ಶುಕ್ರವಾರ, ನವೆಂಬರ್ 28, 2025

Janaspandhan News

HomeBelagavi Newsಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!
spot_img
spot_img
spot_img

ಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಇಂದು (ನವೆಂಬರ್ 07) ತೀವ್ರ ಸ್ವರೂಪ ಪಡೆದಿದೆ. ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ (lathicharge) ನಡೆಸಿದ್ದು, ಕೆಲ ರೈತರು ಇದಕ್ಕೆ ಪ್ರತಿಕ್ರಿಯೆಯಾಗಿ ಪೋಲೀಸ್ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹತ್ತರಗಿ ಟೋಲ್‌ಗೇಟ್‌ನಲ್ಲಿ ಹುಕ್ಕೇರಿ, ಮೂಡಲಗಿ, ಹತ್ತರಗಿ ಸೇರಿದಂತೆ ವಿವಿಧ ತಾಲ್ಲೂಕಿನ ರೈತರು ಸಾವಿರಾರು ಟ್ರ್ಯಾಕ್ಟರ್‌ಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಪ್ರತಿ ಕ್ವಿಂಟಾಲ್ ಕಬ್ಬಿಗೆ ಕನಿಷ್ಠ ರೂ. 3,500 ನೀಡುವಂತೆ ಒತ್ತಾಯಿಸಿದ್ದಾರೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಈ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ರೈತರು ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಕಲ್ಲು ತೂರಾಟ ನಡೆದ ಬಳಿಕ ಸಮ್ಯಮದಿಂದ ವರ್ತಿಸುವಂತೆ ಸೂಚಿಸಿದ್ದಾರೆ. “ರೈತರ ಮೇಲೆ ಬಲಪ್ರಯೋಗ ಮಾಡಬಾರದು, ಪೊಲೀಸ್ ಅಧಿಕಾರಿಗಳು ಲಾಠಿಚಾರ್ಜ್ (lathicharge) ನಡೆಸಿಲ್ಲ. ಸಮಸ್ಯೆ ಶಾಂತಿಯುತವಾಗಿ ಪರಿಹರಿಸಲು ರೈತರು ಸಹಕರಿಸಬೇಕು.” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಳೆದ ದಿನಗಳು ನಡೆಸಿದ ಸಭೆಗಳ ಮೂಲಕ ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಲಾಗಿದೆ. ಹತ್ತರಗಿ ಟೋಲ್‌ಗೇಟ್‌ ಪ್ರದೇಶದಲ್ಲಿ ರೈತರ ಪ್ರತಿಭಟನೆ ಮುಂದುವರಿಯುತ್ತಿದ್ದು, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ.


Drumstick : ನುಗ್ಗೆಕಾಯಿ ಆರೋಗ್ಯಕ್ಕೆ ಲಾಭ ; ಆದರೆ ಈ 4 ಜನರು ತಿನ್ನಲೇಬಾರದು!

Drumstick

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆಯ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ತರಕಾರಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ನುಗ್ಗೆಕಾಯಿ (Drumstick) ಒಂದು ಪ್ರಮುಖ ತರಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹಳ ಉಪಕಾರಿಯಾಗುತ್ತವೆ.

ನುಗ್ಗೆಕಾಯಿ (Drumstick) ಯನ್ನು “ಪ್ರೋಟೀನ್‌ನ ಭಂಡಾರ” ಎಂದು ಕರೆಯಲಾಗುತ್ತದೆ. ಇದು ರಕ್ತ ಶುದ್ಧೀಕರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಶರೀರದ ಉರ್ಜೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಎಲ್ಲರಿಗೂ ಇದು ಸೂಕ್ತ ತರಕಾರಿ ಅಲ್ಲ. ಕೆಲವರಿಗೆ ಇದರ ಸೇವನೆಯು ಹಾನಿಕಾರಕವಾಗಬಹುದು ಎಂಬುದು ವೈದ್ಯಕೀಯ ತಜ್ಞರ ಅಭಿಪ್ರಾಯ.

ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

ಇದೀಗ ನೋಡೋಣ ಬನ್ನಿ ಯಾರ್ಯಾರು ನುಗ್ಗೆಕಾಯಿ (Drumstick) ಸೇವಿಸಬಾರದು ಮತ್ತು ಏಕೆ ಅಂತ ತಿಳಿಯೋಣ.!

1️⃣ ಗರ್ಭಿಣಿಯರು :

ಗರ್ಭಾವಸ್ಥೆಯ ಸಮಯದಲ್ಲಿ ನುಗ್ಗೆಕಾಯಿಯನ್ನು ಸೇವಿಸುವುದು ತಪ್ಪು. ಇದು ಉಷ್ಣಸ್ವಭಾವದ ತರಕಾರಿ ಆಗಿರುವುದರಿಂದ, ಗರ್ಭಿಣಿಯರ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಇತರ ತೊಂದರೆಗಳ ಅಪಾಯ ಹೆಚ್ಚುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ನುಗ್ಗೆಕಾಯಿ ಸೇವಿಸಬಾರದು.

2️⃣ ಅಧಿಕ ರಕ್ತಸ್ರಾವದ ಸಮಸ್ಯೆ ಇರುವ ಮಹಿಳೆಯರು :

ಹೆಚ್ಚಿನ ರಕ್ತಸ್ರಾವ (Heavy Bleeding) ಅಥವಾ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವ ಮಹಿಳೆಯರು ನುಗ್ಗೆಕಾಯಿ ಸೇವನೆ ತಪ್ಪಿಸಬೇಕು. ಇದರ ಉಷ್ಣ ಗುಣದಿಂದಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
3️⃣ ಕಡಿಮೆ ರಕ್ತದೊತ್ತಡ (Low BP) ಇರುವವರು :

ನುಗ್ಗೆಕಾಯಿ (Drumstick) ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದು ಅಧಿಕ ರಕ್ತದೊತ್ತಡ (High BP) ಹೊಂದಿರುವವರಿಗೆ ಒಳ್ಳೆಯದಾದರೂ, ಕಡಿಮೆ ರಕ್ತದೊತ್ತಡ ಇರುವವರಿಗೆ ಅಪಾಯಕಾರಿ. ಇದರಿಂದ ತಲೆ ಸುತ್ತು, ದೌರ್ಬಲ್ಯ, ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.

4️⃣ ಗ್ಯಾಸ್ಟ್ರಿಕ್ ಅಥವಾ ಅಲ್ಸರ್ ಇರುವವರು :

ಗ್ಯಾಸ್ಟ್ರಿಕ್ ಅಥವಾ ಅಲ್ಸರ್ (ulcer) ಸಮಸ್ಯೆಯಿಂದ ಬಳಲುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಕೆಲವು ರಾಸಾಯನಿಕ ಅಂಶಗಳು ಹೊಟ್ಟೆಯ ಆಸಿಡ್ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

5️⃣ ಸ್ತನ್ಯಪಾನ ಮಾಡುವ ಮಹಿಳೆಯರು :

ಮಗುವಿಗೆ ಎದೆಹಾಲುಣಿಸುತ್ತಿರುವ ಮಹಿಳೆಯರು ಕೂಡ ನುಗ್ಗೆಕಾಯಿ (Drumstick) ಸೇವನೆ ತಪ್ಪಿಸಬೇಕು. ಇದು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಹಾಗೂ ಶಿಶುವಿಗೆ ಅಸಹನೆ ಉಂಟುಮಾಡಬಹುದು.

ಭಾರತೀಯ Railway ಯಲ್ಲಿ 3058 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಸಂಪಾದಕೀಯ:

ನುಗ್ಗೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾದ ತರಕಾರಿ. ಇದು ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಗರ್ಭಿಣಿಯರು, ಕಡಿಮೆ ರಕ್ತದೊತ್ತಡದವರು, ಗ್ಯಾಸ್ಟ್ರಿಕ್ ಅಥವಾ ಅಲ್ಸರ್‌ನಿಂದ ಬಳಲುವವರು ಹಾಗೂ ಸ್ತನ್ಯಪಾನ ಮಾಡುವ ತಾಯಂದಿರವರು ನುಗ್ಗೆಕಾಯಿ (Drumstick) ಸೇವನೆ ತಪ್ಪಿಸುವುದು ಉತ್ತಮ. ವೈದ್ಯರ ಸಲಹೆ ಪಡೆದು ಮಾತ್ರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

Disclaimer : This article is based on reports and information available on the internet. Janaspandhan News is not affiliated with it and is not responsible for it.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments