ಜನಸ್ಪಂದನ ನ್ಯೂಸ್, ಬೆಂಗಳೂರು : ವೇಶ್ಯಾವಾಟಿಕೆ (prostitution) ದಂಧೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದ್ದು, ದಾಳಿ ವೇಳೆ ಮಹಿಳೆಯರನ್ನು ರಕ್ಷಿಸಿದ್ದಾರೆ. ಅಲ್ಲದೆ ವಿದೇಶಿ (foreign) ಪ್ರಜೆಗಳು ಸೇರಿ ಕೆಲ ಮಂದಿಯನ್ನು ಬಂಧಿಸಿದ್ದಾರೆ.
ಹೈಪೈ ಹೋಟೆಲ್‌ನಲ್ಲಿ ವಿದೇಶ ಹಾಗೂ ಹೊರ ರಾಜ್ಯಗಳಿಂದ ಮಾನವ ಕಳ್ಳ ಸಾಗಣೆ (human smuggling) ಮೂಲಕ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದನ್ನು ಓದಿ : ರೈಲುಹಳಿ ಮೇಲೆ ಕುಳಿತು Mobile ನಲ್ಲಿ ಮಾತನಾಡುತ್ತಿದ್ದ ಯುವಕ : ಕೆಳಗಿಳಿದ ರೈಲು ಚಾಲಕ.!
ಹುಡುಗಿಯರನ್ನು ಉದ್ಯೋಗ (Job) ಕೊಡಿಸುವುದಾಗಿ ಆಮಿಷವೊಡ್ಡಿ ಹುಡುಗಿಯರನ್ನು ಕರೆತಂದು ಸಂಪಿಗೆಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ CCB ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನಾಲ್ವರು ಯುವತಿಯರನ್ನು ರಕ್ಷಿಸಿದ್ದು, ಮಡಿಕೇರಿ ಮೂಲದ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಪಿಗೆಹಳ್ಳಿ, K.R.ಪುರಂ, ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು Hotel, ಅಪಾರ್ಟ್ಮೆಂಟ್, ಮನೆಗಳಲ್ಲಿ ದಂಧೆ ನಡೆಸುತ್ತಿದ್ದವರ ಬಂಧಿಸಲಾಗಿದೆ.
ಇದನ್ನು ಓದಿ : Prayagraj ನ ಕುಂಭಮೇಳ ಕಾಲ್ತುಳಿತ ಪ್ರಕರಣ : ಬೆಳಗಾವಿಯ ಮೂವರ ಸಾ*ವು.!
ಈ ಇಬ್ಬರು ಮನೆ ಬಾಡಿಗೆಗೆ ಪಡೆದು ದಂಧೆ ನಡೆಸುತ್ತಿದ್ದರು. ಮನೆ ಓನರ್ ಗೆ ಟೈಂ ಟು ಟೈಂ (time to time) ಬಾಡಿಗೆ ಕೊಡುತ್ತಿದ್ದರು. ಗಿರಾಕಿಗಳನ್ನ ಪೋನ್ (Phone) ಮೂಲಕ ಸಂಪರ್ಕ ಮಾಡುತ್ತಿದ್ದರು.
ಪೋಟೊಗಳನ್ನ ಕಳುಹಿಸಿ ಒಂದು ಹುಡುಗಿಗೆ 10ರಿಂದ 12 ಸಾವಿರ ರೇಟ್ ಫಿಕ್ಸ್ ಮಾಡುತ್ತಿದ್ದರು. ಗಿರಾಕಿಗಳು ಒಪ್ಪಿದ ಜಾಗಕ್ಕೆ ಹುಡುಗಿಯರನ್ನ ಕಳುಹಿಸುತ್ತಿದ್ರು. ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.