ಜನಸ್ಪಂದನ ನ್ಯೂಸ್,ನೌಕರಿ : ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ (CCRAS) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಒಟ್ಟು 394 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ CCRAS ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!
CCRAS ನಲ್ಲಿ ಲಭ್ಯವಿರುವ ಹುದ್ದೆಗಳು :
ಅನುವಾದಕ (ಹಿಂದಿ ಸಹಾಯಕ), ಸಂಶೋಧನಾ ಸಹಾಯಕ (ಸಸ್ಯಶಾಸ್ತ್ರ, ಔಷಧಶಾಸ್ತ್ರ, ಫಾರ್ಮಸಿ, ರಸಾಯನಶಾಸ್ತ್ರ), ಲೋವರ್ ಡಿವಿಷನ್ ಕ್ಲರ್ಕ್ (LDC), ಸ್ಟೆನೋಗ್ರಾಫರ್ ಗ್ರೇಡ್-I ಮತ್ತು II, ಸ್ಟಾಫ್ ನರ್ಸ್, ಗ್ರಂಥಾಲಯ ಗುಮಾಸ್ತ, ಭದ್ರತಾ ಅಧಿಕಾರಿ, ಸಂಶೋಧನಾ ಅಧಿಕಾರಿ (ಆಯುರ್ವೇದ, ರೋಗಶಾಸ್ತ್ರ), ಸಹಾಯಕ ಸಂಶೋಧನಾ ಅಧಿಕಾರಿ, ಬಹು ಕಾರ್ಯ ಸಿಬ್ಬಂದಿ (MTS), ಅಪ್ಪರ್ ಡಿವಿಷನ್ ಕ್ಲರ್ಕ್ (UDC), ಸಹಾಯಕ, ಔಷಧಿಕಾರ, ಪ್ರಯೋಗಾಲಯದ ಪರಿಚಾರಕ, ಸಾಮಾನ್ಯ ದರ್ಜೆಯ ಚಾಲಕ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ಸಂಖ್ಯಾಶಾಸ್ತ್ರೀಯ ಸಹಾಯಕ, ಆಫ್ಸೆಟ್ ಮೆಷಿನ್ ಆಪರೇಟರ್ ಸೇರಿದಂತೆ ಹಲವು ಹುದ್ದೆಗಳು ಒಳಗೊಂಡಿವೆ.
ವೇತನ ಶ್ರೇಣಿ :
- ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.37,000 ರಿಂದ ರೂ.42,000 ವರೆಗೆ ವೇತನ ನೀಡಲಾಗುತ್ತದೆ.
ವಯೋಮಿತಿ :
- ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಮೀರಬಾರದು.
ವಿದ್ಯಾರ್ಹತೆ :
- ಶೈಕ್ಷಣಿಕ ಅರ್ಹತೆಯಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿ, ಐಟಿಐ, ಪದವಿ, ಎಂಡಿ/ಎಂಎಸ್, ಎಂ. ಫಾರ್ಮ್ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ CCRAS ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಓದಿ, ಅರ್ಹತೆ ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ವಿವರಗಳನ್ನು ಪರಿಶೀಲಿಸಿ, ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ : 01 ಜುಲೈ 2025.
- ಅರ್ಜಿ ಸಲ್ಲಿಕೆ ಕೊನೆ : 31 ಆಗಸ್ಟ್ 2025.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ CCRAS ವೆಬ್‌ಸೈಟ್‌ಗೆ ಭೇಟಿ ನೀಡಿ.
Disclaimer : The above given information is available On online, candidates should check it properly before applying. This is for information only.
ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಲಿಂಬೆಹಣ್ಣು, ಅರಿಶಿಣ, ಕುಂಕುಮ ಮುಂತಾದ ವಸ್ತುಗಳನ್ನು ಬಳಸುವ ಮೂಲಕ ವಾಮಾಚಾರ (Black-magic) ವನ್ನು ಮಾಡುವುದುಂಟು, ಆದರೆ ಇಲ್ಲಿ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯ ಮಾಡಿರುವುದು ಕಂಡುಬಂದಿದೆ.
ಗ್ರಾಮದ ರೈತ ದೇಸಾಯಿ ಅವರ ಜಮೀನಿನಲ್ಲಿ ಲಿಂಬೆಹಣ್ಣು, ಮೊಸರು, ತೆಂಗಿನಕಾಯಿ, ಎಲೆ-ಅಡಿಕೆ, ಕ್ಯಾರ್ ಬೀಜಗಳ ಜೊತೆಗೆ ಸ್ಮಾರ್ಟ್‌ಫೋನ್‌ನೂ ಇರಿಸಿ Black-magic ಮಾಡಲಾಗಿದೆ. ಈ ವಸ್ತುಗಳನ್ನು ಗಿಡಕ್ಕೆ ಗಂಟು ಕಟ್ಟಿ ಜಮೀನಿನಲ್ಲಿಟ್ಟು ಹೋಗಿರುವುದು ಗಮನ ಸೆಳೆದಿದ್ದು, ಘಟನೆ ಹೈಟೆಕ್ ವಾಮಾಚಾರದ ಅಂಗವಾಗಿದೆ ಎಂದು ಊಹಿಸಲಾಗುತ್ತಿದೆ.
ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಗ್ರಾಮಸ್ಥರು ಈ ಘಟನೆ ನೋಡಿ ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ರೈತ ಮುಖಂಡ ರಾಜು ಅವರಿಗೆ ಕರೆ ಮಾಡಿ ವಾಮಾಚಾರ (Black-magic) ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆಯೂ ಸಹ ಕೆಲವು ತಿಂಗಳಲ್ಲಿಯೂ ಈ ಜಮೀನಿನಲ್ಲಿ ಅನಾಮಿಕ ವಸ್ತುಗಳು ಕಂಡು ಬಂದಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದಿದೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!
“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ತಂತ್ರಜ್ಞಾನದ ಟಚ್ ನೀಡಿ ವಾಮಾಚಾರ (Black-magic) ಮಾಡಿರುವುದು ಒಂದು ರೀತಿಯ ಆಶ್ಚರ್ಯಕರವಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯ ಬಹಿರಂಗಪಡಿಸಬೇಕಿದೆ” ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.






