Tuesday, September 16, 2025

Janaspandhan News

HomeBelagavi NewsBelagavi : ಗಣೇಶ ವಿಸರ್ಜನೆ ವೇಳೆ ದುರ್ಘಟನೆ : ಬೆಳಗಾವಿಯಲ್ಲಿ ಇಬ್ಬರ ದುರ್ಮರಣ.!
spot_img
spot_img
spot_img

Belagavi : ಗಣೇಶ ವಿಸರ್ಜನೆ ವೇಳೆ ದುರ್ಘಟನೆ : ಬೆಳಗಾವಿಯಲ್ಲಿ ಇಬ್ಬರ ದುರ್ಮರಣ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ ದುಃಖದ ಘಟನೆಗಳು ಸಂಭವಿಸಿ ಸ್ಥಳೀಯರಲ್ಲಿ ತೀವ್ರ ವಿಷಾದ ಮೂಡಿಸಿದೆ. ಶನಿವಾರ ಬೆಳಗಾವಿ (Belagavi) ನಗರ ಮತ್ತು ಖಾನಾಪುರ (Khanapur) ತಾಲೂಕಿನ ನಂದಗಡ ಗ್ರಾಮಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಯ ಜಕ್ಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆ ನಡೆಯುತ್ತಿದ್ದ ವೇಳೆ ವಡ್ಡರವಾಡಿ ನಿವಾಸಿ ರಾಹುಲ್ (33) ಎಂಬಾತರು ಮೂರ್ತಿಯೊಂದಿಗೆ ನೀರಿಗೆ ಬಿದ್ದು ತೀವ್ರ ಗಾಯಗೊಂಡರು.

ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಅವರ ಪ್ರಾಣ ಉಳಿಯಲಿಲ್ಲ.

Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!

ಇನ್ನು ಮೂರ್ತಿ ವಿಸರ್ಜನೆ ಮಾಡಿ ಹಿಂದಿರುಗುವಾಗ ಕೈ ಸೋತು ಶುಭಂ (22) ಕೊಚ್ಚಿಕೊಂಡು ಹೋಗಿದ್ದಾನೆ.

ಶುಭಂ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗ ನಿವಾಸಿ. ಯಡೋಗ-ಚಾಪಗಾವಿ ನಡುವಿನ ಮಲಪ್ರಭಾ ನದಿ ಸೇತುವೆ ಬಳಿ ಘಟನೆ ನಡೆದಿದೆ.

belagavi
Oplus_16908288

ಸದ್ಯ ಎಸ್​ಡಿಆರ್​ಎಫ್ ಸಿಬ್ಬಂದಿಯಿಂದ ಶುಭಂ ಕುಪ್ಪಟಗೇರಿಗಾಗಿ ಶೋಧ ನಡೆದಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಎರಡೂ ಘಟನೆಗಳಿಂದ ಬೆಳಗಾವಿ (Belagavi) ಹಬ್ಬದ ಸಂಭ್ರಮದಲ್ಲಿ ದುಃಖದ ವಾತಾವರಣ ಆವರಿಸಿಕೊಂಡಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.


ಹಗಲು ರಾತ್ರಿ Phone ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ದೇಹಕ್ಕೆ ಅಪಾಯ ಕಾದಿದೆ.!

Phone

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸ್ವೀಡನ್ ದೇಶವು ಇತ್ತೀಚೆಗೆ ಮಕ್ಕಳ ಕುರಿತ ಮಹತ್ವದ ನಿರ್ಧಾರ ಕೈಗೊಂಡಿದೆ. 2 ವರ್ಷದ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ (Phone) ಬಳಸಲು ಅವಕಾಶವಿಲ್ಲ, ಫೋನ್‌ಗಳನ್ನು ಆಫ್ ಮಾಡಬೇಕು ಎಂದು ಘೋಷಿಸಲಾಗಿದೆ.

ಈ ನಿಯಮವನ್ನು ಭಾರತದಲ್ಲಿಯೂ ಜಾರಿಗೆ ತರುವ ಅಗತ್ಯವಿದೆ ಎಂಬ ಚರ್ಚೆ ಆರಂಭವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳು ಆಟಿಕೆಗಳ ಬದಲಿಗೆ ಫೋನ್‌ (Phone) ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!

ಹೊರಾಂಗಣ ಆಟಗಳು ಕಣ್ಮರೆಯಾಗುತ್ತಿದ್ದು, ಆಹಾರ ಸೇವನೆಯಾಗಲಿ, ಆಟವಾಗಲಿ ಎಲ್ಲದರಲ್ಲೂ ಫೋನ್‌ (Phone) ಗಳು ಅವಿಭಾಜ್ಯವಾಗಿವೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ನಕಾರಾತ್ಮಕ ಪರಿಣಾಮಗಳು ಹೆಚ್ಚುತ್ತಿರುವುದಾಗಿ ತಜ್ಞರು ಎಚ್ಚರಿಸುತ್ತಿದ್ದಾರೆ.

ಫೋನ್ (Phone) ಬಳಕೆಯಿಂದ ಉಂಟಾಗುವ ಸಮಸ್ಯೆಗಳು :
  • ಫೋನ್‌ನಿಂದ ಹೊರಬರುವ ವಿದ್ಯುತ್ಕಾಂತೀಯ ವಿಕಿರಣ ದೇಹಕ್ಕೆ ಹಾನಿಕಾರಕ.
  • ಪರದೆ ನೀಡುವ ನೀಲಿ ಬೆಳಕು ಕಣ್ಣಿನ ಆರೋಗ್ಯ ಹಾಳುಮಾಡುತ್ತದೆ.
  • ಹೆಚ್ಚು ಫೋನ್ ಬಳಕೆ ಕಣ್ಣು ಮಸುಕಾಗುವುದು, ಕಿರಿಕಿರಿ, ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು.
  • ರಾತ್ರಿ ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗಿ, ನಿದ್ರೆಗೆ ತೊಂದರೆ ಉಂಟಾಗುತ್ತದೆ.
  • ದೇಹದ ಕೆಟ್ಟ ಭಂಗಿ, ದೀರ್ಘಕಾಲ ಕುಳಿತುಕೊಳ್ಳುವುದು, ಒತ್ತಡ ಮತ್ತು ತಲೆನೋವು – ಇವು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ.
Wheat : 21 ದಿನ ಗೋಧಿ ಚಪಾತಿ ತಿನ್ನೋದು ಬಿಟ್ಟರೆ ಏನಾಗುತ್ತೇ ಗೊತ್ತಾ.?
ರಕ್ಷಣೆ ಪಡೆಯಲು ಏನು ಮಾಡಬೇಕು?
  • ಹಾಸಿಗೆಯ ಬಳಿ ಫೋನ್ (Phone) ಇಡುವುದನ್ನು ತಪ್ಪಿಸಿ.
  • ಫೋನ್ ಬಳಕೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ.
  • ಅಧ್ಯಯನ ಅಥವಾ ಕೆಲಸ ಮಾಡುವಾಗ ಫೋನ್ ಅನ್ನು ದೂರವಿಡಿ.

⚠️ ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಆರೋಗ್ಯ ಸಮಸ್ಯೆಗಳಿದ್ದರೆ ತಜ್ಞರ ಸಲಹೆ ಪಡೆಯುವುದು ಮುಖ್ಯ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments