Friday, July 11, 2025

Janaspandhan News

HomeHealth & Fitness“Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
spot_img
spot_img

“Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಈ Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!, ಹೌದು, ಈ ಹೂವು ಡ್ಯಾಮೇಜ್ ಆದ ಕಿಡ್ನಿ ಮತ್ತು ಲಿವರ್ ಮತ್ತೆ ಮೊದಲಿನಂತೆ ಮಾಡುತ್ತದೆ. ಹಾಗಾದ್ರೆ ಬನ್ನಿ, ಆ ಹೂವಿನ ಬಗ್ಗೆ ತಿಳಿಯೋಣ.

ದುಂಡೇಲಿಯನ್ (Dandelion) ಅಥವಾ ಹಾಲದಂಡೆ/ಕಹಿಗಿಡ ಎಂಬ ಹೆಸರಿನಿಂದ ಪರಿಚಿತವಾದ ಈ ಸಸ್ಯವನ್ನು ಶತಮಾನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸಲಾಗುತ್ತಿದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ಮೂಲತಃ ಯುರೇಷಿಯಾದಲ್ಲಿ ಬೆಳೆಯುವ ಈ ಸಸ್ಯ, ಇಂದು ಮಾನವ ಚಟುವಟಿಕೆಯ ಪರಿಣಾಮವಾಗಿ ಪ್ರಪಂಚದಾದ್ಯಂತ ಹರಡಿದೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ಹಿಮಾಲಯನ್ ಪ್ರದೇಶದಲ್ಲಿ ನೋಡಬಹುದು. ಪ್ರಪಂಚದಾದ್ಯಂತ 30ಕ್ಕೂ ಹೆಚ್ಚು ಪ್ರಬೇಧಗಳಲ್ಲಿ ದುಂಡೇಲಿಯನ್ ಲಭ್ಯವಿದೆ.

ಆಯುರ್ವೇದದ ಬೆಳಕು – ದುಂಡೇಲಿಯನ್ (Dandelion) :

ಸುಶ್ರುತ ಸಂಹಿತೆಯ ಪ್ರಕಾರ, ದುಂಡೇಲಿಯನ್ (Dandelion) ಉತ್ತಮ ಫೈಬರ್ ಮೂಲವಾಗಿದೆ. ಇದು ಜೀರ್ಣಕ್ರಿಯೆ ಬಲಪಡಿಸುವ ಜೊತೆಗೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲಿ ಸಹಕಾರಿಯಾಗುತ್ತದೆ. ಇದರಲ್ಲಿರುವ ನೈಸರ್ಗಿಕ ಉರಿಯೂತ ನಾಶಕ ಗುಣಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತವೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
ದಂಡೇಲಿಯನ್‌ (Dandelion) ನ ಮುಖ್ಯ ಆರೋಗ್ಯ ಪ್ರಯೋಜನಗಳು :
  • ಯಕೃತ್ತಿಗೆ ಶುದ್ಧಿ: ಆಯುರ್ವೇದದ ಪ್ರಕಾರ, ದುಂಡೇಲಿಯನ್ ಯಕೃತ್ತಿನ ಶುದ್ಧಿಗೆ ನೈಸರ್ಗಿಕ ಪರಿಹಾರವಾಗಿದೆ.
  • ಜೀರ್ಣಕ್ರಿಯೆ ಬೆಂಬಲ: ಇದರ ಬೇರು ಮತ್ತು ಎಲೆಗಳು ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಕಾರ ನೀಡುತ್ತವೆ.
  • ಪೋಷಕಾಂಶಗಳ ಖಜಾನೆ: ವಿಟಮಿನ್ A, C, D ಮತ್ತು ಖನಿಜಗಳು – ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮೊದಲಾದವುಗಳಲ್ಲಿ ದುಂಡೇಲಿಯನ್ ಎಲೆಗಳು ಶ್ರೀಮಂತವಾಗಿವೆ.
  • ಮಧುಮೇಹ ನಿರ್ವಹಣೆ: ಆಹಾರದಲ್ಲಿ ಇದರ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
  • ರೋಗನಿರೋಧಕ ಶಕ್ತಿ: ಇದರ ನಿಯಮಿತ ಸೇವನೆಯಿಂದ ದೇಹದ ರೋಗಪ್ರತಿರೋಧ ಶಕ್ತಿ ವೃದ್ಧಿಯಾಗುತ್ತದೆ.
ಇದನ್ನು ಓದಿ : Model : ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಕೈ ಹಾಕಿದ ಅರ್ಚಕ : ಮಾಡೆಲ್‌ನ ಗಂಭೀರ ಆರೋಪ.!
ಎಲೆಗಳ ವಿಶೇಷತೆಗಳು :

ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ (US National Institutes of Health) ನ ಅಧ್ಯಯನಗಳ ಪ್ರಕಾರ, ದುಂಡೇಲಿಯನ್ (Dandelion) ಎಲೆಗಳಲ್ಲಿರುವ ಸಂಯುಕ್ತಗಳು ಮೂತ್ರಪಿಂಡಗಳ ಸುರಕ್ಷತೆಗೆ ಸಹಾಯಕವಾಗುತ್ತವೆ. ದೇಹದಿಂದ ವಿಷದ ಅಂಶಗಳನ್ನು ಹೊರಹಾಕುವ ಮೂಲಕ ಈ ಎಲೆಗಳು ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

ದುಂಡೇಲಿಯನ್ ಚಹಾ – ಮಧುಮೇಹಕ್ಕೆ ನೈಸರ್ಗಿಕ ಪಥ್ಯ :

ದುಂಡೇಲಿಯನ್ (Dandelion) ಚಹಾ ಮಧುಮೇಹ ರೋಗಿಗಳಿಗೆ ಬಹುಪಾಲು ಉಪಯುಕ್ತವಾಗಬಹುದು. ಇದು ಇನ್ಸುಲಿನ್ ಉತ್ಪಾದನೆಗೆ ಸಹಕಾರ ನೀಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!

ಇದರಲ್ಲಿರುವ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ, ಮೂಳೆ ಆರೋಗ್ಯವನ್ನು ಗಟ್ಟಿ ಮಾಡುತ್ತವೆ ಮತ್ತು ಸಂಬಂಧಿತ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.


Note :  ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.


ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಕೈ ಹಾಕಿದ ಅರ್ಚಕ : ಮಾಡೆಲ್‌ನ ಗಂಭೀರ ಆರೋಪ.!

Model Lishalliny Kanaran

ಜನಸ್ಪಂದನ ನ್ಯೂಸ್‌, ಡೆಸ್ಕ್ :‌ ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಅರ್ಚಕನೋರ್ವ ಕೈ ಹಾಕಿದ ಎಂದು  ಮಾಡೆಲ್‌ (Model) ಓರ್ವರು ಗಂಭೀರ ಆರೋಪ ಮಾಡಿದ್ದಾರೆ.

ಕಠಿಣ ಕಾನೂನುಗಳಿದ್ದರೂ ಮಹಿಳೆಯರ ವಿರುದ್ಧದ ದೌರ್ಜನ್ಯ ಕಡಿಮೆಯಾಗದ ವಾಸ್ತವಕ್ಕೆ ಮತ್ತೊಂದು ಉದಾಹರಣೆ ಇದೀಗ ಬೆಳಕಿಗೆ ಬಂದಿದೆ. 2021ರಲ್ಲಿ ಮಿಸ್ ಗ್ರ‍್ಯಾಂಡ್ ಮಲೇಷ್ಯಾ ಕಿರೀಟ ಅಲಂಕರಿಸಿದ್ದ, ಮಾಡೆಲ್‌ (Model) ಮತ್ತು ನಟಿ ಲಿಶಲ್ಲಿನಿ ಕನರನ್  (Lishalliny Kanaran) ಅವರು, ದೇವಾಲಯದ ಅರ್ಚಕರೊಬ್ಬರು ತಮ್ಮ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!

ಘಟನೆ ಜೂನ್‌ 21 ರಂದು ಕೌಲಾಲಂಪುರ್‌ನಿಂದ ಸ್ವಲ್ಪ ದೂರದಲ್ಲಿರುವ ಸೆಪಾಂಗ್ ಜಿಲ್ಲೆಯ ಮಾರಿಯಮ್ಮನ್ ದೇವಾಲಯದಲ್ಲಿ ನಡೆದಿದೆ ಎಂದು South China Morning Post ವರದಿ ಮಾಡಿದೆ. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋದ ಮಾಡೆಲ್‌ (Model) ಲಿಶಲ್ಲಿನಿ, ಅರ್ಚಕರೊಬ್ಬರ “ಪವಿತ್ರ ನೀರು” ಮತ್ತು “ರಕ್ಷಣಾತ್ಮಕ ದಾರ”ದ ಹೆಸರಿನಲ್ಲಿ ಕಚೇರಿಗೆ ಕರೆದ ನಂತರ, ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದೆ ಎಂದು ಮಾಡೆಲ್‌ ಆರೋಪಿಸಿದ್ದಾರೆ.

ಇನ್ಸ್ಟಾಗ್ರಾಮ್ ಪೋಸ್ಟ್‌ ಮೂಲಕ ಮನವಿ :

ಮಾಡೆಲ್‌ (Model) ಲಿಶಲ್ಲಿನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಜೂನ್ 21 ರಂದು ತಾಯಿ ಭಾರತದಲ್ಲಿದ್ದ ಕಾರಣ ದೇವಾಲಯಕ್ಕೆ ಒಬ್ಬರೇ ತೆರಳಿದ್ದ ನಟಿ, ಹಿಂದಿನ ಅನಿಸಿಕೆಗಳಿಗಿಂತ ಭಿನ್ನವಾಗಿ ಆ ಅರ್ಚಕರು ತಮ್ಮನ್ನು ಹತ್ತಿರಕ್ಕೆ ಕರೆದು, ನಿಜಕ್ಕೂ ಲೈಂಗಿಕವಾಗಿ ಕಿರುಕುಳ ನೀಡಿದರೆಂದು ಮಾಡೆಲ್‌ (Model) ಆಕ್ಷೇಪಿಸಿದ್ದಾರೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

“ಪವಿತ್ರ ನೀರನ್ನು ಕಣ್ಣುಗಳಿಗೆ ಮುಟ್ಟಿಸಿದ ನಂತರ, ಅವರು ನನ್ನ ಎದೆಯನ್ನು ಮುಟ್ಟಿದರು. ಬಟ್ಟೆ ಬಿಚ್ಚಲು ಒತ್ತಾಯಿಸಿದರು. ನಾನು ನಿರಾಕರಿಸಿದಾಗ, ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಗದರಿಸಿದರು” ಎಂದು ಮಾಡೆಲ್‌ (Model) ಲಿಶಲ್ಲಿನಿ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಆಗ “ಅವಮಾನ, ಅಸಹ್ಯ ಮತ್ತು ಆಘಾತದಲ್ಲಿ ನಾನಿದ್ದೆ, ಧ್ವನಿ ಎತ್ತುವ ಧೈರ್ಯ ನನಗೆ ಇಲ್ಲದಂತಾಯಿತು” ಎಂದು ಅವರು ಭಾವೋದ್ರೇಕದಿಂದ ಹೇಳಿದ್ದಾರೆ.

ಪೊಲೀಸ್ ತನಿಖೆ ಆರಂಭ :

ಜುಲೈ 4 ರಂದು ಮಾಡೆಲ್‌ (Model) ಲಿಶಲ್ಲಿನಿ ಪೊಲೀಸ್ ದೂರು ದಾಖಲಿಸಿದ್ದು, ಆದರೆ ಆರೋಪಿ ಇದೀಗ ಪರಾರಿಯಾಗಿದ್ದಾನೆ. ಸೆಪಾಂಗ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನೋರ್ಹಿಜಮ್ ಬಹಮಾನ್ ಅವರ ಪ್ರಕಾರ, ಆರೋಪಿಯು ಭಾರತೀಯ ಪ್ರಜೆಯಾಗಿದ್ದು, ದೇವಾಲಯದ ಸ್ಥಳೀಯ ಅರ್ಚಕರ ಅನುಸ್ಥಿತಿಯಲ್ಲಿ ತಾತ್ಕಾಲಿಕ ಆ ವ್ಯಕ್ತಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಮುಖ ಹಾಗೂ ದೇಹದ ಮೇಲೆ “ಪವಿತ್ರ ನೀರು” ಸಿಂಪಡಿಸಿ, ಲೈಂಗಿಕ ರೀತಿಯಲ್ಲಿ ಬಳಲಿಸುವ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನು ಓದಿ : ಪತ್ನಿಯ ಕಿರಿಕಿರಿಗೆ ಬೇಸತ್ತ ಪತಿ 4ನೇ ಮಹಡಿಯಿಂದ ಹಾರಿ Suicide.!
ದೇವಾಲಯದ ನಿಲುವು ಪ್ರಶ್ನೆಗೆ ಗುರಿ :

ಲಿಶಲ್ಲಿನಿ ದೇವಾಲಯದ ಆಡಳಿತ ಮಂಡಳಿ ತನಗೆ ನ್ಯಾಯ ನೀಡುವ ಬದಲು, ದೇವಸ್ಥಾನದ ಹೆಸರು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಇದೇ ಮೊದಲಲ್ಲ, ಇತ್ತೀಚೆಗೆ ಮತ್ತೊಬ್ಬರು ಕೂಡ ಇದೇ ಅರ್ಚಕರ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

Lishalliny Kanaran 1

ಸಧ್ಯ ಸ್ಥಿತಿ :

ಮಲೇಷ್ಯಾ ಪೊಲೀಸರು ಆರೋಪಿಯು ಭಾರತದ ಪ್ರಜೆ ಎನ್ನುವ ಹಿನ್ನೆಲೆಯಲ್ಲಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಘಟನೆ ಸಂಬಂಧಿಸಿದ ತನಿಖೆ ಮುಂದುವರೆದಿದೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments