆ ಕಟ್ಟುವವರಿಗೆ ತೊಂದರೆ ಕೊಡುತ್ತೀರಾ, ಅಕ್ರಮ ಮರಳು ಸಾಗಾಟ ಮಾಡುವವರು ನಮ್ಮ ಕ್ಷೇತ್ರದಲ್ಲಿ ಮಾತ್ರ ಸಿಗುತ್ತಾರೆ ನಿಮಗೆ, ಜಿಲ್ಲೆಯಲ್ಲಿ ಬೇರೆ ಎಲ್ಲೂ ಅಕ್ರಮ ಮರಳು ಸಾಗಾಟ ನಡೆಯುವುದೇ ಇಲ್ವಾ, ನನ್ನ ಕ್ಷೇತ್ರದಲ್ಲೇ ಹೆಚ್ಚು ಕೇಸ್ ದಾಖಲು ಮಾಡಿ ದಂಡ ವಿಧಿಸುವುದು ಯಾಕೆ ಎಂದು ಶಾಸಕ ಭೀಮಣ್ಣ ನಾಯ್ಕ್ ಅಧಕಾರಿಗೆ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಡಿಡಿ ಆಶಾ, ಜಿಲ್ಲೆಯ ಮರಳುಗಾರಿಕೆ ಪ್ರಕರಣ ಸದ್ಯಕ್ಕೆ ಕೋರ್ಟ್ನಲ್ಲಿದೆ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಕೋರ್ಟ್ ಆದೇಶ ಬರಬಹುದು. ಸದ್ಯಕ್ಕೆ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ವಿಡಿಯೋ : ವೈದ್ಯರಲ್ಲ, ನಿಜವಾದ ದೇವರಿವರು; ಉಸಿರು ನಿಂತ ಮಗುವಿಗೆ ಮರುಜನ್ಮ ನೀಡಿದ Doctor.!
ಮರಳು ಸಾಗಾಟ ಕಂಡು ಬಂದರೆ ದಂಡ ವಿಧಿಸುವುದು ನಿಯಮ. ನಿಯಮದ ಪ್ರಕಾರ ದಂಡ ತೆಗೆದುಕೊಳ್ಳುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇನೆ. ನಾನು ಒಬ್ಬಳೇ ಮಾಡುತ್ತಿಲ್ಲ. ಪೊಲೀಸ್ ಇಲಾಖೆ ಕೂಡ ಮಾಡುತ್ತಿದ್ದಾರೆ. ಅವರಿಗೂ ಬೇಕಾದರೆ ಕರೆದು ಕೇಳಿ ನಾನು ನಿಯಮದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.