Wednesday, September 17, 2025

Janaspandhan News

HomeJobBOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img

BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕ್ ಆಫ್ ಬರೋಡಾ (BOB) ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

BOB
BOB Recruitment

ಬ್ಯಾಂಕ್ ಆಫ್ ಬರೋಡಾ (BOB) ನವೀನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಇದು ಮಹತ್ತರವಾದ ಅವಕಾಶ.

ಒಟ್ಟು ಹುದ್ದೆಗಳು : 2,500̤
  • ಇದರಲ್ಲಿ 450 ಹುದ್ದೆಗಳು ಕರ್ನಾಟಕ ವಲಯಕ್ಕೆ ಹೊಂದಿವೆ.
ಅರ್ಹತೆಗಳು (Eligibility) :
  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಶಾಖೆಯಲ್ಲಿಯ ಬ್ಯಾಚುಲರ್ ಪದವಿ (Any Degree) ಪಡೆದಿರಬೇಕು.
  • ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆ ಬಲ್ಲಿರಬೇಕು.
ವಯೋಮಿತಿ :
  • ಕನಿಷ್ಠ: 21 ವರ್ಷ
  • ಗರಿಷ್ಠ: 30 ವರ್ಷ
ವಯೋಮಿತಿ ಸಡಿಲಿಕೆ :

ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ (BOB) ನಿಯಮದಂತೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

  • ಒಬಿಸಿ (ಎನ್‌ಸಿಎಲ್)ಅಭ್ಯರ್ಥಿಗಳು : 3 ವರ್ಷಗಳು.
  • SC, ST ಅಭ್ಯರ್ಥಿಗಳು : 5 ವರ್ಷಗಳು.
  • ಪಿಡಬ್ಲ್ಯೂಡಿ (ಸಾಮಾನ್ಯ / ಇಡಬ್ಲ್ಯೂಎಸ್) ಅಭ್ಯರ್ಥಿಗಳು : 10 ವರ್ಷಗಳು.
  • ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳು : 13 ವರ್ಷಗಳು.
  • ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು : 15 ವರ್ಷಗಳು.
ವೇತನ ಶ್ರೇಣಿ :
  • ಬ್ಯಾಂಕ್ ಆಫ್ ಬರೋಡಾ (BOB) ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.48,480/- ರಿಂದ ರೂ.85,920/- ರವರೆಗೆ ಮಾಸಿಕ ವೇತನ ನಿಗದಿಯಾಗಲಿದೆ.
ಅರ್ಜಿ ಶುಲ್ಕ :
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ.850/-
  • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು : ರೂ.175/-
ಆಯ್ಕೆ ಪ್ರಕ್ರಿಯೆ (Selection Process) :
  • ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ:
  1. ಲಿಖಿತ ಪರೀಕ್ಷೆ (120 ಪ್ರಶ್ನೆಗಳು – 2 ಗಂಟೆ ಅವಧಿ) :
  • ಇಂಗ್ಲಿಷ್ ಭಾಷೆ
  • ಬ್ಯಾಂಕಿಂಗ್ ಜಾಗೃತಿ
  • ಸಾಮಾನ್ಯ ಜ್ಞಾನ
  • ತಾರ್ಕಿಕತೆ (Reasoning)
  • ಪರಿಮಾಣಾತ್ಮಕ ಸಾಮರ್ಥ್ಯ (Quantitative Aptitude)

2.ಸೈಕೋಮೆಟ್ರಿಕ್ ಟೆಸ್ಟ್ :

  • ವ್ಯಕ್ತಿತ್ವ, ವೃತ್ತಿಪರ ಚಿಂತನೆ ಮತ್ತು ಮಾನಸಿಕ ಸಾಮರ್ಥ್ಯ ಮೌಲ್ಯಮಾಪನ.

3. ಸಂದರ್ಶನ ಅಥವಾ ಗುಂಪು ಚರ್ಚೆ :

  • ತುದಿಗಟ್ಟುವ ಆಯ್ಕೆ ಹಂತ (Final selection stage).
ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಸಲು ಆರಂಭಿಕ ದಿನ : ಜುಲೈ 04, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನ : ಜುಲೈ 24, 2025.
ಅಧಿಕೃತ ವೆಬ್‌ಸೈಟ್ :
  • ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಕೆಗೆ ಭೇಟಿ ನೀಡಿ : www.bankofbaroda.in
  • ಹೆಚ್ಚು ನವೀಕರಣಗಳಿಗಾಗಿ ನಮ್ಮ (BOB) ವೆಬ್‌ಸೈಟ್‌ನ್ನು ಅವಲೋಕಿಸುತ್ತಿರಿ : https://www.bankofbaroda.in/

📌 ಟಿಪ್ಪಣಿ: ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ, ತಮ್ಮ ಅರ್ಹತೆ ಪರಿಶೀಲಿಸಿಕೊಳ್ಳುವುದು ಅಗತ್ಯ.

Disclaimer : The above given information is available On online, candidates should check it properly before applying. This is for information only.

ಸಿಗರೇಟ್ ಸೇದುತ್ತ ವಿದ್ಯಾರ್ಥಿನಿಯಿಂದ massage ಮಾಡಿಸಿಕೊಂಡ ಟಿಎಂಸಿ ನಾಯಕ.!

Massage

ಜನಸ್ಪಂದನ ನ್ಯೂಸ್, ಡೆಸ್ಕ್ : ಟಿಎಂಸಿ ನಾಯಕನೋರ್ವ ಸಿಗರೇಟ್ ಸೇದುತ್ತ ವಿದ್ಯಾರ್ಥಿನಿ ಕೈಯಿಂದ ಮಸಾಜ್ (massage) ಮಾಡಿಸಿಕೊಂಡ ಘಟನೆಯೊಂದು ನಡೆದಿದೆ.

ಪ.ಬಂಗಾಳದ ಸೋನಾರ್‌ಪುರ ಕಾಲೇಜಿನಲ್ಲಿ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ನಾಯಕನಾಗಿರುವ ಪ್ರತೀಕ್ ಕುಮಾರ್ ಎಂಬಾತ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿನಿಯಿಂದ ತಲೆಗೆ ಮಸಾಜ್ (massage) ಮಾಡಿಕೊಳ್ಳುತ್ತಿರುವ ಘಟನೆ ನಡೆದಿದೆ.

ಇದನ್ನು ಓದಿ : Prostitution racket busted : 6 ಮಹಿಳೆಯರ ರಕ್ಷಣೆ, 4 ಆರೋಪಿಗಳ ಬಂಧನ.!

ಸದ್ಯ ಇತನ ವಿವಾದಾಸ್ಪದ massage ಮಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ರಾಜಕೀಯ ತಿಕ್ಕಾಟ ಉಂಟಾಗಿದೆ.

ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, “ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಟಿಎಂಸಿ ಈ ರೀತಿಯ ನಾಯಕರನ್ನು ಬೆಳೆಸುತ್ತಿದೆ” ಎಂದು ಪ್ರಹಾರ ಮಾಡಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 07 ರ ದ್ವಾದಶ ರಾಶಿಗಳ ಫಲಾಫಲ.!

ವೈರಲ್ ಆಗಿರುವ ಈ ವಿಡಿಯೋದಲ್ಲಿ ಪ್ರತೀಕ್ ಕುಮಾರ್ ಕಾಲೇಜಿನ ಕ್ಯಾಂಪಸ್‌ವೊಂದರಲ್ಲಿ ಯುವತಿಯೊಬ್ಬಳ ಕೈಯಿಂದ ತಲೆಗೆ ಮಸಾಜ್ (massage) ಮಾಡಿಸಿಕೊಂಡು ಸಿಗರೇಟ್ ಸೇದುತ್ತಿರುವ ದೃಶ್ಯ ಕಾಣಿಸುತ್ತದೆ.

ಈತ ಕೇವಲ ಕಾಲೇಜು ವಿದ್ಯಾರ್ಥಿ ಘಟಕದ ನಾಯಕ ಮಾತ್ರವಲ್ಲ, ಟಿಎಂಸಿ ಯುವ ಘಟಕದ ಸೋನಾರ್‌ಪುರ ದಕ್ಷಿಣ ವಿಭಾಗದ ಅಧ್ಯಕ್ಷ, ರಾಜ್‌ಪುರ ಪಟ್ಟಣದ ಟಿಎಂಸಿ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಕ್ಷದ ಸಂಯೋಜಕ ಸ್ಥಾನವನ್ನು ಹೊಂದಿದ್ದಾನೆ.

ಇದನ್ನು ಓದಿ : Petrol worth Rs.120 : ಕೈ ಮಾಡಿದ ಪಿಎಸ್‌ಐ : ಮರಳಿ ಕೊಟ್ಟ ಸಿಬ್ಬಂದಿ.!

ಈ ಹಿನ್ನಲೆಯಲ್ಲಿ, ಮಾಳವೀಯ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದು, “ಇದರಿಂದ ಮಮತಾ ಬ್ಯಾನರ್ಜಿ ಬಂಗಾಳದ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಹಾಳುಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ವಿದ್ಯಾರ್ಥಿನಿಯರಿಗೆ ಕಾಲೇಜುಗಳು ಸುರಕ್ಷಿತವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.

ಮಸಾಜ್ (massage) ಮಾಡಿಸಿಕೊಳ್ಳುತ್ತಿರುವ ವೈರಲ್ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments