ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬುಧವಾರ (ಆಗಸ್ಟ್ 20) ಜಿಲ್ಲೆಯ ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಇದುವರೆಗೆ ಬೆಳಗಾವಿ (Belagavi) ಜಿಲ್ಲೆಯ ಕೆಲವು ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದ ರಜೆಯನ್ನು ಈಗ ಸಂಪೂರ್ಣ ಜಿಲ್ಲೆಗೆ ವಿಸ್ತರಿಸಲಾಗಿದೆ.
ರೆಡ್ ಅಲರ್ಟ್ ಘೋಷಣೆ :
ಕೇಂದ್ರ ಹವಾಮಾನ ಇಲಾಖೆಯು ಆಗಸ್ಟ್ 20ರವರೆಗೆ ಬೆಳಗಾವಿ (Belagavi) ಜಿಲ್ಲೆಯ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಸತತ ಮಳೆಯಿಂದಾಗಿ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಮತ್ತು ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ಪ್ರವಾಹದ ಅಪಾಯ ಹೆಚ್ಚಳ :
ಹಿಡಕಲ್ ಜಲಾಶಯ ಈಗಾಗಲೇ ಸಂಪೂರ್ಣ ತುಂಬಿಕೊಂಡಿದ್ದು, ಪ್ರತಿದಿನ ಸಾವಿರಾರು ಕ್ಯೂಸೆಕ್ ನೀರು ಒಳಹರಿಯುತ್ತಿದೆ. ಈಗಾಗಲೇ 25,000 ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹಿಡಕಲ್ ಜಲಾಶಯ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ ಬಳಿ ಘಟಪ್ರಭಾ ನದಿಗೆ 40,000 ಕ್ಯೂಸೆಕ್ ನೀರು ಸೇರುತ್ತಿರುವುದರಿಂದ ಪ್ರವಾಹದ ಅಪಾಯ ಮತ್ತಷ್ಟು ಹೆಚ್ಚಾಗಿದೆ.
ನಾಗರಿಕರಿಗೆ ಎಚ್ಚರಿಕೆ :
- ನದಿಪಾತ್ರದ ಬಳಿ ವಾಸಿಸುವವರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.
- ಸಂಚಾರದ ವೇಳೆ ಸೇತುವೆಗಳು ಮತ್ತು ಜಲಾವೃತ ಪ್ರದೇಶಗಳನ್ನು ತಪ್ಪಿಸಬೇಕು.
- ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಸುರಕ್ಷತೆಗೆ ಪೋಷಕರು ವಿಶೇಷ ಗಮನ ಹರಿಸಬೇಕು.
- ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡಿರಬೇಕು.

ಬೆಳಗಾವಿ (Belagavi) ಜಿಲಾ ಸಚಿವರ ಮನವಿ :
ಬೆಳಗಾವಿ (Belagavi) ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ನಾಗರಿಕರ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದು ತಿಳಿಸಿ, ಈ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿದ್ದು ಪರಸ್ಪರ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Dogs : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು (Dogs) ದಾಳಿ ಮಾಡಿದ್ದು ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಮನೆಯ ಕಾಂಪೌಂಡ್ ಒಳಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ನಾಲ್ಕು– ಐದು ಬೀದಿ ನಾಯಿಗಳು (Dogs) ಏಕಾಏಕಿ ದಾಳಿ ನಡೆಸಿದ ದೃಶ್ಯ ಇದಾಗಿದೆ.
Thyroid : ಥೈರಾಯ್ಡ್ ಸಮಸ್ಯೆ ಇರುವವರು ಈ 5 ಆಹಾರ ಸೇವಿಸಬೇಡಿ : ತಜ್ಞರ ಎಚ್ಚರಿಕೆ.!
ವಿಡಿಯೋದಲ್ಲಿ, ಶಾಂತ ವಾತಾವರಣದಲ್ಲಿದ್ದ ಮನೆಯಂಗಳದಲ್ಲಿ ನುಗ್ಗಿದ ನಾಯಿಗಳು (Dogs) ಬಾಲಕಿಯ ಮೇಲೆ ದಾಳಿ ನಡೆಸುತ್ತವೆ. ಅವಳನ್ನು ಕಚ್ಚಿ ಕೆರೆದು ನೆಲಕ್ಕೊರೆಯುವ ದೃಶ್ಯ ಭೀತಿಯ ವಾತಾವರಣ ಸೃಷ್ಟಿಸಿದೆ. ತನ್ನನ್ನು ರಕ್ಷಿಸಿಕೊಳ್ಳಲು ಬಾಲಕಿ ಪ್ರಯತ್ನಿಸಿದರೂ ಅದು ಫಲಕಾರಿಯಾಗದಿರುವುದು ವಿಡಿಯೋದಲ್ಲಿ ನೋಡಬಹುದು.
ಈ ನಡುವೆ, ಒಬ್ಬ ವ್ಯಕ್ತಿ ತಕ್ಷಣ ಓಡಿ ಬಂದು ನಾಯಿಗಳನ್ನು (Dogs) ಓಡಿಸಲು ಪ್ರಯತ್ನಿಸುತ್ತಾನೆ. ಅದೇ ವೇಳೆ ಮನೆಯಿಂದ ಮಹಿಳೆಯೊಬ್ಬಳು ಸ್ಥಳಕ್ಕೆ ಬರುವುದರೊಂದಿಗೆ ಬೀದಿ ನಾಯಿಗಳು (Dogs) ಅಲ್ಲಿಂದ ಓಡಿ ಹೋಗುತ್ತವೆ.
ಯೋಧನನ್ನು ಕಂಬಕ್ಕೆ ಕಟ್ಟಿ ಥಳಿಸಿದ toll-plaza ಸಿಬ್ಬಂದಿ ; 4 ಜನರ ಬಂಧನ.!
ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್ಸ್ ಈ ದೃಶ್ಯ ನೋಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ನಾಯಿಗಳ (Dogs) ನಿಯಂತ್ರಣ ಕುರಿತು ಚರ್ಚೆಗಳು ಮರುಕಳಿಸಿವೆ.
ಈ ವಿಡಿಯೋವನ್ನು @KarishmaAziz_ ಎಂಬ ಟ್ವಿಟ್ಟರ್ ಖಾತೆಯಿಂದ ಹಂಚಲಾಗಿದ್ದು, ಇನ್ನೂ ವ್ಯಾಪಕವಾಗಿ ಹರಿದಾಡುತ್ತಿದೆ.
ಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!
ಬಾಲಕಿಯ ಮೇಲೆ ಬೀದಿ ನಾಯಿಗಳ (Dogs) ದಾಳಿಯ ವಿಡಿಯೋ :
https://twitter.com/i/status/1956706042709995937






