Sunday, November 10, 2024
spot_imgspot_img
spot_img
spot_img
spot_img
spot_img
spot_img

ಜೈಲಿಂದಲೇ ಮಹಿಳೆಯ ನಗ್ನ ಪೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ; ಮೂವರು Arrest.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಜೈಲಿನಲ್ಲಿದ್ದುಕೊಂಡೆ ಮಹಿಳೆಯ ಬೆತ್ತಲೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ರೌಡಿಶೀಟರ್ (Rowdy Sheeter) ಹಾಗೂ ಸಹಚರರನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮನೋಜ್ ಅಲಿಯಾಸ್​ ಕೆಂಚ, ಸುಭಾಷ್ ಹಾಗೂ ಯೋಗೇಶ್ ಎಂಬುವವರನ್ನು ಬಂಧಿಸಲಾಗಿದೆ (arrest).

ಇದನ್ನು ಓದಿ : Lokasabha : ಲೋಕಸಭೆ ಚುನಾವಣೆಯ ಕುರಿತು ಕೇಂದ್ರ ಚುನಾವಣಾ ಆಯುಕ್ತ ಹೇಳಿದ್ದೇನು ಗೊತ್ತೇ.?

ಪರಿಚಯಸ್ಥ ಮಹಿಳೆಗೆ ಯಲಹಂಕ (Yalahanka) ರೌಡಿಶೀಟರ್ ಮನೋಜ್ ಅಲಿಯಾಸ್​ ಕೆಂಚ ಎಂಬಾತ ಜೈಲಲ್ಲಿ ಕುಳಿತುಕೊಂಡು ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ.

ಕಳೆದ ವರ್ಷ ಅಗಸ್ಟ್​​ನಲ್ಲಿ ರೌಡಿಶೀಟರ್​​​ ಮನೋಜ್ ಯುವತಿಯ ತಾಯಿಗೆ ಕರೆ ಮಾಡಿ, ನಿನ್ನ ಮಗಳ ಬೆತ್ತಲೆ (Naked) ಫೋಟೋವನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಯುವತಿಯ ತಾಯಿ, ರೌಡಿಶೀಟರ್​​​ ಮನೋಜ್​​ಗೆ 40 ಸಾವಿರ ಹಣ ನೀಡಿದ್ದರು.

ಬಳಿಕ ಫೆಬ್ರವರಿ 9ರಂದು ಮನೋಜ್​ ಸಹಚರ ಕಾರ್ತಿಕ್ ಎಂಬಾತ​ ಯುವತಿಯ ತಾಯಿಗೆ ವಾಟ್ಸಪ್ (WhatsApp call) ಮೂಲಕ ಕರೆ ಮಾಡಿ, ತಾನೂ ಮನೋಜ್​ ಕಡೆಯ ಹುಡುಗ ಎಂದು ಹೇಳ್ಕೊಂಡು, ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಿಸುತ್ತೇನೆ ಎಂದು ಬ್ಲ್ಯಾಕ್​ಮೇಲ್​ (blackmail) ಮಾಡಿದ್ದಾನೆ.

ಮನೋಜ್​​ ಜೈಲಿನಿಂದಲೇ ಯುವತಿಯ ತಾಯಿ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ ಮಾಡಿ, ಹಣ ನೀಡದಿದ್ದರೆ ನಿನ್ನ ಮಗಳ ನಗ್ನ ಫೋಟೋ ರಿವೀಲ್ (reveal) ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.

ಇದನ್ನು ಓದಿ : ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಹಾಟ್ ಬ್ಯೂಟಿ ಸನ್ನಿಲಿಯೋನ್‌ photo.!

ಇದರಿಂದ ರೋಸಿ ಹೋದ ಸಂತ್ರಸ್ತರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ (transfer) ಮಾಡಲಾಗಿತ್ತು. ಜೈಲಿನಲ್ಲಿದ್ದ ಮನೋಜ್ ಅಲಿಯಾಸ್​ ಕೆಂಚನನ್ನ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದ ಸಿಸಿಬಿ, ಕೆಂಚನಿಗೆ ಸಹಾಯ ಮಾಡಿದ್ದ ಯೊಗೇಶ್ ಹಾಗೂ ಸುಭಾಷ್ ಅವರನ್ನು ಅರೆಸ್ಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img