Wednesday, May 22, 2024
spot_img
spot_img
spot_img
spot_img
spot_img
spot_img

News : ನಡು ರಸ್ತೆಯಲ್ಲೇ ಹೆಂಡತಿಯನ್ನು ಕಳುಹಿಸುವಂತೆ ಗಂಡನಿಗೆ ಬೆದರಿಕೆ ಹಾಕಿದ ಕಾಮುಕರು.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದಲ್ಲಿ ಬಿಹಾರ ಮೂಲದ ದಂಪತಿಗೆ ಲೈಂಗಿಕ ಕಿರುಕುಳ (sexual harassment) ನೀಡಿದ್ದು, ಅದರಿಂದ ಪಾರಾಗಲು ಇಬ್ಬರೂ ಒದ್ದಾಡಿದ ಘಟನೆ ನಡೆದಿದೆ.

ಕೊಡಿಗೆಹಳ್ಳಿಯ ವಿರೂಪಾಕ್ಷಪುರದಲ್ಲಿ ನಿನ್ನೆ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ.

ಯುವತಿಯೊಬ್ಬಳಿಗೆ ಪುಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ. ನಡು ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ಹಾಗೂ ಆಕೆಯ ಪತಿ ಆರೋಪಿಸಿದ್ದಾರೆ.

ಜೊತೆಗಿದ್ದ ದಂಪತಿಯ ಬಳಿ ಬಂದ ಮೂರ್ನಾಲ್ಕು ಪುಂಡರು, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ (To cooperate) ಯುವತಿಗೆ ಒತ್ತಾಯ ಮಾಡಿದ್ದಾರೆ. ಒಪ್ಪದಿದ್ದಾಗ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದಾರೆ.

ಹೆಂಡತಿಯನ್ನು ಕಳಿಸುವಂತೆ ಪುಂಡರು ಗಂಡನಿಗೆ ಬೆದರಿಕೆ ಹಾಕಿದ್ದಾರೆ. ಗಂಡನ ಸ್ನೇಹಿತನಿಂದಲೇ (friend) ಕೃತ್ಯ ನಡೆದಿದೆ.

ಇದರಿಂದ ಭಯಭೀತರಾದ ದಂಪತಿ ಸಹಾಯ ಕೋರಿ ಬೆಂಗಳೂರು ಪೊಲೀಸರಿಗೆ ಫೋನ್ ಮಾಡಿದರೂ ಸರಿಯಾದ ರೆಸ್ಪಾನ್ಸ್ ಸಿಕ್ಕಿಲ್ಲ. ಇದರಿಂದ ಬಿಹಾರ ಪೋಲಿಸರಿಗೆ ದಂಪತಿ ಫೋನ್ ಮಾಡಿದ್ದಾರೆ.

ಕೊಡಿಗೆಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

spot_img
spot_img
spot_img
- Advertisment -spot_img