Friday, June 14, 2024
spot_img
spot_img
spot_img
spot_img
spot_img
spot_img

Health : ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದ್ರೆ ಆಗುವ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳ್ಳುಳ್ಳಿ ಯಾರಿಗೆ ಗೊತ್ತಿಲ್ಲ ಹೇಳಿ. ಆಯುರ್ವೇದದಲ್ಲಿ (Ayurveda) ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ.

ಇದರಲ್ಲಿರುವ ಫೈಬರ್, ಕಾರ್ಬೋಹೈಡ್ರೇಟ್, ಫಂಗಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಆಂಟಿಆಕ್ಸಿಡೆಂಟ್, ಥಯಾಮಿನ್, ರೈಬೋಫ್ಲಾವಿನ್, ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ತಾಮ್ರ ಮುಂತಾದ ಅನೇಕ ಪೋಷಕಾಂಶಗಳು ದೇಹವನ್ನು ರೋಗಗಳಿಂದ ದೂರವಿಡುತ್ತವೆ.

ಇದನ್ನು ಓದಿ : IPPB : ಇಂಡಿಯಾ ಪೋಸ್ಟ್ ಪೇಮೆಂಟ್ಸ್​ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ (Garlic) ಸೇವಿಸಿದರೆ ಏನು ಪ್ರಯೋಜನ ಅಂತ ತಿಳಿಯೋಣ ಬನ್ನಿ.

* ದುರ್ಬಲವಾಗಿರುವವರು (weak) ಹೆಚ್ಚಾಗಿ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಸೇರಿಸಬಹುದು. ಇದು ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿ ಆಧಾರಿತ ಆಹಾರವನ್ನು ಪರುಷರು ಮತ್ತು ಮಹಿಳೆಯರಿಬ್ಬರೂ ಸಹ ಪ್ರತಿದಿನ ತಿನ್ನಬಹುದು.

* ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ತಿನ್ನಬೇಕು. ಬೆಳ್ಳುಳ್ಳಿ, ಮೆಣಸು, ಅರಿಶಿನ ಪುಡಿಯನ್ನು ಹಾಲಿಗೆ ಬೆರೆಸಿ ಕುದಿಸಿ ತಣ್ಣಗಾದ ನಂತರ ಕುಡಿದರೆ ಕೆಮ್ಮಿನ ಸಮಸ್ಯೆ (Cough problem) ಪರಿಹಾರವಾಗುತ್ತದೆ.

* ನಮ್ಮ ದೇಹದಲ್ಲಿರುವ ಹೃದ್ರೋಗಗಳಿಗೆ ಅಧಿಕ ಕೊಲೆಸ್ಟ್ರಾಲ್ ಕಾರಣ. ಅದರಲ್ಲೂ LDL ಎಂಬ ಕೆಟ್ಟ ಕೊಲೆಸ್ಟ್ರಾಲ್ ನಮಗೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ. ಆದರೆ ನೀವು ಪ್ರತಿದಿನ ಬೆಳ್ಳುಳ್ಳಿಯನ್ನು ತಿಂದರೆ, ಈ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

* ಅಧಿಕ ರಕ್ತದೊತ್ತಡ (high blood pressure) ಸಮಸ್ಯೆಯು ಇಂದಿಗೂ ಯುವ ಜನತೆಯನ್ನು ಕಾಡುತ್ತಿದೆ. ಅಧಿಕ ರಕ್ತದೊತ್ತಡ ಕೂಡ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?

* ಮುಂಜಾನೆ ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ತಿಳಿದಿರುವ ಕೆಲ ಮಂದಿ ಜೀರಿಗೆ, ಬೆಳ್ಳುಳ್ಳಿ, ಮೆಣಸು ಇತ್ಯಾದಿಗಳನ್ನು ಪುಡಿಮಾಡಿ ಕಷಾಯದಂತೆ ತಯಾರಿಸಿ ಕುಡಿಯುತ್ತಾರೆ. ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಗಳಿಗೆ ಇದು ಅತ್ಯುತ್ತಮ ಮನೆ ಮದ್ದಾಗಿದೆ (home remedy).

* ಬೆಳ್ಳುಳ್ಳಿ ತಿನ್ನುವುದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ ಆಗುತ್ತದೆ. ಅಜೀರ್ಣ, ಮಲಬದ್ಧತೆ (Indigestion, constipation), ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿ ತಿಂದರೆ ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

spot_img
spot_img
- Advertisment -spot_img