Saturday, July 12, 2025

Janaspandhan News

HomeBelagavi NewsBelagavi horrific incident : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಓರ್ವ ಗಂಭೀರ.!
spot_img
spot_img

Belagavi horrific incident : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಓರ್ವ ಗಂಭೀರ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ಯ ಶಹಾಪುರದ ಜೋಷಿ ಮಾಳ ಪ್ರದೇಶದಲ್ಲಿ ಬುಧವಾರ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ, ಅದರಲ್ಲಿ ಮೂವರು ಸಾವಿಗೀಡಾಗಿದ್ದರೆ, ಓರ್ವ ಯುವತಿ ಗಂಭೀರ ಸ್ಥಿತಿಯಲ್ಲಿರುವ ಭೀಕರ ಘಟನೆ ನಡೆದಿದೆ.

ಬೆಳಗಾವಿ (Belagavi) ಯ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮತ್ತೊಬ್ಬ ಯುವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನು ಓದಿ : ಸಿಗರೇಟ್ ಸೇದುತ್ತ ವಿದ್ಯಾರ್ಥಿನಿಯಿಂದ massage ಮಾಡಿಸಿಕೊಂಡ ಟಿಎಂಸಿ ನಾಯಕ.!

ಮೃತ ದುರ್ದೈವಿಗಳನ್ನು ಬೆಳಗಾವಿ (Belagavi) ಯ ಶಹಾಪುರದ ನಿವಾಸಿಗಳಾದ ತಾಯಿ ಮಂಗಳಾ ಕುರಡೇಕರ್ (70), ಮಗ ಅಕ್ಕಸಾಲಿಗನಾದ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್ (42) ಎಂದು ಗುರುತಿಸಲಾಗಿದೆ.3 perso suicide

ಇನ್ನೊಬ್ಬ ಪುತ್ರಿ ಸುನಂದಾ ಕುರಡೇಕರ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರು. ಸದ್ಯ ಸುಂನದಾ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ : ಯುವತಿ ಸ್ನಾನ ಮಾಡುವುದನ್ನು ರಹಸ್ಯ Camera ಇಟ್ಟು ಲೈವ್ ವೀಕ್ಷಿಸುತ್ತಿದ್ದ ಮನೆ ಮಾಲೀಕ.!
ಘಟನೆ ವಿವರ :
  • ಇಡೀ ಕುಟುಂಬ ಬಾಡಿಗೆ ಬೆಳಗಾವಿ (Belagavi) ಯ ಶಹಾಪುರದ ಮನೆಯಲ್ಲಿ ವಾಸವಿದ್ದರೆಂದು ವರದಿಯಾಗಿದೆ.
  • ತಾಯಿ ಮಂಗಳಾ ಮತ್ತು ಇನ್ನು ಮದುವೆಯಾಗದ ಮೂವರು ಮಕ್ಕಳು ಬುಧವಾರ ಬೆಳಿಗ್ಗೆ ಸುಮಾರು ಸಮಯದಲ್ಲಿ ವಿಷ ಸೇವಿಸಿದಂತೆ ಪೊಲೀಸರು ಶಂಕಿಸಿದ್ದಾರೆ.
  • ಬೆಳಿಗ್ಗೆ 9 ಗಂಟೆ ವೇಳೆಗೆ ಈ ಘಟನೆ (Belagavi) ನಡೆದಿದ್ದು, ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
ಡೆತ್ ನೋಟ್ ಪತ್ತೆ :

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಸಂತೋಷ ಬರೆದಿರುವ ಮರಾಠಿ ಭಾಷೆಯ ಡೆತ್ ನೋಟ್ ವಶಪಡಿಸಿಕೊಳ್ಳಲಾಗಿದೆ. ಆತನ ಬಗ್ಗೆ ಲಭ್ಯವಾದ ಮಾಹಿತಿಯಂತೆ, ಅವರು ಅಕ್ಕಸಾಲಿಗರಾಗಿ ಕೆಲಸ ಮಾಡುತ್ತಿದ್ದು, ಭಾರೀ ಸಾಲದಲ್ಲಿ ಮುಳುಗಿದ್ದರು ಎನ್ನಲಾಗಿದೆ. ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರು ನಡೆಸುತ್ತಿರುವ ತನಿಖೆ :
  • ಶಹಾಪುರ (Belagavi) ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
  • ನಗರ ಪೊಲೀಸ್ (Belagavi) ಆಯುಕ್ತರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.
  • ಡೆತ್ ನೋಟ್ ಹಾಗೂ ಕುಟುಂಬದ ಆರ್ಥಿಕ ಹಿನ್ನೆಲೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!
ಹಲವಾರು ಪ್ರಶ್ನೆಗಳು ಮೂಡಿಸುತ್ತಿರುವ ಘಟನೆ :
  • ಇಡೀ ಕುಟುಂಬ ಸಮೂಹ ಆತ್ಮಹತ್ಯೆಗೆ ಯತ್ನಿಸಿರುವ ಈ ಘಟನೆ ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೇವಲ ಆರ್ಥಿಕ ಕಾರಣವೋ ಅಥವಾ ಇತರ ಭಿನ್ನಪರಿಣಾಮವಿದೆಯೋ ಎಂಬ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

🕊️ ಇಂತಹ ದುರ್ಘಟನೆಗಳು ಸಮಾಜದಲ್ಲಿ ಮಾನಸಿಕ ಆರೋಗ್ಯ, ಆರ್ಥಿಕ ಭದ್ರತೆ ಮತ್ತು ನೆರವಿನ ವ್ಯವಸ್ಥೆಗಳ ಮಹತ್ವವನ್ನು ಪುನಃ ಒತ್ತಿ ಹೇಳುತ್ತವೆ.

DUAS : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ 2025 ; ಸಂಪೂರ್ಣ ಮಾಹಿತಿ.!

DUAS 09

ಜನಸ್ಪಂದನ ನ್ಯೂಸ್‌, ನೌಕರಿ : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್  (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!

ಅರ್ಹ ಅಭ್ಯರ್ಥಿಗಳು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS) ದ ಅಧಿಕೃತ ವೆಬ್‌ಸೈಟ್‌ (uasd.edu) ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆ ವಿಧಾನ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಇತರ ಪ್ರಮುಖ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.

ನೇಮಕಾತಿ ವಿವರಗಳು :
  • ವಿಭಾಗದ ಹೆಸರು : ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (DUAS).
  • ಹುದ್ದೆಗಳ ಸಂಖ್ಯೆ : 09.
  • ಹುದ್ದೆಗಳ ಹೆಸರು : ಎಂಜಿನಿಯರ್ (ಸಹಾಯಕ ಮತ್ತು ಜೂನಿಯರ್).
  • ಉದ್ಯೋಗ ಸ್ಥಳ : ಧಾರವಾಡ, (ಕರ್ನಾಟಕ).
  • ಉದ್ಯೋಗ ಪ್ರಕಾರ : ಸರ್ಕಾರಿ ಉದ್ಯೋಗ.
  • ಅಪ್ಲಿಕೇಶನ್ ವಿಧಾನ : ಆನ್‌ಲೈನ್ ಮೋಡ್.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ :
ಹುದ್ದೆಯ ಹೆಸರು ಶೈಕ್ಷಣಿಕ ಅರ್ಹತೆ
ಸಹಾಯಕ ಎಂಜಿನಿಯರ್ (ಸಿವಿಲ್) : ಸಿವಿಲ್ ಎಂಜಿನಿಯರಿಂಗ್ ಪದವಿ
ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) : ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ
ಜೂನಿಯರ್ ಎಂಜಿನಿಯರ್ (ಸಿವಿಲ್) : ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ
ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) : ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 06 ರ ದ್ವಾದಶ ರಾಶಿಗಳ ಫಲಾಫಲ.!
ವೇತನ ಶ್ರೇಣಿ :
  • ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.24,590/- ರಿಂದ  ರೂ.30,255/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುವುದು. (DUAS ಅಧಿಸೂಚನೆಯ ಪ್ರಕಾರ)
ವಯೋಮಿತಿ :
  • ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ (ದಯವಿಟ್ಟು DUAS ಅಧಿಸೂಚನೆಯನ್ನು ಓದಿ)
ಅರ್ಜಿಶುಲ್ಕ :
  • ಧಾರವಾಡ ಕೃಷಿ ವಿಶ್ವವಿದ್ಯಾಲಯ (DUAS) ದ ನಿಯಮಗಳಂತೆ ವಿಧಿಸಲಾಗುತ್ತದೆ.
ಆಯ್ಕೆ ವಿಧಾನ :
  • ಅಭ್ಯರ್ಥಿಗಳ ಆಯ್ಕೆ ನೇರ ಸಂದರ್ಶನದ ಮೂಲಕ ನಡೆಯುತ್ತದೆ.
ಸಂದರ್ಶನದ ಸ್ಥಳ :

ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್ ಕಚೇರಿ,
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡ, ಕರ್ನಾಟಕ. (Office of the Associate Research Director, University of Agricultural Sciences, Dharwad, Karnataka).

ಇದನ್ನು ಓದಿ : Petrol worth Rs.120 : ಕೈ ಮಾಡಿದ ಪಿಎಸ್‌ಐ : ಮರಳಿ ಕೊಟ್ಟ ಸಿಬ್ಬಂದಿ.!
ಅರ್ಜಿ ಸಲ್ಲಿಸುವ ವಿಧಾನ :
  • ಅಧಿಕೃತ ವೆಬ್‌ಸೈಟ್ uasd.edu ಗೆ ಭೇಟಿ ನೀಡಿ.
  • ಅಧಿಸೂಚನೆ ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣವಾಗಿ ಓದಿ.
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  • ಪಾಸ್‌ಪೋರ್ಟ್ ಅಳತೆದ ಫೋಟೋ ಮತ್ತು ಸಹಿ ಲಗತ್ತಿಸಿ.
  • ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  • ಪ್ರಿಂಟ್‌ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅಧಿಸೂಚನೆ ಬಿಡುಗಡೆ : 03-07-2025.
  • ಸಂದರ್ಶನ ದಿನಾಂಕ : 18-07-2025, ಬೆಳಿಗ್ಗೆ 10:00 ಗಂಟೆಗೆ.
ಪ್ರಮುಖ ಲಿಂಕ್‌ಗಳು :

ಟಿಪ್ಪಣಿ : ಉದ್ಯೋಗದ ಆಸಕ್ತರು ಸಮಯಮಿತಿಯಲ್ಲಿ ಅರ್ಜಿ ಸಲ್ಲಿಸಿ ಮತ್ತು ಸಂದರ್ಶನಕ್ಕೆ ತಯಾರಾಗಿರಿ.

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments