Tuesday, September 17, 2024
spot_img
spot_img
spot_img
spot_img
spot_img
spot_img
spot_img

ಪ್ರಚಾರದ ವೇಳೆ ಮಹಿಳೆಗೆ ಮುತ್ತು ಕೊಟ್ಟ BJP ಅಭ್ಯರ್ಥಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಶಾದ್ಯಂತ ಎಲ್ಲೆಡೆ ಲೋಕಸಭಾ ಚುನಾವಣೆಗಾಗಿ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ. ಹೀಗೆ ಮತಯಾಚನೆ ಮಾಡುತ್ತಿದ್ದ ಅಭ್ಯರ್ಥಿಯೊಬ್ಬರು ಎಡವಟ್ಟು ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ ಎಂದು ವರದಿಯಾಗಿದೆ.

ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ಮಾಲ್ಡಾ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ 2ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಇದನ್ನು ಓದಿ : ಇಂಥಾ ವ್ಯಕ್ತಿಗಳ ಪ್ರೀತಿಯಲ್ಲಿ ಹುಡ್ಗೀರು ಮೊದಲ ನೋಟದಲ್ಲೇ ಬೀಳ್ತಾರೆ ; ಯಾವ ಗುಣ ಅವರನ್ನು ಆಕರ್ಷಿಸುತ್ತೆ ಗೊತ್ತಾ.?

ಚಂಚಲ್‌ನ ಸಿಹಿಪುರ್ ಗ್ರಾಮದಲ್ಲಿ ಖಗೇನ್‌ ಮುರ್ಮು ಅವರು, ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು.

ಈ ವೇಳೆ ಖಗೇನ್‌ ಮುರ್ಮು ಅವರಿಗೆ ಅದೇನನಿಸಿತೊ ಏನೋ ಮನೆ ಬಳಿ ನಿಂತಿದ್ದ ಮಹಿಳೆಯೊಬ್ಬರನ್ನು ಹಿಡಿದು ಕೆನ್ನೆಗೆ ಮುತ್ತು (kiss) ಕೊಟ್ಟಿದ್ದಾರೆ.

ಈ ವಿಡಿಯೋ ಹಾಗೂ ಫೋಟೋಗಳನ್ನು ಎಲ್ಲೆಡೆ ವೈರಲ್‌ (viral) ಆಗುತ್ತಿದ್ದು, ವಿವಾದಕ್ಕೂ ಕಾರಣವಾಗಿವೆ. ಟಿಎಂಸಿ ನಾಯಕರು ಸೇರಿದಂತೆ ಪ್ರತಿಪಕ್ಷಗಳ ನಾಯಕರು ಖಗೇನ್ ಮುರ್ಮು ನಡೆಯನ್ನ ಖಂಡಿಸಿದ್ದಾರೆ.

ಇದನ್ನು ಓದಿ : ಚಪ್ಪಲಿ ಹಾರ ಹಾಕಿಕೊಂಡು ಮತ ಯಾಚಿಸಿದ ಅಭ್ಯರ್ಥಿ ; Video Viral.!

ಮಹಿಳಾ ಕುಸ್ತಿಪಟುಗಳಿಗೆ ಲೈಗಿಂಕ ಕಿರುಕುಳ ನೀಡುವ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕವರೆಗೆ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಇಂತಹ ಮಹಿಳಾ ವಿರೋಧಿ ರಾಜಕಾರಣಿಗಳೇನೂ ಕೊರತೆಯಿಲ್ಲ ಎಂದು ಟಿಎಂಸಿ ನಾಯಕರೊಬ್ಬರು ಟೀಕಿಸಿದ್ದಾರೆ ಎಂದು ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img