ಜನಸ್ಪಂದನ ನ್ಯೂಸ್, ಆರೋಗ್ಯ : ಹೃದಯ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದೇ ಕೆಟ್ಟ ಕೊಲೆಸ್ಟ್ರಾಲ್ (Cholesterol – LDL). ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಅದು ರಕ್ತನಾಳಗಳಲ್ಲಿ ತಡೆ ಉಂಟುಮಾಡಿ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಇಂತಹ ಸಂದರ್ಭದಲ್ಲಿ ಆಹಾರ ಪದ್ಧತಿಯೇ ಪ್ರಮುಖ ಪಾತ್ರ ವಹಿಸುತ್ತದೆ. ಸ್ಯಾಚುರೇಟೆಡ್ ಕೊಬ್ಬು, ತಾಳೆ ಎಣ್ಣೆ ಹಾಗೂ ಸಂಸ್ಕರಿಸಿದ ಎಣ್ಣೆಯಲ್ಲಿ ತಯಾರಾದ ಆಹಾರಗಳನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ. ಆದರೆ, ಕೆಲವೊಂದು ಪ್ರಾಚೀನ ಗಿಡಮೂಲಿಕೆಗಳು ಮತ್ತು ಮನೆಮದ್ದಿನ ವಿಧಾನಗಳು ಕೊಲೆಸ್ಟ್ರಾಲ್ (Cholesterol) ಮಟ್ಟ ನಿಯಂತ್ರಿಸಲು ಸಹಕಾರಿ.
ತಜ್ಞರ ಪ್ರಕಾರ, ಸೋಂಪು-ಜೀರಿಗೆ ನೀರು ದೇಹದ ಕೊಲೆಸ್ಟ್ರಾಲ್ (Cholesterol) ಸಮತೋಲನಕ್ಕೆ ಸಹಾಯಕವಾಗುವ ಒಂದು ಉತ್ತಮ ಆಯುರ್ವೇದೀಯ ಮದ್ದು. ಜೊತೆಗೆ, ಮೆಂತ್ಯ ಬೀಜ, ಕೊತ್ತಂಬರಿ ಬೀಜ ಮತ್ತು ದಾಲ್ಚಿನ್ನಿಯಂತಹ ಪದಾರ್ಥಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತವೆ.
ತಯಾರಿಸುವ ವಿಧಾನ :
- ಮೆಂತ್ಯ, ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ತಲಾ ಎರಡು ಟೀ ಚಮಚ ತೆಗೆದುಕೊಳ್ಳಿ.
- ಒಂದು ತುಂಡು ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಿ.
- ತಂಪಾದ ಬಳಿಕ ಎಲ್ಲವನ್ನೂ ಪುಡಿ ಮಾಡಿ ಏರ್‌ಟೈಟ್ ಬಾಟಲಿಯಲ್ಲಿ ಸಂಗ್ರಹಿಸಿ.
- ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಒಂದು ಟೀ ಚಮಚ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ.
ಈ ವಿಧಾನವನ್ನು ನಿಯಮಿತವಾಗಿ ಅನುಸರಿಸಿದರೆ, ದೇಹದ ಕೊಲೆಸ್ಟ್ರಾಲ್ (Cholesterol) ಮಟ್ಟ ಹತೋಟಿಗೆ ಬರುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಿಸಿ, ಹೃದಯ ಆರೋಗ್ಯಕ್ಕೂ ರಕ್ಷಣೆಯಾಗಿ ಪರಿಣಮಿಸುತ್ತದೆ.
ತಜ್ಞರು, ಇಂತಹ ನೈಸರ್ಗಿಕ ಮನೆಮದ್ದುಗಳ ಜೊತೆಗೆ ಸಮತೋಲನಯುತ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ, ದೀರ್ಘಕಾಲ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡುತ್ತಿದ್ದಾರೆ.
Bear : ಕರಡಿಗೆ ತಂಪು ಪಾನೀಯ ಕೊಟ್ಟ ಯುವಕ : ವಿಡಿಯೋ ವೈರಲ್ ; ಕಾನೂನು ಕ್ರಮ ಕೈಗೊಳ್ಳಲು ತಯಾರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಯುವಕನೊಬ್ಬ ಕರಡಿ (Bear) ಗೆ ತಂಪು ಪಾನೀಯದ ಬಾಟಲಿ ನೀಡುತ್ತಿರುವ ಘಟನೆ ಕ್ಯಾಮೆರಾಗೆ ಸಿಕ್ಕಿದ್ದು, ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ದೃಶ್ಯ ಮಾನವನ ಅಜಾಗರೂಕತೆ ಮತ್ತು ವನ್ಯಜೀವಿ ಸುರಕ್ಷತೆಯ ಕುರಿತಾಗಿ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ವಿಡಿಯೋದಲ್ಲಿ ಯುವಕ ತಂಪು ಪಾನೀಯದ ಬಾಟಲಿಯನ್ನು ಕರಡಿ (Bear) ಯ ಮುಂದೆ ಇಟ್ಟು ಹಿಂದಕ್ಕೆ ಸರಿಯುವ ದೃಶ್ಯ ಕಾಣುತ್ತದೆ.
ಖಾಸಗಿ ರೂಂ ಅಂತ ಭಾವಿಸಿ ರೈಲಿನಲ್ಲೇ ಜೋಡಿಯ Rude behavior ; ವಿಡಿಯೋ ವೈರಲ್.!
ನಂತರ ಕರಡಿಯು ಬಾಟಲಿಯನ್ನು ಎತ್ತಿಕೊಂಡು ಕುಡಿಯುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಈ ಘಟನೆ ನಾರಾ ಗ್ರಾಮದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ತಜ್ಞರ ಪ್ರಕಾರ, ಇಂತಹ ಕ್ರಮಗಳು ಮಾನವರಿಗೂ ಮತ್ತು ಪ್ರಾಣಿಗಳಿಗೂ ಅಪಾಯಕಾರಿ. ಕರಡಿ (Bear) ಗಳು ಆಕಸ್ಮಿಕವಾಗಿ ಆಕ್ರಮಣಕಾರಿ ಸ್ವಭಾವ ತೋರಬಹುದು ಮತ್ತು ಮಾನವರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.
Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!
ಅಲ್ಲದೇ, ತಂಪು ಪಾನೀಯದಂತಹ ಕೃತಕ ವಸ್ತುಗಳು ಕಾಡುಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕ. ಇವು ಪ್ರಾಣಿಗಳ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸಿ, ಅವರ ನೈಸರ್ಗಿಕ ನಡವಳಿಕೆಯನ್ನು ಬದಲಾಯಿಸಬಹುದು.
ವಿಡಿಯೋ ವೈರಲ್ ಆದ ನಂತರ ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೃತ್ಯದಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಾರಂಭವಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ತಯಾರಿ ನಡೆಯುತ್ತಿದೆ.
B12 : ವಿಪರೀತ ಮರೆವು, ಕಣ್ಣಿನ ದೃಷ್ಟಿ ಮಂದಾಗಲು ಕಾರಣವೇನು ಗೊತ್ತೇ.?
ಕರಡಿ (Bear) ಗೆ ತಂಪು ಪಾನೀಯದ ಬಾಟಲಿ ನೀಡುತ್ತಿರುವ ವಿಡಿಯೋ :
https://twitter.com/i/status/1966391796759670991






