Thursday, April 25, 2024
spot_img
spot_img
spot_img
spot_img
spot_img
spot_img

CM ಮಮತಾ ಬ್ಯಾನರ್ಜಿ ತಲೆಗೆ ಗಂಭೀರ ಗಾಯ ; ಆಸ್ಪತ್ರೆಗೆ ದಾಖಲು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಶ್ಯಾದಂತ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ವೇಳೆ ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮನೆಯ ಆವರಣದಲ್ಲಿ ನಡೆದಾಡುತ್ತಿರುವ ವೇಳೆ ಆಯತಪ್ಪಿ ಬಿದ್ದು ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ರಸ್ತೆ ತುಂಬೆಲ್ಲಾ ನೋಟೆ ನೋಟುಗಳು ; ಸೂಟ್‌ಕೇಸ್ ತುಂಬುತ್ತಿರುವ ಇಬ್ಬರು ವ್ಯಕ್ತಿಗಳು ; ವಿಡಿಯೋ Viral.!

ಅವರು ಬಿದ್ದ ರಭಸಕ್ಕೆ ಮಮತಾ ಹಣೆಗೆ ಗಂಭೀರವಾದ ಗಾಯವಾಗಿದ್ದು (serious injuries), ಹಣೆಗೆ ಸ್ಟಿಚ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ ಎನ್ನಲಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲಿಘಾಟ್ ನಿವಾಸದಲ್ಲಿ ನಡೆದಾಡುತ್ತಿದ್ದ (walk) ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ನಡೆದಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಮಮತಾ ಬ್ಯಾನರ್ಜಿ ಕಲ್ಲಿಗೆ ತಲೆ ಬಡಿದಿದೆ. ಹೀಗಾಗಿ ಹಣೆಯಲ್ಲಿ ತೀವ್ರ ಗಾಯವಾಗಿದೆ. ತಕ್ಷಣವೇ ಮಮತಾ ಬ್ಯಾನರ್ಜಿಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ತ ಸ್ರಾವವಾಗಿರುವ (bleeding) ಕಾರಣ ಮಮತಾ ಬ್ಯಾನರ್ಜಿ ಆಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಅಶ್ಲೀಲ ಕಂಟೆಂಟ್‌ : 18 OTT ಪ್ಲಾಟ್‌ಫಾರ್ಮ್, 19 ವೆಬ್‌ಸೈಟ್‌, 10 ಆಪ್ ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ.!

ಇನ್ನೂ ಸಿಎಂ ಹಣೆಗೆ ಗಾಯವಾಗಿ ರಕ್ತಬರುತ್ತಿರುವ ಫೋಟೊವೊಂದನ್ನು ಟಿಎಂಸಿ (TMC) ಎಕ್ಸ್ ನಲ್ಲಿ ಹಂಚಿಕೊಂಡಿದೆ. ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯಗಳಾಗಿವೆ. ನಿಮ್ಮ ಪ್ರಾರ್ಥನೆ ಇರಲಿ ಎಂದು ಟಿಎಂಸಿ ಟ್ವೀಟ್ ಮಾಡಿದೆ.

spot_img
spot_img
spot_img
- Advertisment -spot_img