Wednesday, September 17, 2025

Janaspandhan News

HomeJobBHELನಲ್ಲಿ 515 ಹುದ್ದೆಗಳ ನೇಮಕಾತಿ : SSLC/ITI ಅರ್ಹತೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ.!
spot_img
spot_img
spot_img

BHELನಲ್ಲಿ 515 ಹುದ್ದೆಗಳ ನೇಮಕಾತಿ : SSLC/ITI ಅರ್ಹತೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (BHEL) ಸಂಸ್ಥೆಯು ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ Artisans Grade-IV (ಕುಶಲಕರ್ಮಿಗಳು) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ BHEL (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!
BHEL ನಲ್ಲಿ ಖಾಲಿ ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳು : 515.
  • ಹುದ್ದೆಗಳ ಹೆಸರು : Artisans Grade-IV (ಕುಶಲಕರ್ಮಿಗಳು)
  • ವಿಭಾಗಗಳು :
    • ಫಿಟ್ಟರ್.
    • ವೆಲ್ಡರ್.
    • ಟರ್ನರ್.
    • ಮೆಷಿನಿಸ್ಟ್.
    • ಎಲೆಕ್ಟ್ರಿಷಿಯನ್.
    • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್.
    • ಫೌಂಡ್ರಿಮ್ಯಾನ್.
ವಯೋಮಿತಿ :
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಗರಿಷ್ಠ 32 ವರ್ಷದೊಳಗಿನವರಾಗಿರಬೇಕು.
ವಯೋಮಿತಿ ಸಡಿಲಿಕೆ :
  • ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು : 03 ವರ್ಷಗಳು.
  • SC/ST ಅಭ್ಯರ್ಥಿಗಳು : 05 ವರ್ಷಗಳು.
  • ಪಿಡಬ್ಲ್ಯೂಡಿ (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು.
  • ಪಿಡಬ್ಲ್ಯೂಡಿ [ಒಬಿಸಿ (ಎನ್‌ಸಿಎಲ್)] ಅಭ್ಯರ್ಥಿಗಳು : 13 ವರ್ಷಗಳು.
  • ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು : 15 ವರ್ಷಗಳು.
ಇದನ್ನು ಓದಿ : Belagavi : “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಮಾತಿಗೆ ವ್ಯಕ್ತಿ ಆತ್ಮಹತ್ಯೆ.!
ಶೈಕ್ಷಣಿಕ ಅರ್ಹತೆ :
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಕನಿಷ್ಠ SSLC ಹಾಗೂ ಸಂಬಂಧಿತ ITI ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಿರಬೇಕು
ವೇತನಶ್ರೇಣಿ :
  • ಮಾಸಿಕ ವೇತನ ಶ್ರೇಣಿಯು ರೂ.29,500/-  ರಿಂದ ರೂ.65,000/- ವರೆಗೆ (BHEL ಹುದ್ದೆಯ ಅನುಭವ ಮತ್ತು ವಿಭಾಗದ ಆಧಾರದಲ್ಲಿ)
ಅರ್ಜಿ ಶುಲ್ಕ :
ವರ್ಗ ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಮಾಜಿ ಸೈನಿಕರು : ರೂ.472/-
ಯುಆರ್, ಒಬಿಸಿ, ಇಡಬ್ಲುಎಸ್ : ರೂ.1,072/-
ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಗಮನಿಸಿ : ಹಣ ಪಾವತಿ ಕೇವಲ ಆನ್‌ಲೈನ್ ಮೂಲಕ ಮಾತ್ರ.

ಆಯ್ಕೆ ಪ್ರಕ್ರಿಯೆ :
  • ಕಂಪ್ಯೂಟರ್ ಬೇಸ್ಡ್ ಪರೀಕ್ಷೆ (CBT).
  • ಸ್ಕಿಲ್ ಟೆಸ್ಟ್.
  • ದಾಖಲೆ ಪರಿಶೀಲನೆ.
  • ಅರ್ಹತೆ ಮೇರೆಗೆ ಅಂತಿಮ ಸಂದರ್ಶನ.
ಕೆಲಸ ಮಾಡುವ ಸ್ಥಳಗಳು :

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಹಾಗೂ ಉತ್ತರ ಪ್ರದೇಶದ BHEL ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇದೆ.

ಮುಖ್ಯ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಆರಂಭ : 16 ಜುಲೈ 2025.
  • ಅಂತಿಮ ದಿನಾಂಕ : 12 ಆಗಸ್ಟ್ 2025.
ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!
ಹೇಗೆ ಅರ್ಜಿ ಸಲ್ಲಿಸಬೇಕು?
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ : careers.bhel.in
  • BHEL ಹುದ್ದೆಗೆ ಸಂಬಂಧಿಸಿದ ಮಾಹಿತಿಯನ್ನು ಓದಿ.
  • ಅರ್ಜಿ Form ನ್ನು ನಿಖರವಾಗಿ ಭರ್ತಿ ಮಾಡಿ.
  • ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.

Disclaimer : The above given information is available On online, candidates should check it properly before applying. This is for information only.


Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

Kidney

ಜನಸ್ಪಂದನ ನ್ಯೂಸ್‌, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.

ದೈನಂದಿನ ಜೀವನಶೈಲಿಯಲ್ಲಿ ನಾವು ಅತ್ಯಂತ ಕಡಿಮೆ ಗಮನ ಕೊಡುವ ಅಂಗಗಳಲ್ಲಿ ಮೂತ್ರಪಿಂಡ (Kidney) ವೂ ಒಂದು. ರಕ್ತವನ್ನು ಶುದ್ಧಗೊಳಿಸುವ ಮೂಲಕ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಪ್ರಮುಖ ಕೆಲಸ ಮಾಡುವುದೇ ಈ ಅಂಗ. ಆದರೆ, ಮೊತ್ತಮೊದಲಿಗೆ ಗುರುತಿಸಲಾಗದ ಕೆಲವು ಸಣ್ಣ ಲಕ್ಷಣಗಳೇ ಮುಂದೆ ಜೀವಘಾತಕ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

ಫೋರ್ಟಿಸ್ ಆಸ್ಪತ್ರೆ, ನೋಯ್ಡಾದ ಮೂತ್ರಪಿಂಡ (Kidney) ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಅನುಜಾ ಪೋರ್ವಾಲ್ ಅವರ ಅಭಿಪ್ರಾಯದಂತೆ, ಕೆಟ್ಟ ಆಹಾರ ನಿಯಮಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಉಂಟುಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ.

ಮೂತ್ರಪಿಂಡ (Kidney) ದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವ ಸೂಚನೆಗಳೇನು?

ಅನುಜಾ ಪೋರ್ವಾಲ್ ಅವರ ಪ್ರಕಾರ, ಮೂತ್ರಪಿಂಡ (Kidney) ದ ದೋಷಗಳು ದೇಹದಲ್ಲಿ ಕೆಲ ಸ್ಪಷ್ಟವಾದ ಬದಲಾವಣೆಗಳ ಮೂಲಕ ಸೂಚನೆ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು:

1. ಬೆಳಿಗ್ಗೆಯ ದೌರ್ಬಲ್ಯ ಮತ್ತು ಆಯಾಸ :

ನೀವು ಬೆಳಿಗ್ಗೆ ಎದ್ದ ಕೂಡಲೆ ಅಸಹಜ ದಣಿವನ್ನು ಅನುಭವಿಸುತ್ತಿದ್ದರೆ, ಅದು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯ ಲಕ್ಷಣವಾಗಿರಬಹುದು. ವಿಷಕಾರಿ ತತ್ವಗಳು ರಕ್ತದಲ್ಲಿ ಸಂಗ್ರಹವಾಗುತ್ತಿದ್ದರಿಂದ ದೇಹದಲ್ಲಿ ಆಯಾಸ ಹಾಗೂ ಶಕ್ತಿ ಕೊರತೆಯುಂಟಾಗುತ್ತದೆ.

2. ಮೂತ್ರದಲ್ಲಿ ಬಣ್ಣ ಮತ್ತು ಪ್ರಮಾಣದ ಬದಲಾವಣೆ :

ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆಯ ಮೊದಲ ಮೂತ್ರವೇ ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಸೂಚನೆ ನೀಡುತ್ತದೆ. ಮೂತ್ರದಲ್ಲಿ ಹಳದಿ ಬಣ್ಣ ತೀವ್ರವಾಗಿದ್ದರೆ ಅಥವಾ ಗಾಢವಾದ ನೊರೆ ಕಾಣುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
3. ಬಾಯಾರಿಕೆ ಮತ್ತು ಹೊಟ್ಟೆ ಸೆಳೆತ :

ಅತಿಯಾದ ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನ ಅಸಮತೋಲನದ ಪ್ರತೀಕವಾಗಿದೆ. ಜೊತೆಗೆ ಹೊಟ್ಟೆ ಊತ ಅಥವಾ ಸೆಳೆತವೂ ಮೂತ್ರಪಿಂಡದ ಕಾರ್ಯದಲ್ಲಿ ಸಮಸ್ಯೆ ಉಂಟಾದಾಗ ಕಂಡುಬರುವ ಲಕ್ಷಣಗಳಾಗಿವೆ.

4. ಚರ್ಮದ ತುರಿಕೆ ಅಥವಾ ದದ್ದುಗಳು :

ವಿಷಕಾರಿ ತತ್ವಗಳ ಸಂಗ್ರಹಣೆಯಿಂದಾಗಿ ಚರ್ಮದ ಮೇಲೆ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದು ತುರಿಕೆ ಅಥವಾ ದದ್ದು ಕಾಣಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

ಸಮಯಕ್ಕೆ ಚಿಕಿತ್ಸೆ ಅತಿ ಮುಖ್ಯ :

ಮೂತ್ರಪಿಂಡ (Kidney) ಸಂಬಂಧಿತ ಯಾವುದೇ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸ್ಥಿತಿಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ದೈನಂದಿನ ಚಟುವಟಿಕೆಗಳಲ್ಲಿ ಈ ರೀತಿಯ ಲಕ್ಷಣಗಳನ್ನು ಗಮನಿಸಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments